Wish Advt: Naveenchandra Bhandary
ಮಾ.3ರಿಂದ ಶ್ರೀಕ್ಷೇತ್ರ ದರೆಗುಡ್ಡೆಯಲ್ಲಿ ಮಹೋತ್ಸವ

ಮಹೋತ್ತರ ಶ್ರೀಕ್ಷೇತ್ರ ವಿಠಲ ಶ್ರೀ ಸೋಮನಾಥೇಶ್ವರ ದರೆಗುಡ್ಡೆಯಲ್ಲಿ ಮಾ.3ರಿಂದ ಮಾ.10ರವರೆಗೆ ವಾರ್ಷಿಕ ಮಹೋತ್ಸವ ನಡೆಯಲಿದೆ.

ಮಾ.10 ಕೊಡಂಗಲ್ಲು ಸತ್ಯನಾರಾಯಣ ಪೂಜೆ

ಕೊಡಂಗಲ್ಲು ಫ್ರೆಂಡ್ಸ್ ಸರ್ಕಲ್ ವತಿಯಿಂದ ದ್ವಿತೀಯ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮಾ.11ರಂದು ನಡೆಯಲಿದೆ.

ಮಾ.8 ಕುವೆಂಪು ಕಾವ್ಯದ ಹೊಸ ಓದು

ಕಾಂತಾವರ ಕನ್ನಡ ಸಂಘದ ನುಡಿನಮನ ಕಾರ್ಯಕ್ರಮದಲ್ಲಿ ಕುವೆಂಪು ಕಾವ್ಯದ ಹೊಸ ಓದು ಉಪನ್ಯಾಸ ಕಾರ್ಯಕ್ರಮ ಮಾ.8ರಂದು ಮಧ್ಯಾಹ್ನ 3ಗಂಟೆಗೆ ನಡೆಯಲಿದೆ.

ಹಿಮಾಲಯ ಪ್ರವಾಸಾನುಭವ ಉಪನ್ಯಾಸ

ಪಡುಮಾರ್ನಾಡು-ಮೂಡುಬಿದಿರೆ ರೋಟರಿ ಕ್ಲಬ್‍ನ ಸಭೆಯಲ್ಲಿ ಹಿಮಾಲಯ ಪ್ರವಾಸಾನುಭವ ಉಪನ್ಯಾಸ ಕಾರ್ಯಕ್ರಮ ಶುಕ್ರವಾರ ರಾತ್ರಿ ಮೂಡುಬಿದಿರೆಯ ಸಮಾಜಮಂದಿರ ಸಭಾಭವನದಲ್ಲಿ ಜರಗಿತು.

ತಾರಸಿ ತೋಟಗಳಿಗೆ ಉತ್ತೇಜನ ಕಾರ್ಯಕ್ರಮ

ನಗರ ಪ್ರದೇಶದಲ್ಲಿ ತಾರಸಿ ತೋಟಗಳಿಗೆ ಉತ್ತೇಜನ ನೀಡಲು ಮತ್ತು ನಗರ ವಾಸಿಗಳನ್ನು ಈ ನಿಟ್ಟಿನಲ್ಲಿ ಪ್ರೇರೇಪಿಸುವ ಸಲುವಾಗಿ ತೋಟಗಾರಿಕೆ ಇಲಾಖೆಯಿಂದ ತಾರಸಿ ತೋಟಗಳಿಗೆ ಉತ್ತೇಜನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುವುದು.

ಜ.10ರಿಂದ ನಾಗರಕಟ್ಟೆ ನೇಮೋತ್ಸವ

ಚೌಟರ ಸೀಮೆ-ಪುತ್ತಿಗೆ ಮಾಗಣೆಗೆ ಸಂಬಂಧಪಟ್ಟ ನಾಗಗರಕಟ್ಟೆ ದೈವಸ್ಥಾನದಲ್ಲಿ ಜ.10ರಿಂದ 12ರವೆರೆಗೆ ವರ್ಷಾವಧಿ ನೇಮೋತ್ಸವ ನಡೆಯಲಿದೆ.

ಕಡಂದಲೆ ಪಿ.ಬಿ ಮುಕ್ಕಡಪ್ಪು-ಜೋಡಿಕಟ್ಟೆ ಶಾಲೆ ವಾರ್ಷಿಕೋತ್ಸವ

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರೊಂದಿಗೆ ಅವರನ್ನು ಸುಸಂಸ್ಕøತ ನಾಗರಿನರನ್ನಾಗಿಸುವ ಜವಬ್ದಾರಿ ಶಿಕ್ಷಕರದು ಎಂದು ಹಿರಿಯ ನ್ಯಾಯವಾದಿ ಕೆ.ಆರ್ ಪಂಡಿತ್ ಹೇಳಿದರು.

ಜ.8 ಅಯ್ಯಪ್ಪ ಪ್ರತಿಷ್ಠಾ ವರ್ಧಂತಿ

ಸ್ವರಾಜ್ಯ ಮೈದಾನ ಬಳಿಯಿರುವ ಶ್ರೀಮಣಿಕಂಠ ಕ್ಷೇತ್ರ ಅಯ್ಯಪ್ಪ ದೇವಸ್ಥಾನದ ದೇವರ ಪ್ರತಿಷ್ಠಾ ವರ್ಧಂತಿ ಹಾಗೂ 38 ವರ್ಷದ ದೀಪಾರಾಧನೆ ಜ.8ರಂದು ನಡೆಯಲಿದೆ.

