ಕ್ವಾರೆ ದುರಂತಕ್ಕೆ ತಿಂಗಳಾದರೂ ಮುಚ್ಚುವ ಭಾಗ್ಯವಿಲ್ಲ!
ಕ್ವಾರೆ ದುರಂತಕ್ಕೆ ತಿಂಗಳಾದರೂ ಮುಚ್ಚುವ ಭಾಗ್ಯವಿಲ್ಲ!

ಉತ್ತರ ಕರ್ನಾಟಕದ ಹಲವೆಡೆ ತೆರೆದ ಕೊಳವೆ ಬಾವಿಗಳು ಅಪಾಯಕಾರಿಯಾಗಿ ಮಕ್ಕಳನ್ನು ಬಲಿ ತೆಗೆದುಕೊಳ್ಳುತ್ತಿದ್ದು, ಕರಾವಳಿ ಭಾಗದಲ್ಲಿ ಇವುಗಳಿಗಿಂತ ಅಪಾಯಕಾರಿಯಾದ ಕೆಂಪುಕಲ್ಲಿನ ಕ್ವಾರೆಗಳ ಸುತ್ತ ಯಾವುದೇ ಸುರಕ್ಷಿತ ಕ್ರಮವಿಲ್ಲದೆ ಜನರ ಬಲಿಗಾಗಿ ಹಾತೊರೆಯುತ್ತಿದೆ.

ಪುತ್ತಿಗೆ ಅತ್ಯಾಚಾರ ಯತ್ನ ಪ್ರಕರಣ: ಹೆತ್ತವರಿಗೆ ಜೀವ ಬೆದರಿಕೆ... ಬಾಲಕಿಗೆ ಹೆದರಿಕೆ
ಪುತ್ತಿಗೆ ಅತ್ಯಾಚಾರ ಯತ್ನ ಪ್ರಕರಣ: ಹೆತ್ತವರಿಗೆ ಜೀವ ಬೆದರಿಕೆ... ಬಾಲಕಿಗೆ ಹೆದರಿಕೆ

ಮೂರು ವಾರಗಳ ಹಿಂದೆ ಆರರ ಹರೆಯದ ಶಾಲಾ ಬಾಲಕಿಯ ಜತೆ ಅಸಭ್ಯವಾಗಿ ನಡೆದುಕೊಂಡ 16ರ ಹರೆಯದ ಅಪ್ರಾಪ್ತ ವಯಸ್ಕ ಬಾಲಕನೋರ್ವ ಆಕೆಯ ಮಾನ ಹಾನಿಗೆ ಪ್ರಯತ್ನಿಸಿದ್ದ ಪ್ರಕರಣ ಇದೀಗ ಮತ್ತೆ ಕೆದಕಲ್ಪಟ್ಟಿದ್ದು ಜಾಮೀನು ಪಡೆದಿರುವ ಆರೋಪಿಯ ತಂದೆಯಿಂದ ಬಾಲಕಿಯ ಹೆತ್ತವರಿಗೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.

ಮೂಡುಬಿದಿರೆಗೆ ಕೃಷ್ಣನೇ ಬರುತ್ತಾನೆ ಮೊಸರ ಕುಡಿಕೆಗಳನ್ನೊಡೆಯಲು...!
ಮೂಡುಬಿದಿರೆಗೆ ಕೃಷ್ಣನೇ ಬರುತ್ತಾನೆ ಮೊಸರ ಕುಡಿಕೆಗಳನ್ನೊಡೆಯಲು...!

ಮೂಡುವೇಣುಪುರವೆಂದು ಇತಿಹಾಸದ ಪುಟಗಳಲ್ಲಿ ಗುರುತಿಸಿಕೊಂಡಿರುವ ಜ್ಞಾನಕಾಶಿ ಜೈನಕಾಶಿ ಮೂಡುಬಿದಿರೆಯಲ್ಲಿ ಸೋಮವಾರ ಶ್ರೀಕೃಷ್ಣ ಜನ್ಮಾಷ್ಠಮಿಯ ಅಂಗವಾಗಿ ಮೊಸರು ಕುಡಿಕೆ ಸಂಭ್ರಮ.

