ಖಾಸಗಿ ಸಹಭಾಗಿತ್ವದ ಮಾರುಕಟ್ಟೆ ಪುರಸಭೆಯ ಆತುರದ ನಿರ್ಧಾರ:ವ್ಯಾಪಾರಸ್ಥರ ಒಕ್ಕೂಟ
ಖಾಸಗಿ ಸಹಭಾಗಿತ್ವದ ಮಾರುಕಟ್ಟೆ ಪುರಸಭೆಯ ಆತುರದ ನಿರ್ಧಾರ:ವ್ಯಾಪಾರಸ್ಥರ ಒಕ್ಕೂಟ

ಖಾಸಗಿ ಸಹಭಾಗಿತ್ವದಲ್ಲಿ ಪುರಸಭಾ ಮಾರುಕಟ್ಟೆ ನಿರ್ಮಾಣ ಹಾಗೂ ವ್ಯಾಪರಿಗಳ ಸ್ಥಳಾಂತರದ ಬಗ್ಗೆ ಪುರಸಭಾ ಮಾರುಕಟ್ಟೆ ವ್ಯಾಪರಸ್ಥರ ಒಕ್ಕೂಟ ವಿರೊಧ ವ್ಯಕ್ತಪಡಿಸಿದ್ದು, ಪುರಸಭೆಯ ಈ ರೀತಿಯ ನಿರ್ಣಯ ಅನುಷ್ಠಾನಕ್ಕೆ ಬಂದರೆ, 200 ಮಂದಿ ವ್ಯಾಪಾರಸ್ಥರು ಹಾಗೂ ಮಾರುಕಟ್ಟೆಯನ್ನು ನಂಬಿರುವ 2 ಸಾವಿರಕ್ಕೂ ಅಧಿಕ ಮಂದಿಯ ಜೀವನ ನಿರ್ವಹಣೆ ಕಷ್ಟವಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಅಪಾಯವನ್ನು ಆಹ್ವಾನಿಸುತ್ತಿರುವ ಪೇರೂರು ಸೇತುವೆ
ಅಪಾಯವನ್ನು ಆಹ್ವಾನಿಸುತ್ತಿರುವ ಪೇರೂರು ಸೇತುವೆ

ಕಾರ್ಕಳ ತಾಲೂಕು ಮತ್ತು ಮೂಡಬಿದಿರೆಯನ್ನು ಸಂಪರ್ಕಿಸುವ ಜಿಲ್ಲಾ ಹೆದ್ದಾರಿಯಲ್ಲಿರುವ ಪೇರೂರು ಸೇತುವೆ ಬಿರುಕು ಬಿಟ್ಟಿದ್ದು, ತಡೆಗೋಡೆಯೂ ಇಲ್ಲದೆ ಅಪಾಯವನ್ನು ಆಹ್ವಾನಿಸುತ್ತಿದೆ.

ಅಮೃತ ಶಿಲೆಯ ಶಾರದೆಗೆ ಬೆದ್ರದಲ್ಲಿ ನಿತ್ಯಪೂಜೆ
ಅಮೃತ ಶಿಲೆಯ ಶಾರದೆಗೆ ಬೆದ್ರದಲ್ಲಿ ನಿತ್ಯಪೂಜೆ

ವಿದ್ಯಾಮಾತೆ ಶಾರದೆಯ ಆರಾಧನೆ ಅನು ನಿತ್ಯವೆಂಬಂತೆ ನಮ್ಮಲ್ಲಿ ನಡೆಯುತ್ತಿರಬಹುದು. ಆದರೆ ಶಾರದೆಯ ದೇಗುಲಗಳು ಮಾತ್ರ ನಮ್ಮಲ್ಲಿ ಅಪರೂಪವೆಂದೇ ಹೇಳಬಹುದು. ಈ ನಡುವೆ ಜೈನ ಕಾಶಿಯಾಗಿದ್ದು ಇದೀಗ ಜ್ಞಾನ ಕಾಶಿಯಾಗಿ ಬದಲಾದ ಮೂಡುಬಿದಿರೆಯಲ್ಲಿ ಅಮೃತಶಿಲೆಯ ಅಪರೂಪದ ಶಾರದೆಗೆ ಕಳೆದ ಎಂಟು ದಶಕಗಳಿಂದ ನಿತ್ಯ ಪೂಜೆ ನಡೆಯುತ್ತಿದೆ.

