ಬೆಳ್ತಂಗಡಿ: ಬಾವಿಗೆ ಹಾರಿ ತಾಯಿ ಮಕ್ಕಳ ಆತ್ಮಹತ್ಯೆ
ಬೆಳ್ತಂಗಡಿ: ಬಾವಿಗೆ ಹಾರಿ ತಾಯಿ ಮಕ್ಕಳ ಆತ್ಮಹತ್ಯೆ

ತಾಯಿ ಹಾಗೂ ತನ್ನ ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಾರಾವಿ ಗ್ರಾಮದ ಚೆಂಡೆದ ಬಾಕ್ಯಾರು ಎಂಬಲ್ಲಿ ನಿನ್ನೆ ನಡೆದಿದೆ. ಮೃತರನ್ನು ಸ್ಥಳೀಯ ನಿವಾಸಿ ಸದಾನಂದ ಎಂಬವರ ಪತ್ನಿ ಕುಸುಮಾವತಿ (31), ಆಕೆಯ ಮಕ್ಕಳಾದ ಸಮೀಕ್ಷಾ (8) ಹಾಗೂ ಸಂಪ್ರೀತ್ (4) ಎಂದು ಗುರುತಿಸಲಾಗಿದೆ.

ಹಣ ದ್ವಿಗುಣ ಮಾಡುವುದಾಗಿ ಹೇಳಿ ಲಕ್ಷಾಂತರ ರೂ.ವಂಚನೆ: ಆರೋಪಿಯ ಬಂಧನ
ಹಣ ದ್ವಿಗುಣ ಮಾಡುವುದಾಗಿ ಹೇಳಿ ಲಕ್ಷಾಂತರ ರೂ.ವಂಚನೆ

ಶೇರು ವ್ಯವಹಾರ ನಡೆಸಿ ಲಾಭ ನೀಡುವುದಾಗಿ ನಂಬಿಸಿ ಲಕ್ಷಾಂತರ ಹಣ ಸಂಗ್ರಹಿಸಿ ಮೋಸ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತ ಸುಮಾರು 350 ಜನರಿಂದ 10ಸಾವಿರದಂತೆ ಹಣ ಪಡೆದು ಶೇರು ಮಾರುಕಟ್ಟೆಯಲ್ಲಿ ಹೂಡಿ 10 ತಿಂಗಳೀನಲ್ಲಿ ದ್ವಿಗುಣ ಮಾಡುವುದಾಗಿ ನಂಬಿಸಿದ್ದ.

ಕಾರ್ಕಳ: ಶಿಲ್ಪಿ ಶ್ಯಾಮರಾಯ ಆಚಾರ್ಯ ವಿಧಿವಶ
ಕಾರ್ಕಳ: ಶಿಲ್ಪಿ ಶ್ಯಾಮರಾಯ ಆಚಾರ್ಯ ವಿಧಿವಶ

ಖ್ಯಾತ ಶಿಲ್ಪಿ ಹಾಗೂ ಕರ್ನಾಟಕ ಶಿಲ್ಪ ಕಲಾ ಅಕಾಡಮಿಯ ಮಾಜಿ ಅಧ್ಯಕ್ಷ ಕಾರ್ಕಳ ಶಾಮರಾಯ ಆಚಾರ್ಯ(88) ಬುಧವಾರ ರಾತ್ರಿ ಕಾರ್ಕಳದ ಕಾಬೆಟ್ಟುವಿನಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಬೃಹತ್ ಅಲೆ ಮುನ್ಸೂಚನೆ: ಮೀನುಗಾರರಿಗೆ ಎಚ್ಚರಿಕೆ
ಬೃಹತ್ ಅಲೆ ಮುನ್ಸೂಚನೆ: ಮೀನುಗಾರರಿಗೆ ಎಚ್ಚರಿಕೆ

