ಅಟೋಕ್ರಾಸ್-15: ಬೈಕ್, ಕಾರು ರೋಚಕ ರೇಸ್



 

ಮೂಡುಬಿದಿರೆ ತ್ರಿಭುವನ್ ಅಟೋ ಮೋಟಿವ್ ಸ್ಪೋಟ್ರ್ಸ್ ಕ್ಲಬ್ , ಬೆದ್ರ ಅಡ್ವೆಂಚರ್ ಕ್ಲಬ್ , ಜೇಸೀಐ, ಇಂಡಿಯನ್ ಮೊಟಾರ್ ಸ್ಪೋಟ್ರ್ಸ್ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ  ಸಾಹಸ ಕ್ರೀಡೆ ಅಟೋಕ್ರಾಸ್-15 ದ್ವಿಚಕ್ರ ಮತ್ತು ಕಾರಿನ ವಿವಿಧ ವಿಭಾಗಗಳ ಡರ್ಟ್‍ಟ್ರ್ಯಾಕ್ ರೇಸ್  ಕಲ್ಲಬೆಟ್ಟು ಮಾರಿಗುಡಿ ಬಳಿಯ  ಪಂಚರತ್ನ ಮೈದಾನದಲ್ಲಿ ಎರಡು ದಿನಗಳ ಕಾಲ ಯಶಸ್ವಿಯಾಗಿ ನಡೆಯಿತು.

 

 

2 ಸ್ಟ್ರೋಕ್, 4 ಸ್ಟ್ರೋಕ್, ಸ್ಕೂಟರ್ ವಿಭಾಗದಲ್ಲಿ ಬೈಕ್ ರೈಡ್ ಸ್ಪರ್ಧೆ ಮತ್ತು ಡರ್ಟ್ ಟ್ರ್ಯಾಕ್‍ನಲ್ಲಿ 800ಸಿಸಿ, 1300, 1400 ಮತ್ತು ಲೋಕಲ್ ಕ್ಲಾಸ್ ವಿಭಾಗದಲ್ಲಿ ಕಾರು ರೇಸ್ ನಡೆದಿದ್ದು  ಬೆಂಗಳೂರು, ಕೊಡಗು, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಬಂದಿರುವ ಸ್ಪರ್ಧಿಗಳು ಗಮನ ಸೆಳೆದರು. ಬೈಕ್ ವಿಭಾಗದಲ್ಲಿ 60ಕ್ಕೂ ಅಧಿಕ ಮಂದಿ ಕಾರು ರೇಸ್ ವಿಭಾಗದಲ್ಲಿ 100ಕ್ಕೂ ಅಧಿಕ ಮಂದಿ ಸಾಹಸಿ  ಸ್ಪರ್ಧಿಗಳು ಭಾಗವಹಿಸಿ ಥ್ರಿಲ್ ನೀಡಿದರು. ಶ್ರೇಷ್ಟ ಗುಣಮಟ್ಟದ ರೈಡರ್ಸ್‍ಗಳ ಜತೆಗೆ ಸ್ಪರ್ಧೆ ನಡೆಸುವುದು ಕಷ್ಟ ಎಂಬ ಕಾರಣಕ್ಕೆ ಸ್ಥಳೀಯರಿಗೆ ವಿಶೇಷವಾಗಿ ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆ  ನಡೆಸಲಾಯಿತು ಅಲ್ಲದೆ ಜಿಲ್ಲೆಯ ತಜ್ಞ ರೈಡರ್ಸ್‍ಗಳಿಗೆ ಎಕ್ಸ್‍ಪರ್ಟ್ ಕ್ಲಾಸ್ ವಿಭಾಗದಲ್ಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಬುಲೆಟ್ ರೇಸ್ ಮತ್ತು ಮಹಿಳೆಯರ ವಿಭಾಗದ ಕಾರು ರೇಸ್ ಕೂಡಾ ನಡೆದಿದ್ದು ಕಿರುತೆರೆಯ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದ ಹರ್ಷಿತಾ ಕಾರು ರೇಸ್‍ನಲ್ಲಿ ಸ್ಪರ್ಧಿಸಿ ಗಮನ ಸೆಳೆದರು. ತ್ರಿಭುವನ್ ಅಟೋ ಮೊಬೈಲ್ ಸ್ಪೋಟ್ರ್ಸ್ ಕ್ಲಬ್‍ನ ಸ್ಪರ್ಧಾ ಸಂಚಾಲಕ ಅಭಿಜಿತ್,  ಕುಲದೀಪ್ ಚೌಟರ ಅರಮನೆ, ಪ್ರತಾಪ್ ಕುಮಾರ್, ಜೇಸೀ ಅಧ್ಯಕ್ಷ ಧಿರೇಂದ್ರ, ಹಮೀದ್ ಮತ್ತು ಬೆದ್ರ ಅಡ್ವಂಚರ್ಸ್‍ನ ಅಕ್ಷಯ್.ಕೆ.ಜೈನ್, ಚೆಂಗಪ್ಪ ಎಡಿ ಉಪಸ್ಥಿತರಿದ್ದರು.

