ನಮ್ಮೂರು...ನಿಮ್ಮೂರ ಸುದ್ದಿಗೆ ನಮ್ಮಬೆದ್ರ ವೇದಿಕೆ
ನಮ್ಮೂರು...ನಿಮ್ಮೂರ ಸುದ್ದಿಗೆ ನಮ್ಮಬೆದ್ರ ವೇದಿಕೆ

ಕಳೆದ ಮೂರು ವರ್ಷಗಳಿಂದ ಮೂಡುಬಿದಿರೆಯ ಜನತೆಯ ಧ್ವನಿಯಾಗಿರುವ ಇಲ್ಲಿನ ಏಕೈಕ ಸುದ್ದಿ ಜಾಲ ತಾಣ `ನಮ್ಮ ಬೆದ್ರ’ ಸುದ್ದಿಯ ಜತೆಗೆ ವಿಶೇಷ ಸಂಪಾದಕೀಯ, ಮನರಂಜನೆ, ಅಂಕಣ ಬರಹ, ವಿದ್ಯಾರ್ಥಿ ಬರಹ ಹೀಗೆ ಹತ್ತು ಹಲವು ವಿನೂತನ ಪರಿಕಲ್ಪನೆಯೊಂದಿಗೆ ಮುನ್ನಡೆಯಲಿದೆ. ಮೂಡುಬಿದಿರೆ ಹಾಗೂ ಇತರ ಊರುಗಳ ಓದುಗರು ಕಳುಹಿಸುವ ಬಹುತೇಕ ಎಲ್ಲ ಸುದ್ದಿ ಪ್ರಕಟಿಸುವುದರ ಮೂಲಕ ನಮ್ಮ ಬೆದ್ರ ಇದು ನಮ್ಮೂರು, ನಿಮ್ಮೂರ ಸುದ್ದಿ ತಾಣವಾಗಲಿದೆ .

ಕಾರಿಗೂ ಬ್ಲ್ಯಾಕ್ ಬಾಕ್ಸ್.. ಅಗ್ನಿ ಶಾಮಕ ರೋಬೋಟ್ : ಕೆನರಾ ಶೋಧನೆ.. ಸಾಧನೆ!
ಕಾರಿಗೂ ಬ್ಲ್ಯಾಕ್ ಬಾಕ್ಸ್...ಅಗ್ನಿ ಶಾಮಕ ರೋಬೋಟ್ : ಕೆನರಾ ಶೋಧನೆ. ಸಾಧನೆ!

ವರ್ಷವೂ ಜೂನ್ ಬಂತೆಂದರೆ ತಾಂತ್ರಿಕ ಶಿಕ್ಷಣದ ಅಂತಿಮ ಪದವಿ ವಿದ್ಯಾರ್ಥಿಗಳು ತಮ್ಮದೇ ಆದ ಪ್ರಾಜೆಕ್ಟ್ಗಳೊಂದಿಗೆ ಪರೀಕ್ಷೆಗೆ ಸಜ್ಜಾಗುತ್ತಾರೆ. ತಮ್ಮಲ್ಲಿರುವ ತಾಂತ್ರಿಕ ಅನುಭವವನ್ನು ಸಮಾಜದ ನಡುವಿನ ಸಮಸ್ಯೆ, ಸವಾಲುಗಳಿಗೆ ಪೂರಕವಾಗಿ ತಮ್ಮ ಉತ್ಸಾಹದ ಅವಕಾಶದ ಮಿತಿಯಲ್ಲಿ ಹೊಸ ಚಿಂತನೆಯ ಪ್ರಾಜೆಕ್ಟ್ಗಳನ್ನಾಗಿ ರೂಪಿಸುವುದು ಈ ಮಕ್ಕಳ ಸೃಜನಶೀಲತೆ ಮಾತ್ರವಲ್ಲ ಆಸಕ್ತಿಯ ಅನಾವರಣವೂ ಹೌದು.

