ಮೂಡುಬಿದಿರೆಯಲ್ಲಿ ಸರ್ವಧರ್ಮಿಯರೊಂದಿಗೆ ತೆನೆಹಬ್ಬ
ಮೂಡುಬಿದಿರೆಯಲ್ಲಿ ಸರ್ವಧರ್ಮಿಯರೊಂದಿಗೆ ತೆನೆಹಬ್ಬ

ಎಲ್ಲ ಧರ್ಮದಲ್ಲಿ ತಮ್ಮದೇ ರೀತಿಯಲ್ಲಿ ತೆನೆಹಬ್ಬವನ್ನು ಆಚರಿಸಲಾಗುತ್ತದೆ. ತೆನೆಗೆ ಹಾಲೆರೆಯುವುದರ ಮೂಲಕ ಗೌರವ ನೀಡಲಾಗುತ್ತದೆ ಎಂದು ಲಯನ್ಸ್ ಪ್ರಾಂತೀಯ ಮಾಜಿ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ ಅಭಿಪ್ರಾಯಪಟ್ಟರು.

ಸ್ವರಾಜ್ಯ ಮೈದಾನಕ್ಕೆ ಸಿಂಥೆಟಿಕ್ ಟ್ರಾಕ್,ಫೆವಿಲಿಯನ್ ಭಾಗ್ಯ
ಸ್ವರಾಜ್ಯ ಮೈದಾನಕ್ಕೆ ಸಿಂಥೆಟಿಕ್ ಟ್ರಾಕ್,ಫೆವಿಲಿಯನ್ ಭಾಗ್ಯ

ಸ್ಥಳೀಯರ ಕ್ರೀಡಾಚಟುವಟಿಕೆಯಿಂದ ಹಿಡಿದು ದಿನವೊಂದಕ್ಕೆ 750ಕ್ಕೂ ಅಧಿಕ ರಾಜ್ಯ,ರಾಷ್ಟ್ರಮಟ್ಟದ ಕ್ರೀಡಾಪಟುಗಳು ಅಭ್ಯಾಸ ಮಾಡುತ್ತಿರುವ ಮೂಡುಬಿದಿರೆ ಸ್ವರಾಜ್ಯ ಮೈದಾನ ಇನ್ನೆರಡು ತಿಂಗಳಲ್ಲಿ ಉತ್ತಮ ಗುಣಮಟ್ಟದ ಸಿಂಥೆಟಿಕ್ ಟ್ರಾಕ್, ಸುಸಜ್ಜಿತ ಪೆವಿಲಿಯನ್ ಸಹಿತ ಹಲವಾರು ಅಭಿವೃದ್ಧಿ ಕಾರ್ಯಗಳಿಂದಮೇಲ್ದರ್ಜೆಗೆ ಏರಲಿದೆ.

ಪಡುಮಾರ್ನಾಡು: ಸ್ಮಶಾನ ನಿರ್ಮಿಸಲೆಂದೇ ಹೆಣ ಸುಟ್ಟರು!
ಪಡುಮಾರ್ನಾಡು: ಸ್ಮಶಾನ ನಿರ್ಮಿಸಲೆಂದೇ ಹೆಣ ಸುಟ್ಟರು!

ಮೂಡಬಿದಿರೆ ಇಲ್ಲಿಗೆ ಸಮೀಪದ ಪಡುಮಾರ್ನಾಡ್ ಬಳಿಯ ಅಚ್ಚರಿ ಕಟ್ಟೆ ಎಂಬಲ್ಲಿನ ಸರಕಾರಿ ಜಾಗದಲ್ಲಿ ಮಹಿಳೆಯೊಬ್ಬರ ಶವದಪನ ನಡೆಸಿರುವ ಗ್ರಾಮ ಪಂಚಾಯತ್ ಉಪಾಧ್ಯಕ್ಷರೋರ್ವರು ಮುಂದೆ ಹತ್ತು ಹೆಣ ಸುಟ್ಟು ರುದ್ರಭೂಮಿ ನಿರ್ಮಿಸುವುದಾಗಿ ಹೇಳಿಕೊಂಡಿರುವುದರಿಂದ ಆಕ್ರೋಶಿತರಾದ ಗ್ರಾಮಸ್ಥರು ನಾನಾ ಇಲಾಖೆಗಳಿಗೆ ಮನವಿ ಸಲ್ಲಿಸಿ ಆಕ್ಷೇಪಣೆ ಸಲ್ಲಿಸಿದ್ದು, ತಪ್ಪಿದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಮೊಂತಿ ಹಬ್ಬ : ಕೌಟುಂಬಿಕ ಬಂಧ ಬೆಸೆಯುವ ಹಬ್ಬ - Monthi Festh
ಮೊಂತಿ ಹಬ್ಬ: ಕೌಟುಂಬಿಕ ಬಂಧ ಬೆಸೆಯುವ ಹಬ್ಬ

