ಆಳ್ವಾಸ್‍ನಲ್ಲಿ ಬೆಳಗಿದ ವಿಖ್ಯಾತ್



 

ಯಶೋಧರ ವಿ.ಬಂಗೇರ

ಮೂಡುಬಿದಿರೆ: ವಿದ್ಯಾರ್ಥಿಗಳಲ್ಲಿ ಮೌಲ್ಯಯುತ ಶಿಕ್ಷಣ ನೀಡಿ, ವಿದ್ಯಾರ್ಥಿಗಳ ಬಾಳು ಬೆಳಗುವ ಆಳ್ವಾಸ್ ಅಂಧ ವಿದ್ಯಾರ್ಥಿಯೊಬ್ಬನಿಗೆ ಎರಡು ವರ್ಷಗಳ ಕಾಲ ತನ್ನಲ್ಲಿ ಆಶ್ರಯ ನೀಡಿ ಆತ ಉತ್ತಮ ಅಂಕ ಪಡೆಯುವಂತೆ ಮಾಡುವುದರ ಮೂಲಕ ನಿಜಾರ್ಥದಲ್ಲಿ ಬಡವರ ಬಂಧುವಾಗಿದೆ.

 

 

ಆಳ್ವಾಸ್ ಪಿಯು ಕಾಲೇಜಿನ ಕಲಾ ವಿಭಾಗದಲ್ಲಿ ಆಧ್ಯಯನ ಮಾಡಿದ ವಿಖ್ಯಾತ್.ಎಸ್. ಶೆಟ್ಟಿ ಪಿಯುಸಿಯಲ್ಲಿ ಶೇ.92.33 ಅಂಕ ಪಡೆಯುವುದ ಮೂಲಕ ಸಾಧನೆ ಮಾಡಿದ್ದಾರೆ. ಇತಿಹಾಸ-96, ಕನ್ನಡ-95, ರಾಜ್ಯಶಾಸ್ತ್ರ-93, ಅರ್ಥಶಾಸ್ತ್ರ-91, ಸಮಾಜಶಾಸ್ತ್ರ-90, ಇಂಗ್ಲೀಷ್-89 ಅಂಕ ಪಡೆಯುವುದರ ಮೂಲಕ ಒಟ್ಟು 554 ಅಂಕ ಪಡೆದಿದ್ದಾರೆ. ಬೈಂದೂರು ಸಮೀಪದ ಉಪ್ಪುಂದದ ಕೃಷಿಕ ಶಿವರಾಮ ಶೆಟ್ಟಿ- ಗೃಹಿಣಿ ಸುಜಾತ ಶೆಟ್ಟಿ ದಂಪತಿ ಪುತ್ರ ವಿಖ್ಯಾತ್ ಶೆಟ್ಟಿ ಆಳ್ವಾಸ್ ಸಂಸ್ಥೆಯ ದತ್ತು ಸ್ವೀಕಾರದಡಿ ಶಿಕ್ಷಣ ಪಡೆದಿದ್ದಾರೆ. ಪ್ರತಿಭಾನ್ವಿತ ವಿದ್ಯಾರ್ಥಿಯಾಗಿರುವ ವಿಖ್ಯಾತ್ ಶಿವಮೊಗ್ಗದ ಶಾರದ ಅಂಧ ವಿಕಾಸ ಕೇಂದ್ರದಲ್ಲಿ ಶೇ.94 ಅಂಕಗಳನ್ನು ಪಡೆದು ಎಸ್‍ಎಸ್‍ಎಲ್‍ಸಿಯಲ್ಲೂ ಸಾಧನೆ ಮಾಡಿದ್ದರು. 

