ಯುವಜನತೆ ರಾಜಕೀಯ ಪ್ರವೇಶದಿಂದ ದೇಶ ಮುನ್ನಡೆ: ಸುಬ್ರಹ್ಮಣ್ಯನ್ ಸ್ವಾಮಿ 

ಮೂಡುಬಿದಿರೆ: ವಿದೇಶದಲ್ಲಿ ವಿದ್ಯಾವಂತ ಯುವಜನತೆಯು ರಾಜಕೀಯಕ್ಕೆ ಬರುತ್ತಿರುವುದರಿಂದ ಅಲ್ಲಿ ರಾಜಕೀಯ ಸುಧಾರಣೆಯಾಗಿದೆ. ಭಾರತದಲ್ಲಿ ಸ್ವಪ್ರತಿಷ್ಠೆ, ಜಾತಿರಾಜಕರಣದಿಂದ ರಾಜಕೀಯ ಕ್ಷೇತ್ರ ನಲುಗುತ್ತಿದೆ. ಪ್ರಜ್ಞಾವಂತ ಯುವಕರು ರಾಜಕೀಯವನ್ನು ಪ್ರವೇಶಿಸಿದರೆ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬಹುದು. ರಾಜಕಾರಣಿಗಳಲ್ಲಿನ ಬದ್ಧತೆ ಹಾಗೂ ಯುವಕರ ರಾಜಕೀಯ ಸಮರ್ಥ ನಿರ್ವಹಣೆಯಿಂದ ಪಾರದರ್ಶಕತೆ ಉಳಿಸಿಕೊಳ್ಳಲು ಸಾಧ್ಯ ಎಂದು ಆರ್ಥಿಕ ತಜ್ಞ, ಬಿಜೆಪಿ ನಾಯಕ ಡಾ. ಸುಬ್ರಹ್ಮಣ್ಯನ್ ಸ್ವಾಮಿ ಅಭಿಪ್ರಾಯಪಟ್ಟರು. 

 

 

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ರೋಸ್ಟ್ರಮ್ ಸ್ಪೀಕರ್ಸ್ ಕ್ಲಬ್ ವತಿಯಿಂದ ಮಿಜಾರಿನ ಕ್ಯಾಂಪಸ್‍ನಲ್ಲಿ ನಡೆದ `ರಾಜಕೀಯ ಹಾಗೂ ರಾಷ್ಟ್ರೀಯ ಬೆಳವಣಿಗೆ’ ಕುರಿತು ಅವರು ಶನಿವಾರ ಉಪನ್ಯಾಸ ನೀಡಿದರು. ಬಳಿಕ ಸಂವಾದದಲ್ಲಿ ಪಾಲ್ಗೊಂಡರು.

 

 

ಏಕತೆಯಿಂದ ದೇಶ ಪ್ರಗತಿ:

ಉದ್ಯೋಗಕ್ಕೋಸ್ಕರ ಶಿಕ್ಷಣವನ್ನು ಪಡೆಯದೆ, ರಾಷ್ಟ್ರೀಯ ಚಿಂತನೆ, ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ದೇಶಕ್ಕೆ ಕೊಡುಗೆ ನೀಡುವತ್ತಲೂ ಪ್ರಯತ್ನಗಳಾಗಬೇಕು. ರಾಜಕೀಯದಲ್ಲಿ ಯುವಕರಿಗೆ ವಿಫುಲ ಅವಕಾಶವಿದೆ. ಮಾನಸಿಕ ಹಾಗೂ ದೈಹಿಕ ಸದೃಢತೆಯಿದ್ದರೆ ಹಿರಿಯ ನಾಯಕರು ಕೂಡ ರಾಜಕೀಯದಲ್ಲಿ ಮುನ್ನಡೆಯುವುದರಲ್ಲಿ ತಪ್ಪಿಲ್ಲ. ಮೇಲ್ಜಾತಿ-ಕೆಳಜಾತಿ ಎಂಬ ವಿಂಗಡೆಗಳು ಇಂದಿಗೂ ಜೀವಂತವಾಗಿದ್ದು, ದೇಶದ ಅಭಿವೃದ್ಧಿಗೆ ಮಾರಕವಾಗಿದೆ. ಏಕತೆಯಿದ್ದರೆ ದೇಶ ಪ್ರಗತಿಯಾಗುತ್ತದೆ. ಉಗ್ರವಾದವನ್ನು ಮಟ್ಟಹಾಕಿ ದೇಶ ರಕ್ಷಿಸಲು ಸರ್ಕಾರ ಬದ್ಧವಾಗಿದೆ ಎಂದರು. 

 

 

ಮಸೀದಿ, ಚರ್ಚ್ ಕೆಡವಲಿರುವ ಅವಕಾಶ: 

