ಮಾ 30: ಮೂಡುಬಿದಿರೆಯಲ್ಲಿ `ರೋಟರಿ ಬೆಳಕು’

ಇಲ್ಲಿನ ರೋಟರಿ ಕ್ಲಬ್ ನ ಸಾಮಾಜಿಕ ಚಟುವಟಿಕೆಯ ಅಂಗವಾಗಿ ಹೊಸಬೆಟ್ಟು ಗ್ರಾಮದ 12 ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ ಹಾಗೂ 9 ಮನೆಗಳಿಗೆ ಉಚಿತ ಸೋಲಾರ್ ದೀಪಗಳ ವಿತರಣೆ ಕಾರ್ಯಕ್ರಮ `ರೋಟರಿ ಬೆಳಕು’ ಮಾ30ರಂದು ಸಮಾಜ ಮಂದಿರದಲ್ಲಿ ಬೆಳಿಗ್ಗೆ 10ರಿಂದ ನಡೆಯಲಿದೆ.

ಎನ್.ಎಫ್.ಟಿ.ಇ, ಬಿ.ಎಸ್.ಎನ್.ಎಲ್ ವಿಶೇಷ ಸಭೆ

ಇಲ್ಲಿನ ಎನ್.ಎಫ್.ಟಿ.ಇ, ಬಿ.ಎಸ್.ಎನ್.ಎಲ್ ವಿಶೇಷ ಸಭೆಯು ಇತ್ತೀಚೆಗೆ ಮೂಡುಬಿದಿರೆ ದೂರವಾಣಿ ಕೇಂದ್ರದಲ್ಲಿ ಇತ್ತೀಚೆಗೆ ನಡೆಯಿತು.

ಎ.5 ರಿಂದ ಮೂಡುಬಿದಿರೆ ಬೇಸಿಗೆ ಚೆಸ್ ತರಬೇತಿ ಶಿಬಿರ

ಡೆರಿಕ್ಸ್ ಚೆಸ್ ಶಾಲೆ ಹಾಗೂ ಡಿ.ಜೆ ಆಂಗ್ಲಮಾಧ್ಯಮ ಶಾಲೆ ಮೂಡುಬಿದಿರೆ ಇವುಗಳ ಸಹಯೋಗದಲ್ಲಿ ಬೇಸಿಗೆ ರಚೆಯ ಚೆಸ್ ತರಬೇತಿ ಶಿಬಿರವು ಎ.5ರಿಂದ 14ರವರೆಗೆ ಡಿ.ಜೆ ಆಂಗ್ಲಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾಗಿದೆ. 7ರಿಂದ 15 ವರ್ಷ ಪ್ರಾಯದೊಳಗಿನ ಮಕ್ಕಳಿಗೆ ಈ ಶಿಬಿರವನ್ನು ಆಯೋಸಿದ್ದು ಚೆಸ್ನ ಆರಂಭಿಕ ತರಬೇತಿಯನ್ನು ನೀಡಲಾಗುವುದೆಂದು ಸಂಯೋಜಕ ಗುರು ಬಾಗೇವಾಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮರದಿಂದ ಬಿದ್ದು ಗಾಯಗೊಂಡ ಬಾಲಕ ಸಾವು

ಇರುವೈಲ್ ಗ್ರಾಮದ ಅಮ್ಟಾಡಿ ನಿವಾಸಿ ಲಾರೆನ್ಸ್ ಕುಟಿನ್ಹಾ ಎಂಬವರ ಅವರ ಪುತ್ರ ಲೆನ್ಸನ್(16) ಮಾ.22ರಂದು ತಮ್ಮ ಮನೆಯ ಬಳಿ ಇರುವ ಪುರ್ನಪುಳಿ ಮರದಿಂದ ಬಿದಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ ಆತನನ್ನು ಮೂಡುಬಿದರೆಯ ಆಳ್ವಾಸ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಬಳಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಎ.ಜೆ ಆಸ್ಪತ್ರೆಯಲ್ಲಿ ದಾಖಲಾಗಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ರಾತ್ರಿ ಆತ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಮೂಡುಬಿದರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಸ್ ರತ್ನವರ್ಮ ಪೂವಣಿ ನಿಧನ

ಜ್ಯೋತಿನಗರದ ಮಹಾವೀರ ಸಾಮಿಲ್ ನ ಸ್ಥಾಪಕ ಎಸ್.ರತ್ನವರ್ಮ ಪೂವಣಿ (78) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ನಿಧನರಾದರು. ಇತ್ತೀಚೆಗೆ ಕಾರ್ಕಳ ತಾಲೂಕಿನ ಶಿರ್ಲಾಲು ಬಸದಿಗೆ ಆಧಿನಾಥ ಭರತ ಬಾಹುಬಲಿಯ ಕಲ್ಲಿನ ಮೂರ್ತಿಯನ್ನು ಕೊಡುಗೆಯಾಗಿ ನೀಡಿ ಪ್ರತಿಷ್ಠಾಪಿಸಿದ್ದರು. ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.

