Mangalore Air Crash Tragedy : ಮಂಗಳೂರು ವಿಮಾನ ದುರಂತದ ಕರಾಳ ನೆನಪು
ಮಂಗಳೂರು ವಿಮಾನ ದುರಂತದ ಕರಾಳ ನೆನಪು

ಮಂಗಳೂರು ವಿಮಾನ ನಿಲ್ದಾನಕ್ಕೆ ಸಮೀಪವಿರುವ ಕೆಂಜಾರು ರನ್‌ವೇ ಬಳಿ ಕಳೆದ ವರ್ಷ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಏರ್ಕ್ರಾಫ್ಟ್ ಬೋಯಿಂಗ್ 737- 800 ಐಎಕ್ಸ್ 812 ವಿಮಾನ ದುರಂತಕ್ಕೀಡಾದ ಘಟನೆಗೆ ಇಂದು ಒಂದು ವರ್ಷವಾಗಿದೆ. ಇಡೀ ರಾಷ್ಟ್ರವನ್ನೇ ಕಲುಕಿದ ಈ ದುರಂತದ ಭೀಕರತೆ ಹಲವು ಜನಾಂಗಗಳವರೆಗೆ ಮಂಗಳೂರಿಗರ ಕಣ್ಣಂಚಲಿ ನೀರಾಡಿಸುತ್ತದೆ ಎಂಬುದು ಸತ್ಯ.

ಮೂಡಬಿದಿರೆಯ ಅಪ್ರಾಪ್ತ ಭಿಕ್ಷುಕರ ಗೋಳಿನ ಕಥೆ
ಮೂಡಬಿದಿರೆಯ ಅಪ್ರಾಪ್ತ ಭಿಕ್ಷುಕರ ಗೋಳಿನ ಕಥೆ

ಮೂಡಬಿದಿರೆಯ ಬಸ್ ಸ್ಟಾಂಡ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಭಿಕ್ಷುಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದ ಕಂಡು ಬಂದಿದೆ. ಇವುಗಳಲ್ಲಿ ಹೆಚ್ಚಿನವರು ಅಪ್ರಾಪ್ತ ವಯಸ್ಸಿನ ಬಾಲಕ ಬಾಲಕಿಯರಾಗಿದ್ದು, ಓದಿ ಬೆಳೆದು ಸಮಾಜದಲ್ಲಿ ಬುದ್ಧಿವಂತರಾಗಿ ಬೆಳೆಯುವ ಬದಲು ಭಿಕ್ಷಾಟನೆಯಲ್ಲಿ ತೊಡಗುತ್ತಿರುವುದು ವಿಪರ್ಯಾಸ.

ಮೂಡಬಿದಿರೆ : ಎಂಸಿಎಸ್ ಬ್ಯಾಂಕಿನ ನೂತನ ಕಟ್ಟಡ ಕಲ್ಪವೃಕ್ಷದ ಉದ್ಘಾಟನೆ
ಮೂಡಬಿದಿರೆ : ಎಂಸಿಎಸ್ ಬ್ಯಾಂಕಿನ ನೂತನ ಕಟ್ಟಡ ಕಲ್ಪವೃಕ್ಷದ ಉದ್ಘಾಟನೆ

ಮೂಡಬಿದೆರೆ ಕೋ-ಅಪರೇಟಿವ್ ಸರ್ವಿಸ್ ಬ್ಯಾಂಕಿನ ಸುಸ್ಸಜ್ಜಿತ ಕಟ್ಟಡ ಕಲ್ಪವೃಕ್ಷವನ್ನು ಮೂಡಬಿದಿರೆ ಜೈನ ಮಠದ ಭಾರತ ಭೂಷಣ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗ್ಡೆಯವರು ತಮ್ಮ ಅಮೃತ ಹಸ್ತದಿಂದ ಉದ್ಘಾಟನೆ ಮಾಡಿದರು.

why petrol is so costly, Petrol Tax -ಪೆಟ್ರೋಲ್  ಬೆಲೆ ತುಟ್ಟಿ  ಯಾಕೆ ಗೊತ್ತೆ?
ಪೆಟ್ರೋಲ್ ಬೆಲೆಯನ್ನು ಹೇಗೆ ಕಡಿಮೆಯಾಗಿಸಬಹುದು?

ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲದರ ಏರಿಕೆಯಾಗಿದೆ ಎಂದು ಯಾವಾಗಲೂ ಸರಕಾರ ಬೊಂಬ್ಡಿ ಹೊಡೆಯುತ್ತದೆ. ಆದರೆ ಪ್ರತೀ ಲೀಟರ್ ಪೆಟ್ರೋಲಿನಲ್ಲಿ ಎಷ್ಟು ಹಣ ಕೇಂದ್ರ ಹಾಗೂ ರಾಜ್ಯ ಸರಕಾರದ ಪಾಲಾಗುತ್ತಿದೆ ಎಂಬುದು ಜನ ಸಾಮಾನ್ಯರಿಗೆ ತಿಳಿಯದ ವಿಷಯ. ಭ್ರಷ್ಟಾಚಾರ ತಡೆಯಂತಹ ಪಾರದರ್ಶಕ ಆಡಳಿತ ಮಂತ್ರ ಪಠಿಸಿದಲ್ಲಿ ತೈಲದ ಮೇಲೆ ವಿಪರೀತ ತೆರಿಗೆ ವಿಧಿಸಿ ದೇಶ ನಡೆಸುವ ಜರೂರತ್ತು ಉದ್ಭವಿಸಲಿಕ್ಕಿಲ್ಲ.

ನಾಳೆ ಕುಮಾರ ಸ್ವಾಮಿ ಮೂಡಬಿದಿರೆಗೆ
ಎಚ್.ಡಿ. ಕುಮಾರಸ್ವಾಮಿ ನಾಳೆ ಮೂಡಬಿದಿರೆಗೆ

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ ನಾಳೆ ಮೂಡಬಿದಿರೆಗೆ ಆಗಮಿಸಲಿರುವರು. ಮೂಡಬಿದಿರೆ ಕೋ ಅಪರೇಟೀವ್ ಸರ್ವಿಸ್ ಬ್ಯಾಂಕಿನ ಸುಸ್ಸಜ್ಜಿತ ಕಟ್ಟಡ ಕಲ್ಪವೃಕ್ಷ ನಾಳೆ ಉದ್ಘಾಟನೆಗೊಳ್ಳಲಿದ್ದು, ಕುಮಾರಸ್ವಾಮಿ ಕಾರ್ಯಕ್ರದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಮಂಗಳೂರು ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ ಕೃಷ್ಣರಾಜ ಹೆಗ್ಡೆ ಆಯ್ಕೆ
ಮಂಗಳೂರು ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ ಕೃಷ್ಣರಾಜ ಹೆಗ್ಡೆ ಆಯ್ಕೆ

ಮಂಗಳೂರು ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ ಮೂಡಬಿದಿರೆಯ ಕೃಷ್ಣರಾಜ ಹೆಗ್ಡೆ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದ ಇವರು ಜೆಡಿಎಸ್ ಬೆಂಬಲಿತ ಅಭ್ಯರ್ಥಿ.

Lakshmikanth adhikari no more - ಜಗದೀಶ ಅಧಿಕಾರಿ ಸಹೋದರ ಲಕ್ಷ್ಮೀಕಾಂತ್ ಅಪಘಾತದಲ್ಲಿ ವಿಧಿವಶ
ಜಗದೀಶ ಅಧಿಕಾರಿ ಸಹೋದರ ಲಕ್ಷ್ಮೀಕಾಂತ್ ಅಪಘಾತದಲ್ಲಿ ವಿಧಿವಶ

ಸಾಣೂರು ಮುರತ್ತಂಗಡಿಯಲ್ಲಿ ನಡೆದ ಬಸ್-ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಜಗದೀಶ ಅಧಿಕಾರಿ ಅವರ ಸಹೋದರ ಲಕ್ಷ್ಮೀಕಾಂತ್ ಇಂದು ಸಂಜೆ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ವಿಪರೀತ ರಕ್ತಸ್ತ್ರಾವದ ಕಾರಣ ಕೊನೆಯುಸಿರೆಳೆದರು.

ಕಾಂಗ್ರೆಸ್ ಶಾಸಕ ಅಭಯಚಂದ್ರ ಜೈನ್ ಬಿಜೆಪಿಗೆ ಹಾರಲಿದ್ದಾರೆಯೇ?
ಕಾಂಗ್ರೆಸ್ ಶಾಸಕ ಅಭಯಚಂದ್ರ ಜೈನ್ ಬಿಜೆಪಿಗೆ ಹಾರಲಿದ್ದಾರೆಯೇ?