ಮೇರಿಯಮ್ಮಳಿಗೆ ಹೂಗಳ ಅರ್ಪಣೆ, ಹೊಸ ತೆನೆಯ ಆಶೀರ್ವಚನ, ಪೂರ್ವಜರನ್ನು ನೆನೆಸಿಕೊಂಡು ದೈವಾದೀನರಾದ ಕುಟುಂಬಸ್ಥರನ್ನು ಸ್ಮರಣೆ ಮಾಡಿ ಇಡೀ ಕುಟುಂಬ ಜೊತೆಯಾಗಿ ಸಸ್ಯಾಹಾರಿ ಭೋಜನ ಮಾಡುವುದು ಈ ಹಬ್ಬದ ವೈಶಿಷ್ಟ್ಯ. ಮಂಗಳೂರಿಗರು ಬಾಲ ಮೇರಿಯ ಜನ್ಮದಿನವಾಗಿ ಸಂಭ್ರಮಿಸಿದರೆ, ಮುಂಬಯಿಯ ಬೇಂಡ್ರಾದಲ್ಲಿ ಮೌಂಟ್ ಮೇರಿ ಹಬ್ಬವೆಂದು ಆಚರಿಸಲಾಗುತ್ತದೆ.

ಆತ್ಮಪ್ರಜ್ಞೆ ಜಾಗೃತಗೊಂಡಾಗ ಕಾನೂನು ಸುಸ್ಥಿರ :ಸಂತೋಷ್ ಹೆಗ್ಡೆ
ಆತ್ಮಪ್ರಜ್ಞೆ ಜಾಗೃತಗೊಂಡಾಗ ಕಾನೂನು ಸುಸ್ಥಿರ :ಸಂತೋಷ್ ಹೆಗ್ಡೆ

ಆತ್ಯಾಚಾರ ಮಾತ್ರವಲ್ಲದೆ ಇತರ ಪ್ರಕರಣಗಳಲ್ಲೂ ಕಾನೂನು ದುರಪಯೋಗವಾಗದಂತೆ ನೋಡಿಕೊಳ್ಳಲು ಮೊದಲು ನಾಗರಿಕರಲ್ಲಿ ಆತ್ಮಪ್ರಜ್ಞೆ ಜಾಗೃತಗೊಳ್ಳಬೇಕು.ಕಾನೂನು ಸದ್ಭಳಕೆಯಿಂದ ಅದು ಸುಸ್ಥಿರವಾಗುತ್ತದೆ ಎಂದು ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ತಿಳಿಸಿದರು.

ವಾರಿಧಿ ಗೋಲ್ ಮಾಲ್ : ವಂಚಕರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ
ವಾರಿಧಿ ಗೋಲ್ ಮಾಲ್ : ವಂಚಕರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ

ವಾರಿಧಿ ಚಾರಿಟೇಬಲ್ ಟ್ರಸ್ಟ್ ಹೆಸರಿನಲ್ಲಿ ಇಲ್ಲಿ ಗಿಫ್ಟ್ ಸ್ಕೀಮ್ ಆರಂಭಿಸಿ ಸಾರ್ವಜನಿಕರಿಗೆ ಲಕ್ಷಾಂತರ ರೂಪಾಯಿ ವಂಚಿಸಿ ತಲೆಮರೆಸಿಕೊಂಡಿರುವ ಸುಳ್ಯ ಮೂಲದ ನಾಲ್ವರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಸ್ಥೆಯಿಂದ ವಂಚನೆಗೊಳಗಾದವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

ಸಚ್ಚೇರಿಪೇಟೆಯಲ್ಲಿ ಸರ್ಕಾರಿ ಜಾಗ ಮಾರಾಟ?
ಸಚ್ಚೇರಿಪೇಟೆಯಲ್ಲಿ ಸರ್ಕಾರಿ ಜಾಗ ಮಾರಾಟ?

