ಹೆಣ್ಣು ಶಿಶು ದಿನಾಚರಣೆ ಸ್ಪರ್ಧೆಗೆ ಪ್ರಬಂಧ ಆಹ್ವಾನ

ಅಂತರಾಷ್ಟ್ರೀಯ ಹೆಣ್ಣು ಶಿಶು ದಿನಾಚರಣೆ ಅಕ್ಟೋಬರ್ 11 ಇದರ ಅಂಗವಾಗಿ ಮಂಗಳೂರು ವಿ.ವಿ.ಯ ವಿವಿಧ ಪದವಿ ಮತ್ತು ಸ್ನಾತಕೋತ್ತರ ಕಾಲೇಜು ವಿದ್ಯಾರ್ಥಿಗಳಿಗೆ ಹೆಣ್ಣು ಮಗುವಿನ ಸಬಲೀಕರಣ ಎಂಬ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ತಳೆಕಳ ಶಾಂಭವಿ ಶೆಟ್ಟಿ ನಿಧನ

ದರ್ಬೆಯ ದಿವಂಗತ ಪಟೇಲ್ ತಿಮ್ಮಪ್ಪ ಶೆಟ್ಟಿ ಅವರ ಪತ್ನಿ ತಲೆಕಳ ಶಾಂಭವಿ ಶೆಟ್ಟಿ (82) ಆ. 23ರಂದು ಮಂಜೇಶ್ವರದ ಸ್ವಗೃಹದಲ್ಲಿ ನಿಧನ ಹೊಂದಿದರು.

ಶ್ರೀ ಸಿದ್ಧೇಶ್ವರ ಧರ್ಮಜಾಗೃತಿ ಸಂಸ್ಥೆಯ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ಶ್ರೀ ಸಿದ್ಧೇಶ್ವರ ಧರ್ಮಜಾಗೃತಿ ಸಂಸ್ಥೆಯ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಜೈನ ಪ್ರೌಢ ಶಾಲೆಯಲ್ಲಿ ಗೋಪಾಲಕೃಷ್ಣ ಮಲ್ಯ ಇವರಿಂದ ವಿದ್ಯಾರ್ಥಿಗಳಿಗೆ ರಾಷ್ಟ್ರಧ್ವಜದ ವಿಡಂಬನೆ ತಡೆಗಟ್ಟುವುದರ ಬಗ್ಗೆ ಹಾಗೂ ರಾಷ್ಟ್ರಧ್ವಜದ ಗೌರವವನ್ನು ಹೇಗೆ ಕಾಪಾಡುವುದರ ಬಗ್ಗೆ ಪ್ರಭೋದನೆ ನಡೆಯಿತು.

ಜೈನ ವಿದ್ಯಾರ್ಥಿ ವೇತನ ಅರ್ಜಿ ಆಹ್ವಾನ

ಅವಿಭಜಿತ ದ.ಕ ಜಿಲ್ಲೆಯ ವೈದ್ಯಕೀಯ, ತಾಂತ್ರಿಕ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ಅರ್ಹ ಜೈನ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಗುಣಾವತಮ್ಮ ಸ್ಮಾರಕ ಜೈನ ವಿದ್ಯಾರ್ಥಿ ವೇತನ ನೀಡಲಾಗುವುದು.

ಆ.15 ಎಕ್ಸಲೆಂಟ್ ನಲ್ಲಿ ಸ್ವಾತಂತ್ರ ಆಚರಣೆ

ಕಲ್ಲಬೆಟ್ಟುವಿನ ಎಕ್ಸಲೆಂಟ್ ಪ.ಪೂ ಕಾಲೇಜಿನಲ್ಲಿ ಆ.15ರಂದು 68 ಸ್ವಾತಂತ್ರೋತ್ಸವ ನಡೆಯಲಿದೆ.