ರಾಜ್ಯ ಪ್ರಾಕೃತಿಕ ವಿಪತ್ತು ನಿರ್ವಹಣಾ ಘಟಕ ನೀಡಿದ ಮುನ್ಸೂಚನೆಯಂತೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತೀರ ಪ್ರದೇಶಗಳಲ್ಲಿ ಭಾರೀ ಗಾಳಿ ಬೀಸಲಿದ್ದು, ಸಮುದ್ರದಲ್ಲಿ 2.5 ಮೀಟರ್‌ನಿಂದ 6.5 ಮೀಟರ್ ಎತ್ತರದಲ್ಲಿ ಅಲೆಗಳು ಅಪ್ಪಳಿಸುವ ಭೀತಿಯಿದೆ. ಹಾಗಾಗಿ ಮೀನುಗಾರರು 3ದಿನಗಳ ಕಾಲ ಸಮುದ್ರಕ್ಕೆ ತೆರಳದಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಎನ್. ಎಸ್. ಚೆನ್ನಪ್ಪಗೌಡ ಮುನ್ನೆಚ್ಚರಿಕೆ ನೀಡಿದ್ದಾರೆ.

ಮಾನ್ಸೂನ್ ಸ್ಪೆಷಲ್ : ಮಳೆಗಾಲದ ಅತಿಥಿಯಾಗಿ ಬರುತ್ತಿದೆ ಅಣಬೆ
ಮಾನ್ಸೂನ್ ಸ್ಪೆಷಲ್ : ಮಳೆಗಾಲದ ಅತಿಥಿಯಾಗಿ ಬರುತ್ತಿದೆ ಅಣಬೆ

ಮಳೆಗಾಲ ಆರಂಭವಾದೊಡನೆ ಮಳೆ ನೀರು ಭೂಮಿಯೊಳಗೆ ಬೀಳುತ್ತಿದ್ದಂತೆ ಹುಟ್ಟಿಕೊಳ್ಳುವ ನಾನಾ ಬಗೆಯ ಸಸ್ಯ ಸಂಕುಲಗಳಲ್ಲಿ ಅಣಬೆಗಳು ಕೂಡಾ ವಿಶಿಷ್ಟವಾದುದು. ಬೇಸಗೆಯಲ್ಲಿಲ್ಲದ ಅಣಬೆಗಳು ಮಳೆಗಾಲದ ಸಂದರ್ಭದಲ್ಲಿ ಸಿಡಿಲಿನ ಸದ್ದಿಗೆ ಕೊಡೆಗಳ ಮಾದರಿಯಲ್ಲಿ ಮೂಡಲಾರಂಭಿಸುತ್ತದೆ.

ಕರ್ನಾಟಕದ ಕನ್ನಡೇತರರು ಕನ್ನಡ ಕಲಿಯಲು ಒಂದು ವರ್ಷ ಗಡುವು
ಕರ್ನಾಟಕದ ಕನ್ನಡೇತರರು ಕನ್ನಡ ಕಲಿಯಲು ಒಂದು ವರ್ಷ ಗಡುವು

’ರಾಜ್ಯದಲ್ಲಿ ಲಕ್ಷಾಂತರ ಮಂದಿ ಹೊರ ರಾಜ್ಯಗಳಿಂದ ಬಂದು ನೆಲೆ ಕಂಡುಕೊಳ್ಳುತ್ತಿದ್ದಾರೆ. ಇಲ್ಲಿನ ನೆಲ, ಜಲ, ವಾಯು ಮತ್ತಿತರ ಸಂಪನ್ಮೂಲಗಳನ್ನು ಬಳಸಿಕೊಂಡು ಜೀವನ ರೂಪಿಸಿಕೊಳ್ಳುವಾಗ ಅನಿವಾರ್ಯವಾಗಿ ಮತ್ತು ಕಡ್ಡಾಯವಾಗಿ ಇಲ್ಲಿನ ಸಂಸ್ಕೃತಿ, ಇತಿಹಾಸ ಮತ್ತು ನೆಲದ ಭಾಷೆಯನ್ನು ಅರಿಯಬೇಕು’