ಸರ್ಕಾರಿ ಜಾಗದಲ್ಲಿ ನಿವೇಶನ ನಿರ್ಮಿಸುತ್ತಿದ್ದ ಕೆಲ ಕುಟುಂಬವನ್ನು ಗ್ರಾಮ ಪಂಚಾಯತ್ ಅಧಿಕಾರಿಗಳು ತಡೆಯೊಡ್ಡಿದ್ದು,ಬಡ ಕುಟುಂಬಗಳು ಮಾತ್ರ ತಾವು ಖರೀದಿಸಿದ ಜಾಗ ಎನ್ನುತ್ತಿರುವ ವಿಚಿತ್ರ ಘಟನೆಯೊಂದು ವರದಿಯಾಗಿದೆ.

ದೇವರಿಗೊಂದು ನೋಟು ಚೀಟಿ!: ಬೆದ್ರದಲ್ಲೊಂದು ವಿಶಿಷ್ಟ ಕ್ಷಮಾಪಣೆ
ದೇವರಿಗೊಂದು ನೋಟು ಚೀಟಿ!: ಬೆದ್ರದಲ್ಲೊಂದು ವಿಶಿಷ್ಟ ಕ್ಷಮಾಪಣೆ

ನಮ್ಮಿಂದ ಏನಾದರೂ ತಪ್ಪಾದರೆ ನಾವು ಹರಕೆ ಹೊತ್ತೋ, ದೇವರ ಪ್ರಾರ್ಥನೆ ಮಾಡಿಯೋ ದೇವರಲ್ಲಿ ಕ್ಷಮೆಯನ್ನು ಕೇಳುತ್ತೇವೆ. ಆದರೆ ಮೂಡುಬಿದಿರೆಯಲ್ಲೊಬ್ಬ ಭಕ್ತ ಹತ್ತು ರೂಪಾಯಿ ನೋಟನ್ನೇ ಕ್ಷಮಾಪನೆ ಚೀಟಿಯನ್ನಾಗಿಸಿದ ಪ್ರಸಂಗ ಬುಧವಾರ ಬೆಳಕಿಗೆ ಬಂದಿದೆ.

ಮೂಡುಬಿದಿರೆ ಗಣೇಶೋತ್ಸವಕ್ಕೆ ವೈಭವದ ತೆರೆ
ಮೂಡುಬಿದಿರೆ ಗಣೇಶೋತ್ಸವಕ್ಕೆ ವೈಭವದ ತೆರೆ

ಜಾತ್ಯತೀತ ಹಬ್ಬವೆಂದೇ ಆಚರಿಸಲಾಗುತ್ತಿರುವ ಮೂಡುಬಿದಿರೆ ಗಣೇಶೋತ್ಸವಕ್ಕೆ ಮಂಗಳವಾರ ರಾತ್ರಿ ವೈಭವದ ತೆರೆಯನ್ನು ಎಳೆಯಲಾಯಿತು. ಸಮಾಜಮಂದಿರದಿಂದ ಆಕರ್ಷಕ ಸ್ತಬ್ಧಚಿತ್ರ,ಹುಲಿ ವೇಷ,ಚೆಂಡೆ ಮೊದಲಾದ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಯಿತು. ಅಲಂಗಾರು ಶ್ರೀಮಹಲಿಂಗೇಶ್ವರ ದೇವಸ್ಥಾನದಲ್ಲಿ ಗಣಪನ ವಿಗ್ರಹವನ್ನು ವಿಸರ್ಜಿಸಲಾಯಿತು.

ಬೀಯಿಂಗ್ ತುಳುವ ಹೆಲ್ಫ್ ಫೌಂಡೇಶನ್ ನಿಂದ ಸಾಮಾಜಿಕ ಕಳಕಳಿ
ಬೀಯಿಂಗ್ ತುಳುವ ಹೆಲ್ಫ್ ಫೌಂಡೇಶನ್ ನಿಂದ ಸಾಮಾಜಿಕ ಕಳಕಳಿ

