ಅಪ್ಪನ ಜಾಗವೇ ?... ಯುವಜನಸೇವೆ ಸಚಿವರ ಮಾತಿನ ವರಸೆ
ಅಪ್ಪನ ಜಾಗವೇ ?... ಯುವಜನಸೇವೆ ಸಚಿವರ ಮಾತಿನ ವರಸೆ

ಕಾರ್ಕಳ ಮಹಾಮಸ್ತಕಾಭಿಷೇಕ ಮಹೋತ್ಸವದ ಪ್ರಯುಕ್ತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನಿಧಿಯಿಂದ ಅಭಿವೃದ್ಧಿ ಕಾಮಗಾರಿಗೆ ಮಂಜೂರಾಗಿರುವ 25ಲಕ್ಷ ರೂ. ಅನುದಾನದಲ್ಲಿ ಮೂಡುಬಿದಿರೆ ಹಳೆ ಪೊಲೀಸ್ ಠಾಣೆಯ ಬಳಿಯಿಂದ ಮಹಾವೀರ ಭವನದ ವರೆಗಿನ ರಸ್ತೆಗೆ ಅಳವಡಿಸುವ ಇಂಟರ್‍ಲಾಕ್‍ಗೆ ಸೋಮವಾರ ಶಂಕುಸ್ಥಾಪನೆ ಮಾಡಲಾಯಿತು.

ಜೈನಕಾಶಿಯನ್ನು ಮತ್ತೆ ಸೇರಿದ ಸಿದ್ದಾಂತ ಬಿಂಬಗಳು
ಜೈನಕಾಶಿಯನ್ನು ಮತ್ತೆ ಸೇರಿದ ಸಿದ್ದಾಂತ ಬಿಂಬಗಳು

ರಾಷ್ಟ್ರಮಟ್ಟದಲ್ಲೇ ಸುದ್ದಿಯಾಗಿದ್ದ ಮೂಡುಬಿದಿರೆ:ಗುರುಬಸದಿಯ ಸಿದ್ದಾಂತ ಮಂದಿರದಲ್ಲಿನ ಅಮೂಲ್ಯ ಸಿದ್ಧಾಂತ ಬಿಂಬಗಳ ಕಳ್ಳತನ ಪ್ರಕರಣದಲ್ಲಿ ಕಳವು ಮಾಡಲಾದ 15 ಪ್ರಾಚೀನ ಜಿನ ಬಿಂಬಗಳು ಶನಿವಾರ ಜೈನಕಾಶಿಯ ಜೈನಮಠಕ್ಕೆ ಮತ್ತೆ ಸಿಕ್ಕಿದೆ.

ಮೂಡುಬಿದಿರೆಯಲ್ಲಿ ಸ್ವರಾಜ್ಯ ಮೈದಾನ ಉಳಿಸಿ ಆಂದೋಲನ
ಮೂಡುಬಿದಿರೆಯಲ್ಲಿ ಸ್ವರಾಜ್ಯ ಮೈದಾನ ಉಳಿಸಿ ಆಂದೋಲನ

ಅನೇಕ ಸಂಘ ಸಂಸ್ಥೆಗಳ ಸಕ್ರಿಯ ಚಟುವಟಿಕೆಗಳ ಬಹುಪಯೋಗಿ ತಾಣವಾಗಿರುವ, ಮೂಡುಬಿದಿರೆ ಕೇಂದ್ರ ಸ್ಥಳದಲ್ಲಿರುವ ಸ್ವರಾಜ್ಯ ಮೈದಾನವನ್ನು ರಿಂಗ್ ರೋಡ್ ಅಭಿವೃದ್ಧಿಯ ನೆಪವೊಡ್ಡಿ ಬಲಿ ತೆಗೆದುಕೊಂಡರೆ ಪೇಟೆಯನ್ನು ಬಂದ್ ಮಾಡಿ ತೀವ್ರ ಹೋರಾಟ ಮಾಡುತ್ತೇವೆ ಎಂದು ಮೂಡುಬಿದಿರೆ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ಅಶ್ವಿನ್ ಜೆ.ಪಿರೇರಾ ಎಚ್ಚರಿಕೆ ನೀಡಿದ್ದಾರೆ.