ಇದುವರೆಗೆ ಅಭಯಚಂದ್ರ ಜೈನ್ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠಾವಂತರಾಗಿಯೇ ಉಳಿದಿದ್ದು, ಯಾವುದೇ ಸಂದರ್ಭದಲ್ಲಿಯೂ ನಿಷ್ಠೆ ಬದಲಿಸಿದ ನಿದರ್ಶನಗಳಿಲ್ಲ. ಆದರೂ ರಾಜಕೀಯದ ಆಟದಲ್ಲಿ ಯಾವಾಗ ಏನು ಬೇಕಾದರೂ ಸಂಭವಿಸಬಹುದು ಎಂಬುದು ಜನರು ಕಲಿತಿರುವ ಪಾಠ.

ಮೂಡಬಿದಿರೆ ಬಾಲೆ ಅನುಜ್ಞಾ ರಾಜ್ಯಕ್ಕೆ ದ್ವಿತೀಯ
ಮೂಡಬಿದಿರೆ ರೋಟರಿ ವಿದ್ಯಾರ್ಥಿನಿ ಅನುಜ್ಞಾ ರಾಜ್ಯಕ್ಕೆ ದ್ವಿತೀಯ

ಪ್ರಸಕ್ತ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಮೂಡಬಿದಿರೆ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಅನುಜ್ಞಾ.ಕೆ 625ರಲ್ಲಿ 619 (99.04%) ಅಂಕ ಪಡೆಯುವುದರ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಈಕೆಗೆ ಸಂಸ್ಕ್ರತದಲ್ಲಿ 125, ಗಣಿತ 100,ಇಂಗ್ಲೀಷ್ 99, ಕನ್ನಡ 99,ಸಮಾಜ ಶಾಸ್ತ್ರ 99, ವಿಜ್ಞಾನ 98 ಅಂಕ ಲಭಿಸಿದೆ.

ಸಾವಿರ ಕಂಬದ ಬಸದಿ ಅಭಿವೃದ್ಧಿಗೆ 35 ಕೋಟಿ ಅಂದಾಜುಪಟ್ಟಿ ಸಲ್ಲಿಕೆ
ಸಾವಿರ ಕಂಬದ ಬಸದಿ ಅಭಿವೃದ್ಧಿಗೆ 35 ಕೋಟಿ ಅಂದಾಜುಪಟ್ಟಿ ಸಲ್ಲಿಕೆ

ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣ ಮೂಡಬಿದಿರೆಯ ಸಾವಿರ ಕಂಬದ ಬಸದಿ ಮತ್ತು ಇದರ ಸುತ್ತಮುತ್ತಲಿನ ಪ್ರದೇಶ ಅಭಿವೃದ್ಧಿಪಡಿಸಲು ಸುಮಾರು 35,94,08,371 ರೂ. ವೆಚ್ಚದ ಯೋಜನೆ ಸಿದ್ಧಪಡಿಸಿ ಪ್ರವಾಸೋದ್ಯಮ ಇಲಾಖೆ ನಿರ್ದೇಶಕರಿಗೆ ಅಂದಾಜು ಪಟ್ಟಿಯನ್ನು ಅನುಮೋದನೆಗೆ ಸಲ್ಲಿಸಲಾಗಿದೆ.

Alvas PU Result 2011 - ಆಳ್ವಾಸ್ ಪದವಿಪೂರ್ವ ಕಾಲೇಜಿಗೆ 99.22% ಫಲಿತಾಂಶ
ಆಳ್ವಾಸ್ ಪದವಿಪೂರ್ವ ಕಾಲೇಜಿಗೆ 99.22% ಫಲಿತಾಂಶ

ಆಳ್ವಾಸ್ ಪದವಿಪೂರ್ವ ಕಾಲೇಜು ಈ ಸಾಲಿನ ಪರೀಕ್ಷೆಯಲ್ಲಿ 99.22 ಶೇಕಡಾ ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ 1784 ಪೈಕಿ 1770 ಮಂದಿ ಉತ್ತೀರ್ಣರಾಗಿದ್ದು ಇವರಲ್ಲಿ 42 ಮಂದಿ 95% ಮತ್ತು 141 ಮಂದಿ ಶೇಕಡಾ 90 ಹಾಗೂ ಅಧಿಕ ಅಂಕಗಳನ್ನು ಗಳಿಸಿದ್ದಾರೆ.

ಮೂಡಬಿದಿರೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ - Yeddyurappa in Moodbidri
ಮೂಡಬಿದಿರೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

ನಾರಾವಿ ಸೂರ್ಯನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೂಡಬಿದಿರೆ ಸ್ವರಾಜ್ಯ ಮೈದಾನದ ಹೆಲಿಪ್ಯಾಡ್ನಲ್ಲಿ ಬಂದಿಳಿದರು. ಮೂಡಬಿದಿರೆ ಪುರಸಭಾ ಅಧ್ಯಕ್ಷ ರತ್ನಾಕರ ದೇವಾಡಿಗ, ಶಾಸಕ ಅಭಯಚಂದ್ರ ಜೈನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಿ. ನಾಗರಾಜ ಶೆಟ್ಟಿ, ಜಗದೀಶ ಅಧಿಕಾರಿ ಮುಖ್ಯಮಂತ್ರಿಗಳನ್ನು ಬರಮಾಡಿಕೊಂಡರು.

Nammabedra.com inaugurated - ನಮ್ಮಬೆದ್ರ.ಕಾಂ ವೆಬ್ ಸೈಟ್ ಉದ್ಘಾಟನೆ
ನಮ್ಮಬೆದ್ರ.ಕಾಂ ವೆಬ್ ಸೈಟ್ ಉದ್ಘಾಟನೆ

ಮೂಡಬಿದ್ರೆಯ ಜನತೆಯ ಕನಸಾಗಿದ್ದ ಸ್ಥಳೀಯ ಸುದ್ದಿಗಳ ವೆಬ್ ಸೈಟ್ ನಮ್ಮಬೆದ್ರ.ಕಾಂ (www.nammabedra.com) ಇಂದು ಮೂಡಬಿದ್ರೆಯಲ್ಲಿ ಲೋಕಾರ್ಪಣೆಯಾಯಿತು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಬಿ. ನಾಗರಾಜ ಶೆಟ್ಟಿ ಅವರು ನಮ್ಮ ಬೆದ್ರ ವೆಬ್ ಸೈಟ್ ಉದ್ಗಾಟಿಸಿದರು.

Bhoomi Tulu Serial - ತುಳು ಧಾರಾವಾಹಿಯ ಚಿತ್ರೀಕರಣಕ್ಕೆ ವೀರೇಂದ್ರ ಹೆಗ್ಗಡೆಯವರಿಂದ ಚಾಲನೆ
ತುಳು ಧಾರಾವಾಹಿಯ ಚಿತ್ರೀಕರಣಕ್ಕೆ ವೀರೇಂದ್ರ ಹೆಗ್ಗಡೆಯವರಿಂದ ಚಾಲನೆ

ಚಂದನ ವಾಹಿನಿಯಲ್ಲಿ ದಿನಂಪ್ರತಿ ಪ್ರಸಾರವಾಗಲಿರುವ ’ಭೂಮಿ’ತುಳು ಧಾರಾವಾಹಿಯ ಚಿತ್ರೀಕರಣಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ. ವೀರೇಂದ್ರ ಹೆಗ್ಗಡೆಯವರು ಚಾಲನೆ ನೀಡಿದರು. ನವೀನ್‌ಕುಮಾರ್ ಹೆಗ್ಡೆ ನಿರ್ಮಾಣದ ಧಾರಾವಾಹಿಯ ಛಾಯಾಗ್ರಹಣ ಕ್ಯಾಮೆರಾಮನ್‌ ಚಂದ್ರಶೇಖರ ಭಟ್‌ ನಡೆಸಲಿದ್ದು, ದಿನೇಶ್‌ ಕಂಕನಾಡಿ ಕಥೆ ರಚಿಸಿದ್ದಾರೆ.

ಮೈಸೂರು : ಡೆಬಿಟ್ ಕಾರ್ಡ್ ಕದ್ದು ಪ್ರೇಮಿಗೆ ಗಿಫ್ಟ್ ಕೊಡಿಸಿದ ಉಪನ್ಯಾಸಕಿ
ಡೆಬಿಟ್ ಕಾರ್ಡ್ ಕದ್ದು ಪ್ರೇಮಿಗೆ ಗಿಫ್ಟ್ ಕೊಡಿಸಿದ ಉಪನ್ಯಾಸಕಿ

ಪ್ರೀತಿ ಪ್ರೇಮದ ಅಮಲಿನಲ್ಲಿ ತೋಯ್ದು ಹೋದ ಉಪನ್ಯಾಸಕಿಯೊಬ್ಬರು ತನ್ನ ಸಹದ್ಯೋಗಿಯ ಡೆಬಿಟ್ ಕಾರ್ಡ್ ಕದ್ದು, ಅವರಿಂದ ತಮ್ಮ ಪ್ರಿಯತಮನಿಗೆ ಗಿಫ್ಟ್ ತೆಗೆದುಕೊಟ್ಟು ಈಗ ಪೊಲೀಸರ ಅತಿಥಿಯಾಗಿರುವ ಸಂಗತಿ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ. ಮೈಸೂರಿನ ವಿದ್ಯಾವರ್ದಕ ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕಿ ನಂದಿನಿ ಎಂಬಾಕೆ ಮರಗೆಲಸ ಮಾಡುವ ಮಂಜುನಾಥ್ ಎಂಬವನನ್ನು ಪ್ರೀತಿಸುತ್ತಿದ್ದಳು.

