`ಸಿರಿ’ಗಳಿಗೆ ಗರಿಯಾದ ತುಳು ಐಸಿರಿ
`ಸಿರಿ’ಗಳಿಗೆ ಗರಿಯಾದ ತುಳು ಐಸಿರಿ

ಜೈನಕಾಶಿ ಮೂಡುಬಿದರೆಗೆ ಈ ವಾರ `ಸಿರಿ’ಸಿಂಚನ. ನಾಡು ನುಡಿ ಕಟ್ಟುವ ಆಳ್ವಾಸ್ ನುಡಿಸಿರಿಗೆ ಒಂದೆಡೆ ವಿದ್ಯಾಗಿರಿ ಸಜ್ಜಾಗುತ್ತಿದ್ದರೆ ತುಳುಕೂಟದ ಬೆಳ್ಳಿಹಬ್ಬದ ಪ್ರಯುಕ್ತ ನಡೆದ ತುಳು ಐಸಿರಿ ಮೂಡುಬಿದಿರೆಯಲ್ಲಿ ಗರಿಗೆದರುತ್ತಿರುವ ಸಾಂಸ್ಕೃತಿಕ ವಾತಾವರಣಕ್ಕೆ ವಿಶೇಷ ಮೆರಗನ್ನು ನೀಡಿದೆ.

ಆಳ್ವಾಸ್ ಚಿತ್ರಸಿರಿ 2014: ಕುಂಚದಲ್ಲಿ ಸಮಕಾಲೀನ ಪ್ರಪಂಚ
ಆಳ್ವಾಸ್ ಚಿತ್ರಸಿರಿ 2014: ಕುಂಚದಲ್ಲಿ ಸಮಕಾಲೀನ ಪ್ರಪಂಚ

ಕಲಾವಿದನ ಕಲ್ಪನೆಗಳು, ಸಮಕಾಲೀನತೆಯ ದೃಷ್ಠಿಕೋನದೊಂದಿಗೆ ಚಿಗುರಿದಾಗ ಅನನ್ಯ ಕಲಾಕೃತಿ ಮೂಡುತ್ತದೆ. ಸಮಕಾಲೀನ ಜೀವನ, ಸವಾಲುಗಳೊಂದಿಗೆ ಮುಖಾಮುಖಿಯಾಗಿ ತಮ್ಮ ಕುಂಚದ ಮುಖಾಂತರ ಕಲ್ಪನೆಗೆ ವಾಸ್ತವತೆಯ ಬಣ್ಣ ಹಚ್ಚಿ `ಚಿತ್ರ’ದ ಸಿರಿವಂತಿಕೆ ಹೆಚ್ಚಿಸುವ ಪ್ರಯತ್ನಕ್ಕೆ ವಿದ್ಯಾಗಿರಿ ಮತ್ತೊಮ್ಮೆ ಸಾಕ್ಷಿಯಾಗಿದೆ. ಕಲಾವಿದರ ಕುಂಚದಿಂದ 60ಕ್ಕೂ ಹೆಚ್ಚಿನ ಕಲಾಕೃತಿಗಳು ಮೂಡಿ ವಿದ್ಯಾಗಿರಿ ಆಳ್ವಾಸ್ ಕ್ಯಾಂಪಸ್ ನ ಕಲಾ ವಾತಾವರಣದ ಗರಿಮೆ ಹೆಚ್ಚಿದೆ.

ವಿದ್ಯಾಗಿರಿಯಲ್ಲಿ ಕಲಾವಿದರ ಕುಂಚದ ಸಿರಿ
ವಿದ್ಯಾಗಿರಿಯಲ್ಲಿ ಕಲಾವಿದರ ಕುಂಚದ ಸಿರಿ

ಆಳ್ವಾಸ್ ನುಡಿಸಿರಿ-2014 ನಾಡು ನುಡಿಯ ಸಮ್ಮೇಳನ ಕ್ಷಣಗಣನೆ ಆರಂಭವಾಗಿದ್ದು, ಇದಕ್ಕೆ ಪೂರಕವಾಗಿ ವಿದ್ಯಾಗಿರಿಯ ಆಳ್ವಾಸ್ ಶೃಂಗಾರಗೊಳ್ಳುತ್ತಿದೆ. ಈ ತಯಾರಿಗಳ ನಡುವೆ ರಾಜ್ಯದ 36 ಕಲಾವಿದರು ತಮ್ಮ ಕುಂಚದ ಗರಿಯ ಸಿರಿಯಲ್ಲಿ ಮೂಡಿಸುತ್ತಿರುವ ಚಿತ್ರಗಳು ತಯಾರಿಗೆ ವಿಶೇಷ ಮೆರಗು ನೀಡುತ್ತಿದೆ.