ಪಾಕಿಸ್ತಾನ, ಕತಾರ್, ಸೌದಿ ಅರಬೀಯ ಮೊದಲಾದ ಮುಸ್ಲಿಂ ದೇಶಗಳಲ್ಲಿ ಮಾತ್ರವಲ್ಲದೆ ಮಹಮ್ಮದ್ ಪೈಗಂಬರ್ ಪ್ರಾರ್ಥನೆ ಮಾಡಿದ ಮಸೀದಿಯನ್ನು ಅಭಿವೃದ್ಧಿ ಕಾರ್ಯದ ಹಿನ್ನಲೆಯಲ್ಲಿ ಮಸೀದಿಗಳನ್ನು ಕೆಡವಲಾಗಿದೆ. ಈ ವಿಚಾರದ ಕುರಿತು ಸಂಬಂಧಪಟ್ಟವರೊಂದಿಗೆ ವಿಷಯಗಳನ್ನು ಸಂಗ್ರಹಿಸಿದ್ದೇನೆ. ಅಧ್ಯಯನವನ್ನೂ ಮಾಡುತ್ತಿದ್ದೇನೆ. ಮಸೀದಿಯಿರುವ ಸ್ಥಳಗಳಲ್ಲಿ ಅನಿವಾರ್ಯವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕಾದ ಸಂದರ್ಭ ಬಂದಾಗ ಅವುಗಳನ್ನು ಕೆಡವಿ, ಬೇರೆಡೆ ಸ್ಥಾಪಿಸಬಹುದೆಂಬ ಒಮ್ಮತವಾದ ಅಭಿಪ್ರಾಯಗಳೂ ಅವರಿಂದ ವ್ಯಕ್ತವಾಗಿದೆ. 

 

 

 

ಅಮೇರಿಕದಲ್ಲಿ ಮಾರಾಟಕ್ಕಿದ್ದ ಚರ್ಚ್ ಒಂದನ್ನು ವಿ.ಹಿ.ಪಂ ಪಡೆದು, ಅಲ್ಲಿ ದೇವಸ್ಥಾನ ನಿರ್ಮಿಸಿದೆ. ಲಂಡನ್ ಚರ್ಚ್ ಒಂದರ ನಿರ್ವಹಣೆ ಕಷ್ಟವಾಗಿ, ಮಾರಾಟ ಸಂದರ್ಭದಲ್ಲಿ ಪಡೆದವರು ಅದನ್ನು ಬಾರ್ ಆಗಿ ಪರಿವರ್ತಿಸಿದ್ದಾರೆ. ದೇವಸ್ಥಾನಗಳಲ್ಲಿ ಪ್ರಾಣ ಪ್ರತಿಷ್ಠೆ ಮಾಡಿ ಆರಾಧಿಸುವುದರಿಂದ ಅವುಗಳನ್ನು ಕೆಡವುದು ಸಮಂಜಸವಲ್ಲ. ಇದನ್ನೇ ನಾನು ಗುಹಟಿಯಲ್ಲಿ ಹೇಳಿದ್ದು, ಆದರೆ ಮಾಧ್ಯಮಗಳು ತಪ್ಪಾಗಿ ಬಿಂಬಿಸಿದೆ. ಮಾಧ್ಯಮಗಳು ಸತ್ಯಶೋಧನೆ ಮಾಡಬೇಕು.ನ್ಯಾಯಾಲಯದಲ್ಲಿ ಈ ಬಗ್ಗೆ ಉತ್ತರ ನೀಡಿದ್ದೇನೆ. ನನ್ನ ವಿಚಾರದ ಬಗ್ಗೆ ಆಕ್ಷೇಪವಿದಲ್ಲಿ ಮುಕ್ತವಾಗಿ ಸಂವಾದ ನಡೆಯಲು ಸಿದ್ಧನಿದ್ದೇನೆ.

 

 

 

 

 

 

 

ಸಂಸ್ಕೃತ ಭಾಷೆಗೆ ವಿಶ್ವ ಮಾನ್ಯತೆ

ಸಂಸ್ಕೃತ ಭಾಷೆ ಹಲವಾರು ಭಾಷೆಗಳಿಗೆ ಮೂಲವಾಗಿದೆ. ನಾಸಾ ಬಾಹ್ಯಕಾಶ ಸಂಸ್ಥೆಯ ವಿಜ್ಞಾನಿಗಳು ಸಂಸ್ಕೃತ ಭಾಷೆಯನ್ನು ಅಧ್ಯಯನ ಮಾಡುತ್ತಾರೆ. ಸಂಸ್ಕøತ ವಿಶ್ವವ್ಯಾಪಿಯಾಗಿದೆ. ಸಂಸ್ಕೃತ ಕಲಿಯುವುದರಿಂದ ಉನ್ನತ ಮೌಲ್ಯಗಳನ್ನು ನಮ್ಮೊಳಗೆ ಬೆಳೆಸಿಕೊಳ್ಳಬಹುದು.  ಇತಿಹಾಸವನ್ನು ತಿರುಚಿ ಹೇಳುವ, ಜನರಿಗೆ ತಪ್ಪು ಮಾಹಿತಿ ನೀಡುವ ಪುಸ್ತಕಗಳನ್ನು ಬಹಿಷ್ಕರಿಸುವ ಮುಕ್ತ ಅವಕಾಶ ಭಾರತೀಯರಿಗಿದೆ ಎಂದರು. 

 

ಜಗದೀಶ್ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್, ಆಳ್ವಾಸ್ ಪದವಿ ಕಾಲೇಜು ಪ್ರಾಂಶುಪಾಲ ಡಾ.ಕುರಿಯನ್ ಉಪಸ್ಥಿತರಿದ್ದರು. ರೊಸ್ಟ್ರಮ್ ಸಂಚಾಲಕ ರವೀಂದ್ರ ಶೆಣೈ ಕಾರ್ಯಕ್ರಮ ನಿರೂಪಿಸಿದರು. 

Write your Comments on this Article
Your Name
Place
Your E-mail
Your Comment   You have characters left.
Security Validation
Enter the security validation code as displayed above:
    
Disclaimer: Kindly do not post any abusive, defamatory, infringing, obscene, indecent, discriminatory or unlawful material or SPAM. Editor reserves the right to block/ remove without notice any content received from users.
Suvarna News 24X7 Live online
333 Album