ಬಾಬಾ ಬಂಧನ: ಮೂಡಬಿದಿರೆಯಲ್ಲಿ ಬಿಜೆಪಿಯಿಂದ ಪ್ರತಿಭಟನೆ
ಬಾಬಾ ಬಂಧನ: ಮೂಡಬಿದಿರೆಯಲ್ಲಿ ಬಿಜೆಪಿಯಿಂದ ಪ್ರತಿಭಟನೆ

ಬಾಬಾರವರ ಈ ಹೋರಾಟಕ್ಕೆ ಕೇಂದ್ರ ಸರಕಾರ ರಾಜಕೀಯ ಬಣ್ಣ ಕೊಡುತ್ತಿದೆ ಆದರೆ ಬಾಬಾರವರು ಯಾವುದೇ ರಾಜಕೀಯದ ಒತ್ತಡಕ್ಕೆ ಮಣಿದು ಈ ಹೋರಾಟಕ್ಕೆ ಇಳಿದಿಲ್ಲ. ಕೇಂದ್ರ ಸರಕಾರದ ಕುಮ್ಮಕ್ಕಿನಿಂದ ಈ ಅಮಾನವೀಯ ಕೃತ್ಯ ನಡಿದಿದ್ದು, ಇದಕ್ಕಾಗಿ ಪಕ್ಷ, ಜಾತಿ, ಮತ ಭೇದವನ್ನು ಬಿಟ್ಟು ಹೋರಾಟಕ್ಕೆ ಸ್ಪಂದಿಸಬೇಕು ಎಂದರು.

ರೀಮಾ ರೊಡ್ರಿಗಸ್ ಐಸಿವೈಎಮ್ ರಾಷ್ಟ್ರೀಯ ಯುವ ಪ್ರಶಸ್ತಿಗೆ ಆಯ್ಕೆ - Reema Rodrigues selected for ICYM National Youth Award 2011
ರೀಮಾ ರೊಡ್ರಿಗಸ್ ಐಸಿವೈಎಮ್ ರಾಷ್ಟ್ರೀಯ ಯುವ ಪ್ರಶಸ್ತಿಗೆ ಆಯ್ಕೆ

ಮಂಗಳೂರು ರೊಸಾರಿಯೋ ಕ್ಯಾಥೆಡ್ರಲ್ ಚರ್ಚಿನ ಯುವ ಪ್ರತಿಭೆ ರೀಮಾ ರೊಡ್ರಿಗಸ್ ಅವರು ಪ್ರತಿಷ್ಠಿತ ಐಸಿವೈಎಮ್ ರಾಷ್ಟ್ರೀಯ ಯುವ ಪ್ರಶಸ್ತಿಗೆ ಆಯ್ಕೆಯಾಗಿರುವುದು ಮಂಗಳೂರಿನ ಜನತೆಗೆ ಹೆಮ್ಮೆ ತಂದಿದೆ. ಅವರು ಜುಲೈ 8ರಂದು ನಾಗ್ಪುರದಲ್ಲಿ ರಾಷ್ಟ್ರೀಯ ಯುವ ಪ್ರಶಸ್ತಿ ಸ್ವೀಕರಿಸಲಿರುವರು. ರೀಮಾ ರೊಡ್ರಿಗಸ್ ತನ್ನ ಶೈಕ್ಷಣಿಕ ಕ್ಷೇತ್ರವಾದ ಫಿಸಿಯೋಥೆರಪಿಯಲ್ಲಿಯೂ ಮಿಂಚಿದ್ದು ಮಂಗಳೂರಿನ ಹಂಪನಕಟ್ಟೆಯಲ್ಲಿ ಫಿಟ್ನೆಸ್ ಕ್ಲಿನಿಕ್ ನಡೆಸುತ್ತಿದ್ದಾರೆ.