ಆ.15 ಸಂಘಸಂಸ್ಥೆಗಳಿಗೆ ಕ್ರಿಕೆಟ್

ಸೌತ್ ಕೆನರಾ ಫೊಟೋಗ್ರಾಫರ್ ಅಸೋಸಿಯೇಶನ್ ಮೂಡುಬಿದಿರೆ ವಲಯದ ವತಿಯಿಂದ ಆ.15 ರಂದು ಎಸ್ ಕೆಪಿಎ ಇಂಡಿಪೆಂಡೆನ್ಸ್ ಟ್ರೋಫಿ - 2014 ಇಲ್ಲಿನ ಸ್ವರಾಜ್ ಮೈದಾನದಲ್ಲಿ ನಡೆಯಲಿದೆ.

ಆ.14 ಪಂಜಿನ ಮರವಣಿಗೆ

ವಿಶ್ವ ಹಿಂದೂ ಪರಿಷತ್ - ಬಜರಂಗದಳ ಮೂಡುಬಿದಿರೆ ಪ್ರಖಂಡ ಇದರ ಆಶ್ರಯದಲ್ಲಿ ಆ. 14 ರಂದು ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಸಮಾಜಮಂದಿರದವರೆಗೆ ಪಂಜಿನ ಮೆರವಣಿಗೆ ಹಾಗೂ ಅಖಂಡ ಭಾರತ ಸಂಕಲ್ಪ ದಿನಾಚರಣೆ ನಡೆಯಲಿದೆ.

ಆ.8 ಕಂದಾಯ ಅದಾಲತ್

ಮೂಡುಬಿದಿರೆ ಹೋಬಳಿಗೆ ಸಂಬಂಧಿಸಿದಂತೆ ಹೊಸಬೆಟ್ಟು ಗ್ರಾ.ಪಂ.ಗೆ ಒಳಪಡುವ ಹೊಸಬೆಟ್ಟು, ತೋಡಾರು, ಪುಚ್ಚಮೊಗರು, ಇರುವೈಲು ಗ್ರಾಮಗಳಿಗೆ ಸಂಬಂಧಿಸಿದಂತೆ ಕಂದಾಯ ಅದಾಲತ್ ಹಾಗೂ ಪಿಂಚಣಿ ಅದಾಲತನ್ನು ಆ.8 ರಂದು ಬೆಳಿಗ್ಗೆ 10.30. ಗಂಟೆಗೆ ಮಂಗಳೂರು ಸಹಾಯಕ ಆಯುಕ್ತರು ನಡೆಸಿಕೊಡಲಿದ್ದಾರೆ.

ವಾಟ್ಸ್ ಅಪ್ Close
ವಾಟ್ಸ್ ಅಪ್ Close

ಸಾಮಾಜಿಕ ಜಾಲ ತಾಣಗಳಲ್ಲೇ ನಾಗಲೋಟದಲ್ಲಿ ಓಡುತ್ತಿರುವ ವಾಟ್ಸ್ ಅಪ್ ನ ತುಣುಕುಗಳತ್ತ ಇಣುಕುವ ಪ್ರಯತ್ನ...ಇಲ್ಲಿ ಹಾಸ್ಯವಿದೆ...ಅಪಹಾಸ್ಯವಿದೆ..ವಿಪರ್ಯಾಸವಿದೆ..ಇವೆಲ್ಲವುಗಳನ್ನು ನಮ್ಮಬೆದ್ರ ಡಾಟ್ ಕಾಂನಲ್ಲಿ ಸೆರೆ ಹಿಡಿಯಲು ಬರುತ್ತಿದೆ,,,ವಾಟ್ಸ್ ಅಪ್ ಕ್ಲೋಸ್ ಅಪ್...

ಸಿದ್ಧಕಟ್ಟೆ ಕೃಷಿಕ ವಿಕ್ಟರ್ ವಾಸ್ ನಿಧನ

ಸಿದ್ಧಕಟ್ಟೆ ನಿವಾಸಿ ಕೃಷಿಕ ವಿಕ್ಟರ್ ವಾಸ್ (71) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಸ್ವಗೃಹದಲ್ಲಿ ನಿಧನರಾದರು.