ಇಂದು ವೇಗವಾಗಿ ಬೆಳೆಯುತ್ತಿರುವ ಅಂತರ್ಜಾಲವೆಂದರೆ ಹೈಕ್, ವಾಟ್ಸ್ಅಫ್ ಮತ್ತು ಫೇಸ್ ಬುಕ್ ಈ ಮೂರು ಜಾಲಗಳಲ್ಲಿಯೂ ಯುವಜನತೆ ಸೇರಿದಂತೆ ಹಿರಿಯರೂ ಕೂಡಾ ಜೋತುಬಿದ್ದಿರುವುದನ್ನು ನಾವೆಲ್ಲರೂ ಗಮನಿಸಿದ್ದೇವೆ. ಆದರೆ ಫೇಸ್ ಬುಕ್ ನ್ನು ಕೇವಲ ಟೈಪಾಸ್ ಗಾಗಿ ಬಳಸದೆ ಮಾನವೀಯತೆಯ ಮೂಲಕ ಜನಸೇವೆಗೆ ಬಳಸಿದ ಯಶೋಗಾಥೆ ಇಲ್ಲಿದೆ....

ಯುವಕ ಸಾವು ಪ್ರಕರಣ: ಪರಿಹಾರ ಒತ್ತಾಯಿಸಿ ನೆಲ್ಲಿಕಾರಿನಲ್ಲಿ ಪ್ರತಿಭಟನೆ
ಯುವಕ ಸಾವು ಪ್ರಕರಣ: ಪರಿಹಾರ ಒತ್ತಾಯಿಸಿ ನೆಲ್ಲಿಕಾರಿನಲ್ಲಿ ಪ್ರತಿಭಟನೆ

ನೆಲ್ಲಿಕಾರು ಗ್ರಾಮದ ವಸಂತಿ ಪೂಜಾರ್ತಿ ಎಂಬವರ ಪುತ್ರ ಪ್ರಶಾಂತ್, ಕಳೆದ ಜೂ.11 ರಂದು ಉಪ್ಪಿನಂಗಡಿ ಸಂಗಮ ಸ್ಥಳದಲ್ಲಿ ತನ್ನ ತಂದೆಯ ಪಿಂಡ ಪ್ರಧಾನ ಮಾಡುವ ವೇಳೆ ಆಕಸ್ಮಾತಾಗಿ ನೀರಿಗೆ ಬಿದ್ದು ಮೃತಪಟ್ಟಿದ್ದು ಆ ಕುಟುಂಬಕ್ಕೆ ಇನ್ನೂ ಪರಿಹಾರ ಸಿಗದಿರುವುದರಿಂದ ನೆಲ್ಲಿಕಾರು ಗ್ರಾ.ಪಂ ಕಚೇರಿಯೆದುರು ಸೋಮವಾರ ಪ್ರತಿಭಟನೆ ನಡೆಯಿತು.

ಕಡಲಕೆರೆ: ಬೋಟಿಂಗ್ ಗೆ ಚಾಲನೆ
ಕಡಲಕೆರೆ: ಬೋಟಿಂಗ್ ಗೆ ಚಾಲನೆ

ಒಂಟಿಕಟ್ಟೆ ಕಡಲಕೆರೆ ನಿಸರ್ಗಧಾಮದ ಕೆರೆಗೆ 28ಸಾವಿರ ಮೀನುಮರಿಗಳನ್ನು ಕಡಲಕೆರೆಗೆ ಭಾನುವಾರ ಬಿಡಲಾಯಿತು. ಇದೇ ಸಂದರ್ಭದಲ್ಲಿ ಬೋಟಿಂಗ್ ಚಾಲನೆ ನೀಡಲಾಯಿತು.

ಪ್ರಿಯತಮನ ಸಾವಿನಿಂದ ನೊಂದು ಉಪನ್ಯಾಸಕಿ ಆತ್ಮಹತ್ಯೆ
ಪ್ರಿಯತಮನ ಸಾವಿನಿಂದ ನೊಂದು ಉಪನ್ಯಾಸಕಿ ಆತ್ಮಹತ್ಯೆ

ತನ್ನ ಪ್ರಿಯತಮನ ಸಾವಿನಿಂದ ನೊಂದಿರುವ ಬಗ್ಗೆ ಡೆತ್ ನೋಟ್ ಬರೆದು ಉಪನ್ಯಾಸಕಿಯೊಬ್ಬರು ಗಾಂಧಿನಗರ ಅಪಾರ್ಟ್ ಮೆಂಟ್ ತಮ್ಮ ಕೋಣೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಶನಿವಾರ ಸಂಜೆ ಬೆಳಕಿಗೆ ಬಂದಿದೆ.