ತೆಂಕಮಿಜಾರು ಗ್ರಾ.ಪಂ ಗೆ ಗಾಂಧಿ ಗ್ರಾಮ ಪುರಸ್ಕಾರ: ನೈಜ್ಯ ಕಾಳಜಿಗೆ ಸಂದ ಗೌರವ
ತೆಂಕಮಿಜಾರು ಗ್ರಾ.ಪಂ ಗೆ ಗಾಂಧಿ ಗ್ರಾಮ ಪುರಸ್ಕಾರ: ನೈಜ್ಯ ಕಾಳಜಿಗೆ ಸಂದ ಗೌರವ

2012-13 ಮತ್ತು 2013-14 ಸಾಲಿನಲ್ಲಿ ಉತ್ತಮ ಸಾಧನೆಗಳನ್ನು ಮಾಡಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವ "ಮಂಗಳೂರು ತಾಲೂಕಿನ ತೆಂಕಮಿಜಾರು ಗ್ರಾಮ ಪಂಚಾಯತ್ "ಗಾಂಧಿ ಗ್ರಾಮ ಪುರಸ್ಕಾರ" ಆಯ್ಕೆಯಾಗಿದ್ದು ಇದೀಗ ಪುರಸ್ಕಾರದೊಂದಿಗೆ ಸಿಗುವ 5ಲಕ್ಷದ ಮೊತ್ತವನ್ನು ಇನ್ನೂ ಹೆಚ್ಚಿನ ಪ್ರಗತಿಗೆ ವಿನಿಯೋಗ ಮಾಡುವ ಬಗ್ಗೆ ಪಂಚಾಯತ್ ಪಣ ತೊಟ್ಟಿದೆ.

ವಿದ್ಯಾರ್ಥಿನಿಯ ಮಾನಭಂಗ ಯತ್ನ:ಸಿದ್ಧಕಟ್ಟೆಯಲ್ಲಿ ಸ್ವಯಂ ಪ್ರೇರಿತ ಬಂದ್
ವಿದ್ಯಾರ್ಥಿನಿಯ ಮಾನಭಂಗ ಯತ್ನ: ಸಿದ್ಧಕಟ್ಟೆಯಲ್ಲಿ ಸ್ವಯಂ ಪ್ರೇರಿತ ಬಂದ್

ಸೆ.29ರಂದು ಸಂಗಬೆಟ್ಟ ಗ್ರಾಮದ ಸಿದ್ಧಕಟ್ಟೆಯ ಪಂಜಳ ಕ್ರಾಸ್ ಬಳಿ ಕಾಲೇಜು ವಿದ್ಯಾರ್ಥಿಯೊಬ್ಬಳ ಮಾನಭಂಗಕ್ಕೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಮಧ್ಯಂತರ ಜಾಮೀನು ಸಿಕ್ಕಿದೆ. ಆರೋಪಿಯನ್ನು ಮರುಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸಂಗಬೆಟ್ಟು, ಸಿದ್ಧಕಟ್ಟೆ ಪರಿಸರದಲ್ಲಿ ಬುಧವಾರ ಸ್ವಯಂ ಪ್ರೇರಿತ ಬಂದ್ ಆಚರಿಸಲಾಯಿತು.