ಆಗಸ್ಟ್ 8 ಮಂಗಳೂರಿನಲ್ಲಿ ನಾಟ್ಯಾಯನ

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬಾಲ ಕಲಾವಿದೆ ಅಯನಾ.ವಿ.ರಮಣ್ ಅವರ ಮನೆ ಮನೆಗೆ ಭರತನಾಟ್ಯ ಸರಣಿಯ 250ನೇ ಕಾರ್ಯಕ್ರಮ ನಾಟ್ಯಾಯನ ಆಗಸ್ಟ್ 8ರಂದು ಸಂಜೆ 6ಕ್ಕೆ ಮಂಗಳೂರಿನ ಸನಾತನ ನಾಟ್ಯಾಲಯದಲ್ಲಿ ಸಭಾಂಗಣದಲ್ಲಿ ನಡೆಯಲಿದೆ.

ಆಗಸ್ಟ್ 3: ಸಪಲಿಗರ ಸಂಘದಿಂದ ಆಟಿಡೊಂಜಿ ದಿನ

ಸಪಲಿಗರ ಯಾನೆ ಗಾಣಿಗರ ಸೇವಾ ಸಂಘ, ಮಹಿಳಾ ಹಾಗೂ ಯುವ ವೇದಿಕೆ ಆಶ್ರಯದಲ್ಲಿ ಆಗಸ್ಟ್ 3ರಂದು ಬೆಳಿಗ್ಗೆ 10.30ರಿಂದ 5ನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮ ಮಹಾವೀರ ಕಾಲೇಜು ಬಳಿಯ ಸಾರಾ ನಿವಾಸದಲ್ಲಿ ನಡೆಯಲಿದೆ.

ಆಗಸ್ಟ್ 1: ಸಾಮಾಜಿಕ ಲೆಕ್ಕ ಪರಿಶೋಧನೆಯ ಗ್ರಾಮ ಸಭೆ

ಕಂದಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ 2014-15ನೇ ಸಾಲಿನ ಒಂದನೆ ಸುತ್ತಿನ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನೆಯ ಗ್ರಾಮ ಸಭೆ.

ಕಾವೂರು: ಗ್ರಾಹಕ ಕ್ಲಬ್ ಉದ್ಘಾಟನೆ

ಕಾವೂರಿನ ಮುಲ್ಲಕಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ರಾಹಕ ಕ್ಲಬ್ ನ್ನು ಉದ್ಘಾಟಿಸಲಾಯಿತು. ಮೂಡುಬಿದಿರೆ ಗ್ರಾಹಕ ಕ್ಲಬ್ ಸಂಘಟನೆಯ ಅಧ್ಯಕ್ಷ ದ.ಕ.ಜಿಲ್ಲಾ ಗ್ರಾಹಕ ಸಂಘಟನೆ ಒಕ್ಕೂಟದ ಜತೆ ಕಾರ್ಯದರ್ಶಿ ರಾಯೀ ರಾಜಕುಮಾರ್ ಕ್ಲಬ್ ಅನ್ನು ಉದ್ಘಾಟಿಸಿದರು.

ಕಲ್ಲಮುಂಡ್ಕೂರು: ಶ್ರೀಪದ್ಧತಿ ನಾಟಿ ಪ್ರಾತ್ಯಾಕ್ಷಿಕೆ

ಕಲ್ಲಮುಂಡ್ಕೂರು ಶ್ರೀ ಕ್ಷೇ.ಧ.ಗ್ರಾ.ಯೋ ಒಕ್ಕೂಟದ ಪಯ್ಯೊಟ್ಟು ಪುರಂದರ ಅವರ ಮನೆಯಲ್ಲಿ ಶ್ರೀ ಪದ್ಧತಿ ಭತ್ತದ ನಾಟಿ ಬಗ್ಗೆ ಮಾಹಿತಿ ಪ್ರಾತ್ಯಕ್ಷಿಕೆ ಶನಿವಾರ ನಡೆಯಿತು.

