ಗಂಜಿಮಠ: ಸಜೀವ ಪೆಟ್ರೋಲ್ ಬಾಂಬ್, ಮಾರಕಾಸ್ತ್ರಗಳು ಪತ್ತೆ 

ಕೈಕಂಬ: ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಕೈಕಂಬ ಸಮೀಪದ ಗಂಜಿಮಠದ ಪೂಂಜಾ ಟೈಲ್ಸ್ ಪ್ಯಾಕ್ಟರೀಯ ಎದುರುಗಡೆ ಅಪರ್ಟ್‍ಮೆಂಟ್ ಬಳಿ ಎಂಟು ಸಜೀವ ಪೆಟ್ರೋಲ್ ಬಾಂಬ್‍ಗಳು ಮಾರಕಾಸ್ತ್ರಗಳೊಂದಿಗೆ ಪತ್ತೆಯಾಗಿದ್ದು ಭಾರೀ ಸಂಚಲನ ಉಂಟು ಮಾಡಿದೆ.

 

 

 

ಗಂಜಿಮಠದ ಏರ್‍ಟೆಲ್  ಮೊಬೈಲ್ ಟವರ್‍ನ ಬಳಿಯಲ್ಲಿ ಈ ಕಚ್ಚಾ ಬಾಂಬ್ ಹಾಗೂ ತಲವಾರ್‍ಗಳು ಪತ್ತೆಯಾಗಿದೆ. ಸ್ಥಳೀಯ ನಿವಾಸಿ ಅಬ್ದುಲ್ ಖಾದರ್‍ರವರ ಬಾಡಿಗೆದಾರರಾದ ಅಜೀಬ್ ನಜೀಬ್‍ರವರ ಪತ್ನಿ ನಿನ್ನೆ ರಾತ್ರಿ ಸುಮಾರು 9 ಗಂಟೆಗೆ ಮನೆಯ ಕಸವನ್ನು ಬಿಸಾಡಲು ಮೊಬೈಲ್ ಟವರ್ ಬಳಿ ಬಂದಾಗ ಹಳದಿ ಬಣ್ಣದ ಗೋಣಿಚೀಲವೊಂದು ಇದ್ದುದನ್ನು ಗಮಿಸಿದ್ದರು. ಸಂಶಯಗೊಂಡು ಅದನ್ನು ತೆರೆದಾಗ ಸಜೀವ ಬಾಂಬ್ ಸಹಿತ ತಲವಾರು ಕಂಡು ಬಂದಿತ್ತು. ತಕ್ಷಣ ಅವರು ತನ್ನ ಪತಿಗೆ ವಿಷಯ ತಿಳಿಸಿದಾಗ ಅವರು ಕೂಡಲೆ ಬಜಪೆ ಪೊಲೀಸರಿಗೆ ಮಾಹಿತಿ ನೀಡಿದರು ಎಂದು ಠಾಣೆಯಲ್ಲಿ ಅಜೀಬ್ ನಜೀಬ್ ಹೇಳಿಕೆ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು 8 ಪೆಟ್ರೋಲ್ ತುಂಬಿದ್ದ ಬಾಟ್ಲಿ ಹಾಗೂ ಅದರ ಮುಚ್ಚಳದ ಭಾಗದಲ್ಲಿ ಬಟ್ಟೆಯ ಆಧಾರದಲ್ಲಿ ಸಿಡಿಯುವಂತೆ ಮಾಡುವ ಕಚ್ಚಾ ಬಾಂಬ್‍ಗಳ ರೂಪದಲ್ಲಿ ಅದು ಪತ್ತೆಯಾಗಿದ್ದು ಎರಡು ಉದ್ದದ ಕಬ್ಬಣದ ತಲವಾರುಗಳು ಜೊತೆಯಲ್ಲಿದ್ದವು ಅದನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಂಗಳೂರು ಪೊಲೀಸ್ ಆಯುಕ್ತ ಎಸ್.ಮುರುಗನ್ ಸ್ಥಳಕ್ಕೆ ಭೇಟಿ ನೀಡಿ ಮಾರ್ಗದರ್ಶನ ನೀಡಿದ್ದಾರೆ. ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಅಜೀಬ್ ನಜೀಬ್ ಎಂಬವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

 

 