 

ಐಎಎಸ್ ಮಾಡುವಾಸೆ:

ಶಿಕ್ಷಣ ಮಾತ್ರವಲ್ಲದೆ ಸಂಗೀತ, ಚೆಸ್‍ನಲ್ಲೂ ಒಲವನ್ನು ಹೊಂದಿರುವ ವಿಖ್ಯಾತ್ ಶೆಟ್ಟಿ ತನ್ನ ಸಾಧನೆಯ ಸಂತಸದ ಕ್ಷಣಗಳನ್ನು ’ನಮ್ಮ ಬೆದ್ರ . ಕಾಂ’ ಯೊಂದಿಗೆ ಹಂಚಿಕೊಂಡದ್ದು ಹೀಗೆ- ತರಗತಿಯಲ್ಲಿ ಉಪನ್ಯಾಸಕರ ಮಾಡುವ ಪಾಠವನ್ನು ಗಮನವಿಟ್ಟು ಕೇಳಿ, ಬ್ರೈನ್ ಲಿಪಿ ಸಹಾಯದಿಂದ ಅದನ್ನು ಟಿಪ್ಪಣಿಗಿಳಿಸುತ್ತೇನೆ. ಪುನರ್ ಮನನದ ಜೊತೆಗೆ ತನಗೆ ಸಹಾಯವಾಗುವ ರೀತಿಯಲ್ಲಿ ಅಧ್ಯಯನ ಮಾಡಿದರ ಫಲವಾಗಿ ಹೆಚ್ಚು ಅಂಕ ಗಳಿಸಲು ಸಹಕಾರಿಯಾಯಿತು.  ಆಳ್ವಾಸ್‍ನ ಶೈಕ್ಷಣಿಕ ವಾತಾವರಣ ನನಗೆ ನಿರೀಕ್ಷೆಗೂ ಹೆಚ್ಚಿನ ವ್ಯವಸ್ಥೆ ಕಲ್ಪಿಸಿದೆ. ಡಾ.ಎಂ.ಮೋಹನ್ ಆಳ್ವ ಉಚಿತ ಶಿಕ್ಷಣ ನೀಡುವುದರ ಮೂಲಕ ಬಾಳು ಬೆಳಗಿದ್ದಾರೆ. ಉಪನ್ಯಾಸಕರು, ಸಹಪಾಠಿಗಳು, ವಾರ್ಡನ್ ನನಗೆ ಸಹಕರಿಸಿರುವುದರಿಂದ ಸಾಧನೆ ಸುಗಮವಾಗಿದೆ. ಮುಂದೆ ಬಿ.ಎ ಶಿಕ್ಷಣದ ಜೊತೆಗೆ ಐಎಎಸ್ ಕೋಚಿಂಗ್ ಪಡೆದು ಐಎಎಸ್ ಅಧಿಕಾರಿಯಾಗುವಾಸೆ ಎಂದು ವಿಖ್ಯಾತ್ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. 

 

ಸಾಧನೆ-ಪ್ರೇರಣೆ

ವಿಖ್ಯಾತ್ ಸಾಧನೆ ಅಂಕವಿಕಲ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಪ್ರೇರಣೆ ನೀಡಿದೆ. ಈತ ಆಳ್ವಾಸ್ ಸಂಸ್ಥೆ ಅಂಕವಿಕಲರಿಗೆ ಕೊಡಮಾಡುವ ಸಂಪೂರ್ಣ ಉಚಿತ ಶಿಕ್ಷಣ ಯೋಜನೆಯಡಿ ಪಿಯುಸಿ ಪೂರೈಸಿದ್ದಾನೆ. 

-ಡಾ.ಎಂ.ಮೋಹನ್ ಆಳ್ವ

ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರೆ





Write your Comments on this Article
Your Name
Place
Your E-mail
Your Comment   You have characters left.
Security Validation
Enter the security validation code as displayed above:
    
Disclaimer: Kindly do not post any abusive, defamatory, infringing, obscene, indecent, discriminatory or unlawful material or SPAM. Editor reserves the right to block/ remove without notice any content received from users.
Suvarna News 24X7 Live online
333 Album