ಆಳ್ವಾಸ್ ವಿದ್ಯಾರ್ಥಿಗಳಿಂದ ತಾಂತ್ರಿಕ ಸಾಧನೆ 

ಯಶೋಧರ ವಿ.ಬಂಗೇರ

ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸೌರ ಫಲಕ, ಸೌರ ರೆಫ್ರಿಜಿರೇಟರ್, ಬಾಳೇಹಣ್ಣಿನ ಬೆಳವಣಿಗೆಯ ಹ0ತವನ್ನು ಗುರುತಿಸುವ ಯ0ತ್ರ ಹಾಗೂ ಸ್ಮಾರ್ಟ್ ಆಗ್ರೋ ಮೆನೇಜ್‍ಮೆಂಟ್ ಯಂತ್ರಗಳನ್ನು ಅನ್ವೇಷಣೆ ಮಾಡುವ ಮೂಲಕ ತಾಂತ್ರಿಕ ಸಾಧನೆ ಮಾಡಿದ್ದಾರೆ.

 

 

ಸೌರ ಫಲಕ: 

ಇದು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ತಾಂತ್ರಿಕ ಸಾಧನೆಗಳಲ್ಲಿ ಒಂದು. ತಂತ್ರಜ್ಞಾನದಲ್ಲಿ ಸೌರ ಫಲಕಗಳನ್ನು ಸರಣಿಯಲ್ಲಿಡುವ ಕಾರಣ ಒಂದರ ಮೇಲೆ ನೆರಳು ಬಿದ್ದಾಕ್ಷಣ ಎಲ್ಲಾ ಸೌರ ಫಲಕಗಳಿಂದ ಬರುವ ಶಕ್ತಿ ಇಲ್ಲವಾಗುತ್ತದೆ. ಫಲಕಗಳನ್ನು ಸಮಾನಾಂತರವಾಗಿ ಜೋಡಿಸಿ ಸೌರ ಶಕ್ತಿಯನ್ನು ಉಪಯೋಗಿಸುವುದು. ಇದರಿಂದ ನೆರಳಿನ ತೊಂದರೆ ಇಲ್ಲವಾಗಿ ಮತ್ತು ನೆರಳು ಬಿದ್ದ ಸೌರ ಫಲಕಗಳಿಂದಲೂ ಬರುವ ಕಮ್ಮಿ ಶಕ್ತಿಯನ್ನು ಉಪಯೋಗಿಸಿ ಅದನ್ನು ಬ್ಯಾಟರಿ ಚಾರ್ಜ್ ಮಾಡಬಹುದು. ಸೌರ ಫಲಕಗಳ ವೋಲ್ಟೇಜ್(ವಿದ್ಯುತ್ ವಿಭವಾಂತರದ ಪ್ರಮಾಣ) ಹೆಚ್ಚು ಆದರೆ ಬ್ಯಾಟರಿಗೆ ಬೇಕಾಗುವ ವೋಲ್ಟೇಜ್ ಕಡಿಮೆ. ಹಾಗಾಗಿ ನಮ್ಮ ಸೌರಶಕ್ತಿ ಪರಿರ್ವತಕ ವೋಲ್ಟೇಜ್ ಅನ್ನು ಕಮ್ಮಿ ಮಾಡಿ ಅದರ ವಿದ್ಯುತ್ ಪ್ರವಾಹ(ಕರೆಂಟ್) ಅನ್ನು ಹೆಚ್ಚು ಮಾಡುತ್ತದೆ. ಇದರಿಂದ ಶಕ್ತಿಯ ನಷ್ಟ ಕಡಿಮೆಯಾಗಿ ಸೌರ ಫಲಕಗಳ ಸಂಪೂರ್ಣ ಶಕ್ತಿಯ ವಿನಿಮಯವಾಗುತ್ತದೆ. ಈ ಸೌರ ಪರಿವರ್ತಕವನ್ನು ಮನೆಯ ಪರ್ಯಾಯಕಗೆ(ಇನ್‍ವರಟರ್) ಜೋಡಿಸಿ ಬಳಸಬಹುದು. ದೊಡ್ಡ ಪ್ರಮಾಣದ ಉದ್ಯಮಗಳಲ್ಲಿ ಇದರ ಉಪಯೋಗದಿಂದ ಸೌರ ಶಕ್ತಿಯ ಸಂಪೂರ್ಣ ಉಪಯೋಗ ದೊರೆಯುತ್ತದೆ. ಇದರಿಂದ ಸೌರ ಫಲಕಗಳ ಮತ್ತು ಬ್ಯಾಟರಿಯ ಜೀವಿತಾವಧಿಯು ಹೆಚ್ಚುತ್ತದೆ.ವಿದ್ಯಾರ್ಥಿಗಳಾದ ಸುಕೇಶ್ ಬಿ., ಸುಕೇಶ್ ಎ, ಸತೀಶ್, ಸುದರ್ಶನ ಹೆಗಡೆ ಸೌರಶಕ್ತಿಯನ್ನು ಅನ್ವೇಷಣೆ ಮಾಡಿದ್ದಾರೆ.

