ಪಾಲಡ್ಕ: ಪ್ರೋತ್ಸಾಹಧನ ವಿತರಣೆ

ನೆಕ್ಕರೆ ಕುದ್ರಿಪದವು ಹೆನ್ರಿ ಬೆನೆಡಿಕ್ತಾ ಡಿ’ಸೋಜಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶೈಕ್ಷಣಿಕ ವರ್ಷ 2014-15 ನೇ ಸಾಲಿನ ವಿದ್ಯಾರ್ಥಿ ಪ್ರೋತ್ಸಾಹ ಧನ 50,000 ರೂಪಾಯಿಗಳನ್ನು 28 ಮಂದಿ ವಿದ್ಯಾರ್ಥಿಗಳಿಗೆ ಪಾಲಡ್ಕ ಸಂತ ಇಗ್ನೇಶಿಯಸ್ ಲೊಯೊಲಾ ಚರ್ಚ್ನಲ್ಲಿ ಬಾನುವಾರ ವಿತರಿಸಲಾಯಿತು.

ಜುಲೈ 9ರಿಂದ ಸಹಶಿಕ್ಷಕರ ಸಂಘದ ಚುನಾವಣೆ

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ದ.ಕ.ಜಿಲ್ಲಾ ಘಟಕದ ಚುನಾವಣೆ ಜುಲೈ 9 ರಿಂದ ಅಗಸ್ಟ್ 3 ರವರೆಗೆ ನಡೆಯಲಿದೆ. ಬೆಳುವಾಯಿಯ ಶ್ರೀ ಮುಕ್ತಾನಂದ ಪರಮಹಂಸ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಸ್.ಸದಾಶಿವ ಶೆಟ್ಟಿ ಎಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ದ.ಕ.ಜಿಲ್ಲಾ ಘಟಕದ ಅಧ್ಯಕ್ಷ ರಾಮಕೃಷ್ಣ ಶಿರೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಡ್ತಿ ಪಡೆದ ಶಿಕ್ಷಕರ ಘಟಕ ಸ್ಥಾಪನೆ

ಪ್ರಾಥಮಿಕ ಶಾಲೆಯಿಂದ ಭಡ್ತಿ ಪಡೆದು, ಪ್ರೌಢಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮೂಡುಬಿದಿರೆ ವಲಯದ ಶಿಕ್ಷಕರ ಸಭೆ ಶುಕ್ರವಾರ ಸರ್ಕಾರಿ ಹಿ.ಪ್ರಾ.ಶಾಲೆ ಮೂಡುಬಿದಿರೆ ಥರ್ಡ್ ನಡೆಯಿತು.

ಅಲಂಗಾರಿನಲ್ಲಿ ಆಯುರ್ವೇದ ಶಿಬಿರ

ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆ ವಿದ್ಯಾಗಿರಿ ಇದರ ಆಶ್ರಯದಲ್ಲಿ ಅಲಂಗಾರಿನ ಆಕೋ ಕಾಂಪ್ಲೆಕ್ಸ್ ನಲ್ಲಿ ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರವನ್ನು ಭಾನುವಾರ ಏರ್ಪಡಿಸಲಾಗಿತ್ತು.

ಏ.27ರಂದು ಮಾರುರಿನಲ್ಲಿ ರಕ್ತದಾನ ಶಿಬಿರ

ಶ್ರೀ ಕೃಷ್ಣ ಗೆಳೆಯರ ಬಳಗ ಮಾರೂರು ಹೊಸಂಗಡಿ, ಶ್ರೀ ಜಗದ್ಗುರು ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಕರಿಂಜೆ, ಶ್ರೀ ಮಾತೃಭೂಮಿ ಗ್ರಾಮ ವಿಕಾಸ ಟ್ರಸ್ಟ್ ಹೊಸಂಗಡಿ-ಬಡಕೋಡಿ ಹಾಗೂ ವೆನ್ಲಾಕ್ ರಕ್ತನಿಧಿ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಎ.27 ಬೆಳಿಗ್ಗೆ9 ಗಂಟೆಯಿಂದ ರಕ್ತದಾನ ಶಿಬಿರ ಮಾರೂರು ಶಾಲೆಯಲ್ಲಿ ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಮೂಡುಬಿದಿರೆಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ

ಮೂಡುಬಿದಿರೆ ಪ್ರಾಂತ್ಯ ಗ್ರಾಮದ ಕೊಡಂಗಲ್ಲು ಮತ್ತು ಕರಿಂಜೆ ಗ್ರಾಮದ ಕಕ್ಕೆಬೆಟ್ಟು ಮಾರೂರು ಗ್ರಾಮದ ನೆತ್ತೋಡಿಯಲ್ಲಿ ಬಿಜೆಪಿ ಪ್ರಮುಖ ಕಾರ್ಯಕರ್ತರ ಸಭೆ ಸೋಮವಾರ ನಡೆಯಿತು.

ಜೈನ ಪ್ರೌಢಶಾಲೆಯಲ್ಲಿ ಎಂಪವರಿಂಗ್ ಯೂತ್ ತರಬೇತಿ

ಜೇಸಿಐ ಮೂಡುಬಿದಿರೆ ತ್ರಿಭುವನ್ ಆಶ್ರಯದಲ್ಲಿ ಮೂಡುಬಿದಿರೆ ಜೈನ್ ಹೈಸ್ಕೂಲ್ ನಲ್ಲಿ ಒಂದು ವಾರಗಳ ನಡೆದ ಎಂಪವರಿಂಗ್ ಯೂತ್ ತರಬೇತಿ ಸಮಾರೋಪಗೊಂಡಿತು.

ಆಳ್ವಾಸ್ ನರ್ಸಿಂಗ್ ಕಾಲೇಜಿನಲ್ಲಿ ಆಭಿಶಿಕ್ಷಣ ಕಾರ್ಯಕ್ರಮ

ನ್ಯಾಷನಲ್ ಸ್ಕಿಲ್ ಡೆವಲಪ್ ಮೆಂಟ್ ಕಾರ್ಪೋರೇಶನ್ ವತಿಯಿಂದ ನೈಪುಣ್ಯ ಬೆಳವಣಿಗೆಯ ಬಗ್ಗೆ ಆಭಿಶಿಕ್ಷಣ ಕಾರ್ಯಕ್ರಮ ಆಳ್ವಾಸ್ ನರ್ಸಿಂಗ್ ಕಾಲೇಜಿನಲ್ಲಿ ಗುರುವಾರ ಜರುಗಿತು.

ಪಡುಕೊಣಾಜೆ ಕ್ಲಸ್ಟರ್ ಸಮುದಾಯದತ್ತ ಶಾಲೆ

ಪಡುಕೊಣಾಜೆ ಕ್ಲಸ್ಟರ್ ನ 4 ಸ.ಕಿ.ಪ್ರಾ.ಶಾಲೆ ಮತ್ತು 3 ಸ.ಹಿ.ಪ್ರಾ.ಶಾಲೆಗಳಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮ ನಡೆಯಿತು.ಎಲ್ಲಾ ಶಾಲೆಗಳಲ್ಲಿ ಮಕ್ಕಳ ಕಲಿಕಾ ಪ್ರಗತಿಯ ಬಗ್ಗೆ ಚರ್ಚಿಸಲಾಯಿತು ಮತ್ತು ಪ್ರತಿಭಾ ಪ್ರದರ್ಶನ ನಡೆಸಲಾಯಿತು. ಪೋಷಕರಿಗೆ ಮತದಾನದ ಜಾಗೃತಿ ಬಗ್ಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ಏ.14ರಂದು ಡಾ.ಬಿ.ಆರ್ ಅಂಬೇಡ್ಕರ್ 123ನೇ ಜನ್ಮದಿನಾಚರಣೆ

ಮೂಡುಬಿದಿರೆ ಹೋಬಳಿ ಶಾಖೆಯ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಡಾ. ಬಿ.ಆರ್ ಅಂಬೇಡ್ಕರ್ 123ನೇ ಜನ್ಮದಿನಾಚರಣೆ ಕಾರ್ಯಕ್ರಮ ಏ.14 ರಂದು ಸಮಾಜ ಮಂದಿರದ ಸಭಾಭವನದಲ್ಲಿ ನಡೆಯಲಿದೆ.

