ನಮ್ಮ ಬಗ್ಗೆ

ಶಿಕ್ಷಣ, ಕಲೆ, ಕ್ರೀಡೆ ಮುಂತಾದ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿಕೊಂಡು, ವಿಶ್ವ ಭೂಪಟದಲ್ಲಿ ತನ್ನ ಹೆಗ್ಗಳಿಕೆಯನ್ನು ಬರೆಯುತ್ತಿರುವ ನಮ್ಮ ಮೂಡಬಿದಿರೆಯನ್ನು ಜಗತ್ತಿನ ಮೂಲೆ ಮೂಲೆಗಳೊಂದಿಗೆ ಬೆಸೆಯುವ ಪ್ರಯತ್ನವೇ ನಮ್ಮಬೆದ್ರ.ಕಾಂ.

ಈ ನಡುವೆ ನಮ್ಮನ್ನು ಕಾಡುತ್ತಿದ್ದುದು ಒಂದೇ ಕೊರತೆ. ನಮ್ಮ ನಾಡಿನ ಆಗುಹೋಗುಗಳು ಹಲವು ಬಾರಿ ನಮ್ಮ ಅರಿವಿಗೆ ಬಾರದೇ ಸರಿದು ಹೋಗುತ್ತಿರುವುದು. ನಮ್ಮಬೆದ್ರ.ಕಾಂ ಮೂಲಕ ಮೂಡಬಿದಿರೆಯ ಆಗುಹೋಗುಗಳನ್ನು ಬಿತ್ತರಿಸಿ, ವಿಶ್ವಕ್ಕೊಂದು ಕೊಂಡಿಯನ್ನು ಬೆಸೆಯುವ ಪ್ರಯತ್ನ ನಡೆಸಿದ್ದೇವೆ. ತಂತ್ರಜ್ಣಾನದ ಸುದುಪಯೋಗ ಪಡೆದುಕೊಂಡು ಅಂತರ್ಜಾಲದಲ್ಲಿ ನಮಗೊಂದು ತಾಣವನ್ನು ನಿರ್ಮಿಸಿಕೊಂಡಿದ್ದೇವೆ.

ಹಿಂದೂ, ಕ್ರೈಸ್ತ, ಜೈನ, ಮುಸಲ್ಮಾನಾದಿಯಾಗಿ ಸೌಹಾರ್ದಯುತವಾಗಿ ಪ್ರೀತಿ ಪ್ರೇಮದ ಬದುಕ ಬಾಳುತ್ತಿರುವ ನಮ್ಮ ಜನತೆಯನ್ನು ಬೆಸೆಯುವ ಕಲ್ಪನೆಗೆ ನಮ್ಮೂರಿನ ಯುವಕರದೇ ಆದ ಐಕೇರ್ ಲೈವ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನೆರಳಿನಲ್ಲಿ ಬೆಳಕು ಕಂಡಿದೆ. ಮೂಡಬಿದ್ರೆಯ ಹತ್ತು ಊರ ಸುತ್ತಲಿನ ಜನ ವಿಶ್ವದ ಮೂಲೆ ಮೂಲೆಗಳಲ್ಲಿ ನೆಲೆಸಿದ್ದಾರೆ, ನೆಲೆ ಕಂಡು ಕೊಂಡಿದ್ದಾರೆ. ಆದರೆ ತಮ್ಮ ನೆಲದ ಸುವಾಸನೆಯನ್ನು, ಇಲ್ಲಿನ ಮನೆತನಗಳಲ್ಲಿ ಅರಳಿರುವ ಸಂಬಂಧದ ಸವಿಗಳನ್ನು ತಮ್ಮ ನೆನಪಿನ ಬುತ್ತಿಗಳಲ್ಲಿ ಭದ್ರವಾಗಿರಿಸಿಕೊಂಡು ಜತನದಿಂದ ಕಾಯ್ದಿರಿಸಿದ್ದಾರೆ.

ಹೆಚ್ಚಿನ ಸಂದರ್ಭಗಳಲ್ಲಿ ನಮ್ಮೂರಿನ ಸುದ್ದಿಗಳು ಸಿಂಗಲ್ ಕಾಲಮ್ ಸುದ್ದಿಗಳಾಗಿ ಪತ್ರಿಕೆಗಳಲ್ಲಿ ಅಡಗಿ ಹೋಗುತ್ತವೆ. ವಾರ್ತಾವಾಹಿನಿಗಳಲ್ಲಂತೂ ಮೂಡುಬಿದಿರೆಯ ದೊಡ್ಡ ಸುದ್ದಿಗಳು ಮಾತ್ರ ಮಿನುಗಿ ಮರೆಯಾಗುತ್ತವೆ. ಸಣ್ಣಪುಟ್ಟ ಆಗುಹೋಗುಗಳಂತೂ ಹೇಳ ಹೆಸರಿಲ್ಲದೇ ಮಾಯವಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮೂರ ಸುದ್ದಿ ವಿಶ್ವದಾದ್ಯಂತ ನೆಲೆಸಿರುವ ನಮ್ಮ ಜನತೆಗೆ ನಿರಂತರ ಸಿಗುವಂತೆ ಮಾಡುವ ನಮ್ಮ ಪ್ರಯತ್ನಕ್ಕೆ ಸದಾ ನಿಮ್ಮೆಲ್ಲರ ಬೆಂಬಲವಿರಲಿ ಎನ್ನುವುದೇ ಐಕೇರ್ ಲೈವ್ ಮೀಡಿಯಾ ಬಳಗದ ಆಶಯ.

- ಸಂಪಾದಕರು

Suvarna News 24X7 Live online
333 Album