ಸ್ವಚ್ಛ ಅಭಿಯಾನ ಎಫೆಕ್ಟ್: ಗಾಂಧಿನಗರ ಬಸ್ ತಂಗುದಾಣಕ್ಕೆ ಕಾಯಕಲ್ಪ
ಸ್ವಚ್ಛ ಅಭಿಯಾನ ಎಫೆಕ್ಟ್: ಗಾಂಧಿನಗರ ಬಸ್ ತಂಗುದಾಣಕ್ಕೆ ಕಾಯಕಲ್ಪ

ಸ್ವಚ್ಛಭಾರತ ಅಭಿಯಾನದ ಪರಿಣಾಮದಿಂದ ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಗಾಂಧಿನಗರದಲ್ಲಿ ಹಲವಾರು ವರ್ಷಗಳಿಂದ ಪಾಳುಬಿದ್ದಿದ್ದ ಬಸ್ ನಿಲ್ದಾಣಕ್ಕೆ ಕಾಯಕಲ್ಪ ದೊರೆತು, ಹೊಸರೂಪ ಪಡೆದಿದೆ.

ಆಳ್ವಾಸ್ ದೀಪಾವಳಿ ಸಾಂಸ್ಕೃತಿಕ ಪ್ರಭಾವಳಿ
ಆಳ್ವಾಸ್ ದೀಪಾವಳಿ ಸಾಂಸ್ಕೃತಿಕ ಪ್ರಭಾವಳಿ

533 ಕಲಾವಿದರು, 17 ಕಲಾ ಪ್ರಕಾರಗಳನ್ನು ಸುಮಾರು 5ಗಂಟೆಗಳ ಕಾಲ 20 ಸಾವಿರ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಪ್ರದರ್ಶಿಸಿ, ದೇಶದ ಸಂಸ್ಕೃತಿಯ ವಿರಾಟ್ ದರ್ಶನ ಮಾಡಿದ ಕ್ಷಣ. ಕ್ಯಾಂಪಸ್ ಒಳಗಡೆ ದೀಪಾವಳಿಯನ್ನು ಅರ್ಥಪೂರ್ಣವಾಗಿ ಆಚರಿಸಿದಲ್ಲದೆ, ಸಂಭ್ರಮದ ಜತೆಗೆ ಸಂಸ್ಕೃತಿ ಲೋಕಗಳ ಅನಾವರಣ. ಇದು ಆಳ್ವಾಸ್ ದೀಪಾವಳಿ 2014 ನೃತ್ಯ-ಸಂಗೀತ ಸಮ್ಮಿಲನ.

ಜೀವ ಬೆದರಿಕೆಯೊಡ್ಡಿ ಯುವತಿ ಅತ್ಯಾಚಾರ: ಆರೋಪಿಯ ಸೆರೆ
ಜೀವ ಬೆದರಿಕೆಯೊಡ್ಡಿ ಯುವತಿ ಅತ್ಯಾಚಾರ: ಆರೋಪಿಯ ಸೆರೆ

ಪಡುಮಾರ್ನಾಡು ಗ್ರಾಮದ ಮುನ್ನೇರು ಎಂಬಲ್ಲಿ 19ರ ಹರೆಯದ ಯುವತಿಯೊಬ್ಬಳ ಮೇಲೆ ನಿರಂತರ ಅತ್ಯಾಚಾರ ನಡೆಸಿದ್ದಾನೆ ಎನ್ನಲಾದ ಆರೋಪಿಯನ್ನು ಮೂಡುಬಿದರೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಪಡುಮಾರ್ನಾಡು: ಯುವತಿ ಅತ್ಯಾಚಾರ: ಆರೋಪ
ಪಡುಮಾರ್ನಾಡು: ಯುವತಿ ಅತ್ಯಾಚಾರ: ಆರೋಪ