ಎಪ್ರಿಲ್ 15 ಕೋಡಂಗಲ್ಲು ಮಾರಿಪೂಜೆ

ಮೂಡುಬಿದಿರೆ ಕೋಡಂಗಲ್ಲು ಮಹಮ್ಮಾಯಿ ದೇವಸ್ಥಾನದಲ್ಲಿ ಮಾರಿಪೂಜಾ ಮಹೋತ್ಸವವು ಎಪ್ರಿಲ್ 15ರಂದು ನಡೆಯಲಿದೆ.

ಎಪ್ರಿಲ್ 18ರಿಂದ ಸ್ವಲಾತ್ ವಾರ್ಷಿಕೋತ್ಸವ

ಮೂಡುಬಿದಿರೆ ಮಸ್ಜಿದುನ್ನೂರ್ ಮಾರ್ಪಾಡಿ ಕೋಟೆಬಾಗಿಲು ಇದರ ಆಶ್ರಯದಲ್ಲಿ ವಾರಕ್ಕೊಮ್ಮೆ ನಡೆಯುವ ಸ್ವಲಾತ್ ವಾರ್ಷಿಕೋತ್ಸವದ ಪ್ರಯುಕ್ತ 3 ದಿನಗಳ ಮತಪ್ರವಚನ ಎಪ್ರಿಲ್ 18ರಿಂದ 20ರ ವರೆಗೆ ಖಿಲ್ಲಾಜಾಮಿಅ ಮಸೀದಿಯ ಅಧ್ಯಕ್ಷ ಪಾರ್ಕರ್ ಮುಹಮ್ಮದ್ ಶರೀಫ್ ಸಾಹೇಬ್ ಇವರ ನೇತೃತ್ವದಲ್ಲಿ ಜರಗಲಿರುವುದು.

ಮೂಡುಬಿದಿರೆ: ಸಾಮೂಹಿಕ ವಿವಾಹ ಮುಂದೂಡಿಕೆ

ಮೂಡುಬಿದಿರೆ ಇಲೆವೆನ್ ಕ್ರಿಕೆಟರ್ಸ್ ವತಿಯಿಂದ ಸ್ವರಾಜ್ಯ ಮೈದಾನದಲ್ಲಿ ಏ.10 ರಂದು ನಡೆಯಬೇಕಾಗಿದ್ದ ಸಾಮೂಹಿಕ ವಿವಾಹವನ್ನು ಹಾಗೂ ಲಕ್ಕಿಡಿಪ್ ಡ್ರಾವನ್ನು ಚುನಾವಣೆಯ ಪ್ರಯುಕ್ತ ಮೇ.2 ತಾರೀಕಿಗೆ ಮುಂದೂಡಲಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಏ.29ರಿಂದ ಪುತ್ತಿಗೆ ಜಾತ್ರೆ

ಮೂಡುಬಿದಿರೆ ಶ್ರೀ ಕ್ಷೇತ್ರ ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದ ವರ್ಷಾವಧಿ ಮಹೋತ್ಸವ ಏ.14ರಿಂದ 29ರ ವರೆಗೆ ನಡೆಯಲಿದೆ.

