ಮೂಡುಬಿದಿರೆಯ ಸೀಯಾಳಾಭಿಷೇಕ ಪ್ರಿಯ ಹನುಮನ ಸನ್ನಿಧಿಯಲ್ಲಿ ಹೀಗೂ ಉಂಟೇ?
ಮೂಡುಬಿದಿರೆಯ ಸೀಯಾಳಾಭಿಷೇಕ ಪ್ರಿಯ ಹನುಮನ ಸನ್ನಿಧಿಯಲ್ಲಿ ಹೀಗೂ ಉಂಟೇ?

ಮೂಡುಬಿದಿರೆಯ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಅಂಚಿನಲ್ಲಿರುವ ಸೀಯಾಳಾಭಿಷೇಕ ಪ್ರಿಯ ಹನುಮನ ಸನ್ನಿಧಿ ಈಗ ವಿಶೇಷವಾಗಿ ಪರವೂರಿನ ಭಜಕರಿಂದ ತುಂಬಿಕೊಳ್ಳುತ್ತಿದೆ. ಕಳೆದ ವಾರ ಸುದ್ದಿ ಚಾನೆಲ್ ಕಾರ್ಯಕ್ರಮವೊಂದರಲ್ಲಿ `ಹೀಗೂ ಉಂಟೇ’ ಎನ್ನುವ ಮೂಲಕ ಹನುಮನ ಕಾರಣಿಕತೆಯ ಘಟನಾವಳಿಗಳು ಬಿತ್ತರಗೊಂಡದ್ದೇ ತಡ ಪರವೂರಿನ ಭಜಕರಿಗೆ ಈ ಸನ್ನಿಧಿ ಆಕರ್ಷಣೆಯಾಗಿಬಿಟ್ಟಿದೆ.

`ಕೈ’ ಕಾರ್ಯಕರ್ತರು, ಪೊಲೀಸರ ನಡುವೆ ಮಾತಿನ ಚಕಮಕಿ
`ಕೈ’ ಕಾರ್ಯಕರ್ತರು, ಪೊಲೀಸರ ನಡುವೆ ಮಾತಿನ ಚಕಮಕಿ

ಕಡಲಕೆರೆ ನಿಸರ್ಗಧಾಮದಲ್ಲಿ ದೀಪಾವಳಿಯ ದಿನವಾದ ಗುರುವಾರ ವೈದ್ಯ ಜೋಡಿಯೊಂದು ಪತ್ತೆಯಾದ ಹಿನ್ನೆಲೆಯಲ್ಲಿ ಉಂಟಾದ ವಿವಾದ ವಿವಾದಕ್ಕೇರಿ ಕಾಂಗ್ರೆಸ್ ಕಾರ್ಯಕರ್ತ ಮತ್ತು ಪೊಲೀಸ್ ಮಧ್ಯೆ ಮಾತಿನ ಚಕಮಕಿ ಗುರುವಾರ ಸಂಜೆ ನಡೆದಿದೆ.

ದೀಪಾವಳಿಗೆ ದೀಪದ ಮೂಲಕ ಬಂದ `ವಾಮನ ಮೂರ್ತಿ’: ಏನಿದು ಪವಾಡ?
ದೀಪಾವಳಿಗೆ ದೀಪದ ಮೂಲಕ ಬಂದ `ವಾಮನ ಮೂರ್ತಿ’: ಏನಿದು ಪವಾಡ?

ದೀಪಾವಳಿ ಹಬ್ಬ ಬಂದೇ ಬಿಟ್ಟಿದೆ. ಹಬ್ಬದಂದು ಬಲಿಯೇಂದ್ರನನ್ನು ಕರೆಯುವ ಸಂಪ್ರದಾಯ ನಮ್ಮದು. ಆದರೆ ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ತಳ್ಳಿದ ಸಾಕ್ಷತ್ ವಾಮನ ಮೂರ್ತಿಯೇ ಈ ಬಾರಿ ಹಬ್ಬಕ್ಕೆ ಕರೆಯದೆ ಅಥಿತಿಯಾಗಿ ಬಂದಿದ್ದಾನಂತೆ, ಅದೂ ಕೂಡ ಲಕ್ಷೀ ದೇವಿಗೆ ಮನೆಯೊಂದರಲ್ಲಿ ಬೆಳಗಿಸಿದ ದೀಪದ ಮೂಲಕ.