ವಿಶ್ವ ಜನಸಂಖ್ಯಾ ದಿನಾಚರಣೆ

ಆಳ್ವಾಸ್ ಆಯುರ್ವೆದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವಿದ್ಯಾಗಿರಿ ಆಶ್ರಯದಲ್ಲಿ ಮೂಡಬಿದಿರೆ ಧನಲಕ್ಷ್ಮಿಕ್ಯಾಶ್ಯು ಇಂಡಸ್ಟ್ರೀಸ್ ನಲ್ಲಿ ವಿಶ್ವ ಜನಸಂಖ್ಯಾ ದಿನ ಆಚರಿಸಲಾಯಿತು.

ಮೂಡುಬಿದಿರೆ: ಗ್ರಾಹಕ ಕ್ಲಬ್ ಮಾಸಿಕ ಸಭೆ

ಜೈನ ಪ್ರೌಢಶಾಲೆಯ ಸರ್ದಾರ್ ಪಟೇಲ್ ಗ್ರಾಹಕ ಕ್ಲಬ್ ನವಿಶೇಷ ಮಾಸಿಕ ಸಭೆ ಶುಕ್ರವಾರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ರಾಧಾಕೃಷ್ಣ ತೊಡಿಕಾನ ಮಾತನಾಡಿದರು. ಕ್ಲಬ್ನ ಸಂಚಾಲಕ ರಾಯೀ ರಾಜ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕ್ಲಬ್ ನ ಕಾರ್ಯದರ್ಶಿ ಶ್ರೇಯಾ ಕುಮಾರಿ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಪ್ರಣಾಮ್ ಆಚಾರ್ಯ ವಂದಿಸಿದರು.

ಪೊಂಪೈ ಶಾಲೆಯಲ್ಲಿ ಸಂಘಗಳ ಉದ್ಘಾಟನೆ

ಕೈಕಂಬ ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಾಧ್ಯಮ ಶಾಲೆಯ ನೂತನ ಶೈಕ್ಷಣಿಕ ವರ್ಷದ ಸಂಘಗಳ ಉದ್ಘಾಟನಾ ಸಮಾರಂಭ ನಡೆಯಿತು.

ಅಲಂಗಾರಿನಲ್ಲಿ ರೋಟರಿ ವತಿಯಿಂದ ಅನ್ನದಾನ

ರೋಟರಿ ಕ್ಲಬ್ ಟೆಂಪಲ್ ಟೌನ್ ವತಿಯಿಂದ ಅಲಂಗಾರ್ನಲ್ಲಿರುವ ಮೌಂಟ್ ರೋಜರಿ ವೃದ್ಧಾಶ್ರಮದ 250 ಮಂದಿಗೆ ಅನ್ನದಾನ ಕಾರ್ಯಕ್ರಮ ಶನಿವಾರ ಜರುಗಿತು.

ಮೂಡುಬಿದಿರೆಯಲ್ಲಿ ಶ್ರೀ ಗುರುಪೂಜಾ ಉತ್ಸವ

ಅನ್ಯರ ಚಿಂತನೆಗಾಗಿ ಬದುಕನ್ನು ಮುಡಿಪಾಗಿರಿಸುವುದು. ಭಾರತೀಯರ ವಿಶೇಷತೆ.ಗುರುಪೂಜಾ ಉತ್ಸವ ಇಂತಹ ತ್ಯಾಗದ ಮನೋಭಾವನೆ ಮೂಡಿಸುವ ಉತ್ಸವವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗ ಸಹಕಾರ್ಯವಾಹ ಜನಾರ್ಧನ ಪ್ರತಾಪನಗರ ಹೇಳಿದರು.

Suvarna News 24X7 Live online
333 Album