ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ : ಸಮಾಲೋಚನಾ ಸಭೆ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಾಡು-ನುಡಿಯ ರಾಷ್ಟ್ರೀಯ ಸಮ್ಮೇಳನ ಅಳ್ವಾಸ್ ನುಡಿಸಿರಿಗೆ ಈ ವರ್ಷ 10 ನೇ ವರ್ಷದ ಸಂಭ್ರಮ.ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ ಗೆ ಈ ವರ್ಷ 20ನೇ ವರ್ಷದ ಸಂಭ್ರಮ.

ಚೆಕ್ ವಂಚನೆ ಪ್ರಕರಣ:ಮಹಿಳೆಗೆ ಜಾಮಿನು

ಜಾಗ ಖರೀದಿಗೆಂದು ವ್ಯಕ್ತಿಯೋರ್ವರಿಗೆ ನೀಡಿದ ಚೆಕ್ ಬೌನ್ಸ್ ಆಗಿದ್ದಲ್ಲದೆ, ಮಾಡಿಕೊಂಡಿದ್ದ ಅಧಿಕಾರ ಪತ್ರವನ್ನು ದುರುಪಯೋಗಪಡಿಸಿದ ಆರೋಪದಲ್ಲಿ ಒಂದು ವಾರದ ಹಿಂದೆ ಬಂಧನಕ್ಕೊಳಗಾಗಿದ್ದ ಮಹಿಳೆಯೋರ್ವರಿಗೆ ನ್ಯಾಯಾಲಯವು ಜಾಮಿನು ನೀಡಿದೆ

ಪಾಲಡ್ಕ : ಹಟ್ಟಿಗೆ ಬೆಂಕಿ, 2ಲಕ್ಷ ರೂ ನಷ್ಟ

ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಪ್ಪಂದಡ್ಕ ಎಂಬಲ್ಲಿ ಗುರುರಾಜ ಶೆಟ್ಟಿ ಎಂಬವರ ಮನೆಯ ಹಟ್ಟಿಗೆ ಮಂಗಳವಾರ ಮಧ್ಯಾಹ್ನ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಹೋಗಿದ್ದು ಸುಮಾರು 2ಲಕ್ಷ ರೂ ನಷ್ಟ ಸಂಭವಿಸಿದೆ.

ಅಕ್ರಮ ಮನೆ ನಿರ್ಮಾಣ ತಹಸೀಲ್ದಾರ್ ದಾಳಿ

ಕಲ್ಲಬೆಟ್ಟು ಮರಿಯಾಡಿ ಕಲ್ಲು ಕೋರೆಯ ಸರ್ಕಾರಿ ಜಾಗದಲ್ಲಿ ಅಕ್ರಮ ಮನೆ ನಿರ್ಮಿಸಲು ಯತ್ನಿಸಿದ ಪ್ರಕರಣದಲ್ಲಿ ಮಂಗಳವಾರ ತಹಸೀಲ್ದಾರ್ ದಾಳಿ ನಡೆಸಿ ಮನೆ ನಿರ್ಮಾಣ ಕಾಮಗಾರಿ ತೆರವುಗೊಳಿಸಿದ್ದಾರೆ. ಸ್ಥಳದಲ್ಲಿದ್ದ ನಿರ್ಮಣ ಸಾಮಾಗ್ರಿಯನ್ನೆಲ್ಲ ಅವರು ವಶಪಡಿಸಿಕೊಂಡಿದ್ದಾರೆ.

ಉಚಿತ ಡ್ರೈವಿಂಗ್ ತರಬೇತಿ

ಮಂಜುಶ್ರಿ ಡ್ರೈವಿಂಗ್ ಸ್ಕೂಲ್ ಹಾಗೂ ಲಯನ್ಸ್ ಕ್ಲಬ್ ಮೂಡುಬಿದಿರೆ ಇವುಗಳ ಜಂಟಿ ಆಶ್ರಯದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಆರ್ಥಿಕವಾಗಿ ಹಿಂದುಳಿದ ಆಯ್ದ 36 ವಿದ್ಯಾರ್ಥಿಗಳಿಗೆ ಉಚಿತ ಡ್ರೈವಿಂಗ್ ತರಬೇತಿಯನ್ನು ನೀಡಲಾಗುವುದೆಂದು ಲಯನ್ಸ್ ಕ್ಲಬ್ ನ ಅಧ್ಯಕ್ಷ ಲಯನ್ ಚೇತನ್ ಕುಮಾರ್ ಶೆಟ್ಟಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದರು.

ಬಸ್ ಢಿಕ್ಕಿ: ದ್ವಿಚಕ್ರ ಸವಾರ ಮೃತ್ಯು

ಖಾಸಗಿ ಬಸ್ಸು ಢಿಕ್ಕಿಯಾಗಿ ದ್ವಿಚಕ್ರ ಸವಾರನೋರ್ವ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ಶನಿವಾರ ಬೆಳಿಗ್ಗೆ ಇಲ್ಲಿನ ಹಳೇ ಪೋಲಿಸ್ ಠಾಣೆ ಬಳಿ ನಡೆದಿದೆ. ತಮಿಳುನಾಡು ಮೂಲದ ಮತ್ತು ಈಗ ಮಾಸ್ತಿಕಟ್ಟೆಯಲ್ಲಿ ನೆಲೆಸಿರುವ ಚೆಲುವರಾಜು (50) ಮೃತಪಟ್ಟ ವ್ಯಕ್ತಿಯಾಗಿದ್ದಾರೆ.