ಆಳ್ವಾಸ್: 20 ಸಾವಿರ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಸ್ವಾತಂತ್ರೋತ್ಸವ
ಆಳ್ವಾಸ್: 20 ಸಾವಿರ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಸ್ವಾತಂತ್ರೋತ್ಸವ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ 68ನೇ ಸ್ವಾತಂತ್ರೋತ್ಸವದಲ್ಲಿ 20 ಸಾವಿರ ವಿಧ್ಯಾರ್ಥಿಗಳು ಏಕಸಮಯದಲ್ಲಿ ಭಾರತ ಬದಲಾಗುವ ಮೊದಲು ನಾವು ಬದಲಾಗುತ್ತೇವೆ ಎಂಬ ಪ್ರತಿಜ್ಞೆಯನ್ನು ಕೈಗೊಂಡಿದ್ದಾರೆ.

ಪುತ್ತಿಗೆ ಅತ್ಯಾಚಾರ ಯತ್ನ ಪ್ರಕರಣ: ಪ್ರಾಣ ರಕ್ಷಿಸಿದವ ಮಾನ ತೆಗೆಯುವನೇ?: ಆರೋಪಿಯ ತಂದೆ ಪ್ರಶ್ನೆ
ಪುತ್ತಿಗೆ ಅತ್ಯಾಚಾರ ಯತ್ನ ಪ್ರಕರಣ: ಪ್ರಾಣ ರಕ್ಷಿಸಿದವ ಮಾನ ತೆಗೆಯುವನೇ?: ಆರೋಪಿಯ ತಂದೆ ಪ್ರಶ್ನೆ

ಪುತ್ತಿಗೆ ಅತ್ಯಾಚಾರ ಯತ್ನ ಪ್ರಕರಣದಲ್ಲಿ ನನ್ನ ಮಗನನ್ನು ವಿನಃ ಕಾರಣ ಸಿಲುಕಿಸಲಾಗಿದೆ. ಆತ 8ನೇ ವರ್ಷದಲ್ಲಿರುವ ಕೆರೆಗೆ ಬೇಳುತ್ತಿದ್ದ ಇಬ್ಬರು ಮಕ್ಕಳನ್ನು ರಕ್ಷಿಸಿ, ಶೌರ್ಯ ಪ್ರಶಸ್ತಿಗೂ ಶಿಫಾರಸ್ಸು ಮಾಡಲಾಗಿತ್ತು. ಜುಲೈ 27ರಂದು ಬಾಲಕಿಯನ್ನು ಆಕೆಯ ಮನೆಗೆ ಬಿಟ್ಟಿದ್ದಾನೆಯೇ ವಿನಃ ಬೇರೆ ಯಾವುದು ತಪ್ಪು ಮಾಡಿಲ್ಲ ಎಂದು ಪುತ್ತಿಗೆ ಅತ್ಯಾಚಾರ ಯತ್ನ ಪ್ರಕರಣ ಆರೋಪಿ ಪ್ರೇಮ್ ನ ತಂದೆ ಪ್ರಕಾಶ್ ಭಂಡಾರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸೇನಾ ನೇಮಕಾತಿ : 11,854 ಅಭ್ಯರ್ಥಿಗಳಲ್ಲಿ 600 ಮಂದಿ ಲಿಖಿತ ಪರೀಕ್ಷೆಗೆ
ಸೇನಾ ನೇಮಕಾತಿ : 11,854 ಅಭ್ಯರ್ಥಿಗಳಲ್ಲಿ 600 ಮಂದಿ ಲಿಖಿತ ಪರೀಕ್ಷೆಗೆ

