ಮೂಡುಬಿದಿರೆ ಹೋಬಳಿಗೆ 2 ಹೊಸ ಗ್ರಾಮ ಪಂಚಾಯಿತಿ
ಮೂಡುಬಿದಿರೆ ಹೋಬಳಿಗೆ 2 ಹೊಸ ಗ್ರಾಮ ಪಂಚಾಯಿತಿ

9 ಗ್ರಾಮಪಂಚಾಯಿತಿಗಳ ಸಂಖ್ಯಾಬಲ ಹೊಂದಿರುವ ಮೂಡುಬಿದಿರೆ ಹೋಬಳಿಗೆ ಮತ್ತೆರಡು ಗ್ರಾಮ ಪಂಚಾಯಿತಿಗಳು ಸೇರಿಕೊಂಡಿವೆ. ಇರುವೈಲ್ ಹಾಗೂ ವಾಲ್ಪಾಡಿ ಗ್ರಾಮಗಳು ಗ್ರಾಮ ಪಂಚಾಯಿತಿಯಾಗುವ ಮೂಲಕ ಮೇಲ್ದರ್ಜೆಗೆ ಏರಿದೆ. 3 ಹೊಸ ಗ್ರಾಮಗಳು ವಾಲ್ಪಾಡಿಯಲ್ಲಿ ರಚನೆಗೊಳ್ಳಲಿದೆ.

ಭಾರತೀಯತೆಯಿಂದ ದೇಶ ವಿಶ್ವಗುರು: ಸೂಲಿಬೆಲೆ
ಭಾರತೀಯತೆಯಿಂದ ದೇಶ ವಿಶ್ವಗುರು: ಸೂಲಿಬೆಲೆ

ಜ್ಞಾನ, ಶಿಕ್ಷಣ ಪಡೆಯುವುದು ಕೇವಲ ಉದ್ಯೋಗದ ಮಾನದಂಡವಾಗಬಾರದು. ಅದು ಹೊಸ ಅನ್ವೇಷಣೆಗಳಿಗೆ, ಹೊಸತನಕ್ಕೆ ನಾಂದಿಯಾಡಬೇಕು ನಮ್ಮೊಳಗೆ ಭಾರತೀಯತೆಯಿದ್ದರೆ `ದೇಶ ವಿಶ್ವದ ಗುರು’ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಗೀಸರ್‍ನಲ್ಲಿ ಗ್ಯಾಸ್ ಸೋರಿಕೆ, ಸ್ಪೋಟ: ಮೂವರಿಗೆ ಗಾಯ
ಗೀಸರ್‍ನಲ್ಲಿ ಗ್ಯಾಸ್ ಸೋರಿಕೆ, ಸ್ಪೋಟ: ಮೂವರಿಗೆ ಗಾಯ

ಬೆಳುವಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಮಲ್ಕೆ ಮನೆಯೊಂದರ ಬಚ್ಚಲುಕೋಣೆಯ ಗೀಸರ್‍ನಲ್ಲಿ ಭಾನುವಾರ ಮುಂಜಾನೆ ಗ್ಯಾಸ್ ಸೋರಿಕೆಯಾಗಿ ಸ್ಪೋಟಗೊಂಡು ಮೂವರು ಗಾಯಗೊಂಡಿದ್ದಾರೆ. ಮನೆಗೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ.

ಸ್ಥಿರಚಿತ್ತದ ಅಧ್ಯಯನ ಯಶಸ್ಸಿಗೆ ಸೂತ್ರ: ಜಂಗಲ್ ವಾಲೇ ಬಾಬಾ
ಸ್ಥಿರಚಿತ್ತದ ಅಧ್ಯಯನ ಯಶಸ್ಸಿಗೆ ಸೂತ್ರ: ಜಂಗಲ್ ವಾಲೇ ಬಾಬಾ