ಮೂಡುಬಿದಿರೆ: ಮೂವರು ಕಳ್ಳರ ಬಂಧನ: ರೂ.4.60 ಲಕ್ಷದ ಸೊತ್ತುಗಳು ವಶ
ಮೂಡುಬಿದಿರೆ: ಮೂವರು ಕಳ್ಳರ ಬಂಧನ: ರೂ.4.60 ಲಕ್ಷದ ಸೊತ್ತುಗಳು ವಶ

ಮೂಡುಬಿದಿರೆ ಹಾಗೂ ಬಜಪೆ ಪರಿಸರದಲ್ಲಿ ವಿವಿಧ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಎಡಪದವಿನ ಮೂವರು ಆರೋಪಿಗಳನ್ನು ಮೂಡುಬಿದಿರೆ ಪೊಲೀಶರು ಬುಧವಾರ ಬಂಧಿಸಿ ಸುಮಾರು 4.60 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಯಾವುದು `ನಮ್ಮಬೆದ್ರ’?: ಬಸದಿಗಳ ಊರಿನ ಹೆಸರುಗಳ ಗೊಂದಲ!
ಯಾವುದು `ನಮ್ಮಬೆದ್ರ’?: ಬಸದಿಗಳ ಊರಿನ ಹೆಸರುಗಳ ಗೊಂದಲ!

ಮೂಡಬಿದ್ರೆ,ಮೂಡುಬಿದ್ರೆ,ಮೂಡುಬಿದರೆ,ಮೂಡ್ಬಿದ್ರೆ,ಮೂಡ್ಬಿದಿರೆ,ಮೂಡ್ಬಿದ್ರಿ ಮೂಡುಬಿದಿರೆ ಇದು ಬಸದಿಗಳ ಊರಾದ ಮೂಡುಬಿದಿರೆ(ಬೆದ್ರ)ಗೆ ಇರುವ ನಾನಾ ಹೆಸರು. ಮೂಡುಬಿದಿರೆಯ ಹೆಸರನ್ನು `ಮೂಡುಬಿದಿರೆ’ಯನ್ನಾಗಿಸಿ ಎಂದು ಇಲ್ಲಿನ ಪುರಸಭೆಯವರಿಗೆ ಮನವಿ ಸಲ್ಲಿಸಿ 2 ವರ್ಷವಾದರೂ ಇದನ್ನು ಪುರಸ್ಕರಿಸುವ ಇಲ್ಲವೇ ತಿರಸ್ಕರಿಸುವ ಗೋಜಿಗೆ ಸಂಬಂಧಪಟ್ಟವರು ಹೋಗಿಲ್ಲ.

ಮೂಡುಬಿದಿರೆ: ಜೈನಪೇಟೆ ಔಟ್ ಪೋಸ್ಟ್ ಪ್ರಸ್ತಾವನೆ ಚುರುಕು
ಮೂಡುಬಿದಿರೆ: ಜೈನಪೇಟೆ ಔಟ್ ಪೋಸ್ಟ್ ಪ್ರಸ್ತಾವನೆ ಚುರುಕು

ಕಳೆದ 15 ತಿಂಗಳಲ್ಲಿ 3 ಬಸದಿಗಳಲ್ಲಿ ಕಳ್ಳತನ ಸಹಿತ ಜ್ಯುವೆಲ್ಲರಿ ಹಾಗೂ ಇತರ ಕಳ್ಳತನಗಳಿಂದ ರೋಸಿ ಹೋಗಿರುವ ಮೂಡುಬಿದಿರೆಯಲ್ಲಿ ಬಹುಬೇಡಿಕೆಯ ಪೊಲೀಸ್ ಔಟ್ ಪೋಸ್ಟ್ ಸ್ಥಾಪಿಸುವ ಪ್ರಸ್ತಾವನೆ ಚುರುಕುಗೊಳ್ಳುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಧರೆಗುಡ್ಡೆ ಶಾಲಾ ಬಾವಿಯಿಂದ ತ್ಯಾಜ್ಯ ಹೊರಗೆ(ಬೆದ್ರ ಎಫೆಕ್ಟ್)
ಧರೆಗುಡ್ಡೆ ಶಾಲಾ ಬಾವಿಯಿಂದ ತ್ಯಾಜ್ಯ ಹೊರಗೆ(ಬೆದ್ರ ಎಫೆಕ್ಟ್)