 

 

 

 

 

ಕಿಡಿಗೇಡಿಗಳು ವ್ಯವಸ್ಥಿತವಾದ ದುಷ್ಕøತ್ಯವನ್ನು ನಡೆಸಲು ಈ ಅಕ್ರಮವಾಗಿ ಸಜೀವ ಬಾಂಬ್‍ಗಳನ್ನು ಜನ ಸಂಚಾರ ವಿರದ ಈ ಪ್ರದೇಶದಲ್ಲಿ ಅಡಗಿಸಿಲ್ಲಿಟ್ಟಿರಬಹುದು ಎನ್ನಲಾಗಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮು ಗಲಭೆ ಇನ್ನಿತರ ಅಹಿತಕಾರಿ ಆತಂಕವನ್ನು ಸೃಷ್ಟಿಸಲು ಈ ಕಚ್ಚಾ ಬಾಂಬ್‍ಗಳ ತಯಾರಿ ನಡೆಸಿರಬಹುದು ಎಂದು ಪೊಲೀಸರು ಸಂಶಯಿಸಿದ್ದು ರಾತ್ರಿ ಸಮಯದಲ್ಲಿ ಕೈಕಂಬ ಮೂಡಬಿದಿರೆ ಹಾಗೂ ಗುರುಪುರ ಮಾರ್ಗದಲ್ಲಿ ಸಂಚರಿಸಿರುವ ವಾಹನಗಳ ದಾಖಲೆಯನ್ನು ಪರಿಶೀಲಿಸುತ್ತಿದ್ದಾರೆ. ಈ ಕಚ್ಚಾ ಬಾಂಬ್‍ಗಳ ಅಕ್ರಮಕ್ಕೆ ಸ್ಥಳೀಯರ ಸಹಾಯವಿದೆ ಎಂಬ ಸಂಶಯದಲ್ಲಿ ತನಿಖೆಯನ್ನು ನಡೆಸುತ್ತಿರುವ ಪೊಲೀಸರು ಈ ಪ್ರದೇಶದ ಸಂಪೂರ್ಣ ಪರಿಚಯ ಇರುವವರೇ ಇಂತಹ ಕೃತ್ಯದಲ್ಲಿ ಭಾಗಿಯಾಗಿರಬಹುದು ಅಲ್ಲದೇ ಅಪರಾಧ ಪ್ರಕರಣದಲ್ಲಿ ಭಾಗಿಯಾದವರ ವಿವರವನ್ನು ಪೊಲೀಸರು ಪರಿಶೀಲಿಸುತ್ತಿದ್ದು ಇದರಲ್ಲಿ ಯಶಸ್ಸಾದರೆ ನಿಜಾಂಶ ಹಾಗೂ ಎಲ್ಲಿಗೆ ಬಳಸಲು ಉದ್ದೇಶಿಸಿರಬಹುದು ಎಂದು ಬಯಲಾಗಿದೆ. ಸ್ಥಳೀಯ ಗ್ರಾಮ ಪಂ. ಮಾಜಿ ಅಧ್ಯಕ್ಷ ಅಬ್ದುಲ್ ಮಜೀದ್ ಅವರು ವರದಿಗಾರರೊಂದಿಗೆ ಮಾತಾಡಿ ಇಲ್ಲಿ ಯಾವುದೆ ಗಲಾಟೆ ಅಕ್ರಮ ವ್ಯವಾಹಾರ ನಡೆಯುವುದಿಲ್ಲ ಇಲ್ಲಿ ಎಲ್ಲಾ ಸಮುದಾಯದವರು ಸಹಬಾಳ್ವೆಯಲ್ಲಿ ಇದ್ದು ಯಾವುದೇ ಅಹಿತಕರ ಘಟನೆಗೆ ಪ್ರೋತ್ಸಾಹಿಸುವುದಿಲ್ಲ  ಎಂದರು.

Write your Comments on this Article
Your Name
Place
Your E-mail
Your Comment   You have characters left.
Security Validation
Enter the security validation code as displayed above:
    
Disclaimer: Kindly do not post any abusive, defamatory, infringing, obscene, indecent, discriminatory or unlawful material or SPAM. Editor reserves the right to block/ remove without notice any content received from users.
Suvarna News 24X7 Live online
333 Album