ಮೂಡುಬಿದಿರೆ ಆನಂದ ಆಚಾರ್ಯ ನಿಧನ

ಮೂಡುಬಿದಿರೆ ಶ್ರೀ ಗುರುಮಠ ಕಾಳಿಕಾಂಬಾ ದೇವಳಕ್ಕೆ ಸಂಬಂಧಿಸಿದ ಪುಚ್ಚಮೊಗರು ಗ್ರಾಮ ಕೂಡುವಳಿಕೆಯ ಮೊಕ್ತೇಸರರಾಗಿದ್ದ ಆನಂದ ಆಚಾರ್ಯ (52) ಮಂಗಳವಾರ ನಿಧನ ಹೊಂದಿದರು.

ಕಡಂದಲೆ: ನೀರಿಗೆ ಬಿದ್ದು ಮಹಿಳೆ ಸಾವು

ಮೇಯಲು ಬಿಟ್ಟಿದ್ದ ದನವನ್ನು ತರಲೆಂದು ಹೋಗುತ್ತಿದ್ದಾಗ ಮಹಿಳೆಯೋರ್ವರು ಹೊಳೆಬದಿಯಲ್ಲಿ ಆಯತಪ್ಪಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಪಾಲಡ್ಕ ಗ್ರಾಮದ ಕಡಂದಲೆಯಲ್ಲಿ ಸೋಮವಾರ ನಡೆದಿದೆ.

ಅಂಚೆ ಪಾಲಕ ಸದಾನಂದ ನಾರಾವಿ ಅವರಿಗೆ ಸನ್ಮಾನ

ಕಳೆದ 29 ವರ್ಷಗಳಿಂದ ಅಂಚೆ ಇಲಾಖೆಯ ವಿವಿಧೆಡೆಗಳಲ್ಲಿ ಕಾರ್ಯನಿರ್ವಹಿಸಿ ಡಿ.31ಕ್ಕೆ ನಿವೃತ್ತಿ ಹೊಂದಿದ ಮೂಡುಬಿದಿರೆ ಅಂಚೆ ಪಾಲಕರಾಗಿದ್ದ ಸದಾನಂದ ನಾರಾವಿಯವರನ್ನು ಸೋಮವಾರ ಅಂಚೆ ಕಛೇರಿಯಲ್ಲಿ ಸನ್ಮಾನಿಸಲಾಯಿತು.

ಹೆಗ್ಗಡೆ ಸಂಘದ ಮಾಜಿ ಅಧ್ಯಕ್ಷ ಮೇಲೆ ಹಲ್ಲೆ: ಖಂಡನೆ

ದ.ಕ. ಜಿಲ್ಲಾ ಹೆಗ್ಗಡೆ ಸಂಘದ ಮಾಜಿ ಅಧ್ಯಕ್ಷ ನಂದಕುಮಾರ್ ಹೆಗ್ಡೆ ಅವರಿಗೆ ಶುಕ್ರವಾರ ಕಾರ್ಕಳ ಕೋರ್ಟ್ ಆವರಣದಲ್ಲಿ ತಂಡವೊಂದು ಹಲ್ಲೆ ನಡೆಸಿರುವುದು ವರದಿಯಾಗಿದೆ.

ಮೂಡುಬಿದಿರೆಯಲ್ಲಿ ಚೈನ್ ಕಳ್ಳತನ

ಮೂಡಬಿದಿರೆ ಕಲ್ಲಬೆಟ್ಟು ಎಂಬಲ್ಲಿ ಬಸ್ಸಿಗೆ ಕಾಯುತ್ತಿದ್ದ ಮಹಿಳೆಯೊಬ್ಬಳ ಕತ್ತಿನಲ್ಲಿದ್ದ ನಾಲ್ಕು ಪವನ್ ಚಿನ್ನಚೈನ್ನ್ನು ಯುವಕನೊಬ್ಬ ಎಗರಿಸಿಕೊಂಡು ಹೋದ ಘಟನೆ ಭಾನುವಾರ ರಾತ್ರಿ 8:30ಕ್ಕೆ ನಡೆದಿದೆ.