ಕೊಡಗಿನಲ್ಲಿ ಮಹಿಳೆ ಹತ್ಯೆ: ಮಗನ ಮೇಲೆಯೇ ಅನುಮಾನ
ಕೊಡಗಿನಲ್ಲಿ ಮಹಿಳೆ ಹತ್ಯೆ: ಮಗನ ಮೇಲೆಯೇ ಅನುಮಾನ

ತನ್ನ ತೋಟದ ಮನೆಯಲ್ಲಿ ಒಂಟಿಯಾಗಿ ವಾಸವಿದ್ದ ಸುಮಾರು ಅರುವತ್ತಾರು ವರ್ಷದ ವಿಧವೆ ಮಹಿಳೆಯನ್ನು ಹಂತಕ ಕತ್ತಿಯಿಂದ ಕಡಿದು ಹತ್ಯೆಗೈದು ಬಳಿಕ ಮನೆಯ ಹಿತ್ತಲಿನ ಸಣ್ಣ ಗುಂಡಿಯಲ್ಲಿ ಹಾಕಿ ತೆಂಗಿನ ಗರಿಗಳಿಂದ ಮುಚ್ಚಿ ಪರಾರಿಯಾಗಿದ್ದಾನೆ. ಆದರೆ ಹಂತಕ ಮನೆಯಲ್ಲಿದ್ದ ಚಿನ್ನಾಭರಣವನ್ನಾಗಲಿ ಇತರೆ ಯಾವುದೇ ಬೆಲೆ ಬಾಳುವ ವಸ್ತುಗಳನ್ನು ಕೊಂಡೊಯ್ಯದಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

ರಂಗೋಲಿ, ಕುಂಕುಮ ಭಾಗ್ಯ ತಾರೆಯರು ವೇಶ್ಯಾವಾಟಿಕೆಯಲ್ಲಿ...! - TV Serial actress Suma prostitution racket busted
ರಂಗೋಲಿ, ಕುಂಕುಮ ಭಾಗ್ಯ ತಾರೆಯರು ವೇಶ್ಯಾವಾಟಿಕೆಯಲ್ಲಿ!

ಟಿವಿ ಧಾರಾವಾಹಿ ನಟಿಯರಾದ ಸುಮ ಮತ್ತು ಲಕ್ಷ್ಮೀ ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರೋದಿನಲ್ಲಿರುವ ಮಧು ಲಾಡ್ಜಿನಲ್ಲಿ ಸಿಕ್ಕಿ ಬೀಳುವುದರೊಂದಿಗೆ ಬೆರಗಿನ ಲೋಕದ ಪರದೆ ಕೊಂಚ ತೆರೆದಂತೆ ಭಾಸವಾಗತೊಡಗಿದೆ.

ವಿಧಾನಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹತ್ಯೆಗೆ ಸಂಚು: ಇಬ್ಬರ ಬಂಧನ
ವಿಧಾನಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹತ್ಯೆಗೆ ಸಂಚು: ಇಬ್ಬರ ಬಂಧನ

ವಿಧಾನಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಕೊಲೆಗೈಯಲು ಸಂಚು ರೂಪಿಸಿದ ಇಬ್ಬರನ್ನು ಕೋಟ ಪೊಲೀಸರು ನಿನ್ನೆ ಕೋಟತಟ್ಟು ಪಂಚಾಯತ್‌ ಕಚೇರಿ ಬಳಿ ಬಂಧಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಸರಕಾರದ ವಿರುದ್ಧ ಕಿಡಿಕಾರಿದ ಅಭಯಚಂದ್ರ ಜೈನ್
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಸರಕಾರದ ವಿರುದ್ಧ ಕಿಡಿಕಾರಿದ ಅಭಯಚಂದ್ರ ಜೈನ್

ಬಿಜೆಪಿ ಆಡಳಿತದಲ್ಲಿ ರಾಜ್ಯದ ಖಜಾನೆ ಪೂರ್ಣ ಖಾಲಿಯಾಗಿದ್ದು, ಮುಖ್ಯಮಂತ್ರಿ ಸೇರಿ ಪಕ್ಷದ ಹೆಚ್ಚಿನ ನಾಯಕರ ಹಿತಕ್ಕಾಗಿ ಸರಕಾರದ ಯೋಜನೆಗಳು ದುರುಪಯೋಗವಾಗಿದೆ ಎಂದು ಮೂಡಬಿದಿರೆ ಶಾಸಕ ಅಭಯಚಂದ್ರ ಜೈನ್ ಹೇಳಿದರು.