ಮಂಗಳೂರು ಸೇನಾ ಪ್ರಾಧಿಕಾರ ನೇತೃತ್ವದಲ್ಲಿ ದ.ಕ ಜಿಲ್ಲಾಡಳಿತ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ ಆಗಸ್ಟ್ 5ರಿಂದ 12ರವೆರೆಗೆ ಮೂಡುಬಿದರೆಯ ವಿದ್ಯಾಗಿರಿಯಲ್ಲಿ ಇದೇ ಮೊದಲ ಬಾರಿಗೆ ನಡೆದ, ರಾಜ್ಯಮಟ್ಟದ ಸೇನಾ ನೇಮಕಾತಿಯಲ್ಲಿ ಒಟ್ಟು 11,854 ಅಭ್ಯರ್ಥಿಗಳು ಭಾಗವಹಿಸಿದ್ದು, ನೇಮಕಾತಿ ಕೊನೆಯ ಹಂತವಾದ ಲಿಖಿತ ಪರೀಕ್ಷೆಗೆ ಸುಮಾರು 600 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಅವಹೇಳನಕಾರಿ ಭಾವಚಿತ್ರ: ಯುವ ಕೊಂಕಣ್ಸ್ ಖಂಡನೆ
ಅವಹೇಳನಕಾರಿ ಭಾವಚಿತ್ರ: ಯುವ ಕೊಂಕಣ್ಸ್ ಖಂಡನೆ

ಯೇಸುವಿನ ಭಾವಚಿತ್ರ ಅವಹೇಳನಕಾರಿಯಾಗಿ ಜಾಹೀರಾತೊಂದರಲ್ಲಿ ಪ್ರಕಟವಾಗಿರುವುದನ್ನು ಅಂತರ್ಜಾಲ ಮತ್ತು ವಾಟ್ಸ್ ಅಪ್ ಮೂಲಕ ವ್ಯಾಪಕವಾಗಿ ವಿನಿಮಯವಾಗುತ್ತಿರುವುದನ್ನು ಖಂಡಿಸಿ ಈ ಬಗ್ಗೆ ಸೂಕ್ತ ಕ್ರಮ ಜರುಗಿಸಲು ಆಗ್ರಹಿಸಿ ದ.ಕ ಜಿಲ್ಲಾ ಯುವ ಕೊಂಕಣ್ಸ್ ಅಸೋಸಿಯೇಶನ್ ವತಿಯಿಂದ ಸೋಮವಾರ ತಹಸೀಲ್ದಾರ್ ಮೂಲಕ ದ.ಕ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಗಿದೆ.

ಹೈಕೋರ್ಟ್ ಸಲಹಾ ಸಮಿತಿಯಿಂದ ಬೆಳುವಾಯಿ ಕ್ವಾರೆಗಳ ಪರಿಶೀಲನೆ
ಹೈಕೋರ್ಟ್ ಸಲಹಾ ಸಮಿತಿಯಿಂದ ಬೆಳುವಾಯಿ ಕ್ವಾರೆಗಳ ಪರಿಶೀಲನೆ

ರಾಜ್ಯದಲ್ಲಿ ಕೆಂಪು ಕಲ್ಲು ಕ್ವಾರಿಗಳಿಂದ ಸಂಭವಿಸುತ್ತಿರುವ ಜೀವ ಹಾನಿ ಹಾಗೂ ಸಮಸ್ಯೆಗಳನ್ನು ನಿಯಂತ್ರಿಸಲು ಸೂಕ್ತ ಕಾನೂನು ಜಾರಿಗೆ ತರಬೇಕು ಎಂದು ಹೈಕೋರ್ಟ್ನ ಕಾನೂನು ಸೇವಾ ಸಮಿತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ದೂರಿನ ಹಿನ್ನೆಲೆಯಲ್ಲಿ ಈ ಬಗ್ಗೆ ಅಧ್ಯಯನ ನಡೆಸಿ ತನಗೆ ವರದಿ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಆದೇಶ ನೀಡಿದೆ.