ನಾಗುಂಡಿಯಲ್ಲಿ ಕಿರು ಜಲವಿದ್ಯುತ್ ಯೋಜನೆ: ಕಲ್ಲಮುಂಡ್ಕೂರು ಜನ ಸಮ್ಮತಿ
ನಾಗುಂಡಿಯಲ್ಲಿ ಕಿರು ಜಲವಿದ್ಯುತ್ ಯೋಜನೆ: ಕಲ್ಲಮುಂಡ್ಕೂರು ಜನ ಸಮ್ಮತಿ

ಕಲ್ಲಮುಂಡ್ಕೂರು ಗ್ರಾ.ಪಂನ ನಿಡ್ಡೋಡಿ ಗ್ರಾಮದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ 4 ಸಾವಿರ ಮೆಗಾವ್ಯಾಟ್ ನ ವಿದ್ಯುತ್ ಸ್ಥಾವರ ವಿಚಾರ ತೂಗುಗತ್ತಿಯಾಗಿರುವ ಈ ಸನ್ನಿವೇಶದಲ್ಲಿ ಮತ್ತೊಂದು ಕಿರು ವಿದ್ಯುತ್ ಯೋಜನೆ ಸ್ಥಾಪನೆಯ ವಿಚಾರ ಗ್ರಾಮಸ್ಥರಲ್ಲಿ ಕಿರಿಕಿರಿ ಉಂಟು ಮಾಡಿದೆ. ಕಂಪೆನಿಯೊಂದು ಕಲ್ಲಮುಂಡ್ಕೂರು ಹಾಗೂ ಪುತ್ತಿಗೆ ಪಂಚಾಯಿತಿಯಿಂದ ಕಿರು ಜಲವಿದ್ಯುತ್ ಸ್ಥಾಪಿಸಲು ನಿರಕ್ಷೇಪನಾ ಪತ್ರ ಪಡೆಯಲು ಹಪಹಪಿಸುತ್ತಿದೆ. ಕಲ್ಲಮುಂಡ್ಕೂರು ಗ್ರಾಮಸ್ಥರು ಒಪ್ಪಿಗೆ ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಹೊರಗೋಡಿದ ವೀರಭದ್ರನ ಹಿಂದೆ...ಮುಂದೆ!
ಹೊರಗೋಡಿದ ವೀರಭದ್ರನ ಹಿಂದೆ...ಮುಂದೆ!

ಕೊಟ್ಟೋನೂ ಕೋಡಂಗಿ ಇಸ್ಕೊಂಡೋನು ವೀರ ಭದ್ರ ಎಂಬ ಮಾತೊಂದು ಪ್ರಚಲಿತದಲ್ಲಿದೆ. ಕಾರ್ಕಳ ತಾಲೂಕಿನ ಬೆಳ್ಮಣ್ಣಿನ ಜಂತ್ರ ಸಮೀಪದ ಪುನಾರು ಅಬ್ಬೆಟ್ಟು ನಿವಾಸಿ ಬಾಬುರಾಯ ಆಚಾರ್ಯ ಎಂಬವರ ಮನೆಯಲ್ಲಿ ಕಳೆದ 5 ವರ್ಷಗಳಿಂದ ನಂಬಿಕೊಂಡು ಬಂದಿರುವ ಅಗ್ನಿ ವೀರಭದ್ರ ದೇವರು ಇದೀಗ ಪವಾಡವನ್ನು ಸೃಷ್ಠಿಸುತ್ತಿದೆ ಎಂದು ಮನೆಯವರು ನುಡಿಯುತ್ತಿದು ಬೆಳ್ಮಣ್ ಹಾಸುಪಾಸಿನ ಊರ ಜನರು ಈ ಪವಾಡ ಮೂತ್ರಿಯನ್ನು ವೀಕ್ಷಿಸಲು ಹರಿದು ಬರುತ್ತಿದ್ದಾರೆ.ಭದ್ರವಾಗಿರ ಬೇಕಾದ ವೀರಭದ್ರ ಅಬದ್ರವಾಗಿರುವ ಹಿಂದೆ ನಾನಾ ಕಥೆಗಳು ಕೇಳಲಾರಂಬಿಸಿದೆ.