ತಂಬಾಕು ರಹಿತ ವಿಶ್ವ ಆಗಬಹುದೇ...?
ತಂಬಾಕು ರಹಿತ ವಿಶ್ವ ಆಗಬಹುದೇ...?

ಇಂದು ವಿಶ್ವ ತಂಬಾಕು ರಹಿತ ದಿನ. ತಂಬಾಕು ಬಿಟ್ಟಾಕು ಎಂಬ ಘೋಷಣೆಗೆ ಬಲ ಇರುವ ದಿನ. ಪ್ರತಿವರ್ಷ ವಿಶ್ವಾದ್ಯಂತ ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಪ್ರತಿ ವರ್ಷ ಈ ದಿನದೆಂದು ವಿಶ್ವ ಆರೋಗ್ಯ ಸಂಸ್ಥೆ ಒಂದಿಷ್ಟು ಸಲಹೆಗಳನ್ನು ಪ್ರತಿ ದೇಶಗಳಿಗೂ ನೀಡುತ್ತದೆ.

ಇನ್ನೆರಡು ದಿನಗಳಲ್ಲಿ ರಾಜ್ಯಕ್ಕೆ ಮುಂಗಾರು
ಇನ್ನೆರಡು ದಿನಗಳಲ್ಲಿ ರಾಜ್ಯಕ್ಕೆ ಮುಂಗಾರು

ಈಗಾಗಲೇ ದಕ್ಷಿಣ ಅರೇಬಿಯನ್‌ ಸಮುದ್ರ, ಬಂಗಾಳ ಕೊಲ್ಲಿಯ ದಕ್ಷಿಣ ಭಾಗ, ದಕ್ಷಿಣ ಅಂಡಮಾನ್‌ ಪ್ರದೇಶ, ಕೇರಳ ಮತ್ತು ತಮಿಳುನಾಡಿನ ಕೆಲವು ಭಾಗಗಳಲ್ಲಿ ಮುಂಗಾರು ಮಳೆ ಮೋಡಗಳು ದಟ್ಟೈಸಿವೆ. ಮುಂದಿನ ಎರಡು ಮೂರು ದಿನಗಳೊಳಗೆ ಕೇರಳ, ತಮಿಳುನಾಡಿನ ಕೆಲವು ಭಾಗಗಳು ಮತ್ತು ಕರ್ನಾಟಕದ ಕೆಲವು ಭಾಗಗಳಲ್ಲೂ ಮಳೆ ಮೋಡಗಳು ದಟ್ಟವಾಗಿ ಮಳೆ ಆರಂಭವಾಗಲಿದೆ.

ಮೂಡಬಿದಿರೆ ಸ್ವರಾಜ್ಯ ಮೈದಾನದಲ್ಲಿ ತುಳು ಜಾನಪದ ಕ್ರೀಡೋತ್ಸವ - Janapada Kreddothsava at Moodbidri Swaraj Maidan
ಮೂಡಬಿದಿರೆ ಸ್ವರಾಜ್ಯ ಮೈದಾನದಲ್ಲಿ ತುಳು ಜಾನಪದ ಕ್ರೀಡೋತ್ಸವ

ಸಮಾಜ ಹಾಗೂ ಜನರನ್ನು ಒಟ್ಟುಗೂಡಿಸುವ ಶಕ್ತಿ ಕ್ರೀಡೆ ಇದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಡೆ ಹೇಳಿದರು. ಅವರು ಇಂದು ಮಂಗಳೂರು ವಿಮಾನ ನಿಲ್ದಾಣ ವಜ್ರಮಹೋತ್ಸವ ಸಮಿತಿ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದೊಂದಿಗೆ ಮೂಡಬಿದ್ರೆ ಸ್ವರಾಜ್ಯ ಮೈದಾನದಲ್ಲಿ ನಡೆದ ತುಳು ಜಾನಪದ ಕ್ರೀಡೋತ್ಸವ ಉದ್ಘಾಟಿಸಿ ಮಾತನಾಡಿದರು.

