ನ.2 ವಾದ್ಯ ಕಲಾವಿದರ ಸಂಘದ ವಾರ್ಷಿಕೋತ್ಸವ

ಸಾಂಪ್ರಾದಾಯಿಕ ಸಂಗೀತ ಜನಪದ ವಾದ್ಯ ಕಲಾವಿದರ ಸಂಘದ ಪ್ರಥಮ ವಾರ್ಷಿಕೋತ್ಸವ ನ.2ರಂದು ಮೂಡುಬಿದಿರೆ ಸಮಾಜಮಂದಿರದಲ್ಲಿ ನಡೆಯಲಿದೆ.

ನ.2 ಬೆಳುವಾಯಿಯಲ್ಲಿ ಈಜುಸ್ಪರ್ಧೆ

ಅಲಂಗಾರು-ಮೂಡುಬಿದಿರೆ ಟಾಸ್ ಸ್ಪೋಟ್ಸ್ ಕ್ಲಬ್ ವತಿಯಿಂದ ಬೆಳುವಾಯಿ ಜಂಗಮ ಮಠದಕೆರೆಯಲ್ಲಿ ನ.2ರಂದು ಪುರುಷರ ಫ್ರೀ ಸ್ಟೈಲ್ ಈಜುಸ್ಪರ್ಧೆ ನಡೆಯಲಿದೆ.

ಮೂಡುಬಿದಿರೆ: ಜಿ.ಎಸ್.ಬಿ. ಸಮಾಜ ಬಾಂಧವರಿಗಾಗಿ ವಿವಿಧ ಸ್ಪರ್ಧೆಗಳು

ಮೂಡುಬಿದಿರೆ ಇಲ್ಲಿನ ಶ್ರೀ ವೆಂಕಟರಮಣ ದೇವಸ್ಥಾನದ ಕಾರ್ತಿಕ ದೀಪೋತ್ಸವದ ಅಂಗವಾಗಿ ನವಶಕ್ತಿ ಮಿತ್ರವೃಂದದ ವತಿಯಿಂದ ನ2ರಂದು ದೇವಳದ ಆವರಣದಲ್ಲಿ ಬೆಳಿಗ್ಗೆ 9ರಿಂದ ವಿವಿಧ ಸ್ಪರ್ಧೆಗಳು ನಡೆಯಲಿವೆ.

ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆ ತರಬೇತಿ ಶಿಬಿರ ಸಮಾಪನ

ಸರ್ಕಾರ ಬಡ ವಿದ್ಯಾರ್ಥಿಗಳಿಗಾಗಿ ಅನ್ನ ಭಾಗ್ಯ, ಕ್ಷೀರ ಭಾಗ್ಯದಂತಹ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ವಿದ್ಯಾರ್ಥಿಗಳು ತಮಗೆ ಸಿಗುತ್ತಿರುವ ಅವಕಾಶಗಳ ಸದುಪಯೋಗ ಪಡೆದುಕೊಂಡು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದಾಗ ಸಮಾಜದಲ್ಲಿ ಹೆಚ್ಚಿನ ಗೌರವ ಸಿಗುತ್ತದೆ ಎಂದು ಯುವಜನ ಸೇವೆ ಮತ್ತು ಮೀನುಗಾರಿಕೆ ಸಚಿವ ಕೆ.ಅಭಯಚಂದ್ರ ಜೈನ್ ಹೇಳಿದರು.

ಮೂಡುಬಿದಿರೆ: ಆರೋಗ್ಯ ರಕ್ಷಣೆ ಮಾಹಿತಿ

ಮೂಡುಬಿದಿರೆ ಜೈನ್ ಪ.ಪೂ. ಕಾಲೇಜು ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಶ್ರೀ ಸಿದ್ಧೇಶ್ವರ ಧರ್ಮಜಾಗೃತಿ ಸಂಸ್ಥೆಯ ವತಿಯಿಂದ ಡಾ.ಚಂದ್ರಕಾಂತ ಜೋಷಿ,ದಿನಚರಿ, ಋತುಚರ್ಯ, ಸದಾಚಾರ ಪಾಲನೆಯ ಮಹತ್ವದೊಂದಿಗೆ ಆರೋಗ್ಯ ರಕ್ಷಣೆ ಕುರಿತಾಗಿ ಗುರುವಾರ ಮಾಹಿತಿ ನೀಡಿದರು.