ಗಣೇಶೋತ್ಸವ ಕಳೆದು ಅದಾಗಲೇ ಒಂದು ತಿಂಗಳು ಕಳೆದಿದೆ. ಈ ಉತ್ಸವ ಭರಾಟೆಯಲ್ಲಿ ಧರೆಗುಡ್ಡೆ ಹಿರಿಯ ಪ್ರಾಥಮಿಕ ಶಾಲೆಯ ಬಾವಿಗೆ ತ್ಯಾಜ್ಯವನ್ನು ತುಂಬಲಾಗಿತ್ತು. ಈ ಬಗ್ಗೆ ನಮ್ಮ ಬೆದ್ರ.ಕಾಂ ಅ.13ರಂದು ವರದಿಯನ್ನು ಪ್ರಕಟಿಸಿತ್ತು. ಸಮಿತಿಯವರು ವರದಿಯಿಂದ ಎಚ್ಚೆತ್ತು ತ್ಯಾಜ್ಯವನ್ನು ಬಾವಿಯಿಂದ ಹೊರಗೆ ಹಾಕಿದ್ದಾರೆ.

ಮೂಡುಬಿದಿರೆ: ಖಡ್ಗ ಪ್ರದರ್ಶಿಸಿದ್ದಕ್ಕೆ ದೂರು
ಮೂಡುಬಿದಿರೆ: ಖಡ್ಗ ಪ್ರದರ್ಶಿಸಿದ್ದಕ್ಕೆ ದೂರು

ಮೂಡುಬಿದಿರೆ ಬೆಟ್ಕೇರಿ ಮೈದಾನದಲ್ಲಿ ಬುಧವಾರ ನಡೆದ ಆರ್ ಎಸ್ ಎಸ್ ಪ್ರಾಥಮಿಕ ಶಿಕ್ಷಾವರ್ಗದ ಸಮಾರೋಪಕ್ಕೆ ಪೂರ್ವಭಾವಿಯಾಗಿ ಪೇಟೆಯಲ್ಲಿ ನಡೆದಿದ್ದ ಪಥಸಂಚಲನದಲ್ಲಿ ಸಂಘದ ಕಾರ್ಯಕರ್ತರು ಖಡ್ಗ ಹಿಡಿದು ಭಯ ಹುಟ್ಟಿಸಿದ್ದಾರೆಂದು ಆರೋಪಿಸಿ ಗುರುವಾರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

ಕಾರ್ಮಿಕರ ಮೊಬೈಲ್,ನಗದು ಕಳವು:ಆರೋಪಿ ಸೆರೆ
ಕಾರ್ಮಿಕರ ಮೊಬೈಲ್,ನಗದು ಕಳವು:ಆರೋಪಿ ಸೆರೆ

ಮೂಡುಬಿದಿರೆ ಮಸೀದಿ ರಸ್ತೆಯಲ್ಲಿರುವ ಕಾರ್ಮಿಕರು ಉಳಿದುಕೊಳ್ಳುವ ಶೆಡ್ ಗೆ ನುಗ್ಗಿ ಮೊಬೈಲ್ ಹಾಗೂ ನಗದು ಕಳವು ಮಾಡಿದ ಆರೋಪಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬೆಳ್ತಂಗಡಿ ತಾಲ್ಲೂಕಿನ ಪೆರಿಂಜೆ ಗ್ರಾಮದ ಅಶೋಕ್(24)ಎಂದು ತಿಳಿದುಬಂದಿದೆ.

ನಿಯಮ ಉಲ್ಲಂಘನೆ: ಇಬ್ಬರು ಆಟೋ ಚಾಲಕರಿಗೆ ನೋಟೀಸ್
ನಿಯಮ ಉಲ್ಲಂಘನೆ: ಇಬ್ಬರು ಆಟೋ ಚಾಲಕರಿಗೆ ನೋಟೀಸ್

ಬಾಡಿಗೆ ವಿಚಾರಕ್ಕೆ ಸಂಬಂಧಿಸಿ ರಿಕ್ಷಾ ಚಾಲಕ ಆಟೋ ರಿಕ್ಷಾ ಚಾಲಕರ ಎರಡು ತಂಡಗಳ ನಡುವೆ ವಿವಾದ ಉಂಟಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಮೂಡುಬಿದಿರೆ ಪೊಲೀಸರು ಇಬ್ಬರು ರಿಕ್ಷಾ ಚಾಲಕರಿಗೆ ಪರವಾನಿಗೆ ಷರತು ಉಲ್ಲಂಘಿಸಿದ ಹಿನ್ನಲೆಯಲ್ಲಿ ಎಚ್ಚರಿಕೆಯ ನೋಟಿಸ್ ಜಾರಿ ಮಾಡಿದ್ದಾರೆ.

