ಮೂಡುಬಿದಿರೆ ಹೋಬಳಿ ಪಂಚಾಯಿತಿ ತೆರಿಗೆ ವಸೂಲಾತಿ ಸುಧಾರಣೆ 

ಯಶೋಧರ ವಿ.ಬಂಗೇರ: 

ಮೂಡುಬಿದಿರೆ: ಗ್ರಾಮ ಪಂಚಾಯಿತಿಗಳನ್ನು ಸ್ವಾವಲಂಬಿಯಾಗಿಸುವ ತೆರಿಗೆ ವಸೂಲಾಯಿತಿಯಲ್ಲಿ ಮೂಡುಬಿದಿರೆ ಹೋಬಳಿಯ ಪಂಚಾಯಿತಿಗಳು 2013-14 ಸಾಲಿಗಿಂತ 2014-15ರಲ್ಲಿ ಸುಧಾರಣೆಯನ್ನು ಕಂಡಿದೆ. ಮೂಡುಬಿದರೆ 10 ಗ್ರಾ.ಪಂ.ಗಳಲ್ಲಿ 2014-15ರಲ್ಲಿ 78,15,635 ತೆರಿಗೆ ಹಣ ಸಂಗ್ರಹಣೆಯಾಗಿದೆ. 

 

 

2013-14ರಲ್ಲಿ ಶೇ.85 ತೆರಿಗೆ ವಸೂಲಾತಿ ಮಾಡಿರುವ ಪುತ್ತಿಗೆ ಗ್ರಾ.ಪಂ. 14-15ರಲ್ಲಿ ದಾಖಲೆಯ ಗರಿಷ್ಠ ಶೇ 97 ತೆರಿಗೆ ವಸೂಲಾತಿಯ ಮೂಲಕ ಹೋಬಳಿಯಲ್ಲೇ ಮುಂಚೂಣಿಯಲ್ಲಿದೆ. 2013-14 ಆರ್ಥಿಕ ವರ್ಷದಲ್ಲಿ 15,87,155 ತೆರಿಗೆ ವಸೂಲಾತಿ ನಿರೀಕ್ಷೆಯಲ್ಲಿದ್ದ ಪುತ್ತಿಗೆ ಗ್ರಾ.ಪಂ 15,46,918 ರೂ.ಗಳನ್ನು ವಸೂಲಾತಿ ಮಾಡುವಲ್ಲಿ ಯಶಸ್ವಿಯಾಗಿದೆ. 2013-14ರಲ್ಲಿ ಶೇ. 83 ತೆರಿಗೆ ವಸೂಲಾತಿ ಮಾಡಿದ್ದ ತೆಂಕಮಿಜಾರು ಪಂಚಾಯಿತಿ 2014-15ರಲ್ಲಿ ಶೇ.91 ತೆರಿಗೆ ವಸೂಲಾಯಿತಿಯೊಂದಿಗೆ ಹೋಬಳಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. 13-14 ಆರ್ಥಿಕ ವರ್ಷದಲ್ಲಿ 7,08,356 ವಸೂಲಾತಿಯ ಗುರಿ ಹೊಂದಿದ್ದ ತೆಂಕಮಿಜಾರು ಗ್ರಾ.ಪಂ 6,48,353 ರೂ.ಗಳ ತೆರಿಗೆಯನ್ನು ಸಂಗ್ರಹಿಸಿದೆ. ಕಲ್ಲಮುಂಡ್ಕೂರು ಗ್ರಾ.ಪಂ ಕಳೆದ ವರ್ಷ ಶೇ.59 ತೆರಿಗೆ ವಸೂಲಾತಿ ಮಾಡಿದ್ದು, ಈ ಬಾರಿ ಶೇ.90 ತೆರಿಗೆ ವಸೂಲಾತಿಯ ಮೂಲಕ ಭಾರಿ ಪ್ರಮಾಣದಲ್ಲಿ ಸುಧಾರಣೆ ಕಂಡಿದೆ. 8,75,984 ತೆರಿಗೆ ಸಂಗ್ರಹಣೆಯ ಗುರಿಯನ್ನು ಹೊಂದಿದ್ದ ಪಂಚಾಯಿತಿ 7,91,565 ರೂ.ಗಳನ್ನು ವಸೂಲು ಮಾಡಿದೆ. ಶಿರ್ತಾಡಿ ಪಂಚಾಯಿತಿಯಲ್ಲಿ ಕೂಡ ಶೇ.90 ತೆರಿಗೆ ವಸೂಲಾಗಿದೆ. 2013-14ರಲ್ಲಿ ಶೇ.60 ತೆರಿಗೆ ವಸೂಲಾತಿ ಮಾಡಿದ್ದ ಶಿರ್ತಾಡಿ ಗ್ರಾ.ಪಂ 2014-15ರಲ್ಲಿ 16,30,249 ವಸೂಲಾತಿಯ ನಿರೀಕ್ಷೆ ಹೊಂದಿದ್ದು, 14,76,053 ತೆರಿಗೆ ವಸೂಲು ಮಾಡಿದೆ.