ಅ.14 ಶಿರ್ತಾಡಿಯಲ್ಲಿ ಕಂದಾಯ ಅದಾಲತ್

ಶಿರ್ತಾಡಿ ಗ್ರಾಮ ಪಂಚಾಯಿತಿಗೆ ಒಳಪಡುವ ಶಿರ್ತಾಡಿ, ವಾಲ್ಪಾಡಿ, ಪಡುಕೊಣಾಜೆ, ಮೂಡುಕೊಣಾಜೆ ಗ್ರಾಮಕ್ಕೆ ಸಂಬಂಧಿಸಿದಂತೆ ಕಂದಾಯ ಅದಾಲತ್ ಹಾಗೂ ಪಿಂಚಣಿ ಅದಾಲತ್ ಅ.14 ರಂದು ಬೆಳಗ್ಗೆ 10.30.ಕ್ಕೆ ನಡೆಯಲಿದೆ.

ಹಿಂದೂಗಳ ತೀರ್ಥಯಾತ್ರೆಗೆ ಸಬ್ಸಿಡಿ ನೀಡಲು ಸಿದ್ದು ಮುಂದು

ಹಿಂದೂ ಪುಣ್ಯಸ್ಥಳಗಳ ಯಾತ್ರೆಗೆ ಸಬ್ಸಿಡಿ ನೀಡಲು ಸಿದ್ದರಾಮಯ್ಯ ಸರ್ಕಾರ ಚಿಂತನೆ ನಡೆಸುತ್ತಿದ್ದು, ಇದು ಅನುಷ್ಠಾನಕ್ಕೆ ಬಂದರೆ ಬಹುಸಂಖ್ಯಾತರ ಬಹುದಿನದ ಬೇಡಿಕೆ ಈಡೇರಿದಂತಾಗುತ್ತದೆ.

ಕೇಂದ್ರದ ಅನವಶ್ಯಕ ಜಾಹೀರಾತಿಗಳಿಗೆ ಬಿತ್ತು ಕಡಿವಾಣ!

ಕೇಂದ್ರ ಸರ್ಕಾರವು ಪತ್ರಿಕೆಗಳಿಗೆ ಅನವಶ್ಯಕ ಜಾಹೀರಾತು ನೀಡುತ್ತಿದ್ದು, ಈ ರೀತಿ ದುಂದುವೆಚ್ಚ ಸರಿಯಲ್ಲ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ತಾಕೀತು ಮಾಡಿದೆ. ಜಾಹೀರತು ದುಂದು ವಿಚಾರ ತಡೆಗಟ್ಟುವಲ್ಲಿ ಸಮಿತಿಯೊಂದನ್ನು ರಚಿಸಿದ ಸುಪ್ರೀಂ ಕೋರ್ಟ್,ಅದು ತಯಾರಿಸಿದ ವರದಿ ಆಧಾರದಲ್ಲಿ ಸರ್ಕಾರಕ್ಕೆ ಅ.6ರಂದು ಎಚ್ಚರಿಕೆ ನೀಡಿದೆ.

ಅ.7ರಿಂದ ಮುಂಡ್ಕೂರಿನಲ್ಲಿ ಮಹಾವೀರಾ ಕಾಲೇಜಿನ ಎನ್ಎಸ್ಎಸ್ ಶಿಬಿರ

ಶ್ರೀಮಹಾವೀರ ಪ.ಪೂ ಕಾಲೇಜಿನ ಎನ್ಎಸ್ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರವು ಮುಂಡ್ಕೂರಿನ ವಿದ್ಯಾವರ್ಧಕ ಪ.ಪೂ ಕಾಲೇಜಿನಲ್ಲಿ ಅಕ್ಟೋಬರ್ 7ರಿಂದ 13ರವೆರೆಗೆ ನಡೆಯಲಿದೆ. ಕ್ರೀಡಾ ಸಚಿವ ಅಭಯಚಂದ್ರ ಜೈನ್ ಶಿಬಿರ ಉದ್ಘಾಟಿಸಲಿದ್ದು, ಶ್ರೀಮಹಾವೀರ ಪ.ಪೂ ಕಾಲೇಜಿನ ಪ್ರಾಂಶುಪಾಲ ಆರ್.ಗೋವಿಂದಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.