ಜೀವನವೆನ್ನುವುದು ಆಟವಲ್ಲ. ಪ್ರತಿಯೊಬ್ಬರ ಜೀವನದಲ್ಲೂ ಶೈಕ್ಷಣಿಕ ಜೀವನ ಎನ್ನುವುದು ಮಹತ್ವದ್ದು.ಶೈಕ್ಷಣಿಕ ಸಫಲವಾಗಿದ್ದಾರೆ ಬದುಕು ಸಫಲವಾಗುತ್ತದೆ. ವಿದ್ಯಾರ್ಥಿಗಳು ಇಚ್ಛಾಶಕ್ತಿ, ದೃಢಸಂಕಲ್ಪದೊಂದಿಗೆ ಸ್ಥಿರಚಿತ್ತದಿಂದ ಅಧ್ಯಯನ ಮಾಡಿದರೆ ಯಶಸ್ಸು ಎಂದು ಜಂಗಲ್‍ವಾಲೇ ಬಾಬ 108 ಚಿನ್ಮಯ ಸಾಗರ ಮುನಿಮಹಾರಾಜ ಸ್ವಾಮೀಜಿ ಹೇಳಿದರು

ಮೂಡುಬಿದಿರೆ ನಗರಕ್ಕೂ ವಕ್ಕರಿಸಿದ ದನ ಕಳ್ಳರು!
ಮೂಡುಬಿದಿರೆ ನಗರಕ್ಕೂ ವಕ್ಕರಿಸಿದ ದನ ಕಳ್ಳರು!

ಮೂಡುಬಿದಿರೆ ಅಸುಪಾಸಿನ ಗ್ರಾಮಾಂತರ ಪ್ರದೇಶದಲ್ಲಿ ದನಕಳ್ಳತನ ಕಳೆದೆರಡು ವರ್ಷಗಳಿಂದ ಹೆಚ್ಚಾಗಿದ್ದು, ಇದೀಗ ದನಕಳ್ಳರ ವಕ್ರದೃಷ್ಟಿ ನಗರದಲ್ಲಿ ಓಡಾಡುವ ದನಗಳ ಮೇಲೆಯೂ ಬಿದ್ದಿದೆ.

ಮೂಡುಬಿದಿರೆಗೆ 6.60ಕೋಟಿ ವೆಚ್ಚದ ಸುಸಜ್ಜಿತ ನ್ಯಾಯಾಲಯ
ಮೂಡುಬಿದಿರೆಗೆ 6.60ಕೋಟಿ ವೆಚ್ಚದ ಸುಸಜ್ಜಿತ ನ್ಯಾಯಾಲಯ

ತಾಲೂಕು ಕೇಂದ್ರವಾಗಲು ತುದಿಗಾಲಲ್ಲಿ ನಿಂತಿರುವ ಮೂಡುಬಿದಿರೆಯಲ್ಲಿ ಇನ್ನು ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆಯ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲದಲ್ಲಿ ನ್ಯಾಯ ಕೇಳಲು ಬರುವುದು ಸುಗಮ. ಪಶು ವೈದ್ಯಕೀಯ ಆಸ್ಪತ್ರೆಯ ಪಕ್ಕದಲ್ಲೇ 6.60ಕೋಟಿ ವೆಚ್ಚದ ನ್ಯಾಯಾಲಯ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದ್ದು, ರಾಜ್ಯದ ಹೋಬಳಿ ಕೇಂದ್ರಗಳಲ್ಲೇ ಸುಸಜ್ಜಿತ ಕಟ್ಟಡವನ್ನು ಹೊಂದಿರುವ ಏಕೈಕ ನ್ಯಾಯಾಲಯ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ.

ಮಂಜೂರಾಗಿ ವರ್ಷವಾದರೂ ಮೂಡುಬಿದಿರೆಗೆ ಟ್ರಾಫಿಕ್ ಠಾಣೆಯಿಲ್ಲ!
ಮಂಜೂರಾಗಿ ವರ್ಷವಾದರೂ ಮೂಡುಬಿದಿರೆಗೆ ಟ್ರಾಫಿಕ್ ಠಾಣೆಯಿಲ್ಲ!

ಕಳೆದ ಒಂದು ದಶಕದಲ್ಲಿ ಮೂಡುಬಿದಿರೆ ಹಲವಾರು ಮಗ್ಗುಲಲ್ಲಿ ಬೆಳೆದುನಿಂತಿದೆ. ಧಾರ್ಮಿಕ ಕೇಂದ್ರವಾಗಿದ್ದ ಮೂಡುಬಿದಿರೆಯಲ್ಲಿ ಶೈಕ್ಷಣಿಕ ಕ್ರಾಂತಿಯಿಂದಾಗಿ ಜನಸಂಖ್ಯೆ, ವಾಹನಗಳ ಸಂಖ್ಯೆಗಳು ಏರಿಕೆಯಾಗಿದ್ದು, ಇದರೊಂದಿಗೆ ಸಹಜವಾಗಿಯೇ ಹಲವಾರು ಸಮಸ್ಯೆಗಳು ಉದ್ಭವವಾಗಿದೆ.

