ಉಳ್ಳಾಲ: ಓರ್ವ ವ್ಯಕ್ತಿ ಸಮುದ್ರಪಾಲು

ವಿಹಾರಕ್ಕೆಂದು ಬಂದಿದ್ದ ವ್ಯಕ್ತಿಯೋರ್ವ ಸಮುದ್ರದ ತೆರೆಯ ಸೆಳೆತಕ್ಕೆ ಸಿಲುಕಿ ಮೃತಪಟ್ಟ ಘಟನೆ ನಿನ್ನೆ ಅಪರಾಹ್ನ ಉಳ್ಳಾಲ ಸಮುದ್ರ ತೀರದಲ್ಲಿ ಸಂಭವಿಸಿದೆ. ಮೃತರನ್ನು ಮಡಿಕೇರಿ ಕುಶಾಲ ನಗರ ನಿವಾಸಿ ಮುಹಮ್ಮದ್ ನೂರುಲ್ಲಾ (45) ಎಂದು ಗುರುತಿಸಲಾಗಿದೆ.

ಹಳೆಯಂಗಡಿ: ಕಿಡಿಗೇಡಿಗಳಿಂದ ಬ್ಯಾನರ್ ಗೆ ಬೆಂಕಿ

ರಸ್ತೆ ಡಾಮರೀಕರಣಕ್ಕೆ ಶ್ರಮ ವಹಿಸಿದ ಗ್ರಾಮ ಪಂಚಾಯತಿ ಸದಸ್ಯೆಗೆ ಅಭಿನಂದನೆ ಸಲ್ಲಿಸಿ ಗ್ರಾಮಸ್ಥರು ಹಾಕಿದ ಪ್ಲೆಕ್ಸ್ ಬ್ಯಾನರ್ ಗೆ ಕಿಡಿಗೇಡಿಗಳಿಂದ ಬೆಂಕಿಯಿಟ್ಟ ಘಟನೆ ನಿನ್ನೆ ರಾತ್ರಿ ಹಳೆಯಂಗಡಿಯ ರಾಮನಗರದಲ್ಲಿ ನಡೆದಿದೆ.

ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಪಿ.ಬಿ ಹರಿಪ್ರಸಾದ್ ರೈ ಆಯ್ಕೆ

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ಪಿ.ಬಿ ಹರಿಪ್ರಸಾದ್ ರೈ ಆಯ್ಕೆಯಾಗಿದ್ದಾರೆ. ಭಾನುವಾರ ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಚುನಾವಣೆಯಲ್ಲಿ ಹರಿಪ್ರಸಾದ್ ಆಯ್ಕೆಗೊಂಡಿದ್ದಾರೆ.

ಮೂಡಬಿದಿರೆ ಅಪಘಾತ ಮೃತ ಬಾಲಕರ ಗುರುತು ಪತ್ತೆ

ಹೊಸ್ಮಾರಿನಲ್ಲಿ ಶನಿವಾರ ರಾತ್ರಿ ಸಂಭವಿಸಿದ ಬಸ್ ಅಪಘಾತದಲ್ಲಿ ಮೃತಪಟ್ಟವರ ಗುರುತು ಪತ್ತೆಯಾಗಿದೆ.

ಕಾರ್ಕಳದಲ್ಲಿ ಚಿತ್ರಿಕರಣಗೊಳ್ಳುತ್ತಿರುವ ಕೊಂಕಣಿ ಚಿತ್ರ ಉಜ್ವಾಡು

ಮಿತ್ರಾ ಮೀಡಿಯಾ ಲಾಂಛನದಡಿಯಲ್ಲಿ ಕೆ.ಜೆ. ಧನಂಜಯ ಮತ್ತು ಅನುರಾಧಾ ಪಡಿಯಾರ್ ನಿರ್ಮಿಸುತ್ತಿರುವ ಕೊಂಕಣಿ ಚಿತ್ರ ಉಜ್ವಾಡುವಿನ ಚಿತ್ರೀಕರಣ ಕಾರ್ಕಳದಲ್ಲಿ ಭರದಿಂದ ಸಾಗಿದೆ.

ಮೂಡಬಿದಿರೆ: ಬಸ್ ಢಿಕ್ಕಿ ಇಬ್ಬರು ಬಾಲಕರು ಮೃತ್ಯು

ಮೂಡಬಿದಿರೆಯಿಂದ ನಾರಾವಿ ಕಡೆಗೆ ಹೋಗುತ್ತಿದ್ದ ಬಸ್ ಢಿಕ್ಕಿ ಹೊಡೆದು ಇಬ್ಬರು ಅಪರಿಚಿತ ಬಾಲಕರು ಮೃತಪಟ್ಟ ಘಟನೆ ಶನಿವಾರ ರಾತ್ರಿ ಹೊಸ್ಮಾರಿನಲ್ಲಿ ಸಂಭವಿಸಿದೆ.