ಗ್ರಾಮಸಭೆ ಸ್ಥಳ ಇಕ್ಕಟ್ಟು, ಪಡುಮಾರ್ನಾಡು ಗ್ರಾಮಸ್ಥರಿಂದ ಪ್ರತಿಭಟನೆ
ಗ್ರಾಮಸಭೆ ಸ್ಥಳ ಇಕ್ಕಟ್ಟು, ಪಡುಮಾರ್ನಾಡು ಗ್ರಾಮಸ್ಥರಿಂದ ಪ್ರತಿಭಟನೆ

ಪ್ರತಿ ಗ್ರಾಮಸಭೆಯಲ್ಲೂ ನಾವು ಹೊರಗೆ ನಿಲ್ಲಬೇಕು. ಒಳಗೆ ಕುಳಿತುಕೊಂಡರೂ ಇಕ್ಕಟ್ಟಿನಲ್ಲಿ ಗ್ರಾಮಸಭೆಯಲ್ಲಿ ನಮ್ಮ ಸಮಸ್ಯೆಗಳನ್ನು ಹೇಳಬೇಕು. ಹೊರಗಿನ ಸಮಸ್ಯೆಗಳನ್ನು ಪರಿಹರಿಸುವ ಮೊದಲು ಪಂಚಾಯಿತಿ ಒಳಗಿರುವ ಸಮಸ್ಯೆಗಳನ್ನು ಪರಿಹರಿಸಿ ಎಂದು ಗ್ರಾಮಸ್ಥರು ಗ್ರಾಮಸಭೆಯಿಂದ ಹೊರನಡೆದು ಪ್ರತಿಭಟಿಸಿದ ಪ್ರಸಂಗ ಶುಕ್ರವಾರ ಪಡುಮಾರ್ನಾಡು ಗ್ರಾಮಸಭೆಯಲ್ಲಿ ನಡೆದಿದೆ.

ರಬ್ಬರ್ ಟ್ಯಾಪಿಂಗ್ ಯಂತ್ರ: ಆಳ್ವಾಸ್ ವಿದ್ಯಾರ್ಥಿಗಳ ಸಾಧನೆ
ರಬ್ಬರ್ ಟ್ಯಾಪಿಂಗ್ ಯಂತ್ರ: ಆಳ್ವಾಸ್ ವಿದ್ಯಾರ್ಥಿಗಳ ಸಾಧನೆ

ರಬ್ಬರ್ ಗಿಡದಿಂದ ರಬ್ಬರ್ ಹಾಲು (ಲೇಟಕ್ಸ್) ತೆಗೆಯುವ ರಬ್ಬರ್ ಟ್ಯಾಪರ್( ನುರಿತ ಕೆಲಸಗಾರರು) ಕೊರತೆಯಿದೆ. ಕಡಿಮೆ ಶ್ರಮ, ವೆಚ್ಚದಲ್ಲಿ ಈ ಸಮಸ್ಯೆಯನ್ನು ಹೋಗಲಾಡಿಸಲು ರಬ್ಬರ್ ಟ್ಯಾಪಿಂಗ್ ಯಂತ್ರವೊಂದನ್ನು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ತಯಾರಿಸಿದ್ದಾರೆ.

ಕದ್ದಿದ್ದು ಕರಿಮೆಣಸು : ನಟಿ ರಾಧಿಕ ಮನೆ ದರೋಡೆಗೆ ಸಂಚು
ಕದ್ದಿದ್ದು ಕರಿಮೆಣಸು : ನಟಿ ರಾಧಿಕ ಮನೆ ದರೋಡೆಗೆ ಸಂಚು

ಮೂಡುಬಿದಿರೆ ಸಮೀಪದ ಪುತ್ತಿಗೆ ಗ್ರಾಮದ ಹಂಡೇಲು ಎಂಬಲ್ಲಿರುವ ಗೋಡೌನ್ ಒಂದರಿಂದ ಎಂಟೂವರೆ ಲಕ್ಷ ಮೌಲ್ಯದ ಕರಿಮೆಣಸನ್ನು ಕಳವುಗೈದಿರುವ ಪ್ರಕರಣಕ್ಕೆ ಸಂಬಂಧಿಸಿ 7 ಮಂದಿ ಆರೋಪಿಗಳನ್ನು ಮೂಡುಬಿದಿರೆ ಪೊಲೀಸರು ಬುಧವಾರ ಬಂಧಿಸಿದ್ದು ಇವರ ವಿಚಾರಣೆ ನಡೆಸಿದ ವೇಳಗೆ ನಟಿ ರಾಧಿಕಾ ಕುಮಾರಸ್ವಾಮಿ ಅವರಿಗೆ ಸೇರಿದ ಮನೆಯ ದರೋಡೆಗೂ ಸಂಚು ರೂಪಿಸಿರುವುದು ಬೆಳಕಿಗೆ ಬಂದಿದೆ.

