ನವೆಂಬರ್ 18 ಜಿ.ಎಸ್.ಬಿ. ಸಮಾಜ ಬಾಂಧವರಿಗಾಗಿ ವಿವಿಧ ಸ್ಪರ್ಧೆಗಳು

ಮೂಡುಬಿದಿರೆ ನವಶಕ್ತಿ ಮಿತೃ ವೃಂದದ ವತಿಯಿಂದ ಶ್ರೀ ವೆಂಕಟರಮಣ ದೇವಸ್ಥಾನದ ಕಾರ್ತಿಕ ದೀಪೋತ್ಸವದ ಅಂಗವಾಗಿ ಜಿ.ಎಸ್.ಬಿ. ಸಮಾಜ ಬಾಂಧವರಿಗಾಗಿ ವಿವಿಧ ಸ್ಪರ್ಧೆ ಗಳು ಶ್ರೀ ಹನುಮಂತ ದೇವಸ್ಥಾನದ ಬಳಿ ಮೈನ್ ಶಾಲೆಯಲ್ಲಿ ನ18ರಂದು ನಡೆಯಲಿವೆ.

ಮೂಡುಬಿದಿರೆ ಮೈನ್ ಶಾಲೆಯಲ್ಲಿ ಯೋಗ ಪ್ರಶಿಕ್ಷಣ ಕಾರ್ಯಕ್ರಮ

ಮೂಡುಬಿದಿರೆಯ ಹಿರಿಯ ಪ್ರಾಥಮಿಕ ಶಾಲೆ ಮೈನ್ನ ವಿದ್ಯಾರ್ಥಿಗಳಿಗಾಗಿ ಯೋಗ ಪ್ರಶಿಕ್ಷಣ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಯಿತು. ಜಿಲ್ಲಾ ಆಯುಷ್ ನೋಡೆಲ್ ಅಧಿಕಾರಿ ಡಾ.ದೇವದಾಸ್ ಉದ್ಘಾಟಿಸಿದರು.

ಸಪಳಿಗ ಸಂಘದಿಂದ ನ.11ರಂದು ಗೂಡುದೀಪ, ರಂಗೋಲಿ ಸ್ಪರ್ಧೆ

ಮೂಡುಬಿದಿರೆಯ ಸಪಳಿಗ ಯಾನೆ ಗಾಣಿಗರ ಸೇವಾ ಸಂಘವು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ ನ.11 ನೇ ಆದಿತ್ಯವಾರ ಮೂಡುಬಿದಿರೆ ಸಮಾಜಮಂದಿರದಲ್ಲಿ 5ನೇ ವರ್ಷದ ಸಾಂಪ್ರದಾಯಿಕ ,ಆಧುನಿಕ ಮತ್ತು ಪ್ರತಿಕೃತಿ ಶೈಲಿಯ ಗೂಡುದೀಪ ಹಾಗೂ ಚುಕ್ಕಿ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಬನ್ನಡ್ಕದಲ್ಲಿ ರಾಯೀ ರಾಜಕುಮಾರರ ಅಂಚೆ ಚೀಟೆ ಪ್ರದರ್ಶನ

ಮೂಡುಬಿದಿರೆ `ಎಸ್.ಕೆ.ಎಫ್ ಕ್ಯಾನ್ ಕ್ರಿಯೇಟ್’ ಸನಿವಾಸ ವಿದ್ಯಾರ್ಥಿ ಶಿಬಿರದಲ್ಲಿ ಬುಧವಾರ ಅಧ್ಯಾಪಕ ರಾಯೀ ರಾಜಕುಮಾರ್ ಅವರು ಅಂಚೆಚೀಟೆ ಪ್ರದರ್ಶನ ಹಾಗೂ ಮಾಹಿತಿ ಕಾರ್ಯಕ್ರಮ ಬನ್ನಡ್ಕ ಎಸ್.ಕೆ.ಎಪ್.ನಲ್ಲಿ ನಡೆಯಿತು.

ಮೂಡುಬಿದಿರೆ: ಪಿ.ಸುಮತಿ ಪ್ರಭು ನಿಧನ

ಮೂಡುಬಿದಿರೆ ಗಾಂಧೀನಗರದ ನಿವಾಸಿ, ದಿ.ಪಿ.ದಾಮೋದರ ಪ್ರಭು ಅವರ ಪತ್ನಿ ಪಿ.ಸುಮತಿ ಪ್ರಭು (80ವ)ಅಲ್ಪಕಾಲದ ಅನಾರೋಗ್ಯದಿಂದ ಅಕ್ಟೋಬರ್ 13ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನ ಹೊಂದಿದರು.