ಶಸ್ತಾಸ್ರ್ತ ಒಪ್ಪಿಸಲು ಸೂಚನೆ

ಮೂಡುಬಿದಿರೆ: ಕರ್ನಾಟಕ ವಿಧಾನಸಭೆಗೆ ಮೇ 5 ರಂದು ನಡೆಯಲಿರುವ ಚುನಾವಣೆ ಪ್ರಯುಕ್ತ ಚುನಾವಣಾ ನೀತಿ ಸಂಹಿತೆ ಜಾರಿ ಆದೇಶದಂತೆ ಮೂಡುಬಿದಿರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶಸ್ತ್ರ ಪರವಾನಿಗೆ ಹೊಂದಿ ನೆಲೆಸಿರುವವರು ತಮ್ಮ ಶಸ್ತ್ರಗಳನ್ನು ಮಾ.22 ರಿಂದಲೇ ಪೊಲೀಸ್ ಠಾಣೆಯಲ್ಲಿ ಅಥವಾ ಜಿಲ್ಲಾ ಶಸ್ತ್ರಗಾರದಲ್ಲಿ ಅಥವಾ ನಿಗದಿತ ಪರವಾನಿಗೆ ಹೊಂದಿರುವ ಶಸ್ತ್ರಗಳನ್ನು ಠೇವಣಿಯಾಗಿ ಇಟ್ಟುಕೊಳ್ಳುವ ಸ್ಥಳಗಳಲ್ಲಿ ಠೇವಣಿಯಾಗಿಟ್ಟು, ಸ್ವೀಕೃತಿಯನ್ನು ಪಡೆದು ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಮೂಡುಬಿದರೆ ಪೊಲೀಸ್ ಠಾಣಾಧಿಕಾರಿಯವರ ಪ್ರಕಟಣೆ ತಿಳಿಸಿದೆ.

ಆಳ್ವಾಸ್ ನಲ್ಲಿ `ಯುವಜಾಗೃತಿ’ ಕಾರ್ಯಕ್ರಮ

ಮಾದಕ ದ್ರವ್ಯಗಳಿಂದ ಕ್ಷಣಿಕ ಆನಂದ ದೊರೆಯಬಹುದು ಆದರೆ ದೀರ್ಘಕಾಲದ ಸುಖವನ್ನು ಬಲಿಕೊಡಬೇಕಾದಿತು. ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಸಮೃದ್ಧಗೊಳಿಸುವ ಕಡೆ ಗಮನ ನೀಡಬೇಕು.

ಮಾ.12,13 ಆಳ್ವಾಸ್ ನಲ್ಲಿ ನೀನಾಸಂ ತಿರುಗಾಟ ನಾಟಕಗಳು

ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನೀನಾಸಂ ತಿರುಗಾಟ ನಾಟಕಗಳು ಮಾ.12 ಹಾಗೂ 13ರಂದು ವಿದ್ಯಾಗಿರಿಯ ವಿಶ್ವನುಡಿಸಿರಿ ವೇದಿಕೆಯಲ್ಲಿ ನಡೆಯಲಿದೆ.

ವಾಲ್ಪಾಡಿ ಮಹಿಳೆಯ ಮಾನಭಂಗಕ್ಕೆ ಯತ್ನ

ವಾಲ್ಪಾಡಿ ಗ್ರಾಮದ ಆಚೆಬೆಟ್ಟು ಎಂಬಲ್ಲಿ ವಿವಾಹಿತ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಫೆ 24: ಕಾಂತಾವರದಲ್ಲಿ ಸಾಹಿತ್ಯ ಸಂಸ್ಕೃತಿ ಸಂವಾದ ಕಾರ್ಯಕ್ರಮ

ಕಾಂತಾವರ ಅಲ್ಲಮ ಪ್ರಭು ಪೀಠದ ತಿಂಗಳ ಸಾಹಿತ್ಯ ಸಂಸ್ಕೃತಿ ಸಂವಾದ ಕಾರ್ಯಕ್ರಮದ 14ನೇ ಕಾರ್ಯಕ್ರಮವಾಗಿ ಮಾಧ್ಯಮ ತಜ್ಞ ಜಿ.ಎನ್. ಮೋಹನ್ ’ಮಾಧ್ಯಮವೆಂಬ ಕತ್ತಲೆ ಬೆಳಕು’ ಉಪನ್ಯಾಸ ಫೆ 24ರಂದು ಅಪರಾಹ್ನ 3ಕ್ಕೆ ಕಾಂತಾವರ ಕನ್ನಡ ಭವನದಲ್ಲಿ ನಡೆಯಲಿದೆ

ಫೆ.17 ವಿದ್ಯಾರ್ಥಿ , ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳು
ಫೆ.17 ವಿದ್ಯಾರ್ಥಿ , ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳು

ಮೂಡುಬಿದಿರೆ ಗುರುಮಠ ಕಾಳಿಕಾಂಬಾ ದೇವಸ್ಥಾನದ ವರ್ಷಾವಧಿ ಮಹೋತ್ಸವದಂಗವಾಗಿ ಶ್ರೀ ಕಾಳಿಕಾಂಬಾ ಮಹಿಳಾ ಸಮಿತಿಯ ವತಿಯಿಂದ ಕ್ಷೇತ್ರದ ವ್ಯಾಪ್ತಿಯ ವಿಶ್ವಕರ್ಮ ಸಮಾಜದ ವಿದ್ಯಾರ್ಗಥಿಳು ಹಾಗೂ ಮಹಿಳೆಯರಿಗಾಗಿ ವಿವಿಧ ಸ್ಪರ್ದೆಗಳನ್ನು ಆಯೋಜಿಸಿದೆ ಎಂದು ಕಾಳಿಕಾಂಬಾ ಮಹಿಳಾ ಸಮಿತಿಯ ಪ್ರಕಟಣೆ ತಿಳಿಸಿದೆ.