ಎ.14 ಪಿಂಚಣಿದಾರರ ಮಹಾಸಭೆ

ಮೂಡುಬಿದಿರೆ ಪಿಂಚಣಿದಾರರ ಸಂಘದ ಮಹಾಸಭೆ ಹಾಗೂ ವಾರ್ಷಿಕೋತ್ಸವ ಮೂಡುಬಿದಿರೆ ಸಮಾಜಮಂದಿರದಲ್ಲಿ ಎ.14ರಂದು ನಡೆಯಲಿದೆ.

ಮಾ.8ರಂದು ಅಖಿಲ ಭಾರತ ಕಾರ್ಮಿಕ ಸಂಘದ ವಾರ್ಷಿಕೋತ್ಸವ

ಅಖಿಲ ಭಾರತ ಕಾರ್ಮಿಕ ಸಂಘದ ನಾಲ್ಕನೇ ವಾರ್ಷಿಕೋತ್ಸವ, ಪಡುಕೊಣಾಜೆ ಓಂ ಶ್ರೀ ಮೇಕಾರು ಕಲಾವೃಂದ ಸಹಕಾರದೊಂದಿಗೆ ಮಾ.8ರಂದು ಪಡುಕೊಣಾಜೆಯಲ್ಲಿ ನಡೆಯಲಿದೆ.

ಮಾ. 14ರಿಂದ ಶ್ರೀಕ್ಷೇತ್ರ ದರೆಗುಡ್ಡೆಯಲ್ಲಿ ವರ್ಷಾವಧಿ ಜಾತ್ರೆ

ಮೂಡುಬಿದಿರೆ ದರೆಗುಡ್ಡೆ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆ ಮಾ.14ರಿಂದ ಮಾ.19ರವರೆಗೆ ಉಡುಪಿ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಉಪಸ್ಥಿತಿಯಲ್ಲಿ ನಡೆಯಲಿದೆ.

ಮಾ.9ರಂದು ಕಾಂತಾವರದಲ್ಲಿ ನುಡಿನಮನ ಕಾರ್ಯಕ್ರಮ

ಮೂಡುಬಿದಿರೆ ಕಾಂತಾವರ ನುಡಿನಮನ ತಿಂಗಳ ಸರಣಿ ಕಾರ್ಯಕ್ರಮ ಮಾ.9 ಕಾಂತಾವರ ರಥಬೀದಿಯಲ್ಲಿರುವ ಕೆ.ಬಿ.ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನದ ಪಂಪ ಮಹಾಕವಿ ಸಭಾಭವನದಲ್ಲಿ ನಡೆಯಲಿದೆ.

ಮಾ.30 ಕಾಂತಾವರದಲ್ಲಿ ತಿಂಗಳ ಸಾಹಿತ್ಯ ಕಾರ್ಯಕ್ರಮ

ತಿಂಗಳ ಸಾಹಿತ್ಯ ಸಂವರ್ಧನ ಕಾರ್ಯಕ್ರಮ ಮಾ.30 ಕಾಂತಾವರ ರಥಬೀದಿಯಲ್ಲಿರುವ ಕೆ.ಬಿ.ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನದ ಪಂಪ ಮಹಾಕವಿ ಸಭಾಭವನದಲ್ಲಿ ನಡೆಯಲಿದೆ.

ಮಾ.8ರಂದು ಅಡ್ಯಾರಪದವು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

ಮೂಡುಬಿದಿರೆ ಬೊಗ್ರುಗುಡ್ಡೆ ಅಡ್ಯಾರಪದವು ಹೊಸಬೆಟ್ಟು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ವತಿಯಿಂದ 39ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ಇಲ್ಲಿನ ಶ್ರೀ ಸತ್ಯನಾರಾಯಣ ಮಂದಿರದಲ್ಲಿ ಮಾ.8ರಂದು ಮಾರೂರು ಖಂಡಿಗ ರಾಮದಾಸ ಅಸ್ರಣ್ಣರ ನೇತೃತ್ವದಲ್ಲಿ ನಡೆಯಲಿದೆ.

Suvarna News 24X7 Live online
333 Album