 

 

14-15ರಲ್ಲಿ 3,58,936 ತೆರಿಗೆ ವಸೂಲಾತಿಯ ನಿರೀಕ್ಷೆಯಲ್ಲಿದ್ದ ಧರೆಗುಡ್ಡೆ ಪಂಚಾಯಿತಿ 3,05,509 ರೂ.ತೆರಿಗೆ ಸಂಗ್ರಹಿಸುವ ಮೂಲಕ ಶೇ.85 ತೆರಿಗೆ ವಸೂಲಾತಿಯನ್ನು ಮಾಡಿದೆ. ಧರೆಗುಡ್ಡೆ ಗ್ರಾ.ಪಂ.ನಲ್ಲಿ 2013-14ರಲ್ಲಿ ಶೇ.58 ತೆರಿಗೆ ವಸೂಲಾಗಿತ್ತು.  2013-14ರಲ್ಲಿ ಶೇ.59 ತೆರಿಗೆ ವಸೂಲಾತಿ ಮಾಡಿದ ಪಾಲಡ್ಕ ಹಾಗೂ ಹೊಸಬೆಟ್ಟು ಪಂಚಾಯಿತಿ ಈ ಬಾರಿ 71 ಶೇ ತೆರಿಗೆ ವಸೂಲಾತಿ ಮಾಡಿದೆ. ಕಳೆದ ವರ್ಷ ಹಾಗೂ 2014-15ರ ಸಾಲಿನಲ್ಲಿ ಎರಡೂ ಪಂಚಾಯಿತಿಗಳಿಂದ ಸಂಗ್ರಹವಾದ ತೆರಿಗೆ ಶೇಕಡವಾರು ಲೆಕ್ಕಗಳು ಒಂದೇ ರೀತಿಯಲ್ಲಿರುವುದು ವಿಶೇಷ. 4,59,624 ರೂ. ತೆರಿಗೆ ಸಂಗ್ರಹಣೆ ನಿರೀಕ್ಷೆಯಲ್ಲಿದ್ದ ಪಾಲಡ್ಕ ಪಂಚಾಯಿತಿ 3,28,470 ರೂ.ಗಳ ತೆರಿಗೆ ಸಂಗ್ರಹಣೆ ಮಾಡಿದೆ. 8,14,702 ನಿರೀಕ್ಷೆಯಲ್ಲಿ ಹೊಸಬೆಟ್ಟು ಗ್ರಾ.ಪಂ 2014-15ರಲ್ಲಿ 5,79,294 ತೆರಿಗೆ ಹಣ ಸಂಗ್ರಹಿಸಿದೆ. 