ಆ.9 : ಮೂಡುಬಿದಿರೆಯಲ್ಲಿ ಎಸ್ಎಸ್ಎಫ್ ನಿಂದ ಆಝಾದಿ ಸಪ್ತಾಹ
ಆ.9 : ಮೂಡುಬಿದಿರೆಯಲ್ಲಿ ಎಸ್ಎಸ್ಎಫ್ ನಿಂದ ಆಝಾದಿ ಸಪ್ತಾಹ

ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ರಾಜ್ಯ ಸಮಿತಿಯು 2014 ನ್ನು ಬೆಳ್ಳಿಹಬ್ಬದ ಭಾಗವಾಗಿ ಆಚರಿಸುತ್ತಿದ್ದು, ಇದರ ಅಂಗವಾಗಿ ಕ್ವಿಟ್ ಇಂಡಿಯಾ ದಿನವಾದ ಅಗಸ್ಟ್ 9 ರಿಂದ ಆ. 15 ರ ತನಕ ಆಝಾದಿ ಸಪ್ತಾಹ ಆಚರಿಸಲು ತೀರ್ಮಾನಿಸಿದ್ದು ಅದರಂತೆ ಆ. 9 ರಂದು ಮೂಡುಬಿದಿರೆ, ಹಾಸನ ಹಾಗೂ ದಾವಣಗೆರೆಗಳಲ್ಲಿ ಆಝಾದಿ ಮಾರ್ಚ್ ನಡೆಯಲಿದೆ ಎಂದು ರಾಜ್ಯ ಆಝಾದಿ ಸಪ್ತಾಹ ಸಮಿತಿಯ ಸಂಯೋಜಕ ಕೆ.ಎ.ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ತಿಳಿಸಿದ್ದಾರೆ.

ಮೊಬೈಲ್ ಎಗರಿಸಿದ ಸೇನಾ ಅಭ್ಯರ್ಥಿ ಸಿಕ್ಕಿಬಿದ್ದ!
ಮೊಬೈಲ್ ಎಗರಿಸಿದ ಸೇನಾ ಅಭ್ಯರ್ಥಿ ಸಿಕ್ಕಿಬಿದ್ದ!

ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ಸೇನಾ ನೇಮಕಾತಿಗೆ ಸೋಮವಾರ ಬಂದು, ಮೂಡುಬಿದಿರೆ ಬಸ್ ನಿಲ್ದಾಣದಲ್ಲಿರುವ ಸ್ಟೂಡಿಯೋದಿಂದ ಮೊಬೈಲ್ ಕಳವು ಮಾಡಿದ ಅಭ್ಯರ್ಥಿಯನ್ನು ಮೂಡುಬಿದಿರೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಸೇನಾ ನೇಮಕಾತಿಗೆ ಬಂದವರ ದುರ್ವರ್ತನೆ: ಶಾಲೆಗೆ ಹಾನಿ
ಸೇನಾ ನೇಮಕಾತಿಗೆ ಬಂದವರ ದುರ್ವರ್ತನೆ: ಶಾಲೆಗೆ ಹಾನಿ

ವಿದ್ಯಾಗಿರಿಯಲ್ಲಿ ಒಂದು ವಾರಗಳ ಕಾಲ ನಡೆಯಲಿರುವ ರಾಜ್ಯಮಟ್ಟದ ಸೇನಾ ನೇಮಕಾತಿಯ ಮೊದಲ ದಿನವೇ ಕೆಲವು ಮಂದಿಯ ಪುಂಡಾಟಿಕೆ ಬೆಳಕಿಗೆ ಬಂದಿದ್ದು, ಸ್ಥಳೀಯ ಸರ್ಕಾರಿ ಶಾಲೆಯ ಬಾಗಿಲು ಮುರಿದಿದ್ದಾರೆ. ಶಾಲೆಯ ಆವರಣದಲ್ಲಿ ಮಲ ಮೂತ್ರಗಳನ್ನು ವಿಸರ್ಜಿಸಿದರಲ್ಲದೆ, ವಿದ್ಯಾರ್ಥಿಯನಿಯರ ಪುಸ್ತಕಗಳಲ್ಲಿ ಮೊಬೈಲ್ ಸಂಖ್ಯೆಗಳೊಂದಿಗೆ `ಕಾಲ್ ಮಿ’ ಎಂದು ಬರೆದಿದ್ದಾರೆ.