Karkala : Yellow rain in Hebri
ಹೆಬ್ರಿಯಲ್ಲಿ ಕುತೂಹಲ ಕೆರಳಿಸಿದ ಹಳದಿ ಮಳೆ

ಹೆಬ್ರಿ ಸಮೀಪದ ಇಕ್ಕೊಡ್ಲು ಮತ್ತು ಸುತ್ತಲಿನ ಹಳ್ಳಿಗಳ ಸುಮಾರು 5 ಕಿಲೋ ಮೀಟರ್ ವ್ಯಾಸದಲ್ಲಿ ಸಂಭವಿದ ಹಳದಿ ಮಳೆ ಕುತೂಹಲ ಕೆರಳಿಸಿದ್ದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

ಮುತ್ತಪ್ಪ ರೈ ಅಭಿನಯದ ಚಲನಚಿತ್ರ ಕಂಚಿಲ್ದ ಬಾಲೆ ಮಾರ್ಚ್ 25ರಂದು ತೆರೆಗೆ
ಮುತ್ತಪ್ಪ ರೈ ಅಭಿನಯದ ಚಲನಚಿತ್ರ ಕಂಚಿಲ್ದ ಬಾಲೆ ಮಾರ್ಚ್ 25ರಂದು ತೆರೆಗೆ

ಕುಂಬ್ರ ರಘುನಾಥ ರೈ ನಿರ್ಮಿಸಿ ನಿರ್ದೇಶಿಸಿರುವ ಕಂಚಿಲ್ದ ಬಾಲೆ ತುಳು ಚಲನಚಿತ್ರ ಮಾರ್ಚ್ 25ರಂದು ಮಂಗಳೂರಿನ ಪ್ರಭಾತ್,ಪುತ್ತೂರಿನ ಮೌರ್ಯ ಮತ್ತು ಉಡುಪಿಯ ಕಲ್ಪನಾ ಚಿತ್ರಮಂದಿರಗಳಲ್ಲಿ ಏಕ ಕಾಲದಲ್ಲಿ ತೆರೆ ಕಾಣಲಿದೆ.

ಮೂಡಬಿದಿರೆಯಲ್ಲಿ ಕಲಾ ಪ್ರೇಕ್ಷಕನನ್ನು ರಂಜಿಸಿದ ದೀವಟಿಗೆ ಆಟ
ಮೂಡಬಿದಿರೆಯಲ್ಲಿ ಕಲಾ ಪ್ರೇಕ್ಷಕನನ್ನು ರಂಜಿಸಿದ ದೀವಟಿಗೆ ಆಟ

ಮೂಡಬಿದಿರೆ ಸಮಾಜ ಮಂದಿರದಲ್ಲಿ ನಿನ್ನೆ ಸಂಜೆ ದೀವಟಿಕೆ ಬೆಳಕಿನಲ್ಲಿ ’ರುದ್ರ ಭೀಮ- ರಕ್ತರಾತ್ರಿ’ ಯಕ್ಷಗಾನ ನಡೆಯಿತು.ಶ್ರೀ ಯಕ್ಷ ದೇವ ಮಿತ್ರಮಂಡಳಿ ಬೆಳುವಾಯಿ ಇವರ ಸಹಯೋಗದಲ್ಲಿ ಹಿಂದಿನ ಕಾಲದಲ್ಲಿ ನಡೆಯುತ್ತಾ ಬಂದಿರುವಂತೆ ದೊಂದಿ, ದೀವಟಿಕೆ ಬೆಳಕಿನಲ್ಲಿ ಯಕ್ಷಗಾನವನ್ನು ಪ್ರಯೋಗಿಸುವ ಮೂಲಕ ನೆರೆದಿರುವ ನೂರಾರು ಜನರಿಗೆ ರಸದೌತಣವನ್ನು ನೀಡಿತು.

Suvarna News 24X7 Live online
333 Album