ಏ.4-5: ಮೂಡುಬಿದಿರೆಯಲ್ಲಿ ಅಟೋಕ್ರಾಸ್ 15 

ಮೂಡುಬಿದಿರೆ: ತ್ರಿಭುವನ್ ಅಟೋ ಮೋಟಿವ್ ಸ್ಪೋರ್ಟ್ಸ್ ಕ್ಲಬ್ , ಬೆದ್ರ ಅಡ್ವೆಂಚರ್ ಕ್ಲಬ್ , ಜೇಸೀಐ, ಇಂಡಿಯನ್ ಮೊಟಾರ್ ಸ್ಪೋರ್ಟ್ಸ್ ಕ್ಲಬ್ಇವರ ಸಂಯುಕ್ತ ಆಶ್ರಯದಲ್ಲಿ ಅಟೋಕ್ರಾಸ್ 15, ಮತ್ತು ಅಟೋ ಎಕ್ಸಪೋ ಮೋಟಾರ್ ಸ್ಪೋರ್ಟ್ಸ್ ಮೀಟ್ ಹಾಗೂ ಮೋಟಾರ್ ಶೋ ಏ. 4 ಮತ್ತು 5ರಂದು ಕಲ್ಲಬೆಟ್ಟು ಮಾರಿಗುಡಿ ಬಳಿಯ ಪಂಚರತ್ನ ಮೈದಾನದಲ್ಲಿ ನಡೆಯಲಿದೆ.

 

 

ತ್ರಿಭುವನ್ ಅಟೋ ಮೊಬೈಲ್ ಸ್ಪೋಟ್ರ್ಸ್ ಕ್ಲಬ್‍ನ ಸ್ಪರ್ಧಾ ಸಂಚಾಲಕ ಅಭಿಜಿತ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ಸ್ಪರ್ಧೆಯನ್ನು ರಾಜ್ಯ ಯುವಜನ ಸೇವೆ, ಕ್ರೀಡೆ  ಮತ್ತು ಮೀನುಗಾರಿಕೆ ಸಚಿವ ಕೆ.ಅಭಯಚಂದ್ರ ಜೈನ್ ಉದ್ಘಾಟಿಸಲಿದ್ದಾರೆ. ದ್ವಿಚಕ್ರ ಮತ್ತು ಚತುಶ್ಚಕ್ರವಾಹನಗಳ ಈ ರೇಸ್ ಸ್ಪರ್ಧೆ ವಿವಿಧ ವಿಭಾಗಗಳಲ್ಲಿ ನಡೆಯಲಿದೆ. ಪ್ರತಿಷ್ಠಿತ ದ್ವಿಚಕ್ರ ಮತ್ತು ಚತುಶ್ಚಕ್ರವಾಹನಗಳ ಉತ್ಪಾದಕ ಕಂಪೆನಿಗಳವರು, ಹಣಕಾಸು ನೆರವಿನ ಸಂಸ್ಥೆಗಳು, ಉತ್ಪನ್ನಗಳ ಪ್ರದರ್ಶನ, ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಎ4 ರ ಅಪರಾಹ್ನ 3ರಿಂದ ಕೋಸ್ಟಲ್ ಬೈಕರ್ಸ್ ಅವರ ಸೂಪರ್ ಬೈಕ್ ಶೋ, ಮೈಸೂರಿನ ಎಕ್ಸ್‍ರೈಡರ್ಸ್ ಅವರಿಂದ ಬೈಕ್ ಸ್ಟಂಟ್ ನಡೆಯಲಿದೆ. 

 

250ಕ್ಕೂ ಅಧಿಕ ಮಂದಿ ಸ್ಪರ್ಧಿಗಳು, 30 ಸಾವಿರಕ್ಕೂ ಅಧಿಕ ಪ್ರೇಕ್ಷಕರ ನಿರೀಕ್ಷೆ ಇದೆ . ಕಳೆದ ಸಾಲಿನ ರಾಷ್ಟ್ರೀಯ ಚಾಂಪಿಯನ್ ಕೆ.ಪಿ. ಅರವಿಂದ್ ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವುದು ಆಕರ್ಷಣೆ ಎಂದವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕುಲದೀಪ್ ಚೌಟರ ಅರಮನೆ, ಪ್ರತಾಪ್ ಕುಮಾರ್, ಜೇಸೀ ಅಧ್ಯಕ್ಷ ಧಿರೇಂದ್ರ, ಹಮೀದ್ ಉಪಸ್ಥಿತರಿದ್ದರು. 

Write your Comments on this Article
Your Name
Place
Your E-mail
Your Comment   You have characters left.
Security Validation
Enter the security validation code as displayed above:
    
Disclaimer: Kindly do not post any abusive, defamatory, infringing, obscene, indecent, discriminatory or unlawful material or SPAM. Editor reserves the right to block/ remove without notice any content received from users.
Suvarna News 24X7 Live online
333 Album