ಮೈ ಮುಟ್ಟದೆ ಕೊಲೆ ಮಾಡಿದ ಸಲೀಂ ರಿಲೀಸ್!
ಮೈ ಮುಟ್ಟದೆ ಕೊಲೆ ಮಾಡಿದ ಸಲೀಂ ರಿಲೀಸ್!

ಖಾಸಗೀ ಬಸ್ ಕಾರ್ಮಿಕರೆಂದರೆ ಸಾಕು, ಸಾಕಷ್ಟು ಯುವತಿಯರು, ಕಾಲೇಜು ಕನ್ಯೆಯರೂ ತಾವಾಗಿಯೇ ಬಲೆಗೆ ಬೀಳುತ್ತಾರೆ. ಕಂಡೆಕ್ಟರ್ ಸಿಟಿಗೆ, ಡ್ರೈವರ್ ಹಾರ್ನ್ ರಾಗಕ್ಕೆ ಕೆಡವಿ ಎಡವಿದ ಅದೆಷ್ಟೋ ಯುವತಿಯರ ಕಥೆ ವ್ಯಥೆಗಳಲ್ಲಿ ಕಳೆದ ಏಳು ವರ್ಷಗಳ ಹಿಂದಿನ ಏಳಿಂಜೆಯ ಅಶ್ವಿನಿ ಪ್ರಕರಣ ನಿಜಕ್ಕೂ ವಿಭಿನ್ನ ಮತ್ತು ಅಷ್ಟೇ ಕುತೂಹಲಕಾರಿ.

ನವೀಕೃತ ಹೊಸಬೆಟ್ಟು ಚರ್ಚ್‍ನಲ್ಲಿ ಆಶೀರ್ವಚನ
ನವೀಕೃತ ಹೊಸಬೆಟ್ಟು ಚರ್ಚ್‍ನಲ್ಲಿ ಆಶೀರ್ವಚನ

ನವೀಕೃತಗೊಂಡ ಹೊಸಬೆಟ್ಟು ಹೋಲಿ ಕ್ರಾಸ್ ಚರ್ಚ್ ಭಾನುವಾರ ಆಶೀರ್ವಚನ ಕಾರ್ಯಕ್ರಮ ನಡೆಯಿತು. ಮಂಗಳೂರು ಧರ್ಮಪ್ರಾಂತ್ಯದ ಧರ್ಮಗುರು ರೆ.ಫಾ.ಡಾ.ಅಲೋಸಿಯಸ್ ಪೌಲ್ ಡಿ’ಸೋಜ ವಿಶೇಷ ಪ್ರಾರ್ಥನೆ, ಆಶೀವರ್ಚನ ಹಾಗೂ ಬಲಿಪೂಜೆ ನೆರವೇರಿಸಿದರು.

ಮಾರೂರಿನಲ್ಲಿ ಬಲಿಪ ಭಾಗವತರಿಗೆ ಅಮೃತ ಭವನ ಸಮರ್ಪಣೆ
ಮಾರೂರಿನಲ್ಲಿ ಬಲಿಪ ಭಾಗವತರಿಗೆ ಅಮೃತ ಭವನ ಸಮರ್ಪಣೆ

ಕಲೆಯನ್ನು ಗೌರವಿಸುವುದು ನಮ್ಮ ಕರ್ತವ್ಯ. ಅದರಿಂದಾಗಿ ಕಲೆಯೂ, ಕಲಾವಿದರೂ ಬೆಳೆಯುಂತಾಗುತ್ತದೆ. ನಮಗಿಂದು ಕಲಾವಿದರ ಅಗತ್ಯವಿದೆ. ಬಲಿಪರಂತಹ ಕಲಾವಿದರನ್ನು ಸರ್ಕಾರ ಗುರುತಿಸುವಂತಾಗಬೇಕು. ಬಲಿಪರಿಗೆ ಪದ್ಮಶ್ರಿಯಂತಹ ರಾಷ್ಟ್ರಪ್ರಶಸ್ತಿಯ ಗೌರವ ಸಿಗುವಂತಾಗಬೇಕು ಎಂದು ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.