ಪ್ರಾಣಿ ಪ್ರೀಯರಿಗೆ ಮನಮೋಹಕ ಉಡುಗೆ
ಪ್ರಾಣಿ ಪ್ರೀಯರಿಗೆ ಮನಮೋಹಕ ಉಡುಗೆ

ರವಿ ಕಾಣದ್ದನ್ನು ಕವಿ ಕಂಡ ಎಂಬ ಮಾತಿದೆ. ಕಲಾವಿದನ ಕ್ರಿಯಾಶೀಲತೆಗೆ ಎಣೆಯೆಲ್ಲಿ. ಹೀಗೊಂದು ರೂಪ ಪಡೆದುಕೊಂಡ ಪ್ರಾಣಿಪ್ರೀಯತೆ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಕಂಪ್ಯೂಟರ್ ಗ್ರಾಫಿಕ್ಸ್ ನಲ್ಲಿ ಅರಳಿರುವ ಈ ಸುಂದರ ಟೀ-ಶರ್ಟಿನ ಡಿಸೈನ್ ನಿಜಕ್ಕೂ ಅಪೂರ್ವ. ಇದು ಇಂದಿನ ನಮ್ಮ ಬೆದ್ರ ವಿಶೇಷ

ಕಂಡ ಕಂಡವರನ್ನು ಬೈಯುವ ಕೊಡಗಿನ ಕುಂಡೆ ಹಬ್ಬ
ಕಂಡ ಕಂಡವರನ್ನು ಬೈಯುವ ಕೊಡಗಿನ ಕುಂಡೆ ಹಬ್ಬ

ಕೊಡಗಿನಲ್ಲಿ ನೆಲೆಸಿರುವ ಬುಡಕಟ್ಟು ಜನಾಂಗದ ಮಂದಿ ತಮ್ಮ ಜನಾಂಗದ ಸಂಭ್ರಮದ ಕುಂಡೆ ಹಬ್ಬಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಈ ವರ್ಷ ಯಾವ ರೀತಿಯ ವೇಷ ಹಾಕಬೇಕು? ಯಾರಿಗೆ ಬೈಯ್ಯ ಬೇಕು? ಹೇಗೆ ಹಣ ವಸೂಲಿ ಮಾಡಬೇಕೆಂಬುವುದರ ಬಗ್ಗೆ ಹಾಡಿಗಳಲ್ಲಿ ಚರ್ಚೆಗಳು ನಡೆಯುತ್ತಿವೆ.

Shrikala Prabhu Iruvail - ಸಿಬಿಎಸ್ಸಿ ಪರೀಕ್ಷೆಯಲ್ಲಿ ಮಿಂಚಿದ ಇರುವೈಲಿನ ಶ್ರೀಕಲಾ ಪ್ರಭು
ಸಿಬಿಎಸ್ಸಿ ಪರೀಕ್ಷೆಯಲ್ಲಿ ಮಿಂಚಿದ ಇರುವೈಲಿನ ಶ್ರೀಕಲಾ ಪ್ರಭು