 

ಹಿಂದಿನ ವರ್ಷ 61 ತೆರಿಗೆ ವಸೂಲಾತಿಯನ್ನು 13-14ರಲ್ಲಿ ಮಾಡಿದ್ದ ಬೆಳುವಾಯಿ ಪಂಚಾಯಿತಿ ಈ ಬಾರಿ ಶೇ.68 ಮಾತ್ರ ವಸೂಲು ಮಾಡುವಲ್ಲಿ ಸಫಲವಾಗಿದೆ. 14,99,072 ರೂ. ತೆರಿಗೆ ಸಂಗ್ರಹಣೆಯ ನಿರೀಕ್ಷೆಯಲ್ಲಿದ್ದ  ಬೆಳುವಾಯಿ ಪಂಚಾಯಿತಿ 4,40,287 ತೆರಿಗೆಯನ್ನು ವಸೂಲು ಮಾಡಿದೆ. 13-14 ವರ್ಷದಲ್ಲಿ 42ರಷ್ಟು ತೆರಿಗೆ ವಸೂಲಾತಿಯನ್ನು ಮಾಡಿದ್ದ ನೆಲ್ಲಿಕಾರು ಪಂಚಾಯಿತಿ ಈ ಬಾರಿ ಶೇ.64ರಷ್ಟು ತೆರಿಗೆ ವಸೂಲಾತಿ ಮಾಡಿದೆ. 6,80,187 ತೆರಿಗೆ ನಿರೀಕ್ಷೆಯಲ್ಲಿದ್ದ ಪಂಚಾಯಿತಿ 4,40287 ರೂ.ಗಳ ತೆರಿಗೆ ಹಣ ಸಂಗ್ರಹಿಸಿದೆ. ಶೇ.61 ತೆರಿಗೆ ವಸೂಲಾತಿ ಮಾಡಿರುವ ಪಡುಮಾರ್ನಾಡು ಪಂಚಾಯಿತಿ ಮೂಡುಬಿದರೆಯ ಪಂಚಾಯಿತಿಗಳಲ್ಲಿ ಕನಿಷ್ಠ ತೆರಿಗೆ ಸಂಗ್ರಹಣೆ ಮಾಡಿದೆ. ಪಂಡುಮಾರ್ನಾಡು 2013-14ರಲ್ಲಿ ಶೇ.45 ತೆರಿಗೆ ವಸೂಲಾತಿ ಮಾಡಿತ್ತು. 10,91,026 ತೆರಿಗೆ ಸಂಗ್ರಹಿಸುವ ಗುರಿಯಿದ್ದರೂ 6,67,287 ರೂ. ತೆರಿಗೆ ಸಂಗ್ರಹಣೆಯಾಗಿದೆ. 

 

* ಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿ ತೆರಿಗೆಗಳನ್ನು ಸಕಾಲದಲ್ಲಿ ಸಂಗ್ರಹಿಸಿದಲ್ಲಿ, ಅನುದಾನದ ಕಡಿತಗೊಳುವುದನ್ನು ತಪ್ಪಿಸಬಹುದು. ತೆರಿಗೆ ಹೆಚ್ಚು ಸಂಗ್ರಹಿದಷ್ಟು ಅಭಿವೃದ್ಧಿ ಕೆಲಸಗಳಿಗೂ ಪೂರಕವಾಗುತ್ತದೆ. 

-ಉಮೇಶ್ ಎನ್.ಆರ್ 

ಉಪ ಕಾರ್ಯದರ್ಶಿ 

ದ.ಕ ಜಿಲ್ಲಾ ಪಂಚಾಯಿತಿ

Write your Comments on this Article
Your Name
Place
Your E-mail
Your Comment   You have characters left.
Security Validation
Enter the security validation code as displayed above:
    
Disclaimer: Kindly do not post any abusive, defamatory, infringing, obscene, indecent, discriminatory or unlawful material or SPAM. Editor reserves the right to block/ remove without notice any content received from users.
Suvarna News 24X7 Live online
333 Album