ಮೂಡುಬಿದಿರೆ ಇಲ್ಲಿನ ಸಮೀಪದ ಪಡುಮಾರ್ನಾಡಿನಲ್ಲಿ 19 ವರ್ಷದ ಯುವತಿಯನ್ನು ಅತ್ಯಾಚಾರವೆಸಗಲಾಗಿದೆ ಎಂದು ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

3 ಸಾವಿರ ಮಂದಿಯಿಂದ `ಸ್ವಚ್ಛ ಮಿಜಾರ್’
3 ಸಾವಿರ ಮಂದಿಯಿಂದ `ಸ್ವಚ್ಛ ಮಿಜಾರ್’

ಸ್ವಚ್ಛ ಭಾರತ್ ಆಂದೋಲನ ಕಾರ್ಯಕ್ರಮದಡಿ, ಮಿಜಾರು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ವತಿಯಿಂದ ನಡೆದ `ಸ್ವಚ್ಛ ಮಿಜಾರ್’ ಅಭಿಯಾನದಲ್ಲಿ 3 ಸಾವಿರಕ್ಕೂ ಅಧಿಕಮಂದಿ ಮಂದಿ ಭಾಗವಹಿಸುವುದರ ಮೂಲಕ ಸ್ವಚ್ಛತಾ ಆಂದೋಲನವನ್ನು ಮೂಡುಬಿದಿರೆಯಲ್ಲಿ ದಾಖಲೆಯಾಗಿಸಿದರು.

ಎವರೆಸ್ಟ್ ಮಸಾಲಕ್ಕೆ `ಸತ್ತ ಇಲಿ’ ಉಚಿತ!¢
ಎವರೆಸ್ಟ್ ಮಸಾಲಕ್ಕೆ `ಸತ್ತ ಇಲಿ’ ಉಚಿತ!

ಬ್ರಾಂಡೆಡ್ ಕಂಪೆನಿಯಲ್ಲೊಂದಾದ ಎವರೆಸ್ಟ್ ಮಸಾಲದ ಪ್ಯಾಕೆಟ್ನಲ್ಲಿ ತೋಡಾರಿ ಗ್ರಾಹಕರೊಬ್ಬರಿಗೆ ಸತ್ತ ಇಲಿ ಮರಿ ಪತ್ತೆಯಾಗಿದೆ. ಮೂಡುಬಿದಿರೆ ಅಂಗಡಿಯೊಂದರಿಂದ ತೋಡಾರಿನ ಗ್ರಾಹಕರೊಬ್ಬರು ವಾರದ ಹಿಂದೆ ಪರಿಮಳಕ್ಕೋಸ್ಕರ ಖರೀದಿಸಿದ ಎವರೆಸ್ಟ್ ಕಸುರಿ ಮೆಂತಿ ಸಾಂಬಾರ ಪದಾರ್ಥವನ್ನು ಸೋಮವಾರ ಮಧ್ಯಾಹ್ನ ತೆರೆದಾಗ ಸಣ್ಣ ಗಾತ್ರದ ಸತ್ತು ಒಣಗಿದ ಇಲಿ ಕಂಡು ಬಂದಿತ್ತು.

ಕಾರ್ಕಳ ಮಹಾಮಸ್ತಕಾಭಿಷೇಕ ರೂಪುರೇಷೆ: ಸಿಎಂ ಜತೆ ಚರ್ಚೆ
ಕಾರ್ಕಳ ಮಹಾಮಸ್ತಕಾಭಿಷೇಕ ರೂಪುರೇಷೆ: ಸಿಎಂ ಜತೆ ಚರ್ಚೆ

ಮಹಾಮಸ್ತಾಭಿಷೇಕ ಕೇವಲ ಜೈನಸಮುದಾಯದಿಂದಾಗುವ ಧಾರ್ಮಿಕ ಕಾರ್ಯಕ್ರಮವಲ್ಲ. ಸಮಾಜದ ಎಲ್ಲ ವರ್ಗದವರ ಸಹಕಾರದಿಂದ ಮಾಡುವಂತದ್ದು ಎಂದು ಮಹಾಮಸ್ತಕಾಭಿಷೇಕ ಮಹೋತ್ಸವದ ಸಮಿತಿಯ ಕಾರ್ಯಾಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ತಿಳಿಸಿದರು.