 

 

ಸಾರ್ವಜನಿಕ ಸ್ಥಳಗಳಲ್ಲಿ ಬೈಕ್‍ನಲ್ಲಿ ಸಾಹಸ ಮಾಡುವ ಬದಲು ಇಂತಹ ಟ್ರ್ಯಾಕ್‍ನಲ್ಲಿ ಸಾಹಸಕ್ಕೆ ಕೈ ಹಾಕಿ. ಇಂತಹ ಟ್ರ್ಯಾಕ್‍ನಲ್ಲಿ ಸುರಕ್ಷತೆಗೆ ಮತ್ತು ಸ್ಟಂಟ್‍ಗೆ ಅವಕಾಶವಿದೆ. ಬೈಕ್ ರೈಡಿಂಗ್ ಸ್ಪರ್ಧೆ ಜನರಿಗೂ ಮುದ ನೀಡುತ್ತದೆ ಹೀಗಾಗಿ ರಸ್ತೆಯಲ್ಲಿ ಸ್ಟಂಟ್ ಮಾಡಿ ತಮಗೂ ಸಾರ್ವಜನಿಕರಿಗೂ ತೊಂದರೆ ಮಾಡುವ ಬದಲು ಸ್ಟಂಟ್ ಪ್ರದರ್ಶನಕ್ಕೆ ಇದು ಉತ್ತಮ ವೇದಿಕೆ 

-ಅಶ್ವಿನ್ ನಾಯಕ್ 

ಇಂಡಿಯನ್ ಮೋಟರ್ಸ್ ಸ್ಪೋಟ್ರ್ಸ್ ಕ್ಲಬ್‍ನ ಪಾಲುದಾರ 

 

 

 

 

 

 

 

 

 

 

 

ಬ್ಯಾರಿಕೇಡ್ ಹಾಕಿ  ಸಾರ್ವಜನಿಕರಿಗೆ ದೂರದಿಂದ ಸ್ಪರ್ಧೆಯನ್ನು ನೋಡುವಂತಹ ಅವಕಾಶವನ್ನು ಕಲ್ಪಿಸಿದ್ದಾರೆ. ಇಲ್ಲಿ ಟ್ರ್ಯಾಕ್ ಚಾಲೆಂಜಿಂಗ್ ಮತ್ತು ಥ್ರಿಲ್ ಆಗಿದೆ. ಬೇರೆ ಕಡೆಗಳಲ್ಲಿ ನಡೆಯುವ ಸ್ಪರ್ಧೆಗಳಿಗಿಂತ ಇಲ್ಲಿ ನಡೆದ ಸ್ಪರ್ಧೆ ಉತ್ತಮವಾಗಿದೆ ಅಲ್ಲದೆ ಸಂಘಟಕರು ಉತ್ತಮ ರೀತಿಯಲ್ಲಿ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ ಇದರಿಂದಾಗಿ ರೈಡರ್‍ಗಳು ತನ್ಮಯತೆಯಿಂದ ಭಾಗವಹಿಸಿದ್ದಾರೆ. 

-ಕೆ.ವಿ.ಅರವಿಂದ್ 

ರಾಷ್ಟ್ರೀಯ ಚಾಂಪಿಯನ್


 

 

 

 

 

 

 

 

 

 

 

 

 

 

 

 

 

 

 

 

 

 

 

 

 

 





Write your Comments on this Article
Your Name
Place
Your E-mail
Your Comment   You have characters left.
Security Validation
Enter the security validation code as displayed above:
    
Disclaimer: Kindly do not post any abusive, defamatory, infringing, obscene, indecent, discriminatory or unlawful material or SPAM. Editor reserves the right to block/ remove without notice any content received from users.
Suvarna News 24X7 Live online
333 Album