ಕಂಬಳ ಸಮಿತಿ ಸಭೆ: ಪರಿಷ್ಕರಣೆ ಬಳಿಕ ಕಂಬಳ ದಿನಾಂಕ ಪ್ರಕಟ
ಕಂಬಳ ಸಮಿತಿ ಸಭೆ: ಪರಿಷ್ಕರಣೆ ಬಳಿಕ ಕಂಬಳ ದಿನಾಂಕ ಪ್ರಕಟ

ಕಾನೂನು ಚೌಕಟ್ಟಿನಲ್ಲಿ ಕಂಬಳ ನಡೆಯುವುದರಿಂದ ಹಿಂಸಾರಹಿತ ಕಂಬಳ ನಡೆಯಬೇಕು. ಕಂಬಳ ದಿನಾಂಕ ಪರಿಷ್ಕರಿಸುವ ನಿಟ್ಟಿನಲ್ಲಿ ವೇಳಾಪಟ್ಟಿ ತಯಾರಿಸಿ ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರ ಅನುಮತಿ ಪಡೆದು ಪ್ರಕಟಿಸುವುದು ಸೂಕ್ತ ಎಂಬ ನಿರ್ಣಯವನ್ನು ಜಿಲ್ಲಾ ಕಂಬಳ ಸಮಿತಿಯ ಸಮಾಲೋಚನಾ ಸಭೆಯಲ್ಲಿ ಕೈಗೊಳ್ಳಲಾಯಿತು.

ಹಂಡೇಲು: ಮನೆಯ ಅಂಗಳದಲ್ಲಿ ಪಿಕ್‍ಅಪ್ ಪಲ್ಟಿ
ಹಂಡೇಲು: ಮನೆಯ ಅಂಗಳದಲ್ಲಿ ಪಿಕ್‍ಅಪ್ ಪಲ್ಟಿ

ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಹಂಡೇಲು ಎಂಬಲ್ಲಿ ಮಂಗಳವಾರ ಮುಂಜಾನೆ ಪಿಕ್‍ಅಪ್ ವಾಹನ ರಸ್ತೆ ಬದಿಯ ಮನೆಯ ಅಂಗಳಕ್ಕೆ ಪಲ್ಟಿಯಾಗಿದೆ.

ಪುರಸಭೆ ವಿರುದ್ಧ ಅಸಮಧಾನ:ಗೌರವ ಧನ ಸ್ವೀಕರಿಸದ ಸದಸ್ಯ
ಪುರಸಭೆ ವಿರುದ್ಧ ಅಸಮಧಾನ:ಗೌರವ ಧನ ಸ್ವೀಕರಿಸದ ಸದಸ್ಯ

ಮೂಡುಬಿದಿರೆ ಇಲ್ಲಿನ ಪುರಸಭೆಯ ಆಡಳಿತ ವೈಖರಿಯನ್ನು ವಿರೋಧಿಸಿದ ಜೆಡಿಎಸ್ ಬೆಂಬಲಿತ ಪುರಸಭಾ ಸದಸ್ಯ ಹನೀಪ್ ಅಲಂಗಾರ್ ತನಗೆ ಸಿಗುವ ಮಾಸಿಕ ಗೌರವ ಧನವನ್ನು ಸ್ವೀಕರಿಸದಿರಲು ನಿರ್ಧರಿಸಿದ್ದಾರೆ.