ಖಾಸಗಿ ಸಹಭಾಗಿತ್ವದಲ್ಲಿ ಮೂಡುಬಿದಿರೆ ಮಾರುಕಟ್ಟೆ ನಿರ್ಮಾಣಕ್ಕೆ ಅಸಮಾಧಾನ
ಖಾಸಗಿ ಸಹಭಾಗಿತ್ವದಲ್ಲಿ ಮೂಡುಬಿದಿರೆ ಮಾರುಕಟ್ಟೆ ನಿರ್ಮಾಣಕ್ಕೆ ಅಸಮಾಧಾನ

ಖಾಸಗಿ ಸಹಭಾಗಿತ್ವದಲ್ಲಿ ಮಾರುಕಟ್ಟೆ ನಿರ್ಮಿಸುವ ಪುರಸಭೆಯವರ ಯೋಚನೆಯಿಂದ, ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಮೂಡುಬಿದಿರೆ ಸುಸಜ್ಜಿತ ಮಾರುಕಟ್ಟೆಗೆ ನಿರ್ಮಾಣಕ್ಕೆ ಶುಕ್ರದೆಸೆಯೇನೋ ಬಂದಿದೆ. ಆದರೆ ಖಾಸಗಿಯವರ ಸಹಭಾಗಿತ್ವಕ್ಕೆ ಸಾರ್ವಜನಿಕರಲ್ಲಿ ಅಸಮಾದಾನ, ಮಾರುಕಟ್ಟೆ ಅಂಗಡಿಗಳು ಸ್ವರಾಜ್ಯ ಮೈದಾನಕ್ಕೆ ಸ್ಥಳಾಂತರಗೊಳ್ಳುವುದಕ್ಕೆ ವರ್ತಕರಿಂದ ವಿರೋಧಗಳೂ ಕೇಳಿಬರುತ್ತಿವೆ.

ಯಡಿಯೂರಪ್ಪ ಜೈಲು ಸೇರುವವರೆಗೂ ವಿರಮಿಸಲಾರೆ: ಕೆಜೆಪಿ ಪದ್ಮನಾಭ ಪ್ರಸನ್ನ
ಯಡಿಯೂರಪ್ಪ ಜೈಲು ಸೇರುವವರೆಗೂ ವಿರಮಿಸಲಾರೆ: ಕೆಜೆಪಿ ಪದ್ಮನಾಭ ಪ್ರಸನ್ನ

ಕೆಜೆಪಿಯನ್ನು ಬಿಜೆಪಿ ಜತೆ ವಿಲೀನಗೊಳಿಸುವುದಕ್ಕೆ ನನ್ನ ವಿರೋಧವಿತ್ತು, ಸ್ಪೀಕರ್ ಕಾಗೋಡ್ ತಮ್ಮಪ್ಪ ಅವರಿಗೆ ಆಕ್ಷೇಪ ಸಲ್ಲಿಸಿದ್ದು ಯಡ್ಯೂರಪ್ಪ ಅವರ ಶಾಸಕತ್ವ ರದ್ದತಿಗೂ ಮನವಿ ಮಾಡಿದ್ದೆ ಎಂದು ಕೆಜೆಪಿ ಸಂಸ್ಥಾಪಕ ರಾಷ್ಟ್ರಾಧ್ಯಕ್ಷ ಪದ್ಮನಾಭ ಪ್ರಸನ್ನ ಹೇಳಿದ್ದಾರೆ.

ಹಂಡೇಲು ಕಾಪಿಕಾಡಿನ ಮೋಹಿನಿ.ವಿ.ಬಂಗೇರ ನಿಧನ
ಹಂಡೇಲು ಕಾಪಿಕಾಡಿನ ಮೋಹಿನಿ.ವಿ.ಬಂಗೇರ ನಿಧನ

ಮೂಡುಬಿದಿರೆಯ ಖ್ಯಾತ ಕರಗ ನೃತ್ಯ ಕಲಾವಿದ ಹಂಸನಗರ ಸಮೀಪದ ಹಂಡೇಲು ಕಾಪಿಕಾಡಿನ ನಿವಾಸಿ ವೆಂಕಟೇಶ್ ಬಂಗೇರಾ ಅವರ ಪತ್ನಿ ಮೋಹಿನಿ(50) ಅವರು ಅಲ್ಪಕಾಲದ ಅನಾರೋಗ್ಯದಿಂದ ಶನಿವಾರ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು.