ಧರೆಗುಡ್ಡೆ: ಗಣೇಶೋತ್ಸವಕ್ಕೆ ಶಾಲೆ, ತ್ಯಾಜ್ಯಕ್ಕೆ ಬಾವಿ!
ಧರೆಗುಡ್ಡೆ: ಗಣೇಶೋತ್ಸವಕ್ಕೆ ಶಾಲೆ, ತ್ಯಾಜ್ಯಕ್ಕೆ ಬಾವಿ!

ಧರೆಗುಡ್ಡೆ ಪಂಚಾಯಿತಿ ಪಕ್ಕದಲ್ಲೇ ಇರುವ ಧರೆಗುಡ್ಡೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ತಿಂಗಳು ಸ್ಥಳೀಯ ಸಮಿತಿಯೊಂದರಿಂದ ಗಣೇಶೋತ್ಸವ ನಡೆದಿದ್ದು, ಸಮಾರಂಭದ ಉಂಟಾದ ತ್ಯಾಜ್ಯ ಶಾಲೆಯ ನೀರಿರುವ ಬಾವಿಗೆ ಎಸೆಯಲಾಗಿದೆ.

ಅ.26: ಮೂಡುಬಿದಿರೆಯಲ್ಲಿ ಕರೋಕೆ ಟ್ಯಾಲೆಂಟ್ಸ್-2014
ಅ.26: ಮೂಡುಬಿದಿರೆಯಲ್ಲಿ ಕರೋಕೆ ಟ್ಯಾಲೆಂಟ್ಸ್-2014

ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಮೂಡುಬಿದರೆಯ ಸಂಗೀತ ಬಳಗ ಆಶಾಕಿರಣ್ ಮೆಲೋಡಿಸ್ ವತಿಯಿಂದ 4ನೇ ವರ್ಷದ ಕರೋಕೆ ಸಂಗೀತ ಗಾಯನ ಸ್ಪರ್ಧೆ ಟ್ಯಾಲೆಂಟ್ಸ್-2014 ಅ26ರಂದು ಬೆಳಿಗ್ಗೆ 9ರಿಂದ ಸಮಾಜ ಮಂದಿರದಲ್ಲಿ ನಡೆಯಲಿದೆ.

ಹೆಣ್ಣು ಶಿಶು ಮತ್ತು ಲಿಂಗ ಸೂಕ್ಷ್ಮತೆ
ಹೆಣ್ಣು ಶಿಶು ಮತ್ತು ಲಿಂಗ ಸೂಕ್ಷ್ಮತೆ

ತಾಯಿ ಉದರದಲ್ಲಿ ರೂಪುಗೊಂಡ ಪ್ರತಿಯೊಂದು ಶಿಶುವಿಗೂ ಈ ಭೂಮಿಯ ಮೇಲೆ ಹುಟ್ಟುವುದಕ್ಕೆ ಮತ್ತು ಬದುಕುವುದಕ್ಕೆ ಮೂಲಭೂತ ಹಕ್ಕಿದೆ. ಆದರೆ ಇಂದು ಈ ಹಕ್ಕು ಗಂಡು ಹೆಣ್ಣಿಗೆ ಸಮಾನ ನೆಲೆಯಲ್ಲಿ ಹಂಚಿಕೆಯಾಗಿಲ್ಲ. ಹೆಣ್ಣು ಶಿಶುವನ್ನು ಕುಡಿಯೊಡೆಯುವ ಹಂತದಲ್ಲೇ ಹಿಸುಕಿ ಹಾಕುವ ಮತ್ತು ಅನಂತರದ ಹಲವು ಸಂದರ್ಭಗಳಲ್ಲಿ ಹೊಸಕಿ ಹಾಕುವ ಪದ್ದತಿಗಳು ಜಾರಿಗೆ ಬಂದು ಗಂಡು ಹೆಣ್ಣು ಲಿಂಗ ಅನುಪಾತದಲ್ಲಿ ಗಂಭೀರವಾದ ಅಂತರವು ನಿರ್ಮಾಣವಾಗಲು ಕಾರಣವಾಗಿವೆ.