ಪಾಲಡ್ಕ ಗ್ರಾಮಸ್ಥರ ನಿದ್ದೆಗೆಡಿಸುತ್ತಿರುವ ಚಿರತೆ ಹಾವಳಿ: ದನ,ನಾಯಿಗಳು ಬಲಿ
ಪಾಲಡ್ಕ ಗ್ರಾಮಸ್ಥರ ನಿದ್ದೆಗೆಡಿಸುತ್ತಿರುವ ಚಿರತೆ ಹಾವಳಿ: ದನ,ನಾಯಿಗಳು ಬಲಿ

ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಚಿರತೆ ಹಾವಳಿ ಹೆಚ್ಚಾಗಿದ್ದು ಜನರು ರಾತ್ರಿ ಮಾತ್ರವಲ್ಲ, ಹಗಲಲ್ಲೂ ಓಡಾಡಲು ಭಯ ಪಡುತ್ತಿದ್ದಾರೆ. ಗ್ರಾಮದ ದನ-ನಾಯಿಗಳು ಚಿರತೆಗೆ ಬಲಿಯಾಗುತ್ತಿರುವುದು ಹೆಚ್ಚಾಗುತ್ತಿದೆ.

ಬೆದ್ರ:ಶುಚಿತ್ವ,ಸುರಕ್ಷತೆಗೆ ಸಿ.ಸಿ.ಕ್ಯಾಮರ ಕಣ್ಗಾವಲು
ಬೆದ್ರ:ಶುಚಿತ್ವ,ಸುರಕ್ಷತೆಗೆ ಸಿ.ಸಿ.ಕ್ಯಾಮರ ಕಣ್ಗಾವಲು

ನಗರ ಪ್ರದೇಶದಲ್ಲಿ ಸುರಕ್ಷತೆ, ಶುಚಿತ್ವದ ಬಗ್ಗೆ ಹೆಚ್ಚಿನ ನಿಗಾ ವಹಿಸಲು ಮೂಡುಬಿದಿರೆ ಸಾರ್ವಜನಿಕ ಸ್ಥಳಗಳಲ್ಲೇ ಇದೇ ಮೊದಲ ಬಾರಿಗೆ ಸಿ.ಸಿ ಕ್ಯಾಮರ ಅಳವಡಿಸುತ್ತಿದೆ.

ಸಹಕಾರಿ ರಾಜ್ಯಮಟ್ಟದ ಚರ್ಚಾ ಸ್ಪರ್ಧೆ: ಮೈಸೂರು ತರಬೇತಿ ಸಂಸ್ಥೆಗೆ ಪರ್ಯಾಯ ಪದಕ
ಸಹಕಾರಿ ರಾಜ್ಯಮಟ್ಟದ ಚರ್ಚಾ ಸ್ಪರ್ಧೆ: ಮೈಸೂರು ತರಬೇತಿ ಸಂಸ್ಥೆಗೆ ಪರ್ಯಾಯ ಪದಕ

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಂಗಸಂಸ್ಥೆ ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್‍ನ ಆಶ್ರಯದಲ್ಲಿ ಶುಕ್ರವಾರ ಕಲ್ಪವೃಕ್ಷ ಸಭಾಭವನದಲ್ಲಿ ನಡೆದ ಅಂತರ್ ಸಹಕಾರ ತರಬೇತಿ ಸಂಸ್ಥೆಗಳ ರಾಜ್ಯಮಟ್ಟದ ಚರ್ಚಾಸ್ಪರ್ಧೆಯಲ್ಲಿ ಮೈಸೂರು ತರಬೇತಿ ಸಂಸ್ಥೆ ಪರ್ಯಾಯ ಫಲಕ ಪಡೆದಿದೆ.

ಬೆದ್ರ ಪುರಸಭಾಧಿವೇಶನ: ಬಾಕಿ ವಸೂಲಿಗೆ ಕ್ರಮ, ಅಭಿವೃದ್ಧಿ ಕಾಮಗಾರಿಗಳಲ್ಲಿ ಅಕ್ರಮ
ಬೆದ್ರ ಪುರಸಭಾಧಿವೇಶನ: ಬಾಕಿ ವಸೂಲಿಗೆ ಕ್ರಮ, ಅಭಿವೃದ್ಧಿ ಕಾಮಗಾರಿಗಳಲ್ಲಿ ಅಕ್ರಮ

ಪುರಸಭೆಯು ಆಡಳಿತಾಧಿಕಾರಿಯ ಅವಧಿಯಲ್ಲಿದ್ದಾಗ ಸುಮಾರು ಒಂದೂವರೆ ಕೋಟಿ ರೂವಿನ ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದು ಅವೆಲ್ಲಾ ಕಳಪೆ ಕಾಮಗಾರಿಗಳಾಗಿವೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಿರಿ ಎಂದು ಸದಸ್ಯ ಹನೀಫ್ ಅಲಂಗಾರು ಒತ್ತಾಯಿಸಿದರು.