ಮಹಿಳೆ, ಮಗು ಸಹುದ್ಯೋಗಿ ಜತೆ ನಾಪತ್ತೆ: ಪತಿ ಆರೋಪ
ಮಹಿಳೆ, ಮಗು ಸಹುದ್ಯೋಗಿ ಜತೆ ನಾಪತ್ತೆ: ಪತಿ ಆರೋಪ

ತನ್ನ ಪತ್ನಿ, ಒಂದುವರೆ ವರ್ಷದ ಮಗುವಿನೊಂದಿಗೆ ತನ್ನ ಸಹುದ್ಯೋಗಿ ಜತೆ ನಾಪತ್ತೆಯಾಗಿದ್ದಾರೆ ಎಂದು ಮಿಜಾರು ಗ್ರಾಮದ ನಿವಾಸಿಯೊರ್ವರು ಶುಕ್ರವಾರ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದಾರೆ.

ನುಡಿಸಿರಿಗೆ ಮುನ್ನುಡಿ ಬರೆದ ಆಳ್ವಾಸ್ ವಿದ್ಯಾರ್ಥಿಸಿರಿ
ನುಡಿಸಿರಿಗೆ ಮುನ್ನುಡಿ ಬರೆದ ಆಳ್ವಾಸ್ ವಿದ್ಯಾರ್ಥಿಸಿರಿ

ನಾಡು ನುಡಿಯ ಮಾದರಿ ಸಮ್ಮೇಳನ ಆಳ್ವಾಸ್ ನುಡಿಸಿರಿಗೆ ಮತ್ತೊಮ್ಮೆ ಮೂಡುಬಿದಿರೆ, ಮುಖ್ಯವಾಗಿ ವಿದ್ಯಾಗಿರಿಯ ಆನಂದ ಆಳ್ವ ಕ್ಯಾಂಪಸ್ ಅಣಿಗೊಳ್ಳುತ್ತಿದೆ. ನಾಡಿನ ಸಾಹಿತ್ಯ, ಸಾಂಸ್ಕೃತಿಕ ವೈಭವನ್ನು ಸಾರುವ ಈ ಸಮ್ಮೇಳನಕ್ಕೆ ಶುಕ್ರವಾರ ನಡೆದ ವಿದ್ಯಾರ್ಥಿಸಿರಿ ಮುನ್ನುಡಿ ಬರೆದಿದೆ.

ಆಳ್ವಾಸ್ ವಿದ್ಯಾರ್ಥಿಸಿರಿ-2014ಗೆ ಚಾಲನೆ
ಆಳ್ವಾಸ್ ವಿದ್ಯಾರ್ಥಿಸಿರಿ-2014ಗೆ ಚಾಲನೆ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ, ಶ್ರದ್ಧಾ.ಎನ್.ಪೈವಳಿಕೆ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ ಆಳ್ವಾಸ್ ವಿದ್ಯಾರ್ಥಿಸಿರಿ-2014 ಸಮ್ಮೇಳನಕ್ಕೆ ಶುಕ್ರವಾರ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.

ಆಳ್ವಾಸ್ ನಲ್ಲಿ ಚಿಣ್ಣರ ಕಲರವ: ವಿದ್ಯಾರ್ಥಿಸಿರಿಗೆ ಕ್ಷಣಗಣನೆ
ಆಳ್ವಾಸ್ ನಲ್ಲಿ ಚಿಣ್ಣರ ಕಲರವ: ವಿದ್ಯಾರ್ಥಿಸಿರಿಗೆ ಕ್ಷಣಗಣನೆ