ಜ15ರಿಂದ ಮಿತ್ತಬೈಲಿನಲ್ಲಿ ಸುಂದರಕಾಂಡ

ಖ್ಯಾತ ಪ್ರವಚನಕಾರ ಡಾ.ಪವನ್ ಶ್ರೀಪಾದ ಭಟ್ ಇವರಿಂದ ಶ್ರೀಮದ್ ವಾಲ್ಮೀಕಿ ರಾಮಾಯಣದ ಸುಂದರ ಕಾಂಡ ಪ್ರವಚನ ಜನವರಿ 15ರಿಂದ 18ರವರೆಗೆ ಪ್ರತೀ ದಿನ ಸಂಜೆ 4.30 ರಿಂದ 8 ರತನಕ ಮಿತ್ತಬೈಲಿನ ಶ್ರೀರಾಮ ಮಂದಿರದಲ್ಲಿ ನಡೆಯಲಿದೆ.

ಜ.14 ಮಾರಿ ಪುತ್ತಿಗೆ ದೇವಸ್ಥಾನದಲ್ಲಿ ಮಾರಿ ಸಮಾರಾಧನೆ

ಶ್ರೀ ಕ್ಷೇತ್ರ ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಜ. 14 ರಂದು ಮಾರಿ ಸಮಾರಾಧನೆ ನಡೆಯಲಿದೆ.

ಹನುಮಂತ ನಗರದಲ್ಲಿ ಪುಟಾಣಿಗಳ ಸ್ವಚ್ಛತೆ

ಮೂಡುಬಿದಿರೆ ಇಲ್ಲಿನ ಆರಕ್ಷಕ ಠಾಣೆಯ ಬಳಿಯಿರುವ ಹನುಮಂತ ನಗರದಲ್ಲಿ ಸ್ಥಳೀಯ ಪುಟಾಣಿಗಳು ತಮ್ಮ ವ್ಯಾಪ್ತಿಯ ಬೀದಿಗಳನ್ನು ಗುಡಿಸುವ ಮೂಲಕ ಸ್ವಚ್ಛಗೊಳಿಸಿದರು.

ತೆಂಕಮಿಜಾರಿನಲ್ಲಿ ಮಕ್ಕಳ ಗ್ರಾಮಸಭೆ

ಶಾಲೆಗಳಲ್ಲಿ ನೀಡುತ್ತಿರುವ ಪ್ರಾಜೆಕ್ಟ್ ವರ್ಕ್‍ಗಳಿಂದಾಗಿ ತಮಗೆ ಹೆಚ್ಚಿನ ಸಮಯವನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಹಾಗೂ ತಮಗೆ ಪುಸ್ತಕದ ಹೊರೆ ಹೆಚ್ಚಾಗುತ್ತಿದೆ ಇವೆರಡನ್ನು ಕಡಿಮೆಗೊಳಿಸಿ ಹೀಗೆಂದು ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳಿಬ್ಬರು ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಶುಕ್ರವಾರ ಅಶ್ವತ್ಥಪುರದಲ್ಲಿ ತಂದಿದ್ದಾರೆ.

ಡಿ.9 ಪಡುಮಾರ್ನಾಡು ಕಂದಾಯ ಅದಾಲತ್

ಹೋಬಳಿಗೆ ಸಂಬಂಧಿಸಿದಂತೆ ಪಡುಮಾರ್ನಾಡು ಗ್ರಾಮಕರನಿಕರ ವೃತ್ತಕ್ಕೆ ಒಳಪಡುವ ಮೂಡುಮಾರ್ನಾಡು ಮತ್ತು ಪಡುಮಾರ್ನಾಡು ಗ್ರಾಮಕ್ಕೆ ಸಂಬಂಧಿಸಿದಂತೆ ಡಿ.9ರಂದು 10.30.ಕ್ಕೆ ಪಂಚಾಯಿತಿ ಸಭಾಭವನದಲ್ಲಿ ಕಂದಾಯ ಅದಾಲತ್ ನಡೆಯಲಿದೆ.

ಫೆ.20ರಿಂದ ತೋಡಾರು ಊರುಸ್

ಸಯ್ಯಿದ್ ವಲಿಯಲ್ಲಾಹಿ ದರ್ಗಾ ಶರೀಫ್ ತೋಡಾರು ಇದರ ಮಖಾಂ ಉರೂಸ್ ದಿನಾಂಕ 20.2.15 ರಿಂದ 28.2.15 ರವರೆಗೆ ನಡೆಸಲಾಗುವುದು ಎಂದು ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಬದ್ರಿಯಾ ಜುಮ್ಮಾ ಮಸೀದಿ ಹಾಗೂ ಉರೂಸ್ ಸಮಿತಿ ತೋಡಾರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಳ್ವಾಸ್ ಆಯುರ್ವೆದ ಕಾಲೇಜಿನಲ್ಲಿ ಉಚಿತ ಮಧುವೇಹ ತಪಾಸಣೆ

ವಿಶ್ವ ಮಧುಮೇಹ ದಿವಸದ ಅಂಗವಾಗಿ ಕಳೆದ ಶುಕ್ರವಾರ ಮೂಡುಬಿದಿರೆಯ ಆಳ್ವಾಸ್ ಆಯುರ್ವೆದ ಮೆಡಿಕಲ್ ಕಾಲೇಜಿನ ಆಸ್ಪತ್ರೆಯ ಕಾಯ ಚಿಕಿತ್ಸಾ ವಿಭಾಗದಿಂದ ಉಚಿತ ಮಧುಮೇಹ ತಪಾಸಣಾ ಶಿಬಿರವನ್ನು ವಿದ್ಯಾಗಿರಿಯ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

Suvarna News 24X7 Live online
333 Album