ಬೆದ್ರ ಒಳಚರಂಡಿ ಭೂ ಸ್ವಾದೀನ: ಸಂತ್ರಸ್ತರ ಅಹವಾಲು ಸ್ವೀಕಾರ
ಬೆದ್ರ ಒಳಚರಂಡಿ ಭೂ ಸ್ವಾದೀನ: ಸಂತ್ರಸ್ತರ ಅಹವಾಲು ಸ್ವೀಕಾರ

ರಾಜ್ಯ ಸರ್ಕಾರ 60 ಕೋಟಿ ಅನುದಾನದಲ್ಲಿ ನಿರ್ಮಾಣಗೊಳ್ಳಿರುವ ಒಳಚರಂಡಿ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆ ಕುರಿತು ಮಂಗಳವಾರ ಸಂಜೆ ಸ್ಥಳ ಪರಿಶೀಲನೆ ನಡೆಸಿದ ಮಂಗಳೂರು ಸಹಾಯಕ ಆಯುಕ್ತ ಡಾ.ಅಶೋಕ್ ಭೂ ಸಂತ್ರಸ್ತರ ಅಹವಾಲು ಸ್ವೀಕರಿಸಿದರು

ಬೆದ್ರ ಒನ್ ವೇ: ಹೆಸರಿಗೆ ಏಕಮುಖ ಅಸಲಿಗೆ ದ್ವಿಮುಖ
ಬೆದ್ರ ಒನ್ ವೇ: ಹೆಸರಿಗೆ ಏಕಮುಖ ಅಸಲಿಗೆ ದ್ವಿಮುಖ

ವಾಹನದಟ್ಟನೆ, ಕಿರಿದಾದ ರಸ್ತೆಯಿರುವ ಮೂಡುಬಿದಿರೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಷ್ಟಸಾಧ್ಯವಾಗಿದೆ. ಹಿಂದೆ ರೂಪಿಸಿದ ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲಿಸಿದರೆ ಇಂತಹ ಸಮಸ್ಯೆಗಳನ್ನು ದೂರಮಾಡಬಹುದು.

ಪಾಲಡ್ಕ: ಚಿರತೆ ದಾಳಿಗೆ ದನ ಬಲಿ
ಪಾಲಡ್ಕ: ಚಿರತೆ ದಾಳಿಗೆ ದನ ಬಲಿ

ಪಾಲಡ್ಕ ಗ್ರಾಮದ ಕೇಮಾರು ಸಮೀಪದ ಕಡ್ತಿಮಾರ್ ಎಂಬಲ್ಲಿ ಸುದಾಕರ್ ಪೂಜಾರಿ ಎಂಬವರ ಮನೆಯ ಕೊಟ್ಟಿಗೆಯಲ್ಲಿ ಸೋಮವಾರ ರಾತ್ರಿ ಚಿರತೆ ದಾಳಿ ನಡೆಸಿದ್ದು ಒಂದು ದನವನ್ನು ಕೊಂದು ಹಾಕಿದೆ. ಮತ್ತೆರಡು ದನಗಳನ್ನು ಗಾಯಗೊಳಿಸಿದೆ.