ಹೈಬ್ರೀಡ್ ಕಾರು: ಆಳ್ವಾಸ್ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಾಧನೆ
ಹೈಬ್ರೀಡ್ ಕಾರು: ಆಳ್ವಾಸ್ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಾಧನೆ

ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹೈಬ್ರೀಡ್ ವಾಹನವೊಂದನ್ನು ತಯಾರಿಸಿದ್ದಾರೆ. ಕೇವಲ 45 ಸಾವಿರ ವೆಚ್ಚದಲ್ಲಿ ತಯಾರಿಸಲಾದ ಈ ಕಾರನ್ನು ಮೊದಲು ಪೆಟ್ರೋಲ್ ಇಂಜಿನ್ ನಿಂದ ಬಳಿಕ ಎಲೆಕ್ಟ್ರಿಕಲ್ ಮೋಟಾರ್ ಮೂಲಕ ಚಲಾಯಿಸಬಹುದಾಗಿದೆ.

8 ಲಕ್ಷ ಮೌಲ್ಯದ ಕರಿಮೆಣಸು ಕಳವು: 7 ಮಂದಿ ಆರೋಪಿಗಳ ಬಂಧನ
8 ಲಕ್ಷ ಮೌಲ್ಯದ ಕರಿಮೆಣಸು ಕಳವು: 7 ಮಂದಿ ಆರೋಪಿಗಳ ಬಂಧನ

ಪುತ್ತಿಗೆ ಗ್ರಾಮದ ಹಂಡೇಲು ಎಂಬಲ್ಲಿನ ಗೋಡೌನ್ ಒಂದರಿಂದ 8 ಲಕ್ಷ ಮೌಲ್ಯದ ಕರಿಮೆಣಸನ್ನು ಕಳವು ಗೈಯಲಾಗದ್ದು, ಪ್ರಕರಣಕ್ಕೆ 7 ಮಂದಿ ಆರೋಪಿಗಳನ್ನು ಮೂಡುಬಿದಿರೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಮೂಡುಬಿದಿರೆಯಲೊಬ್ಬ ಚಾಣಕ್ಷ ಕಳ್ಳ!
ಮೂಡುಬಿದಿರೆಯಲೊಬ್ಬ ಚಾಣಕ್ಷ ಕಳ್ಳ!

ಮನೆಗೆ ಟೈಲ್ಸ್ ಹಾಕುತ್ತೇನೆ, ಅಂಗಣಕ್ಕೆ ಇಂಟರ್ ಲಾಕ್ ಅಳವಡಿಸಿಕೊಡುತ್ತೇನೆ, ಸರ್ಪ ಸಂಸ್ಕಾರ ನಡೆಸಲಿದೆ ಹೀಗೆ ಒಂದೊಂದು ಮನೆಯಲ್ಲಿ ಒಂದೊಂದು ರೀತಿಯ ಸುಳ್ಳು ಹೇಳಿ ಜನರಿಂದ ಹಣ ಪೀಕಿಸುವ ವಂಚಕನೊಬ್ಬ ಮೂಡುಬಿದಿರೆ ಪರಿಸರದಲ್ಲಿ ಸುತ್ತಾಡುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದೆ.

ಮೂಡುಬಿದಿರೆ ಹೃದಯಭಾಗದಲ್ಲೇ ಮೃತ್ಯುಕೂಪ!
ಮೂಡುಬಿದಿರೆ ಹೃದಯಭಾಗದಲ್ಲೇ ಮೃತ್ಯುಕೂಪ!

ವಿಜಾಪುರದ ನಾಗಠಾಣದಲ್ಲಿ ನಡೆದ ಕೊಳವೆ ಬಾವಿ ದುರಂತದಿಂದ ಎಚ್ಚೆತುಕೊಂಡಿರುವ ಕೆಲವು ಸ್ಥಳೀಯಾಡಳಿತಗಳು ಕ್ರಮ ಕೈಗೊಳ್ಳಲು ಮುಂದಾಗಿದ್ದರೂ ಮೂಡುಬಿದಿರೆ ಪುರಸಭೆ ತನ್ನೊಡಲಲ್ಲಿ ತೆರೆದ ಕೊಳವೆ ಬಾವಿಗಳನ್ನಿರಿಸಿ ಮೃತ್ಯಕೂಪಕ್ಕೆ ಆಶ್ರಯ ನೀಡುತ್ತಿದೆ.