ಅಕ್ಟೋಬರ್ 16 ಉದ್ಯೋಗ ಖಾತರಿ ಯೋಜನೆಯ ಸಮಗ್ರ ಮಾಹಿತಿ ಶಿಬಿರ

ಕರ್ನಾಟಕ ಪ್ರಾಂತ ರೈತ ಸಂಘ ದ.ಕ ಜಿಲ್ಲಾ ಸಮಿತಿ ಇದರ ಆಶ್ರಯದಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಸಮಗ್ರ ಮಾಹಿತಿ ಶಿಬಿರವು ಸಮಾಜಮಂದಿರ ಸಭಾದ ಸ್ವರ್ಣಮಂದಿರದಲ್ಲಿ ಅಕ್ಟೋಬರ್ 16ರಂದು ನಡೆಯಲಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಯಾದವ್ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ತಸ್ತೀಕು ಮೊತ್ತದ ಬಿಡುಗಡೆಗೆ ಇಂದ್ರ ವರ್ಗದಿಂದ ಮನವಿ

ತಸ್ತೀಕು ಮೊತ್ತವು ಇನ್ನೂ ಬಟವಾಡೆಯಾಗಿರುವುದಿಲ್ಲ. ಆದುದರಿಂದ ಹೆಚ್ಚಿಸಿದ ಹಣವನ್ನು ಎಲ್ಲಾ ದೇವಾಲಯಗಳಿಗೆ ,ಬಸದಿಗಳಿಗೆ ಶೀಘ್ರವೇ ಬಟವಾಡೆಮಾಡಬೇಕೆಂದು ತೌಳವ ಇಂದ್ರ ಸಮಾಜದ ಮಹಾ ಸಭೆಯಲ್ಲಿ ಮುಖಾಂತರ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮನವಿ ಸಲ್ಲಿಸಿದೆ.

ಅಕ್ಟೋಬರ್ 16 ಮೂಡುಬಿದಿರೆ ದಸರಾ ಉತ್ಸವ

ಮೂಡುಬಿದಿರೆ ಸಮಾಜ ಮಂದಿರ ಸಭಾದ ಆಶ್ರಯದಲ್ಲಿ `67 ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವ ’ ಅಕ್ಟೋಬರ್ 16 ರಿಂದ 20 ರವರೆಗೆ ಸಮಾಜಮಂದಿರದ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಮೂಡುಬಿದಿರೆ: ನಾಗಮಂಡಲ ಪೂರ್ವಭಾವಿ ಸಭೆ

ಪುತ್ತಿಗೆಗುತ್ತು ಕುಟುಂಬಸ್ಥರ ಪೆರೋಡಿ ನಾಗಬನದಲ್ಲಿ ಅಷ್ಟಪವಿತ್ರ ನಾಗ ಮಂಡಲೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳು 2013ರ ಮಾ.14ರಿಂದ 17ರ ತನಕ ನಡೆಯಲಿದೆ.

ಮೂಡುಬಿದಿರೆ: ರಸ್ತೆ ಸುರಕ್ಷತೆಯ ಬಗ್ಗೆ ಉಪನ್ಯಾಸ

ಮೂಡುಬಿದಿರೆ ಜೈನ ಪ್ರೌಢಶಾಲೆಯ ಸರ್ದಾರ್ ಪಟೇಲ್ ಗ್ರಾಹಕ ಕ್ಲಬ್ ನ ವಿಶೇಷ ಮಾಸಿಕ ಸಭೆಯಲ್ಲಿ ಮೂಡುಬಿದಿರೆ ಎಸ್.ಎನ್ ತಾಂತ್ರಿಕ ಸಂಸ್ಥೆಯ ಉಪನ್ಯಾಸಕ ಶಿವ ಪ್ರಸಾದ್ ಹೆಗ್ಡೆಯವರು ಮಕ್ಕಳು ರಸ್ತೆಯಲ್ಲಿ ಹೇಗೆ ಚಲಿಸಬೇಕು ,ವಾಹನಗಳಲ್ಲಿ ಯಾವ ಚಿಹ್ನೆಗಳನ್ನು ಬಳಸಬೇಕು,ಯಾವ ಯಾವ ಕ್ರಮಗಳಲ್ಲಿ ವಾಹನ ಚಾಲನೆ ಮಾಡಿದರೆ ಅಪಘಾತಗಳು ಘಟಿಸದಂತೆ ಜಾಗರೂಕತೆ ಮಾಡಬಹುದು ಎಂದು ಮಾಹಿತಿಗಳನ್ನು ತಿಳಿಸಿದರು.

ಅಕ್ಟೋಬರ್ 12ರಿಂದ 20: ಮೂಡುಬಿದಿರೆಯಲ್ಲಿ ಉಚಿತ ಮಕ್ಕಳ ಚಿಕಿತ್ಸಾ ಶಿಬಿರ

ಮೂಡುಬಿದಿರೆ ವಿದ್ಯಾಗಿರಿಯಲ್ಲಿನ ಆಳ್ವಾಸ್ ಆಯರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆಯ ಆಶ್ರಯದಲ್ಲಿ ಅಕ್ಟೋಬರ್ 12ರಿಂದ 20ರವರೆಗೆ ಉಚಿತ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಮೂಡುಬಿದಿರೆ: ಪುತ್ತಿಗೆಯಲ್ಲಿ ವಿದ್ಯಾರ್ಥಿಗಳಿಗೆ ಕೊಡೆ ವಿತರಣೆ