ಸೆಬಾಸ್ಟಿಯನ್ ಡಿ’ಸೋಜ ನಿಧನ

ಕಲ್ಲಮುಂಡ್ಕೂರಿನ ಡಿ’ಸೋಜ ನಿವಾಸಿ ಸೆಬಾಸ್ಟಿಯನ್ ಡಿ’ಸೋಜ (82) ಡಿ.10 ರಂದು ನಿಧನ ಹೊಂದಿದರು.

ಶಾಲೆಯಿಂದ ಹೊರಗುಳಿದ ಮಕ್ಕಳ ಗಣತಿ ಕಾರ್ಯ

ಪ್ರಾಥಮಿಕ ಶಿಕ್ಷಣ ಸಾರ್ವತ್ರಿಕರಣದ ಹಿನ್ನಲೆಯಲ್ಲಿ ಎಲ್ಲಾ ಅರ್ಹ ವಯಸ್ಸಿನ ಮಕ್ಕಳನ್ನು ಶಿಕ್ಷಣದ ವ್ಯಾಪ್ತಿಗೆ ಒಳಪಡಿಸಲು ವಿವಿಧ ಯೋಜನೆಗಳನ್ನು ರೂಪಿಸಲಾದರೂ ಶಾಲೆಯಿಂದ ಮಕ್ಕಳು ಹೊರಗುಳಿದಿದ್ದಾರೆ .

ಆರೋಗ್ಯ ಮತ್ತು ನೈರ್ಮಲ್ಯ ಮಾಹಿತಿ ಕಾರ್ಯಕ್ರಮ

ವಿದ್ಯಾಗಿರಿಯ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ರಾಷ್ಟ್ರೀಯ ಸೇವಾ ಯೋಜನೆಯ ಸನಾತನ ಸಂಸ್ಥೆ,ಮಂಗಳೂರು ಇವರ ಸಹಯೋಗದೊಂದಿಗೆ ನ.29ರಂದು ಕಾರ್ಕಳದ ಶ್ರೀ ರವಿಶಂಕರ್ ಗುರೂಜಿ ಶಾಲೆಯಲ್ಲಿ "ಆರೋಗ್ಯ ಮತ್ತು ನೈರ್ಮಲ್ಯ " ಕುರಿತಾದ ಮಾಹಿತಿ ಕಾರ್ಯಕ್ರಮ ನಡೆಯಿತು.

ಮೂಡುಬಿದಿರೆ ವಲಯದ ವಿಶ್ವ ಅಂಗವಿಕಲ ದಿನಾಚರಣೆ

ಡಿ.3ರಂದು ಸಮಾಜ ಮಂದಿರದಲ್ಲಿ ಪುರಸಭಾ ಅಧ್ಯಕ್ಷ ರತ್ನಾಕರ ದೇವಾಡಿಗರವರ ಅಧ್ಯಕ್ಷತೆಯಲ್ಲಿ ವಿಶ್ವ ಅಂಗವಿಕಲ ದಿನಾಚರಣೆ ನಡೆಯಿತು.

ಆಯುರ್ವೇದ ಚಿಕಿತ್ಸಾ ಶಿಬಿರ

ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಸುಂಕದಕಟ್ಟೆ ಎಸ್.ಎನ್.ಎಸ್ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ ಎಡಪದವಿನ ಗ್ರಾಮ ಪಂಚಾಯತಿ ಸಭಾಭವನದಲ್ಲಿ ಆಯುರ್ವೇದ ಚಿಕಿತ್ಸಾ ಶಿಬಿರವನ್ನು ಶನಿವಾರದಂದು ಆಯೋಜಿಸಲಾಗಿತ್ತು.