ಅಕ್ಟೋಬರ್ 7ರಿಂದ ಸಾಣೂರಿನಲ್ಲಿ ಆಳ್ವಾಸ್ ನ ಎನ್ಎಸ್ಎಸ್ ಶಿಬಿರ

ಆಳ್ವಾಸ್ ಪ.ಪೂ ಕಾಲೇಜಿನ ಎನ್ಎಸ್ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರ ಅಕ್ಟೋಬರ್ 7ರಿಂದ 13ರವೆಗೆ ಸಾಣೂರಿನ ಸರ್ಕಾರಿ ಪ.ಪೂ ಕಾಲೇಜಿನಲ್ಲಿ ನಡೆಯಲಿದೆ.

ಅಕ್ಟೋಬರ್ 7ರಂದು ಬೆಳುವಾಯಿಯಲ್ಲಿ ಪ್ರತಿಭಟನೆ

ಬಿಪಿಎಲ್ ಕಾರ್ಡ್, ಉದ್ಯೋಗ ಖಾತರಿ ಯೋಜನೆ, ಪರಿಶಿಷ್ಟ ಜಾತಿ, ಪಂಗಡಗಳ ಶೇ.25 ಮೀಸಲಾತಿ ನಿಧಿಯ ಸಮರ್ಪಕ ಜಾರಿ, ,ಬೆಳುವಾಯಿ ಗ್ರಾ.ಪಂ ವ್ಯಾಪ್ತಿಯಲ್ಲಿನ ಮೂಲಭೂತ ಸೌಕರ್ಯ ನೀಡುವುದು ಸಹಿತ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೆಳುವಾಯಿ ಗ್ರಾ.ಪಂ. ಕಚೇರಿ ಎದುರು ಅಕ್ಟೋಬರ್ 7ರಂದು 10ಗಂಟೆಗೆ ಪ್ರತಿಭಟನೆ ನಡೆಯಲಿದೆ.

ಪತ್ರಕರ್ತನಿಗೆ ಮಾತೃ ವಿಯೋಗ : ಮೂಡುಬಿದಿರೆ ಪ್ರೆಸ್ ಕ್ಲಬ್ ಸಂತಾಪ

ಯುವ ಪತ್ರಕರ್ತ, ಮೂಡುಬಿದಿರೆ ಪ್ರೆಸ್ ಕ್ಲಬ್ ನ ಸದಸ್ಯ ಯಶೋಧರ.ವಿ.ಬಂಗೇರಾ ಅವರ ತಾಯಿ ಮೋಹಿನಿ ಅವರು ಶನಿವಾರದಂದು ನಿಧನರಾದ ಹಿನ್ನಲೆಯಲ್ಲಿ ಮೂಡುಬಿದಿರೆ ಪ್ರೆಸ್ ಕ್ಲಬ್ ಸಂತಾಪ ಸೂಚಿಸಿದೆ.

ಕೊನ್ನೆಪದವು : ಹಾಲು ಉತ್ಪಾದಕರ ಸಂಘಕ್ಕೆ 4.75ಲಕ್ಷ ನಿವ್ವಳ ಲಾಭ

ಕೊನ್ನೆಪದವು ಹಾಲು ಉತ್ಪಾದಕರ ಸಂಘವು 2013-14ನೇ ಸಾಲಿನಲ್ಲಿ 4.75 ಲಕ್ಷ ರೂ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಮನೋಜ್.ವಿ. ಅಲ್ವಾರಿಸ್ ತಿಳಿಸಿದ್ದಾರೆ.