ಮಾರುಕಟ್ಟೆ ಅಂಗಡಿಗಳನ್ನು ಲೇಬರ್ ಶಾಲೆಗೆ ಸ್ಥಳಾಂತರಿಸಲು ಒತ್ತಾಯ
ಮಾರುಕಟ್ಟೆ ಅಂಗಡಿಗಳನ್ನು ಲೇಬರ್ ಶಾಲೆಗೆ ಸ್ಥಳಾಂತರಿಸಲು ಒತ್ತಾಯ

ಪುನರ್ ನಿರ್ಮಾಣ ವೇಳೆ ಮಾರುಕಟ್ಟೆಯನ್ನು ದೂರದ ಸ್ವರಾಜ್ ಮೈದಾನಕ್ಕೆ ಸ್ಥಖಾಂತರಿಸುವುದರಿಂದ ಗ್ರಾಹಕರಿಗೆ ಮಾತ್ರವಲ್ಲ ವ್ಯಾಪಾರಿಗಳಿಗೂ ತೊಂದರೆ ಆಗಲಿದೆ. ಪುರಸಭೆ ಹಳೆ ಕಟ್ಟಡ ಬಳಿಯಿರುವ ಸರ್ಕಾರಿ ಲೇಬರ್ (ಥರ್ಡ್) ಶಾಲೆಯಲ್ಲಿ ಮಕ್ಕಳ ಸಂಖ್ಯೆ 20 ಮಾತ್ರ ಇದೆ. ಇಲ್ಲಿನ ಮಕ್ಕಳನ್ನು ಹತ್ತಿರದ ಮೈನ್ ಶಾಲೆಗೆ ವರ್ಗಾಯಿಸಿ ಥರ್ಡ್ ಶಾಲೆ ಆವರಣದಲ್ಲಿರುವ ಒಂದು ಎಕ್ರೆ ಜಾಗದಲ್ಲಿ ತಾತ್ಕಾಲಿಕ ಮಾರುಕಟ್ಟೆಯನ್ನು ನಿರ್ಮಿಸಬೇಕೆಂದು ಮಾರುಕಟ್ಟೆ ವ್ಯಾಪಾರಸ್ಥರ ಒಕ್ಕೂಟ ಒತ್ತಾಯಿಸಿದರು.

ಸೇಲ್ಸ್ ಮೆನ್ ಗಳಿಗೆ ಗುರುತಿನ ಚೀಟಿ ನೀಡಿ: ಪುತ್ತಿಗೆ ಗ್ರಾಮಸ್ಥರ ಆಗ್ರಹ
ಸೇಲ್ಸ್ ಮೆನ್ ಗಳಿಗೆ ಗುರುತಿನ ಚೀಟಿ ನೀಡಿ: ಪುತ್ತಿಗೆ ಗ್ರಾಮಸ್ಥರ ಆಗ್ರಹ

ಕೆಲವೊಮ್ಮೆ ಸೇಲ್ಸ್ ಮೆನ್ ಸೋಗಿನಲ್ಲಿ ಕಳ್ಳರು ಬಂದು ಮನೆ, ಅಂಗಡಿಮುಗ್ಗಟ್ಟುಗಳ ಪರೀಕ್ಷಿಸಿ ಹೋಗುತ್ತಾರೆ. ಕಳ್ಳತನದಂತಹ ಪ್ರಕರಣ ತಡೆಗಟ್ಟಲು ನೈಜ್ಯ ಸೇಲ್ಸ್ ಮೆನ್ ಳಿಗೆ ಗುರುತಿನಚೀಟಿ ನೀಡುವ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಸ್ಥಳೀಯಾಡಳಿತ ಪ್ರಯತ್ನಿಸಬೇಕೆಂದು ಪುತ್ತಿಗೆ ಗ್ರಾಮಸ್ಥ ವಾದಿರಾಜ್ ಸಲಹೆ ನೀಡಿದರು.

