ಮಾ.8ರಂದು ಬೊಗ್ರು ಯುವಕಮಂಡಲ ಉದ್ಘಾಟನೆ

ಮೂಡುಬಿದಿರೆ ಹೊಸಬೆಟ್ಟು ಬೊಗ್ರುಗುಡ್ಡೆ ಯುವಶಕ್ತಿ ಯುವಕ ಮಂಡಲದ ಉದ್ಘಾಟನೆ ಮಾ.8ರಂದು ಅಡ್ಯಾರಪದವಿನಲ್ಲಿ ನಡೆಯಲಿದೆ.

ಮಾರ್ಚ್ 9: ಜಿಲ್ಲಾ ಸಹಶಿಕ್ಷಕ ಸ್ಪಂದನ ಕಾರ್ಯಕ್ರಮ

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಆಶ್ರಯದಲ್ಲಿ ಮಾ.9ರಂದು ಮೂಡುಬಿದಿರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ(ಲೇಬರ್) ಜಿಲ್ಲಾ ಸಹಶಿಕ್ಷಕ ಸ್ಪಂದನ ಕಾರ್ಯಕ್ರಮ ನಡೆಯಲಿದೆ.

ಮಾ.7 ಆಳ್ವಾಸ್ ರೀಚ್-2014

ಆಳ್ವಾಸ್ ಕಾಲೇಜಿನ ಬಿ.ಎಸ್.ಡಬ್ಲ್ಯೂ ವಿಭಾಗದ ವತಿಯಿಂದ `ನಿಡ್ ಆಂಡ್ ಚಾಲೆಂಜ್ ಆಫ್ ವರ್ಕಿಂಗ್ ವಿದ್ದ್ ಚಿಲ್ಡ್ರನ್’ ವಿಷಯದ ಕುರಿತ ರಾಜ್ಯ ಮಟ್ಟ ಕಾರ್ಯಾಗಾರ ಮತ್ತು ಸಮಾಜ ಸೇವಾ ಪದವಿ ವಿದ್ಯಾರ್ಥಿಗಳ ಮುಖಾಮುಖಿ ಕಾರ್ಯಕ್ರಮ ` ಆಳ್ವಾಸ್ ರೀಚ್-2014 ಮಾ.7ರಂದು ಮಿಜಾರು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ನಡೆಯಲಿದೆ.

ಕೊಂಪದವು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮ

ಬಜ್ಪೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜ.23ರಂದು ಇಟ್ಟಂತಹ ತಾಂಬೂಲ ಪ್ರಶ್ನೆಯ ಪ್ರಾಯಶ್ಚಿತ್ತವಾಗಿ ಗ್ರಾಮಸ್ಥರ ಐಕ್ಷಮತಕ್ಕಾಗಿ ದ್ವಾದಶ ನಾರಿಕೇಳ ಗಣಯಾಗ ಮತ್ತು ದೇವರಿಗೆ ಸಹಸ್ರ ಸಿಹಿಯಾಳ ಅಭಿಷೇಕಪೂರ್ವಕ ಮುಷ್ಠಿಕಾಣಿಕೆ ಹಾಗೂ ಐಕ್ಯಮತ ಸೂಕ್ತ ಜಪ ನಡೆಯಿತು.

ಮಾರ್ಚ್ 1ರಂದು ಶ್ರೀ ಶನೀಶ್ವರ ಪೂಜೆ ಹಾಗೂ ನೇಮೋತ್ಸವ

ಬಜ್ಪೆ ಶ್ರೀ ಮುಖ್ಯಪ್ರಾಣ ದೇವಸ್ಥಾನ, ಅಗ್ರಹಾರ ಕೋಡಿಬೆಟ್ಟುವಿನ ಶ್ರೀಧೂಮಾವತಿ ಬಂಟ ದೈವಗಳ ನೇಮೋತ್ಸವ ಮಾರ್ಚ್ 1ರಂದು ನಡೆಯಲಿದೆ.

ಮಾರ್ಚ್ 11: ಶ್ರೀ ರಾಮಕೃಷ್ಣ ಆಶ್ರಮದ 5ನೇ ವಾರ್ಷಿಕೋತ್ಸವ

ಬಜ್ಪೆ ಪೊಳಲಿ ಶ್ರೀ ರಾಮಕೃಷ್ಣ ತಪೋವನದಲ್ಲಿ ಮಾ.3ರಂದು ಮತ್ತು ಆಶ್ರಮದ ಪಂಚಮ ವಾರ್ಷಿಕೋತ್ಸವವನ್ನು ಮಾರ್ಚ್ 11ರಂದು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಬೆಳಗ್ಗೆ ಚಂಡಿಕಾಹೋಮ ನಡೆಸುವುದರ ಮೂಲಕ ಆಚರಿಸಲಾಗುತ್ತದೆ.