ಮೂಡುಬಿದಿರೆಯಲ್ಲಿ ರಿಕ್ಷಾ ಚಾಲಕರ ಪ್ರತಿಭಟನೆ
ಮೂಡುಬಿದಿರೆಯಲ್ಲಿ ರಿಕ್ಷಾ ಚಾಲಕರ ಪ್ರತಿಭಟನೆ

ರಿಕ್ಷಾಗಳ ಕನಿಷ್ಟ ಪ್ರಯಾಣ ದರವನ್ನು 25ರಿಂದ 20ಕ್ಕೆ ಇಳಿಸಿ ದ.ಕ. ಜಿಲ್ಲಾಧಿಕಾರಿ ಹೊರಡಿಸಿದ ಆದೇಶವನ್ನು ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿ ಮೂಡುಬಿದಿರೆ ರಿಕ್ಷಾ ಚಾಲಕ ಮಾಲಕರು ಶುಕ್ರವಾರ ದಿನಪೂರ್ತಿ ಬಾಡಿಗೆ ನಡೆಸದೆ ಪ್ರತಿಭಟನೆ ನಡೆಸಿದರು.

ಕಡಂದಲೆ: 5 ಲಕ್ಷ ಮೌಲ್ಯದ ಚಿನ್ನಾಭರಣ ಕಳವು
ಕಡಂದಲೆ: 5 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಪಾಲಡ್ಕ ಗ್ರಾ.ಪಂ ವ್ಯಾಪ್ತಿಯ ಕಡಂದಲೆ ಬಿ.ಟಿ.ರೋಡ್‍ನ ಮನೆಯೊಂದರಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಸುಮಾರು 5 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 10 ಸಾವಿರ ರೂ.ನಗದು ಕಳ್ಳರ ಪಾಲಾಗಿದೆ.

ಹೊಸಬೆಟ್ಟು ಮಹಿಳೆ ಸಾವು: ಮಗನ ವಿರುದ್ಧ ದೂರು
ಹೊಸಬೆಟ್ಟು ಮಹಿಳೆ ಸಾವು: ಮಗನ ವಿರುದ್ಧ ದೂರು

ಹೊಸಬೆಟ್ಟು ಗ್ರಾಮದ ಕರಿಂಗಾಣ ಎಂಬಲ್ಲಿ ವಿವಾಹಿತೆಯೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದ್ದು, ಆಕೆ ಗಂಡ ತನ್ನ ಮಗನೇ ಕೊಲೆ ಮಾಡಿದ್ದಾನೆಂದು ಆರೋಪಿಸಿ ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಅಭಿಮಾನಿಗಳ ಮನದಂಗಳದ ಬಲಿಪರ, ಮನೆಯಂಗಳದಲ್ಲಿ ಭವನ
ಅಭಿಮಾನಿಗಳ ಮನದಂಗಳದ ಬಲಿಪರ, ಮನೆಯಂಗಳದಲ್ಲಿ ಭವನ

ಕಂಚಿನ ಕಂಠದ ಮೂಲಕ ತೆಂಕುತಿಟ್ಟಿನ ಯಕ್ಷಗಾನಗಳಲ್ಲಿ ಮೇರು ಭಾಗವತರಾಗಿ ಗುರುತಿಸಿಕೊಂಡಿರುವ ಬಲಿಪ ನಾರಾಯಣ ಭಾಗವತರು ಹಲವಾರು ಅಭಿಮಾನಿಗಳ ಹೃದಯಂಗಳದಲ್ಲಿರುವ ಅಪರೂಪದ ಕಲಾವಿದ. 77ರ ಹರೆಯದ ಬಲಿಪರಿಗೆ ಅವರ ಅಭಿಮಾನಿಗಳು ಅವರ ಮನೆಯಂಗಳದಲ್ಲೇ `ಸಂಗ್ರಹ ಭವನ’ ನಿರ್ಮಿಸಿದ್ದಾರೆ.