ನೆಲ್ಲಿಕಾರು ಉಪಚುನಾವಣೆ: ಬಿಜೆಪಿ ಬೆಂಬಲಿತ ಜಾರ್ಜ್ ಫೆರ್ನಾಂಡಿಸ್ ಗೆಲುವು
ನೆಲ್ಲಿಕಾರು ಉಪಚುನಾವಣೆ: ಬಿಜೆಪಿ ಬೆಂಬಲಿತ ಜಾರ್ಜ್ ಫೆರ್ನಾಂಡಿಸ್ ಗೆಲುವು

ನೆಲ್ಲಿಕಾರು ಗ್ರಾ.ಪಂ.ನಲ್ಲಿ ತೆರವಾದ ಒಂದು ಸದಸ್ಯ ಸ್ಥಾನಕ್ಕೆ ನಾಲ್ಕು ತಿಂಗಳ ಅವಧಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಜಾರ್ಜ್ ಫೆನಾಂಡಿಸ್ 7 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಉಳಾಯಿಬೆಟ್ಟು ಹಲ್ಲೆ ಪ್ರಕರಣ: ವಿಕೋಪಕ್ಕೆ ತಿರುಗಿದ ಪ್ರತಿಭಟನೆ: ಉದ್ವಿಗ್ನ
ಉಳಾಯಿಬೆಟ್ಟು ಹಲ್ಲೆ ಪ್ರಕರಣ: ವಿಕೋಪಕ್ಕೆ ತಿರುಗಿದ ಪ್ರತಿಭಟನೆ: ಉದ್ವಿಗ್ನ

ಉಳಾಯಿಬೆಟ್ಟುವಿನಲ್ಲಿ ದತ್ತಮಾಲಾಧಾರಿಗಳ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಖಂಡಿಸಿ ಪರಾರಿಯಲ್ಲಿ ನಡೆದ ಬೃಹತ್ ಪ್ರತಿಭಟನೆ ವಿಕೋಪಕ್ಕೆ ತಿರುಗಿದ್ದು, ಕಲ್ಲುತೂರಾಟ ನಡೆದಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿಪ್ರಹಾರ ನಡೆಸಿದ್ದಾರೆ.

ಸರ್ಕಾರದಿಂದ 100 ರೂ.ಕೇಬಲ್: ಗ್ರಾಹಕರಿಗೆ ಸಿಹಿ: ಅಪರೇಟರ್‍ಗಳಿಗೆ ಕಹಿ
ಸರ್ಕಾರದಿಂದ 100 ರೂ.ಕೇಬಲ್: ಗ್ರಾಹಕರಿಗೆ ಸಿಹಿ: ಅಪರೇಟರ್‍ಗಳಿಗೆ ಕಹಿ

ಕಳೆದ ಕೆಲವು ತಿಂಗಳಿಂದ ಕೇರಳ ಮೂಲದ ಕೇಬಲ್ ಸಂಸ್ಥೆಯೊಂದು ಕರಾವಳಿಯಲ್ಲಿ ನೆಲೆಯೂರಲು ಹಪಹಪಿಸುತ್ತಿದ್ದು ಕರಾವಳಿಯಲ್ಲಿ ಕೇಬಲ್ ಅಪರೇಟ್‍ಗಳಿಗೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ.

ಕಾರು-ಬೈಕ್ ಡಿಕ್ಕಿ: ಕಾಲೇಜು ವಿದ್ಯಾರ್ಥಿ ದುರ್ಮರಣ
ಕಾರು-ಬೈಕ್ ಡಿಕ್ಕಿ: ಕಾಲೇಜು ವಿದ್ಯಾರ್ಥಿ ದುರ್ಮರಣ

ಕಾರ್ಕಳ-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಬನ್ನಡ್ಕ ಎಂಬಲ್ಲಿ ಭಾನುವಾರ ಸಂಜೆ ಕಾರೊಂದು ಬೈಕಿಗೆ ಢಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಮನದಾಳದ ಮೌನದಲ್ಲಿ `ಅವಳ’ ಹೆಜ್ಜೆ ಗುರುತುಗಳು
ಮನದಾಳದ ಮೌನದಲ್ಲಿ `ಅವಳ’ ಹೆಜ್ಜೆ ಗುರುತುಗಳು