ಅಕ್ಟೋಬರ್ 6ರಿಂದ 15ರ ವರೆಗೆ ಚಿತ್ರಕಲಾ ಶಿಬಿರ

ಸಮೃದ್ಧಿ ಕಲಾ ಪ್ರತಿಷ್ಠಾನ ಹಾಗೂ ಜೈನ ಪ್ರೌಢಶಾಲೆಯ ಸಹಯೋಗದಲ್ಲಿ ದಸರಾ ಚಿತ್ರಕಲಾ ಶಿಬಿರ 6 ರಿಂದ 15ರವರೆಗೆ ಜೈನ ಪ್ರೌಢಶಾಲೆಯ ಸಭಾಭವನದಲ್ಲಿ ನಡೆಯಲಿದೆ.

ಕೊಂಕಣಿ ಶಿಕ್ಷಕರ ಸಭೆ

ವಲಯದ ಕೊಂಕಣಿ ಶಿಕ್ಷಕರ ಸಭೆ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ನಡೆಯಿತು.ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯ ಲಾರೆನ್ಸ್ ಡಿಸೋಜಾ, ರಿಜಿಸ್ಟ್ರಾರ್ ಬಿ.ದೇವದಾಸ ಪೈ, ವಿಕ್ಟರ್ ಕಾರ್ಕಳ, ಸುಬ್ರಾಯ ಪೈ ಕೊಂಕಣಿ ಶಿಕ್ಷಣದ ಅಗತ್ಯತೆಯನ್ನು ತಿಳಿಸಿದರು.

ಗುಂಡ್ಯಡ್ಕ:ಅವಿವಾಹಿತ ಆತ್ಮಹತ್ಯೆ

ಅವಿವಾಹಿತನೊಬ್ಬ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತಿಗೆ ಗ್ರಾಮದ ಗುಂಡ್ಯಡ್ಕದಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.

ಬೆಳುವಾಯಿಯಲ್ಲಿ ಹಿಂದಿ ದಿವಸ

ಮುಕ್ತಾನಂದ ಪರಮಹಂಸ ಪ್ರೌಢಶಾಲೆ ಬೆಳುವಾಯಿಯಲ್ಲಿ ಹಿಂದಿ ಸಪ್ತಾಹ ಹಿಂದಿ ದಿವಸ ಆಚರಣೆ ನಡೆಯಿತು.

ಸೆ.15 ರಿಂದ ಪುಸ್ತಕ ಹಬ್ಬ, ಸಾವಯವ ಉತ್ಪನ್ನ ಮೇಳ:

ಸೆಪ್ಟಂಬರ್ 15 ಸಾಹಿತಿ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಒಂದು ವಾರಗಳ ಪುಸ್ತಕ ಹಬ್ಬ ಮತ್ತು ಸಾವಯವ ಉತ್ಪನ್ನಗಳ ಮೇಳಕ್ಕೆ ಸಾಹಿತಿ ಡಾ.ನಾ. ಮೊಗಸಾಲೆ ಚಾಲನೆ ನೀಡಲಿದ್ದಾರೆ.

ಹಳೆ ಬಸ್ ತಂಗುದಾಣ ತೆರವು: ಪಂಚಲೋಹದ ವಿಗ್ರಹ

ಬಜ್ಪೆಪಂಚಾಯಿತಿ ಅಧ್ಯಕ್ಷ ಪ್ರದೀಪ್ ಸುವರ್ಣ ನೇತೃತ್ವದಲ್ಲಿ ಬುಧವಾರ ಬಜ್ಪೆಯ ಹಳೆ ಬಸ್ ತಂಗುದಾಣವನ್ನು ತೆರವುಗೊಳಿಸುವ ಸಂದರ್ಭ ಮಂತ್ರದೇವತೆಯ ಪಂಚಲೋಹದ ವಿಗ್ರಹ ಪತ್ತೆಯಾಗಿದೆ.

Suvarna News 24X7 Live online
333 Album