ಆಳ್ವಾಸ್ ನಲ್ಲಿ ಹೆಣ್ಣು ಶಿಶು ಉಳಿಸಿ ಅಭಿಯಾನ
ಆಳ್ವಾಸ್ ನಲ್ಲಿ ಹೆಣ್ಣು ಶಿಶು ಉಳಿಸಿ ಅಭಿಯಾನ

ಇಂದಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳು, ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದೆ. ದೌರ್ಜನ್ಯ ಪ್ರಕರಣಗಳು ನಡೆದಾಗ ಹೆಣ್ಣು ಮಕ್ಕಳು ಎಚ್ಚೆತ್ತುಕೊಂಡು ಹೆತ್ತವರಲ್ಲಿ, ಶಿಕ್ಷಕರಲ್ಲಿ ಅಥವಾ ಪೊಲೀಸ್ ಠಾಣೆಗಳಿಗೆ ಬಂದು ಮಾಹಿತಿ ನೀಡಬೇಕು ಇಂತಹ ವಿಚಾರದಲ್ಲಿ ಮಹಿಳೆಯರು ಜಾಗೃತಿಯಾದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಮೂಡುಬಿದಿರೆ ಪೋಲಿಸ್ ಉಪ ನಿರೀಕ್ಷಕ ರಮೇಶ್ ಕುಮಾರ್ ಹೇಳಿದರು.

ಕಾಡಿನ ನೀರು ಓಂಟೆದಕಜೆ ಮಲೆಕುಡಿಯರಿಗೆ ಬೆಳಕು!
ಕಾಡಿನ ನೀರು ಓಂಟೆದಕಜೆ ಮಲೆಕುಡಿಯರಿಗೆ ಬೆಳಕು!

ನಗರದಲ್ಲಿ ವಿದ್ಯುತ್ ವ್ಯತ್ಯಯ ಒಂದು ಕಡೆಯಾದರೆ, ಕೆಲವೊಂದು ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ವಿದ್ಯುತ್ ಬೆಳಗದಿರುವುದು ಮತ್ತೊಂದೆಡೆ. ಅಂತದರಲ್ಲಿ ಕಾಡು ಪ್ರದೇಶಕ್ಕೆ ವಿದ್ಯುತ್ ಪೂರೈಸುವುದು ಕನಸಿನ ಮಾತು. ಆದರೆ ಮೂಡುಬಿದಿರೆ ಸಮೀಪದ ಓಂಟೆದಕಜೆ ಕಾಡು ಪ್ರದೇಶದಲ್ಲಿ ತಯಾರಾದ ವಿದ್ಯುತ್ ಅಲ್ಲಿನ ಮೂರು ಕುಟುಂಬಗಳಿಗೆ ಬೆಳಕಾಗಿದೆ. ಮೂಲಭೂತ ಸೌಕರ್ಯಗಳ ಅಭಾವದ ನಡುವೆಯೂ ಈ ವಿದ್ಯುತ್, ನಿವಾಸಿಗಳಲ್ಲಿ ಆಶಾಭಾವನೆ ಮೂಡಿಸಿದೆ.

ಕಡಲಕೆರೆಯಾಗುತ್ತಿದೆ ತ್ಯಾಜ್ಯದ ಕೊಂಪೆ!
ಕಡಲಕೆರೆಯಾಗುತ್ತಿದೆ ತ್ಯಾಜ್ಯದ ಕೊಂಪೆ!