ಫೆ.27 ಭೂಲಿಂಗೇಶ್ವರ ಕ್ಷೇತ್ರದಲ್ಲಿ ಶಿವರಾತ್ರಿ

ಬಜ್ಪೆ ಶ್ರೀ ಸ್ವಯಂ ಭೂಲಿಂಗೇಶ್ವರ ಕ್ಷೇತ್ರ ದೊಡ್ಡಿಕಟ್ಟದಲ್ಲಿ ಫೆ.27 ರಂದು ಮಹಾಶಿವರಾತ್ರಿ ನಡೆಯಲಿದೆ.

ಮಾ.1ರಿಂದ ಕಾಜಿಲ ವರ್ಷಾವಧಿ ನೇಮೋತ್ಸವ

ಬಜ್ಪೆ ಶ್ರೀಕೋರ್ದಬ್ಬು,ತನ್ನಿಮಾನಿಗ, ರಾಹುಗುಳಿಗ, ಪಂಜುರ್ಲಿದೈವಗಳ ವರ್ಷಾವಧಿ ನೇಮೋತ್ಸವ ಮಾ.1 ಹಾಗೂ 2ರಂದು ನಡೆಯಲಿದೆ.

ಫೆ.26: ಆಳ್ವಾಸ್ ನಲ್ಲಿ ಕಾರ್ಯಾಗಾರ

ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ `ರಿಸರ್ಚ್ ಅವೆನ್ಯೂಸ್ ಆಯಂಡ್ ಅಡ್ವಾನ್ಸಸ್ ಇನ್ ಜಿಯೋಟೆಕ್ನಿಕಲ್ ಇಂಜಿನಿಯರಿಂಗ್’ ವಿಷಯದ ಕುರಿತು ಫೆ.26 ರಂದು ಕಾರ್ಯಗಾರ ಎಂ.ಬಿ.ಎ. ಸೆಮಿನಾರ್ ಹಾಲ್ ನಲ್ಲಿ ನಡೆಯಲಿದೆ.

ಮೂಡುಬಿದಿರೆಯಲ್ಲಿ ಉಚಿತ ಡ್ರೈವಿಂಗ್ ತರಬೇತಿ

ಮೂಡುಬಿದಿರೆ ಲಯನ್ಸ್ ಕ್ಲಬ್ ಮತ್ತು ಮಂಜುಶ್ರೀ ಡ್ರೈವಿಂಗ್ ಸ್ಕೂಲ್ ಆಶ್ರಯದಲ್ಲಿ ಆರ್ಥಿಕವಾಗಿ ಹಿಂದುಳಿದ ಮೂಡುಬಿದಿರೆ ಫಿರ್ಕಾದ ಅರ್ಹರಿಗೆ ಉಚಿತ ಡ್ರೈವಿಂಗ್ ತರಬೇತಿ ನಡೆಯಲಿದೆ.

ಫೆ.27ರಂದು ಶ್ರೀಕ್ಷೇತ್ರ ಪುತ್ತಿಗೆಯಲ್ಲಿ ಮಹಾಶಿವರಾತ್ರಿ

ಮೂಡುಬಿದಿರೆ ಶ್ರೀ ಕ್ಷೇತ್ರ ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಫೆ.27ರಂದು ಮಹಾಶಿವರಾತ್ರಿ ಪ್ರಯುಕ್ತ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಶತರುದ್ರಾಭಿಷೇಕ, ಮಹಾಪೂಜೆ ಹಾಗೂ ರಾತ್ರಿ ರಂಗ ಪೂಜೆ ನಡೆಯಲಿದೆ.

ಫೆ.27ರಂದು ರೇಕಿ ಮತ್ತು ಆಧ್ಯಾತ್ಮಿಕ ಚಿಕಿತ್ಸೆ

ಶೃಂಗೇರಿಯ ಡಿವೈನ್ ಹೀಲಿಂಗ್ ಪೌಂಡೇಶನ್ ನೇತೃತ್ವದಲ್ಲಿ ಮೂಡುಬಿದಿರೆ ಸ್ವರಾಜ್ ಮೈದಾನದ ಬಳಿಯಿರುವ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದಲ್ಲಿ ರೇಕಿ ಮತ್ತು ಆಧ್ಯಾತ್ಮಿಕ ಚಿಕಿತ್ಸೆ ಕಾರ್ಯಕ್ರಮ ಫೆ.27 ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಫೆ.21 ಶ್ರೀ ಆದಿಶಕ್ತಿ ಮಹಾಕಾಳಿ ದೇವಸ್ಥಾನದಲ್ಲಿ ರಾಶಿ ಪೂಜೆ

ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿರುವ ಪುರಾತನ ಶ್ರೀ ಆದಿಶಕ್ತಿ ಮಹಾಕಾಳಿ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ರಾಶಿ ಪೂಜಾ ಮಹೋತ್ಸವ ಫೆ.21 ರಂದು ನಡೆಯಲಿದೆ.