ಕಡಲಕೆರೆ ತಲೆ ಬುರುಡೆ ಪ್ರಕರಣ ಇನ್ನೂ ನಿಗೂಢ
ಕಡಲಕೆರೆ ತಲೆ ಬುರುಡೆ ಪ್ರಕರಣ ಇನ್ನೂ ನಿಗೂಢ

ಕಳೆದ ಸೆ 19ರಂದು ಕಡಲಕೆರೆ ನಿಸರ್ಗದಾಮದ ಬಳಿ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದ್ದ ಮಾನವ ದೇಹದ ತಲೆಬುರುಡೆ, ಎದೆಗೂಡು ಸೇರಿದಂತೆ ಮಾನವ ಅಸ್ಥಿ ಪಂಜರ ಯಾರದ್ದು ಎನ್ನುವ ಪ್ರಶ್ನೆ ಇನ್ನೂ ನಿಗೂಢವಾಗಿಯೇ ಉಳಿದಿದೆ.

ಬೆದ್ರ ಬಸದಿಗಳು ಅ`ಭದ್ರ’?
ಬೆದ್ರ ಬಸದಿಗಳು ಅ`ಭದ್ರ’?

18 ಬಸದಿಗಳ ಊರು ಮೂಡುಬಿದಿರೆ. ದೇಶ-ವಿದೇಶಗಳ ಸಾವಿರಾರು ಯಾತ್ರಾರ್ಥಿಗಳಿಗೆ ಪುಣ್ಯ ಕ್ಷೇತ್ರ. ಸಾವಿರ ಕಂಬದ ಬಸದಿ, ಪ್ರಾಚೀನ ಕಾಲದ ಅಪೂರ್ವ ಸಿದ್ಧಾಂತ ವಿಗ್ರಹಗಳು ಸಹಿತ ಬಸದಿಗಳ ಕೆತ್ತನೆ, ಸೌಂದರ್ಯ ನೋಡವುದೇ ಭಾಗ್ಯವೆಂದು ತಿಳಿದು ಮೂಡುಬಿದಿರೆಯತ್ತ ಬರುವವರು ಹಲವಾರು. ಆದರೆ ಮೂಡುಬಿದಿರೆಯ ಆಕರ್ಷಣೆಯ ಕೇಂದ್ರಬಿಂದುವಾದ ಬಸದಿಗಳು ಸೂಕ್ತ ಭದ್ರತೆ ವಿಚಾರದಲ್ಲಿ ಸೋಲುತ್ತಿದೆ.

ಮೂಡುಬಿದಿರೆ ಹಿರೆ ಬಸದಿಯಲ್ಲಿ ಕಳ್ಳತನ: 50 ಸಾವಿರ ಮೌಲ್ಯದ ನಗ,ನಗದು ಕಳವು
ಮೂಡುಬಿದಿರೆ ಹಿರೆ ಬಸದಿಯಲ್ಲಿ ಕಳ್ಳತನ: 50 ಸಾವಿರ ಮೌಲ್ಯದ ನಗ,ನಗದು ಕಳವು

ಬೆಟ್ಕೇರಿ ಅಮ್ಮನವರ ಬಸದಿ (ಶಾಂತಿನಾಥರ ಹಿರೆಬಸದಿ)ಗೆ ಸೋಮವಾರ ತಡರಾತ್ರಿ ಕಳ್ಳರು ನುಗ್ಗಿದ್ದಾರೆ. ಬಸದಿಯಲ್ಲಿದ್ದ ಬೆಳ್ಳಿ ಆರತಿ ಹಾಗೂ ಕಾಣಿಕೆ ಡಬ್ಬಿಯ ಹಣ ಸೇರಿದಂತೆ 20 ಸಾವಿರ ಮೌಲ್ಯದ ಸೊತ್ತುಗಳು ಕಳವಾಗಿದೆ.

ಅಮ್ಮನವರ ಬಸದಿಯಲ್ಲಿ ಕಳ್ಳತನ: ಬೆಳ್ಳಿ ಆರತಿ, ಕಾಣಿಕೆ ಹಣಕ್ಕೆ ಕಳ್ಳರ ಕೈ
ಅಮ್ಮನವರ ಬಸದಿಯಲ್ಲಿ ಕಳ್ಳತನ: ಬೆಳ್ಳಿ ಆರತಿ, ಕಾಣಿಕೆ ಹಣಕ್ಕೆ ಕಳ್ಳರ ಕೈ(Updated)