ಪುರಸಭಾ ವ್ಯಾಪ್ತಿಯ ಕಡಲಕೆರೆ ನಿಸರ್ಗಧಾಮದ ವಿಹಾರ ಕೇಂದ್ರದಲ್ಲಿ ಸುತ್ತಮುತ್ತ ತ್ಯಾಜ್ಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಪ್ರಕೃತಿಯ ಸೌಂದರ್ಯ ಸವಿಯಲು ಬರುವವರಿಗೆ ತೊಂದರೆಯಾಗುತ್ತಿದೆ. ತ್ಯಾಜ್ಯ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ. ಕಡಲಕೆರೆ ಕಸಕಡ್ಡಿಗಳಿಂದ ಕೊಂಪೆಯಾಗುವುದರಲ್ಲಿ ಸಂಶಯವಿಲ್ಲ.

ದರೆಗುಡ್ಡೆ  ರಾಘು ಭಂಡಾರಿ ಕೊಲೆ: ಆರೋಪಿ ದಂಪತಿ ಬಂಧನ
ದರೆಗುಡ್ಡೆ ರಾಘು ಭಂಡಾರಿ ಕೊಲೆ: ಆರೋಪಿ ದಂಪತಿ ಬಂಧನ

ಸೆ.12ರಂದು ರಾತ್ರಿ ದರೆಗುಡ್ಡೆ ವಿಠಲಗುಡ್ಡೆ ನಿವಾಸಿಯು ತನ್ನ ಮನೆಯ ಪಕ್ಕದಲ್ಲೇ ನಿಗೂಡವಾಗಿ ಸಾವಿಗೀಡಾಗಿದ್ದು, ನೆರೆಮನೆಯ ದಂಪತಿ ದೊಣ್ಣೆಯಿಂದ ಆತನನ್ನು ಹೊಡೆದು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ದಂಪತಿಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಮೂಡುವೇಣುಪುರದ ಶ್ರೀಗೋಪಾಲಕೃಷ್ಣ(Namma Degula1)
ಮೂಡುವೇಣುಪುರದ ಶ್ರೀಗೋಪಾಲಕೃಷ್ಣ(Namma Degula1)

ಬಸದಿಗಳ ಊರಾದ ಮೂಡುಬಿದಿರೆಯಲ್ಲಿ 18 ಬಸದಿಗಳಲ್ಲದೆ, ಅಂಜನೇಯ, ಅನ್ನಪೂರ್ಣೆಶ್ವರಿ, ಗೌರಿ ದೇವಸ್ಥಾನ, ಸತ್ಯನಾರಾಯಣ ದೇವಸ್ಥಾನ, ಕೊಡ್ಯಡ್ಕ ಅನ್ನಪೂಣೇಶ್ವರಿ, ಆದಿಶಕ್ತಿ ಹೀಗೆ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಹಲವಾರು ಕ್ಷೇತ್ರಗಳನ್ನು ಹೊಂದಿದ್ದು, ರಾಜ್ಯದಲ್ಲೇ ಒಂದು ಅಪರೂಪದ ಧಾರ್ಮಿಕ ಕೇಂದ್ರವಾಗಿ ಗುರುತಿಸಿಕೊಂಡಿದೆ.

ಆಳ್ವಾಸ್ ನಲ್ಲಿ ಕೇರಳೀಯಮ್-2014
ಆಳ್ವಾಸ್ ನಲ್ಲಿ ಕೇರಳೀಯಮ್-2014

ಪ್ರತಿಯೊಂದು ಸಮುದಾಯವು ತನ್ನದೇ ರೀತಿಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಸಾಮಾಜಿಕ ಸೌಂದರ್ಯವನ್ನು ಅನಾವರಣಗೊಳಿಸುತ್ತಿದೆ ಎಂದು ಕೇರಳದ ಫಾರ್ಫಾರ್ಮಿಂಗ್ ಆಟ್ಸ್ ಅಡಾಡೆಮಿ ಅಧ್ಯಕ್ಷ ಪ್ರೊ.ನಾರಾಯಣನ್ ನಂಬೂದಿರಿ ಹೇಳಿದರು.