ಫೆ.23: ಸಮುದಾಯಗಳು ಮತ್ತು ಅನುಭಾವ ಉಪನ್ಯಾಸ

ಮೂಡುಬಿದಿರೆ ಕಾಂತಾವರ ಅಲ್ಲಮಪೀಠದ ಆಶ್ರಯದಲ್ಲಿ ತಿಂಗಳ ಸಾಹಿತ್ಯ ಸಂವರ್ಧನ ಕಾರ್ಯಕ್ರಮ ಫೆ. 23 ಕಾಂತಾವರ ರಥಬೀದಿಯಲ್ಲಿರುವ ಕೆ.ಬಿ.ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನದಲ್ಲಿ ನಡೆಯಲಿದೆ.

ಫೆ.15 ಶ್ರೀಸಾಯಿ ಫ್ರೆಂಡ್ಸ್ ವಾರ್ಷಿಕೋತ್ಸವ

ಬಜ್ಪೆ ಅಡ್ಡೂರು ಕಾಂಜಿಲಕೋಡಿ ಬರ್ಕೆಬೊಟ್ಟು ಶ್ರೀಸಾಯಿ ಫ್ರೆಂಡ್ಸ್ 9ನೇ ವಾರ್ಷಿಕೋತ್ಸವ ಫೆ.15ರಂದು ನಡೆಯಲಿದೆ.

ಫೆ.14ರಿಂದ ಆಳ್ವಾಸ್-ಎಗೊನ್

ಮೂಡುಬಿದಿರೆ ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಳ್ವಾಸ್-ಎಗೊನ್-2014 ರಾಷ್ಟ್ರೀಯ ಮಟ್ಟದ ಉತ್ಸವ ಫೆ.14 ಹಾಗೂ ಫೆ.15ರಂದು ನಡೆಯಲಿದೆ.

ಫೆ.21ರಿಂದ ಬೆಳುವಾಯಿ ಹೋಮಲ್ಕೆಯಲ್ಲಿ ವರ್ಷಾವಧಿ ಜಾತ್ರೆ

ಮೂಡುಬಿದಿರೆ ಬೆಳುವಾಯಿ ಗ್ರಾಮ ಸಮಾಜ ಸೇವಾಭಿವೃದ್ದಿ ಸಮಿತಿ ಇದರ ನೇತೃತ್ವದಲ್ಲಿ ನಡೆಯುವ ಬೆಳುವಾಯಿ ಹೋಮಲ್ಕೆ ಶ್ರೀ ಧರ್ಮಅರಸು, ಶ್ರೀ ಕುಕ್ಕಿನಂತಾಯಿ, ಶ್ರೀ ಕೊಡಮಂತಾಯಿ, ಶ್ರೀ ಬ್ರಹ್ಮಬೈದರ್ಕಳ ಕ್ಷೇತ್ರದ ವರ್ಷಾವಧಿ ಜಾತ್ರೆಯು ಫೆ.21ರಿಂದ ಫೆ.23ರವರೆಗೆ ಜರಗಲಿದೆ.

ಫೆ.14 ರಾಶಿಪೂಜಾ ಮಹೋತ್ಸವ

ಮೂಡುಬಿದಿರೆ ಪುರಾತನ ಶ್ರೀ ಅದಿಶಕ್ತಿ ಮಹಾದೇವಿ ದೇವಸ್ಥಾನದಲ್ಲಿ ಫೆ.14ರಂದು ರಾಶಿಪೂಜಾ ಮಹೋತ್ಸವ ನಡೆಯಲಿದೆ.

ಫೆ.14ರಿಂದ ದರೆಗುಡ್ಡೆ ಮಹೋತ್ಸವ

ಮೂಡುಬಿದಿರೆ ದರೆಗುಡ್ಡೆ ಮಹತೋಭಾರ ವಿಠಲ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಮಹೋತ್ಸವ ಫೆ.14ರಿಂದ 19ರವರೆಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದ್ದಾರೆ.

ಫೆ.12ರಿಂದ ಚಂಡಿಕಾಪರಮೇಶ್ವರಿ ಜಾತ್ರಾ ಮಹೋತ್ಸವ

ಬಜ್ಪೆ ಚಂಡಿಕಾನಗರ ಶ್ರೀಚಂಡಿಕಾಪರಮೇಶ್ವರಿ ದೇವಸ್ಥಾನದ ಜಾತ್ರಾಮಹೋತ್ಸವ ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿ ನೇತೃತ್ವದಲ್ಲಿ ಫೆ.12ರಿಂದ14ರವರೆಗೆ ನಡೆಯಲಿದೆ.

Suvarna News 24X7 Live online
333 Album