ಸಾಧಕ ಕ್ರೀಡಾಪಟುಗಳಿಗೆ ಆಳ್ವಾಸ್ ಏಕಲವ್ಯ ಪ್ರಶಸ್ತಿ ಪ್ರದಾನ
ಸಾಧಕ ಕ್ರೀಡಾಪಟುಗಳಿಗೆ ಆಳ್ವಾಸ್ ಏಕಲವ್ಯ ಪ್ರಶಸ್ತಿ ಪ್ರದಾನ

ಮೂಡುಬಿದಿರೆ ಇಲ್ಲಿನ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ವತಿಯಿಂದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಮತ್ತು ಆಳ್ವಾಸ್ ಏಕಲವ್ಯ ಪ್ರಶಸ್ತಿ ಪ್ರದಾನ ಸಮಾರಂಭ ವಿದ್ಯಾಗಿರಿಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಶನಿವಾರ ನಡೆಯಿತು.

ಮೂಡುಬಿದಿರೆಯಲ್ಲಿ 51ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ
ಮೂಡುಬಿದಿರೆಯಲ್ಲಿ 51ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ

ಮೂಡುಬಿದಿರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ವತಿಯಿಂದ ಐದು ದಿನಗಳ ನಡೆಯುವ 51 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ದ.ಕ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಶುಕ್ರವಾರ ಚಾಲನೆ ನೀಡಿದರು. ಅಲಂಗಾರು ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಆರ್ಚಕ ಈಶ್ವರ ಭಟ್ ನೇತೃತ್ವದಲ್ಲಿ ವಿಗ್ರಹ ಪ್ರತಿಷ್ಠಪನೆ ನಡೆಯಿತು.

ಹೋರಾಟಕ್ಕೆ ಹೊಸ `ದಾರಿ’ ಸಂಘಟನೆ
ಹೋರಾಟಕ್ಕೆ ಹೊಸ `ದಾರಿ’ ಸಂಘಟನೆ

ಕಳೆದ ಮೂರು ವರ್ಷಗಳಿಂದ ಮೂಡುಬಿದಿರೆ ಹಾಗೂ ಸುತ್ತಮುತ್ತಲಿನ ಸುದ್ದಿಗಳನ್ನು ನೀಡುತ್ತಾ ಬಂದಿರುವ ನಮ್ಮಬೆದ್ರ ಡಾಟ್ ಕಾಂ ಮಹತ್ವದ ಹೆಜ್ಜೆಯೊಂದನ್ನು ಹಿಡುತ್ತಿದೆ. ಈಗಾಗಲೇ ಸಾಮಾಜಿಕ ಜಾಲ ತಾಣಗಳ ಮೂಲಕ ಸಾಮಾಜಿಕ ಹೋರಾಟ ಮಾಡುತ್ತಿರುವ `ದಾರಿ’ ಸಂಘಟನೆಯ ಜತೆ ನಮ್ಮ ಬೆದ್ರ ಡಾಟ್ ಕಾಂ ಕೈಜೋಡಿಸುತ್ತಿದ್ದೆ. ದಾರಿಯ ಹೋರಾಟದ ವಿಚಾರಧಾರೆಗಳಿಗೆ ನಮ್ಮ ಬೆದ್ರ ಅಂಕಣ ವೇದಿಕೆಯಾಗಿದೆ...ಬನ್ನಿ ಸಾಮಾಜಿಕ ಹೋರಾಟದ ದಾರಿ ಹಿಡಿಯೋಣ...

ಹತ್ತು ಸಾವಿರಕ್ಕೆ ಲಕ್ಷದ ಪ್ರಶಸ್ತಿ: ಶಿಕ್ಷಕರಿಗೆ ಮೋಸದ ಆಹ್ವಾನ
ಹತ್ತು ಸಾವಿರಕ್ಕೆ ಲಕ್ಷದ ಪ್ರಶಸ್ತಿ: ಶಿಕ್ಷಕರಿಗೆ ಮೋಸದ ಆಹ್ವಾನ

ರೂಪಾಯಿ ಹತ್ತು ಸಾವಿರ ಕೊಟ್ಟರೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡುವ ಆಹ್ವಾನವೊಂದು ತಮಿಳುನಾಡಿನ ವಿಳಾಸವಿಲ್ಲದ ಸಂಸ್ಥೆಯೊಂದು ಮೂಡುಬಿದಿರೆಯ ಕೆಲ ಶಿಕ್ಷಕರಿಗೆ ಪತ್ರ ಮೂಲಕ ಮಾಹಿತಿ ನೀಡಿದೆ.

