ಜೈನಕಾಶಿಯಲ್ಲಿ ಖಾವಂದರಿಗೆ ಅಭಿನಂದನೆ



 

Photos By: Ravi Kotian, Manasa Digital

 

ಮೂಡುಬಿದಿರೆ: ನಮ್ಮ ನಿಸ್ವಾರ್ಥ ಸೇವೆ, ಸಾವಿರಾರು ಜನರ ಶ್ರಮಕ್ಕೆ ಸರ್ಕಾರ ನೀಡುವ ರಾಜಧರ್ಮ ಶ್ರೇಷ್ಠವಾದದ್ದು. ಅದರ ಜೊತೆ ಪೌರ ಸನ್ಮಾನದ ಮೂಲಕ ಪ್ರಜೆಗಳು ತೋರಿಸುವ ಕೃತಜ್ಞತೆಯೂ ಶ್ರೇಷ್ಠವಾದದ್ದು. ಜನರ ಮನದಾಳದ ಅಭಿಮಾನ ನನ್ನನ್ನು ಮೂಕವಿಸ್ಮಿತವಾಗಿಸಿದೆ. ಇದು ಹೊಣೆಗಾರಿಕೆ ಹೆಚ್ಚಿಸಿದ್ದು ಜವಾಬ್ದಾರಿಯನ್ನು ಆಯಾಸವಿಲ್ಲದೆ ಮಾಡುವ ಚೈತನ್ಯವನ್ನು ತುಂಬಿದೆ. ಪದ್ಮಭೂಷಣ ಗೌರವದ ಜೊತೆ ಈಗ ಪದ್ಮ`ವಿ’ಭೂಷಣ ಲಭಿಸಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಪದ್ಮವಿಭೂಷಣ ಡಾ.ಡಿ ವೀರೇಂದ್ರ ಹೆಗ್ಗಡೆ ಹೇಳಿದರು. 

 

 

 

 

 

 

 

 

 

 

ಡಾ.ಡಿ ವೀರೇಂದ್ರ ಹೆಗ್ಗಡೆ ಅಭಿನಂದನ ಸಮಿತಿ ವತಿಯಿಂದ ಮೂಡುಬಿದಿರೆಯ ವಿದ್ಯಾಗಿರಿಯ ಆಳ್ವಾಸ್ ಪ್ಯಾಲೇಸ್‍ಗ್ರೌಂಡ್‍ನಲ್ಲಿ ಭಾನುವಾರ ಏರ್ಪಡಿಸಿದ ರಾಜ್ಯಮಟ್ಟದ ಅಭಿನಂದನ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ನಾನಗೂ ಪರೀಕ್ಷೆಗಳ ಬಂದಿದೆ. ಮಂಜುನಾಥ ಸ್ವಾಮಿಯ ದಯೆಯಿಂದ ಅವುಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಪೀಠದ ಯೋಗ್ಯತೆ ನನ್ನನ್ನು ಮುನ್ನಡೆಸಿದೆ ಹಾಗೂ ಭಕ್ತರನ್ನು ಕಾಯುತ್ತಿದೆ. ನಾನು ಮಂಜುನಾಥ ಸ್ವಾಮಿಯ ಆದೇಶ, ಅಣ್ಣಪ್ಪ ಸ್ವಾಮಿಯ ಅಭಯ ಹಾಗೂ ಜನರು ಧರ್ಮಸ್ಥಳದ ಮೇಲೆ ಇಟ್ಟಿರುವ ಭಕ್ತಿ-ವಿಶ್ವಾಸವೇ ಈ ಹಂತಕ್ಕೆ ತಲುಪಲು ಕಾರಣ. ಶ್ರೀಕ್ಷೇತ್ರ ಹಾಗೂ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರ ಶ್ರಮವೂ ಅನನ್ಯ ಎಂದು ಹೇಳಿದರು. 

 

 

 

 

 

 

 

 

 

 

 

 

 

 

 

 

 

 

 

 

 

 


 

ಮನೋಧರ್ಮದ ಪರಿವರ್ತನೆಯಾಗಲಿ:

35ದಿವಸಗಳಲ್ಲಿ ಸ್ವುದ್ಯೋಗ ನೀಡುವ ಯೋಜನೆ21 ಲಕ್ಷ ಜನಕ್ಕೆ ಇಂದು ಉದ್ಯೋಗ ನೀಡುತ್ತಿದೆ. ಇಂತಹ ಹಲವಾರು ಯೋಜನೆಗಳನ್ನು ನಾಲ್ಕುವರೆ ದಶಕದಿಂದ ಮಾಡುವ ಶಕ್ತಿಯನ್ನು ಶ್ರೀಕ್ಷೇತ್ರ ದೇವರು ನೀಡಿದ್ದಾರೆ. ಬಡತನ ಶಾಶ್ವತವಲ್ಲ. ನಮ್ಮ ಮನೋಧರ್ಮ ಪರಿವರ್ತನೆಯಾಗಬೇಕು. ಧರ್ಮವು ನಮ್ಮನ್ನು ಭಯಮುಕ್ತಗೊಳಿಸುತ್ತದೆ. ಆತ್ಮಶಕ್ತಿ, ಜೀವನ ಚೈತನ್ಯವನ್ನು ಉಂಟುಮಾಡುತ್ತದೆ. ಆಧ್ಯಾತ್ಮದ ಜೊತೆಗೆ ಲೌಖಿಕ ಸುಜ್ಞಾನವನ್ನು ಕ್ಷೇತ್ರದ ಮೂಲಕ ಮಾಡುತ್ತಿದ್ದೇವೆ. 200 ದೇವಾಯಗಳ ಜೀರ್ಣೋದ್ದಾರ, ಸಾವಿರಾರು ದೇವಾಲಯಗಳಿಗೆ ದಾನವನ್ನೂ ಮಾಡಿದ್ದೇವೆ. ಧಾರ್ಮಿಕ ಹಾಗೂ ಗ್ರಾಮೀಣ ಅಭಿವೃದ್ಧಿಯ ಯೋಜನೆಗಳನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ವಿಸ್ತರಿಸಲಿದ್ದೇವೆ ಎಂದರು. 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 





Write your Comments on this Article
Your Name
Place
Your E-mail
Your Comment   You have characters left.
Security Validation
Enter the security validation code as displayed above:
    
Disclaimer: Kindly do not post any abusive, defamatory, infringing, obscene, indecent, discriminatory or unlawful material or SPAM. Editor reserves the right to block/ remove without notice any content received from users.
Suvarna News 24X7 Live online
333 Album