ಸೇನಾ ನೇಮಕಾತಿ ಪ್ರಕ್ರಿಯೆ ಪ್ರಾರಂಭ
ಸೇನಾ ನೇಮಕಾತಿ ಪ್ರಕ್ರಿಯೆ ಪ್ರಾರಂಭ

ಆಗಸ್ಟ್ 5 ರಿಂದ 12ರ ವರೆಗೆ ವಿದ್ಯಾಗಿರಿಯಲ್ಲಿ ನಡೆಯಲಿರುವ ಸೇನಾ ನೇಮಕಾತಿ ರ್ಯಾಲಿಗೆ ಪೂರಕ ತಯಾರಿಗಲೂ ಮುಗಿದಿದ್ದು, ಸೋಮವಾರದಿಂದಲೇ ನೋಂದಣಿ, ಎತ್ತರ ಪರೀಕ್ಷೆ ನಡೆದಿವೆ.

ಸೂರು ಕಳೆದುಕೊಂಡಾಕೆಗೆ ಆಸರೆಯಾದ ಬಿಲ್ಲವ ಸಂಘ
ಸೂರು ಕಳೆದುಕೊಂಡಾಕೆಗೆ ಆಸರೆಯಾದ ಬಿಲ್ಲವ ಸಂಘ

ಕಳೆದ ಮಾ.18 ಕಂದಾಯ ಅಧಿಕಾರಿಗಳು ಪೊಲೀಸರ ಸಹಕಾರದಿಂದ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿದ್ದಾರೆಂದು ಮೂಡುಕೊಣಾಜೆಯ ಮನೆಯೊಂದನ್ನು ತೆರವುಗೊಳಿಸಿದ್ದು, ಆ ಕುಟುಂಬ ಬೀದಿಪಾಲಾಗುವಂತಾಯಿತು.

ಅಡಕೆ, ಸೊತ್ತು ಕಳವು : ಪ್ರಮುಖ ಆರೋಪಿಯ ಬಂಧನ
ಅಡಕೆ, ಸೊತ್ತು ಕಳವು : ಪ್ರಮುಖ ಆರೋಪಿಯ ಬಂಧನ

ದರಗುಡ್ಡೆ ಗ್ರಾಮದ ಪಲ್ಕೆದಬೈಲು ಎಂಬಲ್ಲಿ ವಿನ್ಸೆಂಟ್ ಡಿಮೆಲ್ಲೋ ಎಂಬವರಿಗೆ ಸೇರಿದ 90ಸಾವಿರ ರೂಪಾಯಿ ಮೌಲ್ಯದ 281 ಕೆ.ಜಿ ತೂಕದ ಸುಲಿದ ಅಡಿಕೆ ಹಾಗೂ 17 ಸಾವಿರ ರೂಪಾಯಿ ಮೌಲ್ಯದ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಕಳವುಗೈದು ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಮೂಡುಬಿದಿರೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಅನಿಲ್ ಲೋಬೋ ಅಕ್ರಮ ಕಟ್ಟಡಕ್ಕೆ ಡೋರ್ ನಂಬರ್: ನಿರ್ಣಯದ ಬಗ್ಗೆ ದೂರು
ಅನಿಲ್ ಲೋಬೋ ಅಕ್ರಮ ಕಟ್ಟಡಕ್ಕೆ ಡೋರ್ ನಂಬರ್: ನಿರ್ಣಯದ ಬಗ್ಗೆ ದೂರು