ಶ್ರೀ ಕ್ಷೇತ್ರ ಪುತ್ತಿಗೆಯಲ್ಲಿ ಮಾರಿ ಸಮಾರಾಧನೆ

ಶ್ರೀ ಕ್ಷೇತ್ರ ಪುತ್ತಿಗೆ ಮಹತೋಭಾರ ಶ್ರೀ ಸೊಮನಾಥೇಶ್ವರ ದೇವಸ್ಥಾನದಲ್ಲಿ ಜ.14ರಂದು ಪ್ರತೀ ವರ್ಷದಂತೆ ಪುತ್ತಿಗೆ ಗ್ರಾಮಸ್ಥರ ಹಾಗೂ ಸಾರ್ವಜನಿಕರ ಸಹಕಾರದಿಂದ ಮಧ್ಯಾಹ್ನ ಮಾರಿ ಸಮಾರಾಧನೆ ಮಹಾಪೂಜೆ, ಮಹಾ ಅನ್ನಸಂತರ್ಪಣೆ,ರಾತ್ರಿ ರಂಗಪೂಜೆ ಮತ್ತು ಶ್ರೀ ರಕ್ತೇಶ್ವರಿ ದೈವದ ನರ್ತನ ಸೇವಾದಿಗಳು ಜರಗಲಿದೆ ಹಾಗೂ ಮಧ್ಯಾಹ್ನ ಗಂಟೆ 2ರಿಂದ ಜಿಲ್ಲೆಯ ಪ್ರಸಿದ್ದ ಕಲಾವಿದರಿಂದ ಪ್ರಚಂಡ ಕೌಶಿಕ ಯಕ್ಷಗಾನ ತಾಳಮದ್ದಳೆ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಗಿರಿನಾರ್ ಮುನಿರಾಜರ ಮೇಲೆ ಹಲ್ಲೆ ಪ್ರಕರಣ: ತ್ರಿಭುವನ್ ಜೈನ್ ಮಿಲನ್ ಖಂಡನೆ

ಗುಜರಾತ್ ರಾಜ್ಯದ ಗಿರಿನಾರ್ ನಲ್ಲಿ ಜೈನ ಮುನಿಗಳಾದ 108 ಶ್ರೀ ಪ್ರಬಲ ಸಾಗರ ಮುನಿರಾಜರ ಮೇಲೆ ದುಷ್ಕರ್ಮಿಗಳು ನಡೆಸಿದ ಹಲ್ಲೆಯನ್ನು ತುಮಕೂರು ಜಿಲ್ಲೆಯ ಮಂದಾರ ಗಿರಿಯ ಚತುರ್ಮುಖಿ ಬಸದಿಯ ಮಾನಸ್ತಂಭವನ್ನು ದುಷ್ಕರ್ಮಿಗಳು ಜನವರಿ 3 ರಂದು ಹಾನಿಗೊಳಿಸಿರುತ್ತಾರೆ.

ಘನತ್ಯಾಜ್ಯ ನಿಯಮ ಉಲ್ಲಂಘಿಸಿದಲ್ಲಿ ಕ್ರಮ

ಪುರಸಭಾ ವ್ಯಾಪ್ತಿಯಲ್ಲಿ ತ್ಯಾಜ್ಯ ಎಸೆಯುವ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ.ಸಾರ್ವಜನಿಕರು ನಿಯಮ ಉಲ್ಲಂಘನೆ ಮಾಡಿ ತಮ್ಮ ಉದ್ದಿಮೆಯಲ್ಲಿ ಘನತ್ಯಾಜ್ಯ ವಸ್ತುಗಳನ್ನು ಸಾರ್ವಜನಿಕ ರಸ್ತೆಗೆ ಎಸೆದು ಪರಿಸರ ಮಾಲಿನ್ಯ,ಸಾರ್ವಜನಿಕ ಉಪದ್ರವ ನೀಡುವ ಅಂಗಡಿ/ಮಾಲ್ ಳಿಗೆ ದಂಡನೆ ವಿಧಿಸಲಾಗುವುದು

ಸಹಶಿಕ್ಷಕರ ಸಂಘದ ರಾಜ್ಯ ಕಾರ್ಯಕಾರಿಣಿ ಸಭೆ

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ರಾಜ್ಯ ಕಾರ್ಯಕಾರಿಣಿ ಮತ್ತು ಸರ್ವ ಸದಸ್ಯರ ಸಭೆ ಜ.13ರಂದು ಪೂರ್ವಾಹ್ನ 10.30ಕ್ಕೆ ರಾಮನಗರದ ಕೃಷ್ಣಸ್ಮೃತಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಪ್ರೌಡಶಾಲಾ ಸಹಶಿಕ್ಷಕರ ಸಂಘದ ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ರಾಮಕೃಷ್ಣ ಶಿರೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಬಜ್ಪೆ: ಯುವಕ ನಾಪತ್ತೆ

ಬಜ್ಪೆ ಕುಪ್ಪೆಪದವು ನಿವಾಸಿ ಮಹಮ್ಮದ್ ಸಫ್ವಾನ್ (19) ಎಂಬಾತ ಬುಧವಾರ ನಾಪತ್ತೆಯಾಗಿದ್ದಾನೆ ಎಂದು ಆತನ ತಂದೆ ಮಹಮ್ಮದ್ ಶರಿಫ್ ಎಂಬವರು ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Suvarna News 24X7 Live online
333 Album