ಶ್ರೀಕ್ಷೇತ್ರ ಕೊಡ್ಯಡ್ಕದಲ್ಲಿ ಪ್ರಧಾನಿ ಮೋದಿ ಶ್ರೀರಕ್ಷೆಗಾಗಿ ಚಂಡಿಕಾ ಹೋಮ
ಶ್ರೀಕ್ಷೇತ್ರ ಕೊಡ್ಯಡ್ಕದಲ್ಲಿ ಪ್ರಧಾನಿ ಮೋದಿ ಶ್ರೀರಕ್ಷೆಗಾಗಿ ಚಂಡಿಕಾ ಹೋಮ

ದೇಶದ ನೂತನ ಪ್ರಧಾನಿ ನರೇಂದ್ರ ಮೋದಿಯವರ ಶ್ರೀರಕ್ಷೆಗಾಗಿ ಮತ್ತು ಅವರ ಮೂಲಕ ನಡೆಯಬೇಕಾದ ಸರ್ವತೋಮುಖ ಅಭಿವೃದ್ಧಿ ಕಾರ್ಯಗಳಿಗೆ ಯಶಸ್ಸು ಪ್ರಾಪ್ತಿಯಾಗಲಿ, ದೇಶದಲ್ಲಿ ಯಾವುದೇ ರೀತಿಯ ಪ್ರಾಕೃತಿಕ ಅನಾಹುತಗಳು ಸಂಭವಿಸದಿರಲಿ ಎಂಬ ಆಶಯದೊಂದಿಗೆ ದ.ಕ. ಜಿಲ್ಲೆಯ ಹೊಸನಾಡು ಕೊಡ್ಯಡ್ಕ ಶ್ರೀ ದೇವೀ ಅನ್ನಪೂರ್ಣೇಶ್ವರೀ ಕ್ಷೇತ್ರದಲ್ಲಿ ಭಾನುವಾರ ಸಾಮೂಹಿಕ ಪ್ರಾರ್ಥನೆಯೊಂದಿಗೆ ಗಣಯಾಗ, ಚಂಡಿಕಾ ಹೋಮ, ಮಹಾ ಮೃತ್ಯುಂಜಯ ಯಾಗ ನಡೆಯಿತು.

ಆಳ್ವಾಸ್ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ
ಆಳ್ವಾಸ್ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಇಲ್ಲಿನ ವಿದ್ಯಾಗಿರಿಯಲ್ಲಿ ಎರಡುದಿನಗಳ ಕಾಲ ನಡೆಯುವ ಆಳ್ವಾಸ್ ಪ್ರಗತಿ-2014 ಬೃಹತ್ ಉದ್ಯೋಗ ಮೇಳಕ್ಕೆ ಶನಿವಾರ ಚಾಲನೆ ನೀಡಲಾಯಿತು.

ಪುಚ್ಚೆಮೊಗರು: ಮಳೆಗೆ ಕಾಲುಸಂಕ ಕುಸಿತ
ಪುಚ್ಚೆಮೊಗರು: ಮಳೆಗೆ ಕಾಲುಸಂಕ ಕುಸಿತ

ಪುಚ್ಚೆಮೊಗರು ಗ್ರಾಮದ ಸಂಗಾಡಿಬೈಲು ಎಂಬಲ್ಲಿ ಮಂಗಳವಾರ ಬಿದ್ದ ಮಳೆಗೆ ಕಾಲು ಸಂಕ ಕುಸಿದು ಎರಡು ಗ್ರಾಮಗಳ ಜನ ಸಂಚಾರಕ್ಕೆ ತೊಂದರೆ ಆಗಿದೆ.

ನಂದನವಾಗಬೇಕಾಗಿದೆ ನಂದಕಿಶೋರ್ ಬದುಕು: ಬೇಕಿದೆ ನೆರವು
ನಂದನವಾಗಬೇಕಾಗಿದೆ ನಂದಕಿಶೋರ್ ಬದುಕು: ಬೇಕಿದೆ ನೆರವು

ಬಡತನದ ಬರೆ, ಸಾಲದ ಹೊರೆ, ಅನಾರೋಗ್ಯದಲ್ಲಿ ಮನೆ ಯಜಮಾನ, ಆತನ ಆರೈಕೆಯಲ್ಲಿ ಕೆಲಸ ಮಾಡುವುದರಿಂದ ವಂಚಿತಳಾಗುತ್ತಿರುವ ಆತನ ಹೆಂಡತಿ. ಪ್ರತಿ ಕ್ಷಣವು ನೋವು, ಪ್ರತಿದಿನವೂ ಪರೀಕ್ಷೆ. ಬಡತನ, ಹಸಿವಿನಿಂದ ಮಧ್ಯೆ ಹೊಸ ಬದುಕಿನ ನಿರೀಕ್ಷೆಯಲ್ಲಿದೆ ಪುತ್ತಿಗೆ ಗ್ರಾಮ ಪಂಚಾಯಿತಿಯ ಉರೋಡಿಯ ಬಡಕುಟುಂಬ.