ಪುರಸಭಾ ಸದಸ್ಯರೋರ್ವರಿಗೆ ಸಂಬಂಧಿಸಿದ ಕಟ್ಟಡವೊಂದರ ಪರವಾನಿಗೆ ವಿಷಯದಲ್ಲಿ ಪುರಸಭೆಯಲ್ಲಿ ಕಾನೂನು ಬಾಹಿರವಾಗಿ ನಿರ್ಣಯ ದಾಖಲಿಸಲಾಗಿದೆ ಎನ್ನುವ ಗಂಭೀರ ಆರೋಪವೊಂದು ಪುರಸಭೆಗೆ ಅಂಟಿಕೊಂಡಿದೆ. ಆಡಳಿತ ಪಕ್ಷದ ಸದಸ್ಯರಿಗೆ ಸಂಬಂಧಿಸಿದ ಈ ಪ್ರಕರಣದಲ್ಲಿ ಅಧಿಕಾರಿಗಳ ’ಕೈ’ವಾಡ ಮತ್ತು ಸ್ವಜನ ಪಕ್ಷಪಾತ ಕೆಲಸ ಮಾಡಿದೆ ಎನ್ನುವ ಆರೋಪ ಬಿಜೆಪಿಯ ಪುರಸಭಾ ಸದಸ್ಯರಿಂದ ಕೇಳಿ ಬಂದಿದೆ.

ಮೂಡುಬಿದಿರೆಯಲ್ಲಿ ಭಾರಿ ಮಳೆ: ಪುಚ್ಚೆಮೊಗರು ಡ್ಯಾಂ ನೀರಿನಮಟ್ಟ ಏರಿಕೆ
ಮೂಡುಬಿದಿರೆಯಲ್ಲಿ ಭಾರಿ ಮಳೆ: ಪುಚ್ಚೆಮೊಗರು ಡ್ಯಾಂ ನೀರಿನಮಟ್ಟ ಏರಿಕೆ

ಗುರುವಾರ ರಾತ್ರಿಯಿಂದ ಮೂಡುಬಿದಿರೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಪಲ್ಗುಣಿ ನದಿ ತುಂಬಿ ಹರಿಯುತ್ತಿದೆ. ಪುರಸಭಾ ವ್ಯಾಪ್ತಿ ಕುಡಿಯುವ ನೀರಿನ ಮೂಲವಾದ ಪುಚ್ಚೆಮೊಗರು ಡ್ಯಾಮ್ ನ ನೀರಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದ್ದು ಗುರುವಾರ 4.5 ಮೀ, ಶುಕ್ರವಾರ 5.5 ಮೀ ಏರಿಕೆಯಾಗಿದೆ.

ಮೂಡುಬಿದಿರೆಯಲ್ಲಿ ನಾಗರಪಂಚಮಿ ಸಂಭ್ರಮ
ಮೂಡುಬಿದಿರೆಯಲ್ಲಿ ನಾಗರಪಂಚಮಿ ಸಂಭ್ರಮ

ನಾಗರಪಂಚಮಿ ಹಬ್ಬವನ್ನು ಮೂಡುಬಿದಿರೆಯ ಹಲವೆಡೆ ಭಕ್ತಿ ಭಾವದಿಂದ ಆಚರಿಸಲಾಯಿತು. ಲಾಡಿ ಆದಿಶ್ರೀ ನಾಗಬ್ರಹ್ಮ ದೇವಸ್ಥಾನದ ನಾಗಬನ, ಬೆಳುವಾಯಿ ಅಂತಬೆಟ್ಟುವಿನ ನಾಗಬನ, ಅಲಂಗಾರು ಬಡಗು ಮಹಾಲಿಂಗೇಶ್ವರ ದೇವಸ್ಥಾನದ ನಾಗ, ಕಾಳಿಕಾಂಬಾ ದೇವಸ್ಥಾನ, ಶ್ರೀ ವೆಂಕಟರಮಣ ದೇವಸ್ಥಾನ ಸಹಿತ ದೇವಸ್ಥಾನಗಳು ಹಾಗೂ ನಾಗಬನದಲ್ಲಿ ನಾಗರಪಂಚಮಿಯ ಅಭಿಷೇಕ ವಿಶೇಷ ಪೂಜೆ, ತಂಬಿಲಸೇವೆಗಳು ನಡೆಯಿತು.