ಕಂಬಳದಲ್ಲಿ ಲೇಸರ್ ತಂತ್ರಜ್ಞಾನ: ವಿನೂತನ ಪ್ರಯತ್ನ
ಕಂಬಳದಲ್ಲಿ ಲೇಸರ್ ತಂತ್ರಜ್ಞಾನ: ವಿನೂತನ ಪ್ರಯತ್ನ

ತುಳುನಾಡಿನ ಪಾರಂಪರಿಕ ಕ್ರೀಡೆ ಕಂಬಳಕ್ಕೆ ಅಧುನಿಕ ತಂತ್ರಜ್ಞಾನದ ಸ್ಪರ್ಶ. ಕಂಬಳವನ್ನು ಮಾದರಿ ಕ್ರೀಡೆಯನ್ನಾಗಿಸುವ ನಿಟ್ಟಿನಲ್ಲಿ ಕಂಬಳ ಸಮಿತಿಯವರು ಹಾಗೂ ಸಂಘಟಕರು ಅವಿರತವಾಗಿ ಪ್ರಯತ್ನಿಸುತ್ತಿದ್ದು, ಇಂತಹದೊಂದು ಪ್ರಯತ್ನಗಳಲ್ಲಿ, ಕಂಬಳದಲ್ಲಿ ಲೇಸರ್ ತಂತ್ರಜ್ಞಾನ ವಿಶಿಷ್ಟವಾದದ್ದು.

75ನೇ ಅಖಿಲ ಭಾರತಅಂತರ್ ವಿ.ವಿ. ಕ್ರೀಡಾಕೂಟ: ಪಂಜಾಬ್ ವಿನ್ನರ್: ಮಂಗಳೂರು ರನ್ನರ್ಸ್
75ನೇ ಅಖಿಲ ಭಾರತಅಂತರ್ ವಿ.ವಿ. ಕ್ರೀಡಾಕೂಟ: ಪಂಜಾಬ್ ವಿನ್ನರ್: ಮಂಗಳೂರು ರನ್ನರ್ಸ್

ಮೂಡುಬಿದಿರೆ ಇಲ್ಲಿನ ಸ್ವ್ವರಾಜ್ಯ ಮೈದಾನದ ನೂತನ ಸಿಂಥೆಟಿಕ್ ಟ್ರ್ಯಾಕ್‍ನಲ್ಲಿ ಸೋಮವಾರ ಕೊನೆಗೊಂಡ ಐದು ದಿನಗಳ 75ನೇ ಅಖಿಲ ಭಾರತಅಂತರ್ ವಿ.ವಿ. ಅಥ್ಲೆಟಿಕ್ಸ್‍ನಲ್ಲಿ 9 ಚಿನ್ನ, 9 ಬೆಳ್ಳಿ ಹಾಗೂ 5 ಕಂಚು ಹೀಗೆ 23 ಪದಕಗಳ ಸಾಧನೆಯೊಂದಿಗೆ ಸತತ ನಾಲ್ಕನೇ ಬಾರಿಗೆ ಪಟಿಯಾಲಾ ಪಂಜಾಬ್ ವಿ.ವಿ. 125 ಅಂಕಗಳೊಂದಿಗೆ ಸಮಗ್ರ ಚಾಂಪಿಯನ್‍ಶಿಪ್ ತನ್ನದಾಗಿಸಿಕೊಂಡಿದೆ.

ಅಖಿಲ ಭಾರತ ಅಂತರ್ ವಿ.ವಿ.ಕ್ರೀಡಾಕೂಟ: 1 ರಾಷ್ಟ್ರೀಯ ದಾಖಲೆ: 2 ಕೂಟ ದಾಖಲೆ
ಅಖಿಲ ಭಾರತ ಅಂತರ್ ವಿ.ವಿ.ಕ್ರೀಡಾಕೂಟ: 1 ರಾಷ್ಟ್ರೀಯ ದಾಖಲೆ: 2 ಕೂಟ ದಾಖಲೆ

ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ ಅಖಿಲ ಭಾರತ ಅಂತರ್ ವಿ.ವಿ.ಕ್ರೀಡಾಕೂಟದ ನಾಲ್ಕನೇ ದಿನವಾದ ಸೋಮವಾರ 1 ರಾಷ್ಟ್ರೀಯ ದಾಖಲೆ ಹಾಗೂ ಎರಡು ಹೊಸ ಕೂಟ ದಾಖಲೆಗಳಾಗಿವೆ. ಈ ಮೂಲಕ ನಾಲ್ಕು ದಿನಗಳಲ್ಲಿ ಒಟ್ಟು 9 ದಾಖಲೆಗಳಾಗಿವೆ.