ಮೂಡುಬಿದಿರೆ ಜೈನಪೇಟೆಯಲ್ಲಿರುವ ಅಮ್ಮನವರ ಬಸದಿಗೆ ಸೋಮವಾರ ತಡರಾತ್ರಿ ಕಳ್ಳರು ನುಗ್ಗಿದ್ದಾರೆ. ಮಂಗಳವಾರ ಮುಂಜಾನೆ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು, ಬೆಳ್ಳಿ ಆರತಿ, ಕಾಣಿಕೆ ಡಬ್ಬದಲ್ಲಿರುವ ಹಣ ಕಳವು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಮೂಡುಬಿದಿರೆ: ಅಮ್ಮನವರ ಬಸದಿಗೆ ನುಗ್ಗಿದ ಕಳ್ಳರು
ಮೂಡುಬಿದಿರೆ: ಅಮ್ಮನವರ ಬಸದಿಗೆ ನುಗ್ಗಿದ ಕಳ್ಳರು

ಮೂಡುಬಿದಿರೆ ಜೈನಪೇಟೆಯಲ್ಲಿರುವ ಅಮ್ಮನವರ ಬಸದಿಗೆ ಸೋಮವಾರ ತಡರಾತ್ರಿ ಕಳ್ಳರು ನುಗ್ಗಿದ್ದಾರೆ. ದೀಪ, ಕಾಣಿಕೆ ಡಬ್ಬಿ ಸಹಿತ ಬಸದಿಯ ಇತರ ಪರಿಕರಗಳನ್ನು ಕಳವು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಕಳ್ಳತನದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಾಗಿದೆ.

ಪ್ರತಿಭಾನ್ವೇಷಣೆ ಪರೀಕ್ಷೆ ತರಬೇತಿ:ಆಹಾರ ಸಿಗದೆ ವಿದ್ಯಾರ್ಥಿಗಳು ಕಂಗಾಲು
ಪ್ರತಿಭಾನ್ವೇಷಣೆ ಪರೀಕ್ಷೆ ತರಬೇತಿ:ಆಹಾರ ಸಿಗದೆ ವಿದ್ಯಾರ್ಥಿಗಳು ಕಂಗಾಲು

15ದಿನಗಳ ಕಾಲ ನಡೆಯುವ ರಾಷ್ಟೀಯ ಪ್ರತಿಭಾನ್ವೇಷಣೆ ಪರೀಕ್ಷೆಯ ತರಬೇತಿ ಬಂದ ವಿದ್ಯಾರ್ಥಿಗಳಿಗೆ ತರಬೇತಿ ಮೊದಲ ದಿನವೇ ಸಕಾಲದಲ್ಲಿ ಆಹಾರ ಸಿಗದೆ ಕಂಗಾಲಾಗುವ ಪರಿಸ್ಥಿತಿ ಸೋಮವಾರ ಕಲ್ಲಬೆಟ್ಟುವಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಿರ್ಮಾಣವಾಯಿತು.

ಮಹಾಬಲಿದಾನದ ಪವಿತ್ರ ಸ್ಮರಣೆ `ಬಕ್ರೀದ್’
ಮಹಾಬಲಿದಾನದ ಪವಿತ್ರ ಸ್ಮರಣೆ `ಬಕ್ರೀದ್’

ಬಕ್ರೀದ್ ಮುಸ್ಲಿಮರ ಪಾಲಿಗೆ ಅತ್ಯಂತ ಮಹತ್ವದ್ದಾಗಿರುವ ಹಬ್ಬಗಳಲ್ಲಿ ಶ್ರೇಷ್ಠವಾದದ್ದು. ಈ ಹಬ್ಬವನ್ನು ಈದುಲ್ ಅಝ್ಹಾ ಎಂದೂ ಕರೆಯಲಾಗುತ್ತದೆ. ಕುರ್ಆನ್ ಮಹತ್ವ ನೀಡಿದ ನಾಲ್ಕು ತಿಂಗಳಿನಲ್ಲಿ ಒಂದಾದ ದುಲ್ಹಜ್ಜ್ ತಿಂಗಳಿನ ಹತ್ತನೇ ದಿವಸ ಬಕ್ರೀದ್ ಆಚರಿಸಲಾಗುತ್ತದೆ. ಬಕ್ರೀದ್ನ ಆಚರಣೆಯೊಂದಿಗೆ ಮಕ್ಕಾದಲ್ಲಿ ನಿರ್ವಹಿಸಲಾಗುವ ಹಜ್ಜ್ ಕರ್ಮದ ವಿಧಿ-ವಿಧಾನಗಳು ಕೊನೆಯ ಹಂತ ತಲುಪುತ್ತವೆ.

Suvarna News 24X7 Live online
333 Album