ವಿದ್ಯಾಗಿರಿಯಲ್ಲಿ ಅ.31ರಂದು ನಡೆಯಲಿರುವ ಆಳ್ವಾಸ್ ವಿದ್ಯಾರ್ಥಿಸಿರಿ 2014 ರಲ್ಲಿ ವಿವಿಧ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.ವಿದ್ಯಾರ್ಥಿ ಕವಿಗೋಷ್ಠಿ, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಅಭಿನಯ ಗೀತೆ ಗೋಷ್ಠಿ, ವಿದ್ಯಾರ್ಥಿ ಉಪನ್ಯಾಸ, ಹಿರಿಯರಿಂದ ಉಪನ್ಯಾಸ, ಸನ್ಮಾನ ಮೊದಲಾದ ಸಾಹಿತ್ಯಿಕ ಕಾರ್ಯಕ್ರಮಗಳೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಶಿರ್ತಾಡಿ: ಬ್ಯಾಂಕ್ ಕ್ಯಾಶ್ ಲಾಕರ್ ನಲ್ಲಿ ಸಿಲುಕಿದ ಕಾರ್ಮಿಕ
ಶಿರ್ತಾಡಿ: ಬ್ಯಾಂಕ್ ಕ್ಯಾಶ್ ಲಾಕರ್ ನಲ್ಲಿ ಸಿಲುಕಿದ ಕಾರ್ಮಿಕ

ಶಿರ್ತಾಡಿಯಲ್ಲಿ ಹೊಸದಾಗಿ ಆರಂಭಗೊಳ್ಳಲಿರುವ ಸಹಕಾರಿ ಬ್ಯಾಂಕೊಂದರ ಕ್ಯಾಶ್ ಲಾಕರ್ ನೊಳಗೆ ಬುಧವಾರ ಕಾರ್ಮಿಕ ಸಿಕ್ಕಿಬಿದ್ದು ಸುಮಾರು 2 ತಾಸು ಪರಿಸರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.

5 ದಶಕಗಳ ನಂತರ ಕಡಲಕೆರೆ ದಲಿತ ಕಾಲನಿಗೆ ರಸ್ತೆ ಭಾಗ್ಯ
5 ದಶಕಗಳ ನಂತರ ಕಡಲಕೆರೆ ದಲಿತ ಕಾಲನಿಗೆ ರಸ್ತೆ ಭಾಗ್ಯ

50 ವರ್ಷಗಳಿಂದ ರಸ್ತೆ ಸೌಕರ್ಯವಿಲ್ಲದ ಕಡಲಕೆರೆ ದಲಿತ ಕಾಲನಿ. ಇಲ್ಲಿನ ಜನರ ಹಾಗೂ ಪುರಸಭಾ ಸದಸ್ಯರ 20 ವರ್ಷಗಳ ನಿರಂತರ ಹೋರಾಟ ಕಡೆಗೂ ಯಶಸ್ವಿಯಾಗಿದೆ. ಕಾಲನಿಯ ನಿವಾಸಿಗಳಲ್ಲಿ ರಸ್ತೆಯಿಲ್ಲವೆನ್ನುವ ಕೊರಗು ಭಾಗಶಃ ನಿವಾರಣೆಯಾಗಿದೆ.

ಗುಡ್ `ಲೈಪ್’ ಕಳೆದುಕೊಂಡ ಹಾಲಿನ ಪ್ಯಾಕೆಟ್!
ಗುಡ್ `ಲೈಪ್’ ಕಳೆದುಕೊಂಡ ಹಾಲಿನ ಪ್ಯಾಕೆಟ್!

ಉತ್ತಮ ಲೈಪ್ ಎಂಬ ಅರ್ಥದ ಹಾಲಿನ ಪಾಕೆಟ್ ಒಂದು ಲೈಪ್ ಕಳೆದುಕೊಂಡ ಸ್ಥಿತಿಯಲ್ಲಿ ವ್ಯಾಪಾರಿಯೋರ್ವರಿಗೆ ಪತ್ತೆಯಾಗಿದೆ.