ಕೋಟಿ-ಚೆನ್ನಯ ಕಂಬಳ ಫಲಿತಾಂಶ
ಕೋಟಿ-ಚೆನ್ನಯ ಕಂಬಳ ಫಲಿತಾಂಶ

ತುಳುನಾಡಿನ ಹೆಮ್ಮೆಯ ಕಲೆಯಾದ ಕಂಬಳ ಅತ್ಯುತ್ತಮ ಗ್ರಾಮೀಣ ಕ್ರೀಡೆ. ಜನಪ್ರತಿನಿಧಿಗಳು, ಉದ್ಯಮಿಗಳ ಕಂಬಳದಲ್ಲಿ ಸಕ್ರಿಯರಾಗಿರುವುದು ಇದರ ಮಹತ್ವವನ್ನು ತಿಳಿಸುತ್ತದೆ. ಕಂಬಳ ಗ್ರಾಮೀಣ ಜನರನ್ನು ಸಂಘಟಿಸುವ ಕ್ರೀಡೆ. ಜನರು ಒಗ್ಗಟಾದರೆ ಕಂಬಳ ನಿಷೇಧವಾಗುವುದನ್ನು ತಪ್ಪಿಸಬಹುದು ಎಂದು ಬಹುಭಾಷ ಚಿತ್ರನಟ -ಸುಮನ್ ಹೇಳಿದರು.

ಅಖಿಲ ಭಾರತ ಅಂತರ್ ವಿ.ವಿ 75ನೇ ಕ್ರೀಡಾಕೂಟ: ಮೂರು ಹೊಸ ಕೂಟ ದಾಖಲೆ: ಮಂಗಳೂರು ವಿ.ವಿ.ಮುನ್ನಡೆ
ಅಖಿಲ ಭಾರತ ಅಂತರ್ ವಿ.ವಿ 75ನೇ ಕ್ರೀಡಾಕೂಟ: ಮೂರು ಹೊಸ ಕೂಟ ದಾಖಲೆ: ಮಂಗಳೂರು ವಿ.ವಿ.ಮುನ್ನಡೆ

ಮೂಡುಬಿದಿರೆ ಸ್ವರಾಜ್ಯ ಮೈದಾನದ ನೂತನ ಸಿಂಥೆಟಿಕ್ ಟ್ರ್ಯಾಕ್‍ನಲ್ಲಿ ನಡೆಯುತ್ತಿರುವ 75ನೇ ಅಖಿಲ ಭಾರತಅಂತರ್ ವಿ.ವಿ. ಅಥ್ಲೆಟಿಕ್ಸ್‍ನ ಎರಡನೇ ದಿನವಾದ ಶನಿವಾರ ಪದಕಪಟ್ಟಿಯಲ್ಲಿ 42 ಅಂಗಕಗಳೊಂದಿಗೆ ಮಂಗಳೂರು ವಿವಿ ಅಗ್ರಸ್ಥಾನ ಪಡೆದಿದೆ.

ಮೂಡುಬಿದಿರೆಯ ನೂತನ ಸಿಂಥೆಟಿಕ್ ಟ್ರ್ಯಾಕ್‍ನಲ್ಲಿ 75ನೇ ಅಖಿಲ ಭಾರತಅಂತರ್ ವಿ.ವಿ. ಕ್ರೀಡಾಕೂಟ ಆರಂಭ
ಮೂಡುಬಿದಿರೆಯ ನೂತನ ಸಿಂಥೆಟಿಕ್ ಟ್ರ್ಯಾಕ್‍ನಲ್ಲಿ 75ನೇ ಅಖಿಲ ಭಾರತಅಂತರ್ ವಿ.ವಿ. ಕ್ರೀಡಾಕೂಟ ಆರಂಭ

ರಾಜೀವಗಾಂಧಿಆರೋಗ್ಯ ವಿಜ್ಞಾನ ವಿ.ವಿ. ಬೆಂಗಳೂರು, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಕರ್ನಾಟಕ ಸರಕಾರದ ಜಂಟಿ ಸಹಯೋಗದಲ್ಲಿ 75ನೇ ಅಖಿಲ ಭಾರತಅಂತರ್ ವಿ.ವಿ. ಅಥ್ಲೆಟಿಕ್ಸ್ ಇಲ್ಲಿನ ಸ್ವ್ವರಾಜ್ಯ ಮೈದಾನದಲಿನ ನೂತನ ಸಿಂಥೆಟಿಕ್ ಟ್ರ್ಯಾಕ್‍ನಲ್ಲಿ ಶುಕ್ರವಾರ ಶುಭಾರಂಭಗೊಂಡಿತು.

Suvarna News 24X7 Live online
333 Album