ಫೆ.18 ಸಾಮೂಹಿಕ ಸೂರ್ಯ ನಮಸ್ಕಾರ

ಸ್ವಾಮಿ ವಿವೇಕಾನಂದರ 150ನೇ ಜನ್ಮವರ್ಷ ಅಭಿಯಾನ ಮೂಡುಬಿದಿರೆ ಸಮಿತಿ ಆಶ್ರಯದಲ್ಲಿ ಸೂರ್ಯ ದೇವರ ಜನ್ಮದಿನ `ರಥಸಪ್ತಮಿ’ಯ ಪ್ರಯುಕ್ತ ಫೆ.18ರಂದು ಸ್ವರಾಜ್ಯ ಮೈದಾನದಲ್ಲಿ `ಸಾಮೂಹಿಕ ಸೂರ್ಯ ನಮಸ್ಕಾರ’ ಕಾರ್ಯಕ್ರಮ ನಡೆಯಲಿದೆ.

ಮಾ. 12,13ರಂದು ಆಳ್ವಾಸ್ ನಲ್ಲಿ ನೀನಾಸಂ ತಿರುಗಾಟ

ನೀನಾಸಂ ತಿರುಗಾಟದ ನಾಟಕಗಳು ಮಾರ್ಚ್ 12 ಮತ್ತು 13 ರಂದು ವಿದ್ಯಾಗಿರಿಯ ಆಳ್ವಾಸ್ ಆವರಣದಲ್ಲಿ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.

ಮಾರ್ಚ್ 7 ರಿಂದ ಆಳ್ವಾಸ್ ನಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣ

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಸಮಾಜಕಾರ್ಯ ಸ್ನಾತಕೋತ್ತರ ಪದವಿ ವಿಭಾಗವು ಮಾರ್ಚ್ 7,8,9 ರಂದು ಮೂರು ದಿನಗಳ ಕಾಲ ರಾಜ್ಯಮಟ್ಟದ ವಿಚಾರ ಸಂಕಿರಣ ನಡೆಯಲಿದೆ.

ಫೆ.15ರಂದು ಶ್ರೀಗುರು ಆರಾಧನಾ ಉತ್ಸವ

ಶ್ರೀ ಅಯ್ಯ( ನಾಗಲಿಂಗ)ನ ಮಠ ಸ್ವಾಮಿ ಅಧಿಷ್ಠಾನ ಕ್ಷೇತ್ರ ಅಲಂಗಾರಿನಲ್ಲಿ ಫೆ.15ರಂದು ಶ್ರೀಗುರು ಆರಾಧನಾ ಉತ್ಸವವು ನಡೆಯಲಿದೆ.

ಉಚಿತ ವಿಶೇಷ ತರಗತಿಯ ಉದ್ಘಾಟನೆ

ಸಂಸ್ಕೃತಿ ಪ್ರಸಾರ ಪ್ರತಿಷ್ಟಾನದ ವತಿಯಿಂದ ಮೂಡುಬಿದಿರೆ ವಲಯದ ಎಸ್ಎಸ್ಎಲ್ ಸಿಯಲ್ಲಿ ಕಲಿಯುತ್ತಿರುವ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳಿಗೆ ಉಚಿತ ವಿಶೇಷ ತರಗತಿಯ ಉದ್ಘಾಟನೆ ಇತ್ತೀಚೆಗೆ ನಡೆಯಿತು.

ಫೆ 9 : ನಿಡ್ಡೋಡಿಯಲ್ಲಿ ಗ್ರಾಮೋತ್ಸವ

ನಿಡ್ಡೋಡಿಯ ಜ್ಞಾನ ರತ್ನ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ಗ್ರಾಮೋತ್ಸವ ಫೆ.9ರಂದು ಸಂಜೆ ಸಂಸ್ಥೆಯ ಆವರಣದಲ್ಲಿ ನಡೆಯಲಿದೆ. ಕಟೀಲು ದೇವಳದ ಪ್ರಥಮ ದರ್ಕಾಜೆಲೇಜಿನ ಪ್ರಾಂಶುಪಾಲ ಎಮ್. ಬಾಲಕೃಷ್ಣ ಶೆಟ್ಟಿ ಗ್ರಾಮೋತ್ಸವವನ್ನು ಉದ್ಘಾಟಿಸಲಿದ್ದಾರೆ.

Suvarna News 24X7 Live online
333 Album