ಆ29ರಿಂದ ಮೂಡುಬಿದಿರೆ ಸಾರ್ವಜನಿಕ ಶ್ರೀ ಗಣೇಶೋತ್ಸವ
ಆ29ರಿಂದ ಮೂಡುಬಿದಿರೆ ಸಾರ್ವಜನಿಕ ಶ್ರೀ ಗಣೇಶೋತ್ಸವ

ಮೂಡುಬಿದಿರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ವತಿಯಿಂದ ಐದು ದಿನಗಳ 51 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆ29ರಿಂದ ಸೆ2ರವರೆಗೆ ಸಮಾಜ ಮಂದಿರದಲ್ಲಿ ವಿಜೃಂಭಣೆಯಿಂದ ಜರಗಲಿದೆ. ದ.ಕ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಗೌರವ ಉಪಸ್ಥಿತಿಯಲ್ಲಿ ಪ್ರತಿಷ್ಠಾ ಮಹೋತ್ಸವ ಜರಗಲಿದೆ.

ಪುರಸಭೆಯಲ್ಲಿ ಲಕ್ಷದ ನಿರ್ಲಕ್ಷ: ಅಕ್ರಮದ ಸುಳಿಯಲ್ಲಿ ಮೂಡುಬಿದಿರೆ ಪುರಸಭೆ!
ಪುರಸಭೆಯಲ್ಲಿ ಲಕ್ಷದ ನಿರ್ಲಕ್ಷ: ಅಕ್ರಮದ ಸುಳಿಯಲ್ಲಿ ಮೂಡುಬಿದಿರೆ ಪುರಸಭೆ!

ಅಕ್ರಮ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ನೀಡಿ ವಿವಾದಕ್ಕೆ ಕಾರಣವಾದ ಮೂಡಬಿದ್ರೆ ಪುರಸಭೆ ಮತ್ತೊಮ್ಮೆ ಅಕ್ರಮ ಕೋಳಿ ಮಾರಾಟವನ್ನು ಬೆಂಬಲಿಸುತ್ತಿದೆ ಎನ್ನುವ ಆರೋಪ ಕೇಳಿ ಬಂದಿದ್ದು,ಇದಕ್ಕೆ ಪೂರಕ ಎಂಬಂತೆ ಕೋಳಿ ಅಂಗಡಿ ಏಲಂ ದಾರನಿಗೆ ನೀಡಿರುವ ಪಾವತಿ ರಶೀದಿಯಲ್ಲಿ ಅಕ್ಷರ ಮತ್ತು ಸಂಖ್ಯೆಯಲ್ಲಿ ವಿಬಿನ್ನ ಮೊತ್ತವನ್ನು ನಮೂದಿಸಿರುವುದು ಬೆಳಕಿಗೆ ಬಂದಿದೆ.

ಟೆಂಪೊದೊಳಗಡೆ ಹೆಬ್ಬಾವು ಕಣ್ಣಾಮುಚ್ಚಾಲೆ !
ಟೆಂಪೊದೊಳಗಡೆ ಹೆಬ್ಬಾವು ಕಣ್ಣಾಮುಚ್ಚಾಲೆ !

ಟೆಂಪೊ ಟ್ರಾವೆಲ್ಲರ್ ನ ಚೆಸ್ ನೊಳಗೆ ಸೇರಿದ ಹೆಬ್ಬಾವೊಂದನ್ನು ಹೊರತೆಗೆಯಲು ಗ್ಯಾರೇಜ್ ಸಿಬಂದಿಗಳು ಸುಮಾರು ನಾಲ್ಕು ಗಂಟೆ ಪ್ರಯತ್ನಿಸಿದ ಘಟನೆ ಮಾರ್ಪಾಡಿ ಗ್ರಾಮದ ಕಡೆಪಳ್ಳ ಗ್ಯಾರೇಜ್ ನಲ್ಲಿ ಶುಕ್ರವಾರ ನಡೆದಿದೆ.

Suvarna News 24X7 Live online
333 Album