ಯಡಿಯೂರಪ್ಪರ ನಾಯಕತ್ವ ಬದಲಾವಣೆಗೆ ಪೂಜಾರಿ ಆಗ್ರಹ

ರಾಜ್ಯದ 16 ಜನ ಶಾಸಕರನ್ನು ಅನರ್ಹಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದ್ದು, ಅವರ ಅನರ್ಹತೆಯನ್ನು ರದ್ದುಗೊಳಿಸಿದೆ. ಆದುದರಿಂದ ತಕ್ಷಣ ಯಡಿಯೂರಪ್ಪರವರ ನಾಯಕತ್ವವನ್ನು ಬದಲಾಯಿಸಲು ಬಿಜೆಪಿ ಹೈಕಮಾಂಡ್ ಮುಂದಾಗಬೇಕು. ಇಲ್ಲದಿದ್ದಲ್ಲಿ ರಾಜ್ಯಪಾಲರಿಗೆ ಈ ಬಗ್ಗೆ ಮಧ್ಯ ಪ್ರವೇಶಿಸಲು ಅವಕಾಶವಿದ್ದು, ಅವರು ಸರಕಾರವನ್ನು ವಜಾಗೊಳಿಸಬೇಕು ಎಂದು ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಆಗ್ರಹಿಸಿದ್ದಾರೆ.

ಎಂಡೋಸಲ್ಫಾನ್ ಗೆ ನಿಷೇಧ ಹೇರಿದ ಸುಪ್ರೀಂ ಕೋರ್ಟ್

ಪರಿಸರ ಮತ್ತು ಜೀವರಾಶಿಯ ಮೇಲೆ ಎಂಡೋಸಲ್ಫಾನ್ ದುಷ್ಪರಿಣಾಮ ಬೀರುವತ್ತದೆಯೆಂದು, ಇದರ ಉತ್ಪಾದನೆ ಮತ್ತು ಉಪಯೋಗಕ್ಕೆ ಸುಪ್ರೀಂ ಕೋರ್ಟ್ ನಿಷೇಧ ಹೇರಿದೆ.

ಮುಖ್ಯಮಂತ್ರಿ, ಸ್ಪೀಕರ ಕೂಡಲೇ ರಾಜಿನಾಮೆ ನೀಡಲಿ: ಯು.ಟಿ ಖಾದರ್

ರಾಜ್ಯ ವಿಧಾನ ಸಭೆಯಿಂದ ಶಾಸಕರನ್ನು ಅನರ್ಹಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ಗೌರವ ನೀಡಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಸ್ಪೀಕರ್ ಬೋಪಯ್ಯ ಕೂಡಲೇ ರಾಜಿನಾಮೆ ನೀಡಬೇಕು ಎಂದು ಶಾಸಕ ಯು.ಟಿ ಖಾದರ್ ಆಗ್ರಹಿಸಿದ್ದಾರೆ.

ಕೂಳೂರು: ಬೈಕ್ ಹೊಂಡಕ್ಕೆ ಎಂಬಿಬಿಎಸ್ ವಿದ್ಯಾರ್ಥಿ ಸಾವು

ಮಂಗಳೂರಿನ ಕೂಳೂರು ಸೇತುವೆ ಬಳಿ ಗುರುವಾರ ಮಧ್ಯರಾತ್ರಿ ಬೈಕ್ ಹೊಂಡಕ್ಕೆ ಬಿದ್ದು ಕೆಎಂಸಿಯ ದ್ವಿತಿಯ ಎಂಬಿಬಿಎಸ್ ವಿದ್ಯಾರ್ಥಿ ರೂಪೇಶ್ ಗೋಯಲ್ (20) ಸಾವನ್ನಪ್ಪಿದ್ದಾರೆ. ಸಹ ಸವಾರ ಮಾಯಾಂಕ್ ರಸ್ತೋಗಿ (20) ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ವೇಣೂರು: ಆಟೋ ರಿಕ್ಷಾ-ಬೈಕ್ ಢಿಕ್ಕಿ ಹಿಂಬದಿ ಸವಾರ ಮೃತ್ಯು

ವೇಣೂರಿನ ಕುತ್ಲೂರು ಬಳಿಯ ಕುಕ್ಕುಜೆ ಕ್ರಾಸ್ ನಲ್ಲಿ ಆಟೋ ರಿಕ್ಷಾಕ್ಕೆ ಹಿಂದಿನಿಂದ ಬೈಕ್ ಢಿಕ್ಕಿಯಾಗಿ ಬೈಕ್ ಹಿಂಬದಿ ಸವಾರ ಸಾವನಪ್ಪಿ, ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾನೆ.