 

 

ಸೌರ ರೆಫ್ರಿಜಿರೇಟರ್: 

ಇದೊಂದು ಪರಿಸರ ಸ್ನೇಹಿ, ರಾಸಾಯನಿಕ ಮುಕ್ತ ತಾಂತ್ರಿಕ ಯೋಜನೆಯಾಗಿದೆ. ಸಾಮಾನ್ಯ ವಿದ್ಯುತ್ ಶಕ್ತಿ ಚಾಲಿತ ರೆಫ್ರಿಜಿರೇಟರ್‍ಗಿಂತ ಆಳ್ವಾಸ್ ವಿದ್ಯಾರ್ಥಿಗಳು ಅನ್ವೇಷಣೆ ಮಾಡಿದ ಸೌರ ರೆಫ್ರಿಜಿರೇಟರ್ ವೈಶಿಷ್ಟತೆಪೂರ್ಣವಾದದ್ದು. ಸೂರ್ಯನ ಕಿರಣಗಳನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸಿ ಸೌರ ರೆಫ್ರಿಜಿರೇಟರ್ ಅನ್ನು ಚಲಾಯಿಸಲಾಗುತ್ತದೆ. ಸೋಲಾರ್ ಪ್ಯಾನೆಲ್‍ಗಳಿಂದ ಬ್ಯಾಟರಿಗಳನ್ನು ಚಾರ್ಜ್ ಮಾಡಿಕೊಂಡು ರಾತ್ರಿ ಸಮಯದಲ್ಲಿ ಅಥವಾ ವಿದ್ಯುತ್ ಕಡಿತ ಇರುವಾಗ ಯಾವುದೇ ಸಮಸ್ಯೆಯಿಲ್ಲದೆ ಇದನ್ನು ಉಪಯೋಗಿಸಬಹುದು.ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಶ್ರುತಿ, ಸುಶ್ರಿತ, ಚೈತ್ರ ಮತ್ತು ಸಾಯಿಪ್ರಸಾದ್ ಟಿ. ಅದೇ ಕಾಲೇಜಿನ ಪ್ರೊಫೆಸರ್ ಸಂತೋಷ್ ಟಿ. ಅವರ ಮಾರ್ಗದರ್ಶನದಲ್ಲಿ ಈ ಯೋಜನಾಕಾರ್ಯ ರೂಪಿಸಲಾಯಿತು.

 

ಬಾಳೇಹಣ್ಣಿನ ಯಂತ್ರ: 

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ,  ವಿದ್ಯುನ್‍ಮಾನ ಮತ್ತು ಸಂವಹನ ವಿಭಾಗದ ವಿಧ್ಯಾರ್ಥಿಗಳಾದ ಗಣೇಶ್ ಎಸ್.ದೀಪಿಕಾ ಗಂಭೀರ,ನಿಷ್ಮಿತಾ ಶೆಟ್ಟಿ,ನಿತ್ಯ.ಜೆ ಅವರು ಹಾಗೂ ಶಿಕ್ಷಕಿಯವರಾದ ಜ್ಯೋತಿ ಪ್ರಮಳ್ ಅವರ ಮಾರ್ಗದರ್ಶನದಲ್ಲಿ ಬಾಳೇಹಣ್ಣಿನ  ಯಂತ್ರವನ್ನು ತಯಾರಿಸಿದ್ದಾರೆ. ಯಂತ್ರದ ಮೂಲಕ ಬಾಳೇಹಣ್ಣಿನ ಬೆಳವಣಿಗೆಯ ಹ0ತವನ್ನು ಗುರುತಿಸುತ್ತದೆ. ಬಾಳೆಹಣ್ಣನ್ನು ಮೂರು ಹಂತಗಳಲ್ಲಿ ಈ ಯಂತ್ರ ವಿಭಾಗಿಸುತ್ತದೆ.ಅದು ಕಾಯಿ, ಹಣ್ಣು ಮತ್ತು ಕೊಳೆಯುವ ಹಂತ. ಇದರಿಂದ ರೈತನಿಗೆ ಮತ್ತು ಮಾರಾಟಗಾರರಿಗೆ ಹಣ್ಣನ್ನು ಅವರಿಗೆ ಬೇಕಾದ ರೀತಿಯಲ್ಲಿ ಪರಿಗಣಿಸಿ ಮಾರುಕಟ್ಟೆಗೆ ಮಾರಬಹುದು. ಈ ಯಂತ್ರದ ಇನ್ನೊಂದು ವಿಶೇಷವೆಂದರೆ ಕಾಯಿ ಬಾಳೆಹಣ್ಣನ್ನು ಗುರುತಿಸುವುದಲ್ಲದೆ ಈ ಕಾಯಿ ಹಣ್ಣಾಗುವುದಕ್ಕೆ ತೆಗೆದುಕೊಳ್ಳುವ ಸಮಯವನ್ನು ನಿಖರವಾಗಿ ಹೇಳುತ್ತದೆ. ಈ ಮಾಹಿತಿಯಿಂದ ಬೆಳೆಗಾರರು ಎಷ್ಟು ದಿನದ ಮುಂಚಿತವಾಗಿ ತಮ್ಮ ಬೆಳೆಯನ್ನು ಮಾರಬಹುದು ಎಂಬುದನ್ನು ಅಂದಾಜಿಸಿ ತಮ್ಮ ಬೆಳೆಯನ್ನು ಮಾರಬಹುದು. ಈ ಯಂತ್ರದಿಂದ ಬಾಳೆಹಣ್ಣು ಕೊಳೆತು ಹೋಗುದರಿಂದ ಉಂಟಾಗುವ ನಷ್ಟವನ್ನು ಅರ್ಧದಷ್ಟು ಕಡಿಮೆ ಮಾಡಬಹುದು. 