ಕಳಪೆ ಗುಣಮಟ್ಟದ ಅದಿರು ಪೂರೈಕೆ: ಕೋಟಿ ವಂಚಿಸಿದ ಕಂಪೆನಿಗೆ ದಂಡ
ಕಳಪೆ ಗುಣಮಟ್ಟದ ಅದಿರು ಪೂರೈಕೆ: ಕೋಟಿ ವಂಚಿಸಿದ ಕಂಪೆನಿಗೆ ದಂಡ

ಕಾರ್ಕಳದ ಉದ್ಯಮಿ ಬೋಳ ಪ್ರಶಾಂತ್ ಕಾಮತ್ ಅವರಿಗೆ ಕಳಪೆಗುಣಮಟ್ಟದ ಕಬ್ಬಿಣದ ಅದಿರು ಪೂರೈಕೆ ಮಾಡಿ ಕೋಟ್ಯಾಂತರ ರೂಪಾಯಿ ವಂಚಿಸಿದ ದಾವಣಗೆರೆಯ ಎಮ್. ಎಸ್.ಎಂ. ಮಿನರಲ್ಸ್ ಗೆ ಆರು ವರ್ಷಗಳ ವಿಚಾರಣೆಯ ಬಳಿಕ ಇದೀಗ ಕಾರ್ಕಳ ಕೋರ್ಟ್ 42 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಕೃಷಿ ಚಟುವಟಿಕೆಗೆ ಪ್ರೋತ್ಸಾಹ ಹಿನ್ನೆಲೆ; ಭಾಡಿಗೆ ಆಧಾರದಲ್ಲಿ ಕೃಷಿಯಂತ್ರೋಪಕರಣ ಪೂರೈಕೆ
ಕೃಷಿ ಚಟುವಟಿಕೆಗೆ ಪ್ರೋತ್ಸಾಹ ಹಿನ್ನೆಲೆ: ಭಾಡಿಗೆ ಆಧಾರದಲ್ಲಿ ಕೃಷಿಯಂತ್ರೋಪಕರಣ ಪೂರೈಕೆ

ಜನರಿಗೆ ಕೃಷಿ ಚಟುವಟಿಕೆಗಳತ್ತ ಆಸಕ್ತಿ ತೀರಾ ಕಡಿಮೆಯಾಗುತ್ತಿದೆ. ಒಂದೆಡೆ ಕೂಲಿಯಾಳುಗಳ ಸಮಸ್ಯೆ, ಮತ್ತೊಂದೆಡೆ ಆರ್ಥಿಕ ಹೊಡೆತ ಇವೆಲ್ಲಾ ಸಮಸ್ಯೆಗಳಿಂದ ರೈತನಿಗೆ ಕೃಷಿಚಟುವಟಿಕೆಯ ಆಸಕ್ತಿ ನಿಧಾನವಾಗಿ ಕಡಿಮೆಗೊಳ್ಳುತ್ತದೆ. ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್ , ಕೃಷಿ ಇಲಾಖೆ ಮಂಗಳೂರು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕೃಷಿಯಂತ್ರೋಪಕರಣಗಳನ್ನು ಪೂರೈಕೆ ಮಾಡುತ್ತಿದೆ.

ಸಿದ್ಧಾಂತ ಬಿಂಬ ಕಳ್ಳತನ ಪ್ರಕರಣದ ಆರೋಪಿ ಸಂತೋಷ್ ದಾಸ್ ಬಿಡುಗಡೆ
ಸಿದ್ಧಾಂತ ಬಿಂಬ ಕಳ್ಳತನ ಪ್ರಕರಣದ ಆರೋಪಿ ಸಂತೋಷ್ ದಾಸ್ ಬಿಡುಗಡೆ

2013ರ ಜುಲೈ 6ರಂದು ಮೂಡುಬಿದಿರೆ ಗುರುಬಸದಿ ಪಕ್ಕದಲ್ಲಿದ್ದ ಸಿದ್ಧಾಂತ ಮಂದಿರದಿಂದ ಕೋಟಿಗಟ್ಟಲೆ ಬೆಲೆಬಾಳುವ 15 ಅಮೂಲ್ಯ ವಿಗ್ರಹ ಕಳವು ಪ್ರಕರಣದ ಪ್ರಮುಖ ಆರೋಪಿ ಸಂತೋಷ್ ದಾಸ್ ಗೆ ಜಾಮೀನು ಲಭಿಸಿದೆ.

Suvarna News 24X7 Live online
333 Album