ಕಡಲಕೆರೆ ಪರಿಸರದಲ್ಲಿ ಅಸ್ಥಿಪಂಜರ ಪತ್ತೆ
ಕಡಲಕೆರೆ ಪರಿಸರದಲ್ಲಿ ಅಸ್ಥಿಪಂಜರ ಪತ್ತೆ

ಪುರಸಭಾ ವ್ಯಾಪ್ತಿಯ ಕಡಲಕೆರೆ ಬಳಿ ನಡೆತೋಪಿನಲ್ಲಿ ಶನಿವಾರ ಗಂಡಸಿನ ಅಸ್ಥಿಪಂಜರ ಪತ್ತೆಯಾಗಿದೆ. ಶುಕ್ರವಾರ ಸಂಜೆ ಕಟ್ಟಿಗೆ ತರಲೆಂದು ಸ್ಥಳೀಯ ಮಹಿಳೆಯರು ಕಾಡಿಗೆ ಹೋಗಿದ್ದು ಈ ವೇಳೆ ತಲೆಬುರುಡೆ ಪತ್ತೆಯಾಗಿತ್ತು.

ಖಾಸಗಿ ಸಹಭಾಗಿತ್ವದಲ್ಲಿ ಮೂಡುಬಿದಿರೆ ಮಾರುಕಟ್ಟೆ ನಿರ್ಮಾಣಕ್ಕೆ ಪುರಸಭೆ ಅಸ್ತು
ಖಾಸಗಿ ಸಹಭಾಗಿತ್ವದಲ್ಲಿ ಮೂಡುಬಿದಿರೆ ಮಾರುಕಟ್ಟೆ ನಿರ್ಮಾಣಕ್ಕೆ ಪುರಸಭೆ ಅಸ್ತು

ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಮೂಡುಬಿದಿರೆ ಮಾರುಕಟ್ಟೆ ಯೋಜನೆಗೆ ಕಡೆಗೂ ಮರುಜೀವ ಬಂದಿದೆ. ಮೂಡುಬಿದಿರೆ ಪುರಸಭೆಯ ಅಧ್ಯಕ್ಷೆ ಸುಪ್ರಿಯಾ.ಡಿ.ಶೆಟ್ಟಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ವಿಶೇಷ ಸಭೆಯಲ್ಲಿ, 25 ಕೋಟಿ ವೆಚ್ಚದ ಮಾರುಕಟ್ಟೆ ಯೋಜನೆಯನ್ನು 17 ವರ್ಷ ಗುತ್ತಿಗೆಯೊಂದಿಗೆ ಖಾಸಗಿಯವರ ಸಹಭಾಗಿತ್ವದಲ್ಲಿ ಮಾಡವುದಕ್ಕೆ ಪುರಸಭೆ ಸರ್ವಾನುಮತದ ನಿರ್ಣಯ ಕೈಗೊಂಡಿದೆ.

ಮೂಡುಬಿದಿರೆ ಮೀನು ಮಾರುಕಟ್ಟೆ ಸ್ಥಳಾಂತರಕ್ಕೆ ವಿರೋಧ
ಮೂಡುಬಿದಿರೆ ಮೀನು ಮಾರುಕಟ್ಟೆ ಸ್ಥಳಾಂತರಕ್ಕೆ ವಿರೋಧ

ಸ್ವರಾಜ್ಯ ಮೈದಾನಕ್ಕೆ ಮೂಡುಬಿದಿರೆ ಮೀನು ಮಾರುಕಟ್ಟೆಯನ್ನು ಸ್ಥಳಾಂತರಿಸುವ ಪ್ರಸ್ತಾಪವನ್ನು ಕೈ ಬಿಡುವಂತೆ ಸ್ಥಳೀಯ ಮೀನು ವ್ಯಾಪಾರಿಗಳ ಪರವಾಗಿ ನಳಿನಿ ಡಿ.ಕುಂದರ್ ಆಗ್ರಹಿಸಿದ್ದಾರೆ.