ಡಿಸೆಂಬರ್ 4ರಂದು ತಾಕೋಡೆಯಲ್ಲಿ ಹೈನುಗಾರಿಕೆ ಮಾಹಿತಿ ಶಿಬಿರ

ಮಂಗಳೂರಿನ ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ(ನಿ) ಮತ್ತು ತಾಕೊಡೆ,ಆನೆಗುಡ್ಡೆ,ಪಡುಕೋಣಾಜೆ,ಮಾರೂರು ,ಬಿರಾವು,ಶಿರ್ತಾಡಿ ಮತ್ತು ಕಲ್ಲಬೆಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘ (ನಿ)ಇವರ ಜಂಟಿ ಆಶ್ರಯದಲ್ಲಿ ಹೈನುಗಾರಿಕೆಯಲ್ಲಿ ಆಧುನಿಕತೆ ಕುರಿತು ಮಾಹಿತಿ ಶಿಬಿರ,ಮೇವಿನ ಬೆಳೆಗಳ ಪ್ರಾತ್ಯಕ್ಷತೆ ಮತ್ತು ಹೆಣ್ಣು ಕರುಗಳ ಪ್ರದರ್ಶನ ಡಿ.4ರಂದು ಪದ್ರಾಡ್ ಕವಲ್ನ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ.

ಕಾಶಿಪಟ್ಣ ಜುಮ್ಮಾ ಮಸೀದಿ ಪದಾಧಿಕಾರಿಳ ಆಯ್ಕೆ

ಕಾಶಿಪಟ್ಣದ ಮುಹಿಯುದ್ದೀನ್ ಜುಮ್ಮಾ ಮಸೀದಿಯ ಅಧ್ಯಕ್ಷರಾಗಿ ಹಾಜಿ.ಎಚ್.ಎ.ಅಬ್ದುಲ್ ರಹಿಮಾನ್ ಹಾಸ್ಕೋ ಅವರು ಆಯ್ಕೆಯಾಗಿದ್ದಾರೆ

ಜಿಲ್ಲಾ ಸಹಶಿಕ್ಷಕರ ಸಂಘದ ಜೊತೆ ಕಾರ್ಣಿಕ್ ಸಮಾಲೋಚನೆ

ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪದಾಧಿಕಾರಿಗಳೊಡನೆ ನೈರುತ್ಯ ಶಿಕ್ಷಕರ ಕ್ಷೇತ್ರದ ಶಾಸಕ ಗಣೇಶ್ ಕಾರ್ಣೀಕ್ ಅವರು ಇತ್ತೀಚೆಗೆ ಸಹಶಿಕ್ಷಕರ ವಿವಿಧ ಬೇಡಿಕೆಗಳ ಬಗ್ಗೆ ಚರ್ಚಿಸಿ,ಬೇಡಿಕೆ ಈಡೇರಿಕೆಗಾಗಿ ಪ್ರಯತ್ನಸಲಾಗುವುದು ಎಂದು ಭರವಸೆ ನೀಡಿದ್ದಾರೆ

ಮಿಜಾರು: ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ

ಮೂಡುಬಿದಿರೆ ಮಿಜಾರು ಬಂಗಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಮಿಜಾರು ತುಳುನಾಡು ಯುವಕ ಮಂಡಳಿ ವತಿಯಿಂದ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ಮಿಜಾರು ಹಾಗೂ ತೋಡಾರಿನ ವಿದ್ಯಾರ್ಥಿಗಳನ್ನು ಇತ್ತೀಚೆಗೆ ಸಮ್ಮಾನಿಸಲಾಯಿತು.

ಇಂದು( ಡಿ.2) ಸಿ.ಐ.ಟಿ.ಯು ಮೂಡುಬಿದಿರೆ ವಲಯದ ಪ್ರಥಮ ಸಮ್ಮೇಳನ

ಸಿ.ಐ.ಟಿ.ಯು ಮೂಡುಬಿದಿರೆ ವಲಯ ಇದರ ಪ್ರಥಮ ಸಮ್ಮೇಳನವು ಇಂದು(ಡಿ.2) ಸಮಾಜ ಮಂದಿರದಲ್ಲಿ 11 ಗಂಟೆಗೆ ನಡೆಯಲಿದೆ ಎಂದು ಯೂನಿಯನ್ನ ಮೂಡುಬಿದಿರೆ ವಲಯ ಅಧ್ಯಕ್ಷೆ ರಮಣಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕೊಡ್ಯಡ್ಕ ಪ್ರಭಾಕರ ಹೆಗ್ಡೆ ನಿಧನ