ಮಹಾತ್ಮ ಗಾಂಧಿ ರಾಷ್ಟೀಯ ಉದ್ಯೋಗ ಖಾತರಿಯ ಪ್ರಯುಕ್ತ ಗಾಂಧಿಜಯಂತಿಯಂದು ವಿಶೇಷ ಗ್ರಾಮಸಭೆ ಮತ್ತು ಪುತ್ತಿಗೆ ಗ್ರಾಮದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ 150 ವಿದ್ಯಾರ್ಥಿಗಳಿಗೆ ಶೇ.25ರ ನಿಧಿಯಿಂದ ಕೊಡೆ ವಿತರಣೆ ಕಾರ್ಯಕ್ರಮ ಪುತ್ತಿಗೆ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಮೂಡುಬಿದಿರೆ: ತರಕಾರಿ ವ್ಯಾಪಾರಿ ಗಿರಿಯಪ್ಪ ನಿಧನ

ಕಳೆದ ಮೂರು ದಶಕಗಳಿಂದ ಇಲ್ಲಿನ ಪುರಸಭೆಯ ತರಕಾರಿ ಮಾರ್ಕೆಟ್ ನಲ್ಲಿ ಹಣ್ಣು ಹಂಪಲು ವ್ಯಾಪಾರಿಯಾಗಿದ್ದ ಗಿರಿಯಪ್ಪ (53) ಅಲ್ಪಕಾಲದ ಅಸ್ವಾಸ್ಥ್ಯದಿಂದ ಗುರುವಾರ ನಿಧನರಾದರು.

ಬೆಳುವಾಯಿಯಲ್ಲಿ ಬಸ್ಸ್ ತಂಗುದಾಣ ಉದ್ಘಾಟನೆ

ಬೆಳುವಾಯಿ ಪೇಟೆಯ ಕೆಸರ್ ಗದ್ದೆಯಲ್ಲಿ ನೂತನವಾಗಿ ನಿರ್ಮಿಸಿದ ಬಸ್ ತಂಗುದಾಣದ ಉದ್ಘಾಟನೆಯನ್ನು ಮಂಗಳವಾರ ಶಾಸಕ ಕೆ.ಅಭಯಚಂದ್ರ ನೆರವೇರಿಸಿದರು.

ಮೂಡುಬಿದಿರೆ: ಬೆಳುವಾಯಿ ಮುಕ್ತಾನಂದ ಶಾಲೆಯಲ್ಲಿ ಸೈಕಲ್ ವಿತರಣೆ

ಬೆಳುವಾಯಿಯ ಸ್ವಾಮಿ ಮುಕ್ತಾನಂದ ಪರಮಹಂಸ ಪ್ರೌಢ ಶಾಲೆಯ 32 ವಿದ್ಯಾಥರ್ಿಗಳಿಗೆ ಸರಕಾರದ ವತಿಯಿಂದ ನೀಡಲಾದ ಸೈಕಲ್ ಗಳ ವಿತರಣೆಯನ್ನು ಮಂಗಳವಾರ ಶಾಸಕ ಕೆ.ಅಭಯಚಂದ್ರ ನೆರವೇರಿಸಿದರು.

ಮೂಡುಬಿದಿರೆ: ಸೀತಾ ಕಲ್ಯಾಣ ಮಹೋತ್ಸವ ಸಮಾಲೊಚನಾ ಸಭೆ

ಕೆಸರಗದ್ದೆ ಶ್ರೀ ರಾಮ ಮಂದಿರದ ದಶಮಾನೋತ್ಸವ ಸಂಭ್ರಮ ಅಂಗವಾಗಿ ಸ್ಥಳೀಯ ಜಿ.ಎಸ್.ಬಿ. ಸೇವಾ ಸಮಿತಿ ದ ವತಿಯಿಂದ ಬರುವ ಡಿ 27ರಂದು ನಡೆಸಲು ನಿರ್ಧರಿಸಿರುವ ಸೀತಾ ಕಲ್ಯಾಣ ಮಹೋತ್ಸವದ ಸಮಾಲೊಚನಾ ಸಭೆ ಭಾನುವಾರ ಮಂದಿರದ ಸಭಾಭವನದಲ್ಲಿ ನಡೆಯಿತು.

ಮೂಡುಬಿದಿರೆ ಪುರಸಭೆಯಿಂದ ಸಹಾಯಧನ

ಮೂಡುಬಿದಿರೆ ಪುರಸಭೆಯ ಸ್ವಂತ ಉದ್ಯೋಗ ನಿಧಿಯಿಂದ ಮಾಸ್ತಕಟ್ಟೆಯ ತಿಮ್ಮಪ್ಪ ಎಂಬವರಿಗೆ ಟಾಟಾ ಎಸಿಇ ವಾಹನ ಖರೀದಿಸಲು ಸಹಾಯಧನ ನೀಡಿದ್ದು ಶುಕ್ರವಾರ ಪುರಸಭಾಧ್ಯಕ್ಷ ರತ್ನಾಕರ ದೇವಾಡಿಗ ತಿಮ್ಮಪ್ಪ ಅವರಿಗೆ ಕೀಲಿಕೈ ಹಸ್ತಾಂತರಿಸಿದರು.

ಗಣೇಶೋತ್ಸವ
Suvarna News 24X7 Live online
333 Album