ಐಸ್ ಕ್ರೀಂ ಆಮಿಷವೊಡ್ಡಿ ಮಾನಭಂಗಕ್ಕೆ ಯತ್ನ: ಆರೋಪಿ ಬಂಧನ
ಐಸ್ ಕ್ರೀಂ ಆಮಿಷವೊಡ್ಡಿ ಮಾನಭಂಗಕ್ಕೆ ಯತ್ನ: ಆರೋಪಿ ಬಂಧನ

ಐಸ್ ಕ್ರೀಂ ಆಮಿಷವೊಡ್ಡಿ ಶಾಲಾ ಬಾಲಕಿಯ ಮಾನಭಂಗಕ್ಕೆ ಐಸ್ಕ್ರೀಂ ವ್ಯಾಪಾರಿಯನ್ನು ಮೂಡುಬಿದಿರೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಬಂಧಿತ ಆರೋಪಿ ಪುಚ್ಚೆಮೊಗರಿನ ಫಾರೂಕ್(26)ಎಂದು ತಿಳಿದುಬಂದಿದೆ. ವಿವಾಹಿತನಾಗಿರುವ ಈತನಿಗೆ ಇಬ್ಬರು ಮಕ್ಕಳಿದ್ದಾರೆ. ಈತ ಬಂಟ್ವಾಳದ ಶೆಟ್ಟಿ ಐಸ್ ಕ್ರೀಂ ರಿಕ್ಷಾ ಟೆಂಪೊದಲ್ಲಿ ಲೈನ್ ಸೇಲ್ ಮಾಡುತ್ತಿದ್ದ.

ಮಾಸ್ತಿಕಟ್ಟೆ-ವಿದ್ಯಾಗಿರಿ ರಸ್ತೆಯಲ್ಲಿ ಕಾರಿಗೆ ಬೆಂಕಿ
ಮಾಸ್ತಿಕಟ್ಟೆ-ವಿದ್ಯಾಗಿರಿ ರಸ್ತೆಯಲ್ಲಿ ಕಾರಿಗೆ ಬೆಂಕಿ

ಮಾಸ್ತಿಕಟ್ಟೆ-ವಿದ್ಯಾಗಿರಿ ರಸ್ತೆಯಲ್ಲಿರುವ ಪುರಸಭಾ ವ್ಯಾಪ್ತಿಯ ನೆಲ್ಲಿಗುಡ್ಡೆಯಲ್ಲಿ ಟಾಟ ಇಂಡಿಕಾ ಕಾರಿನಲ್ಲಿ ಶನಿವಾರ ಬೆಳಿಗ್ಗೆ ತಾಂತ್ರಿಕ ದೋಷದಿಂದ ಬೆಂಕಿ ಕಾಣಿಸಿಕೊಂಡಿದ್ದು, ಕಾರು ಭಸ್ಮವಾಗಿದೆ.

ಮಾನಭಂಗ ಯತ್ನ: 10 ವರ್ಷದ ಬಳಿಕ ಆರೋಪಿ ಬಂಧನ
ಮಾನಭಂಗ ಯತ್ನ: 10 ವರ್ಷದ ಬಳಿಕ ಆರೋಪಿ ಬಂಧನ

ಬೆಳುವಾಯಿ ಕಾನ ಎಂಬಲ್ಲಿ 2004ರಂದು ವಿವಾಹಿತ ಮಹಿಳೆಯ ಮಾನಭಂಗಕ್ಕೆತ್ನಿಸಿ ತಲೆಮರೆಸಿಕೊಂಡಿದ್ದ ಕಾರ್ಕಳ ನಂದಳಿಕೆ ಗೋಳಿಕಟ್ಟೆಯ ರಾಘು ಹರಿಜನ ಎಂಬಾತನನ್ನು ಮೂಡುಬಿದಿರೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

Suvarna News 24X7 Live online
333 Album