ಜಾಗ ಸಮತಟ್ಟು ಸಂದರ್ಭ ಕೋಟೆ ನೆಲಸಮ: ಕೋಟೆಬಾಗಿಲು ಕೋಟೆಗೆ ಘಾಸಿ
ಜಾಗ ಸಮತಟ್ಟು ಸಂದರ್ಭ ಕೋಟೆ ನೆಲಸಮ: ಕೋಟೆಬಾಗಿಲು ಕೋಟೆಗೆ ಘಾಸಿ

ಭೂನ್ಯಾಯಮಂಡಳಿಯವರು ದಶಕಗಳ ಹಿಂದೆಯೇ ಖಾಸಗಿಯವರಿಗೆ ಜಾಗ ಮಂಜೂರು ಮಾಡಿದ ಕೋಟೆಬಾಗಿಲಿನ ಐತಿಹಾಸಿಕ ಕೋಟೆಗೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ. ಕೆಳದಿ ಅರಸರದ ಕಾಲದ ಕೋಟೆಯನ್ನು ಜೆಸಿಬಿ ಮೂಲಕ ಜಾಗ ಸಮತಟ್ಟು ಮಾಡುವಾಗ ಕೆಡವಿದ ಪ್ರಕರಣ ಭಾನುವಾರ(8.6.14) ನಡೆದಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಡುಮಾರ್ನಾಡು ರಸ್ತೆ: ಕಾಯಕಲ್ಪವಿಲ್ಲ ಚೂರೂ, ಮರೆಯಾಗುತ್ತಿದೆ ಡಾಂಬರು
ಪಡುಮಾರ್ನಾಡು ರಸ್ತೆ: ಕಾಯಕಲ್ಪವಿಲ್ಲ ಚೂರೂ, ಮರೆಯಾಗುತ್ತಿದೆ ಡಾಂಬರು

ಸುತ್ತಮುತ್ತಲಿನ ಪಂಚಾಯಿತಿಗಳು ಅಭಿವೃದ್ಧಿಯತ್ತ ಮುಖ ಮಾಡಿದೆ. ಕೆಲವು ಪಂಚಾಯಿತಿಗಳು ಅಭಿವೃದ್ಧಿಯಲ್ಲಿ ಮುಂದಿದೆ. ಆದರೆ ಪಡುಮಾರ್ನಾಡು ಗ್ರಾಮ ಪಂಚಾಯಿತಿ ಹಲವಾರು ವರ್ಷಗಳಿಂದ ಅಭಿವೃದ್ಧಿ ವಿಷಯದಲ್ಲಿ ನಿದ್ದೆಯಲ್ಲಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಪಂಚಾಯಿತಿ ಕಚೇರಿಗೆ ರಸ್ತೆಯನ್ನು ಸರಿಪಡಿಸದೆ ಗ್ರಾಮಸ್ಥರನ್ನು ಸತಾಯಿಸುತ್ತಿದೆ.

ಆಚಾರಿಕೇರಿ ಹನುಮ ಗುಡಿಗೆ ಮಸಾಲ ಪದಾರ್ಥ ಎರಚಿದ ದುಷ್ಕರ್ಮಿ
ಆಚಾರಿಕೇರಿ ಹನುಮ ಗುಡಿಗೆ ಮಸಾಲ ಪದಾರ್ಥ ಎರಚಿದ ದುಷ್ಕರ್ಮಿ

ಮೂಡುಬಿದಿರೆ ಆಚಾರಿಕೇರಿ( ಅಕ್ಕಸಾಲಿಗ ಕೇರಿ)ಯಲ್ಲಿನ ಗುರುಕಾಳಿಕಾಂಬ ದೇವಸ್ಥಾನದ ವಠಾರದಲ್ಲಿರುವ ಹನುಮಂತಗುಡಿಗೆ ಯಾರೋ ದುಷ್ಕರ್ಮಿಗಳು ಬುಧವಾರ ರಾತ್ರಿ ಮಸಾಲ ಪದಾರ್ಥವನ್ನು ಎರಚಿದ್ದಾರೆ.

Suvarna News 24X7 Live online
333 Album