ದುಬಾಯಿಯ ಇಂಡಿಯನ್ ಹೈಸ್ಕೂಲಿನ ವಿದ್ಯಾರ್ಥಿನಿಯಾಗಿರುವ ಇರುವೈಲು ಮೂಲದ ಶ್ರೀಕಲಾ ಪ್ರಭು 12ನೇ ತರಗತಿಯ ಸಿಬಿಎಸ್ಸಿ ಪರೀಕ್ಷೆಯ ಕಾಮರ್ಸ್ ಶ್ರೇಣಿಯಲ್ಲಿ ಇಡೀ ಯು.ಎ.ಇ.ಗೆ ದ್ವಿತೀಯ ಸ್ಥಾನ ಪಡೆದುಕೊಂಡು ಮೂಡಬಿದಿರೆಯ ಕೀರ್ತಿ ಹೆಚ್ಚಿಸಿದ್ದಾಳೆ. ವಂದನಾ ಪ್ರಭು ಮತ್ತು ಸಿಎ ಇರುವೈಲು ಮಹೇಶ್ ಪ್ರಭು ಅವರ ಪುತ್ರಿ ಶ್ರೀಕಲಾಗೆ ಮುಂದೆ ಚಾರ್ಟರ್ಡ್ ಅಕೌಂಟೆನ್ಸಿ ಓದುವ ಬಯಕೆ

Koli Anka, Korida Katta, kori katta -ಕೋಳಿ ಅಂಕ ಸ್ಪೆಷಲ್: ಅಂಕದ ಕೋಳಿಗಳ ಜಂಭದ ಕಾಳಗ
ಕೋಳಿ ಅಂಕ ಸ್ಪೆಷಲ್: ಅಂಕದ ಕೋಳಿಗಳ ಜಂಭದ ಕಾಳಗ

ಜಾಗತೀಕರಣ, ನಗರೀಕರಣಗಳ ಬಿಸಿ ಗಾಳಿಯಿಂದ ಕೆಲವು ಜಾನಪದ ಕ್ರೀಡೆಗಳು ಮರೆ ಮಾಚುತ್ತಾ ಹೋದರೂ ಕೋಳಿ ಅಂಕ ಜನಮಾನಸಗಳಲ್ಲಿ ಅಚ್ಚಾಗಿ ಉಳಿದಿದೆ ಎನ್ನಬಹುದು. ಕರಾವಳಿ ನಾಡಿನ ಪ್ರತೀ ಊರಿನಲ್ಲೂ ನಡೆಯುವಂತಹ ಈ ಕಾಳಗವನ್ನು ನೋಡಲು ಮುಂಬೈ ಸೇರಿದಂತೆ ಇನ್ನಿತರ ದೂರದ ಊರಿನ ಉದ್ಯಮಿಗಳು ಆಗಮಿಸುವುದು ಇದರ ಜನಪ್ರಿಯತೆಗೆ ಸಾಕ್ಷಿ.

ನಿಮ್ಮ ಮಕ್ಕಳು ಸೈಬರ್ ಕೆಫೆಗಳಲ್ಲಿ ಏನು ಮಾಡುತ್ತಾರೆ?
ನಿಮ್ಮ ಮಕ್ಕಳು ಸೈಬರ್ ಕೆಫೆಗಳಲ್ಲಿ ಏನು ಮಾಡುತ್ತಾರೆ?

ನಮ್ಮೂರ ಹಲವು ಪೋಷಕರಿಗೆ ತಮ್ಮ ಮಕ್ಕಳು ಲೀಲಾಜಾಲವಾಗಿ ಕಂಪ್ಯೂಟರ್ ಆಪರೇಟ್ ಮಾಡುತ್ತಾರೆಂದರೆ ಕೊಂಬು ಬಂದುಬಿಡುತ್ತದೆ. ಆದರೆ ಇದೇ ಸಂದರ್ಭ ತಮ್ಮ ಮಕ್ಕಳು ಗಂಟೆಗಟ್ಟಲೆ ಕಂಪ್ಯೂಟರ್ ಮುಂದೆ ಕೂತು ಏನು ಮಾಡುತ್ತಾರೆ ಎಂಬುದರ ಬಗ್ಗೆ ಜಾಸ್ತಿ ತಲೆಕೆಡಿಸಿಕೊಂಡಿರಲಿಕ್ಕಿಲ್ಲ.

Suvarna News 24X7 Live online
333 Album