ನಾಗನ ಬಗ್ಗೆ ತುಳುನಾಡಿನ ನಂಬಿಕೆ
ನಾಗನ ಬಗ್ಗೆ ತುಳುನಾಡಿನ ನಂಬಿಕೆ

ನಾಗ ತುಳುಭೂಮಿಯ ಒಡೆಯ. ತುಳುವರ ಆರಾಧ್ಯ ಧೈವ. ಕಣ್ಣಿಗೆ ಕಾಣುವ ಪ್ರತ್ಯಕ್ಷ ದೇವರು ಅನ್ನುತ್ತದೆ ನಾಗನ ಬಗ್ಗೆ ತುಳುವರಿಗಿರುವ ಅಭಿಮಾನ.ಪರಶುರಾಮ ಸಮುದ್ರ ರಾಜನಿಂದ ಪಡೆದ ಭೂಮಿ ಉಪ್ಪಿನ ಕೋಟೆಯಾಗಿತ್ತು. ಇಲ್ಲಿಯ ಫಲವತ್ತತೆಯ ಸಮೃದ್ಧಿಗೆ ಮತ್ತು ಸಿಹಿ ನೀರಿಗಾಗಿ ಪರಶುರಾಮ ಬೇಡುವುದು ಸರ್ಪರಾಜನಾದ ವಾಸುಕಿಯನ್ನು.

ಧರೆಗುಡ್ಡೆ: ಲಕ್ಷ ಮೌಲ್ಯದ ಅಡಕೆ ಕಳವು:ಇಬ್ಬರ ಬಂಧನ
ಧರೆಗುಡ್ಡೆ: ಲಕ್ಷ ಮೌಲ್ಯದ ಅಡಕೆ ಕಳವು:ಇಬ್ಬರ ಬಂಧನ

ಮೂಡುಬಿದಿರೆ ದರಗುಡ್ಡೆ ಗ್ರಾಮದ ಪಲ್ಕೆದ ಬೈಲು ಎಂಬಲ್ಲಿನ ವಿನ್ಸೆಂಟ್ ಡಿಮೆಲ್ಲೋ ಎಂಬವರಿಗೆ ಸೇರಿದ 90ಸಾವಿರ ರೂಪಾಯಿ ಮೌಲ್ಯದ 281 ಕೆ.ಜಿ ತೂಕದ ಸುಲಿದ ಅಡಿಕೆ ಹಾಗೂ 17 ಸಾವಿರ ರೂಪಾಯಿ ಮೌಲ್ಯದ ಎಲೆಕ್ಟ್ರಾನಿಕ್ಸ್ ವಸ್ತುಗಳು ಕಳವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಳವು ಗೈದ ಇಬ್ಬರು ಸಹೋದರ ಆರೋಪಿಗಳನ್ನು ಪೊಲೀಸರು 24 ಗಂಟೆಗಳೊಳಗಾಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕುಪ್ಪೆಪದವು: ಎಸ್ ಸಿಡಿಸಿಸಿ ಬ್ಯಾಂಕ್ 81ನೇ ಶಾಖೆ ಉದ್ಘಾಟನೆ
ಕುಪ್ಪೆಪದವು: ಎಸ್ ಸಿಡಿಸಿಸಿ ಬ್ಯಾಂಕ್ 81ನೇ ಶಾಖೆ ಉದ್ಘಾಟನೆ

ಗ್ರಾಮೀಣ ಪ್ರದೇಶದ ಹಣಕಾಸಿನ ಚಿಂತನೆ ನಮ್ಮ ಮೂಲ ಉದ್ದೇಶವಾಗಿದೆ. ಸ್ವಸಹಾಯ ಸಂಘಗಳ ಮೂಲಕ ಹಳ್ಳಿಗಳಲ್ಲಿ ಜನರ ಆರ್ಥಿಕ ಚಿಂತನೆ ಮೂಡಿಸುತ್ತಿರುವುದು ಸಹಕಾರಿ ಬ್ಯಾಂಕ್ ಮಾತ್ರ. ವಾಣಿಜ್ಯ ಬ್ಯಾಂಕ್ ಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಜನರ ಸಂಪರ್ಕ ಉಳಿಸುಕೊಂಡಿರುವುದು ಸಹಕಾರಿ ಹೆಗ್ಗಳಿಕೆ.

Suvarna News 24X7 Live online
333 Album