ಅಂದು ಸೋಮವಾರ ಬೆಳಗ್ಗಿನ ಜಾವ ಹಲೋ.. ಮೇಡಮ್ ಮೊಬೈಲ್ ಮೆಸೇಜ್ ನೋಡಿದ್ರಾ.. ಇವತ್ತು ಶಾಲೆಗೆ ರಜೆ ಅಂತೆ.. ಮಗಳನ್ನ ಕಳಿಸೋದು ಬೇಡ..." ಅತ್ತ ಕಡೆಯಿಂದ ರಿಕ್ಷಾ ಚಾಲಕನ ಕರೆ ಕೇಳಿ ಬಂದಾಗ ಅವಳಿಗೆ ಕ್ಷಣಕಾಲ ಏನೆನ್ನಬೇಕೋ ಗೊತ್ತಾಗಲಿಲ್ಲ. ಒಂದೆಡೆ ಉಕ್ಕಿ ಬರುವ ದುಖವನ್ನೂ ಹತ್ತಿಕ್ಕಲಾಗದೇ..

ರಾಜೀವ್ ಗಾಂಧಿ ಆರೋಗ್ಯ ವಿ.ವಿ ಕ್ರೀಡಾಕೂಟ: ಆಳ್ವಾಸ್‍ಗೆ ಸಮಗ್ರ ಪ್ರಶಸ್ತಿ: ಕ್ರೀಡಾಕೊಟದಲ್ಲಿ 12 ದಾಖಲೆ
ರಾಜೀವ್ ಗಾಂಧಿ ಆರೋಗ್ಯ ವಿ.ವಿ ಕ್ರೀಡಾಕೂಟ: ಆಳ್ವಾಸ್‍ಗೆ ಸಮಗ್ರ ಪ್ರಶಸ್ತಿ: ಕ್ರೀಡಾಕೊಟದಲ್ಲಿ 12 ದಾಖಲೆ

ವಿದ್ಯಾಗಿರಿಯ ಆಳ್ವಾಸ್ ಕ್ಯಾಂಪಸ್ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ರಾಜೀವ್ ಗಾಂಧಿ ಆರೋಗ್ಯ ವಿ.ವಿ ಅಂತರ್ ಕಾಲೇಜು 16ನೇ ಕ್ರೀಡಾಕೂಟವು ಶನಿವಾರ ಮುಕ್ತಾಯಗೊಂಡಿದ್ದು ಕ್ರೀಡಾಕೂಟದಲ್ಲಿ 12 ದಾಖಲೆಗಳಾಗಿವೆ. ಇವುಗಳಲ್ಲಿ ಹತ್ತು ದಾಖಲೆಯನ್ನು ಮಾಡಿದ ಆಳ್ವಾಸ್ ಸಂಸ್ಥೆ 86 ಅಂಕಗಳೊಂದಿಗೆ ಸಮಗ್ರ ಚಾಂಪಿಯನ್ ಆಗಿದೆ.

ನಕಲಿ ಫೇಸ್‍ಬುಕ್ ಖಾತೆ ಪ್ರಕರಣ: 6 ಆರೋಪಿಗಳ ಬಂಧನ
ನಕಲಿ ಫೇಸ್‍ಬುಕ್ ಖಾತೆ ಪ್ರಕರಣ: 6 ಆರೋಪಿಗಳ ಬಂಧನ

ಹುಡುಗಿಯ ಪ್ರೀತಿಗಾಗಿ ಮುಸ್ಲಿಂ ಯುವಕನೊಬ್ಬ ಹಿಂದೂ ಯುವಕನಂತೆ ವೇಷ ಬದಲಾಯಿಸಿ ಫೇಸ್‍ಬುಕ್‍ನಲ್ಲಿ ಯುವತಿಗೆ ವಂಚಿಸಿದಕ್ಕೆ ಮುಸ್ಲಿಂ ಯುವಕನ ವಿರುದ್ಧ ಹಾಗೂ ಈ ಯುವಕನಿಗೆ ಹಲ್ಲೆ ನಡೆಸಿದ ಐವರು ಹಿಂದೂ ಸಂಘಟನೆಯ ಕಾರ್ಯಕರ್ತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

Suvarna News 24X7 Live online
333 Album