 

ಸ್ಮಾರ್ಟ್ ಆಗ್ರೋ ಮೆನೇಜ್‍ಮೆಂಟ್:

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ, ವಿದ್ಯುನ್‍ಮಾನ ಮತ್ತು ಸಂವಹನ ವಿಭಾಗದ ವಿದ್ಯಾರ್ಥಿಗಳಾದ ಶ್ರೇಯಸ್ ಭಟ್, ಮೊಹಮ್ಮದ್ ಅಶ್ರಫ್, ಮೇಘನ.ಎನ್.ಎಂ, ನಿಧಿಶಾ ಶಿವದಾಸ್ ಅವರು ಸಹಾಯಕ ಪ್ರಾಧ್ಯಾಪಕ ಪರ್ವೇಜ್ ಶಾರೀಫ್ ಸ್ಮಾರ್ಟ್ ಆಗ್ರೋ ಮೆನೇಜ್‍ಮೆಂಟ್ ತಂತ್ರಜ್ಞಾನ ರೂಪಿಸಿದ್ದಾರೆ.  ಮಣ್ಣಿನ ತೇವಾಂಶ ಮಟ್ಟವನ್ನು ಅಳೆಯುವ ಸೆನ್ಸಾರ್‍ಗಳನ್ನು ಗದ್ದೆಯ ಬೇರೆ ಬೇರೆ ಭಾಗಗಳಲ್ಲಿ ಅಳವಡಿಸಿ ಯಾವ ಭಾಗದಲ್ಲಿ ತೇವಾಂಶ ಕಡಿಮೆ ಆಗುತ್ತದೆಯೋ ಆ ಭಾಗಗಳಲ್ಲಿ ಸೆನ್ಸಾರ್‍ಗಳು ತರಂಗಗಳನ್ನು ಆ್ಯಂಡ್ರಾಯಿಡ್ ಮೊಬೈಲ್ ಅಪ್ಲಿಕೇಶನ್ನಿಗೆ ತಲುಪಿಸುತ್ತದೆ. ಇದರಿಂದ ರೈತರು ನೀರು ಬಿಡುವ ಸಲುವಾಗಿ ಬೇರೆ ಬೇರೆ ಕಡೆಗೆ ಹೋಗುವ ಬದಲು, ತಾವು ಇರುವ ಜಾಗದಿಂದಲೇ ನೀರಿನ ಪಂಪ್ಗಳನ್ನು ನಿಯಂತ್ರಿಸುವುದರ ಮೂಲಕ ಗದ್ದೆಗಳಿಗೆ ನೀರನ್ನು ಪೂರೈಸಬಹುದು. ರೈತರು ಇದಕ್ಕಾಗಿ ಹೆಚ್ಚು ಶ್ರಮ ಪಡುವ ಬದಲು, ತಾವು ಇರುವ ಜಾಗದಿಂದಲೇ ಮಣ್ಣಿನ ತೇವಾಂಶ ಮಟ್ಟವನ್ನು ತಿಳಿದುಕೊಂಡು, ಅವಶ್ಯಕತೆ ಇರುವ ಭಾಗಗಳಿಗೆ ಕೇವಲ ಒಂದೇ ಪಂಪ್‍ನ್ನು ಬಳಸಿ ನೀರನ್ನು ಬಿಡುವುದರ ಮೂಲಕ ತೇವಾಂಶ ಮಟ್ಟವನ್ನು ಹಾಗೆ ಇರಿಸಬಹುದು.

Write your Comments on this Article
Your Name
Place
Your E-mail
Your Comment   You have characters left.
Security Validation
Enter the security validation code as displayed above:
    
Disclaimer: Kindly do not post any abusive, defamatory, infringing, obscene, indecent, discriminatory or unlawful material or SPAM. Editor reserves the right to block/ remove without notice any content received from users.
Suvarna News 24X7 Live online
333 Album