ಪುತ್ತಿಗೆ ಗ್ರಾಮದ ಕೊಡ್ಯಡ್ಕ ಪ್ರಭಾಕರ ಹೆಗ್ಡೆ(62)ಕಳೆದ ಸೋಮವಾರ ಮಸ್ಕತ್ನಲ್ಲಿ ನಿಧನ ಹೊಂದಿದರು. ಲವ ಹೆಗ್ಡೆ ಎಂದೇ ಗುರುತಿಸಿಕೊಂಡಿದ್ದ ಅವರು ಮಸ್ಕತ್ ನಲ್ಲಿ ಕಳೆದ ಮೂರು ದಶಕಗಳಿಂದ ಖಾಸಗಿ ಕಂಪೆನಿಯೊಂದನ್ನು ನಡೆಸುತ್ತಿದ್ದರು.ಅವರು ಪತ್ನಿ, ಮೂವರು ಪುತ್ರರನ್ನು ಅಗಲಿದ್ದಾರೆ.

ಅಳಿಯೂರು ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ

ಮೂಡುಬಿದಿರೆಯ ಶಿರ್ತಾಡಿ ಜವಾಹರ್ ಲಾಲ್ ನೆಹರೂ ಪ್ರೌಢಶಾಲೆಯಲ್ಲಿ ಅಳಿಯೂರು ಹೋಬಳಿ ಮಟ್ಟದ ಪ್ರತಿಭಾ ಕಾರಂಜಿಯನ್ನು ಶಾಸಕ ಕೆ ಅಭಯಚಂದ್ರ ಜೈನ್ ಇತ್ತೀಚೆಗೆ ಉದ್ಘಾಟಿಸಿದರು.

ರೇಂಜ್ ಜಂಇಯ್ಯತುಲ್ ಮುಅಲ್ಲಿಮಿನ್ ಮಹಾಸಭೆ

ರೇಂಜ್ ಜಂಇಯ್ಯತುಲ್ ಮುಅಲ್ಲಿನ್ ಮಿನ್ ಮಹಾಸಭೆಯು ನ.27ರಂದು ಅಸಾಸುಲ್ ಇಸ್ಲಾಂ ಮದರಸ ಅಂಗರಕಾರ್ಯದಲ್ಲಿ ಬೆಳಿಗ್ಗೆ 8ಗಂಟೆಗೆ ನಡೆಯಲಿದೆ.ಈ ಸಭೆಯಲ್ಲಿ ಮಾಡೆಲ್ ಕ್ಲಾಸ್ ಮತ್ತು ತದ್ ರೀಬ್ ತರಗತಿಗಳು ನಡೆಯಲಿದ್ದು,ಸಂಪನ್ಮೂಲ ವ್ಯಕ್ತಿಗಳಾಗಿ ಕೆ.ಎಲ್.ಉಮರ್ ದಾರಿಮಿ ಮತ್ತು ತಪಾಸಣಾಧಿಕಾರಿ ಅಬ್ದುಲ್ ಹಮಿದ್ ಭಾಗವಹಿಸಲಿದ್ದಾರೆ.

ನವೆಂಬರ್ 15 ತೋಟಗಾರಿಕಾ ಬೆಳೆಗಳಿಂದ ಅಭಿವೃದ್ಧಿ ಚಿಂತನಾ ಕಾರ್ಯಾಗಾರ

ಮಂಗಳೂರು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮತ್ತು ಅರ್ಕುಳ ಚಾರಿಟೇಬಲ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಅರ್ಕುಳ ಅರ್ಕುಳ ಚಾರಿಟೇಬಲ್ ಸಭಾಂಗಣದಲ್ಲಿ ನವೆಂಬರ್ 15 ರಂದು ತೋಟಗಾರಿಕಾ ಬೆಳೆಗಳಿಂದ ಅಭಿವೃದ್ಧಿ ಚಿಂತನಾ ಕಾರ್ಯಾಗಾರ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Suvarna News 24X7 Live online
333 Album