ಸುಭೋದ್ ಯಾದವ್ ವರ್ಗ

ದ.ಕ ಜಿಲ್ಲಾಧಿಕಾರಿ ಸುಭೋದ್ ಯಾದವ್ ಅವರನ್ನು ಜವಳಿ ಇಲಾಖೆ ಆಯುಕ್ತರನ್ನಾಗಿ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ. ನೂತನ ಜಿಲ್ಲಾಧಿಕಾರಿಯಾಗಿ ಚನ್ನಪ್ಪ ಗೌಡ ನಿಯುಕ್ತಿಗೊಂಡಿದ್ದಾರೆ. ಇವರು ಸದ್ಯ ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಉಡುಪಿ ಜಿಲ್ಲಾಧಿಕಾರಿಯಾಗಿ ಡಾ.ರೇಜು ನೇಮಕ

ಜಿಲ್ಲಾಧಿಕಾರಿ ಪಿ. ಹೇಮಲತಾ ಅವರನ್ನು ತೋಟಗಾರಿಕಾ ಇಲಾಖೆ ನಿರ್ದೇಶಕರುಗಳಾಗಿ ವರ್ಗಾವಣೆ ಮಾಡಲಾಗಿದೆ. ಡಾ.ಎಂ.ಟಿ ರೇಜು ಅವರನ್ನು ಉಡುಪಿ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ಶಿಲ್ಪಾ ಶೆಟ್ಟಿ ಗರ್ಭಿಣಿ

ಬಾಲಿವುಡ್ ನಟಿ, ತುಳುನಾಡಿನ ಬೆಡಗಿ ಶಿಲ್ಪಾ ಶೆಟ್ಟಿ ಗರ್ಭಿಣಿ ಎನ್ನುವ ಸುದ್ದಿ ಆಕೆಯ ಕಟುಂಬದ ನಿಕಟ ಮೂಲಗಳಿಂದ ತಿಳಿದು ಬಂದಿದೆ.

ಲಿಮ್ಕಾ ದಾಖಲೆ ಮಾಡಿದ ಗೋಪಾಲ ಖಾರ್ವಿ

ಕೈ ಮತ್ತು ಕಾಲುಗಳಿಗೆ ಕೋಳ ಹಾಕಿ ಸಮುದ್ರದಲ್ಲಿ ಈಜುವ ಮೂಲಕ ಸಾಹಸ ಮೆರೆದ ಗೋಪಾಲ ಖಾರ್ವಿ ಅವರ ಸಾಧನೆ 2011ರ ಸಾಲಿನ ಲಿಮ್ಕಾ ಪುಸ್ತಕದಲ್ಲಿ ದಾಖಲಾಗಿದೆ.

ಸುನ್ನಿ-ಸಲಾಫಿ ವಿವಾದ: ಮದುವೆಗೆ ಬಂದವ ವಧುವನ್ನು ವರಿಸಿದ

ವರನ ಕಡೆಯಿಂದ ಬಂದ ಮುದುಕನೋರ್ವನ ಕೀಟಲೆಯಿಂದ ನಿಶ್ಚಿತಾರ್ಥವಾಗಿದ್ದ ಮದುವೆ ತಪ್ಪಿ ಹೋದರೂ ಮದುವೆಗೆ ಬಂದಿದ್ದ ಯುವಕ ಹುಡುಗಿಯನ್ನು ವರಿಸಿದ ಪ್ರಸಂಗ ಇತ್ತೀಚೆಗೆ ನಡೆಯಿತು.

ಎಸ್ಎಸ್ಎಲ್ ಸಿ ಫಲಿತಾಂಶ ದಕ್ಷಿಣಕನ್ನಡಕ್ಕೆ ಭಾರಿ ಕುಸಿತ

ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಗುರುವಾರ ಪ್ರಕಟವಾಗಿದ್ದು ಸದಾ ಮುಂಚೂಣಿಯಲ್ಲಿದ್ದ ಬುದ್ಧಿವಂತರ ಜಿಲ್ಲೆ ದಕ್ಷಿಣಕನ್ನಡ 21ನೇ ಸ್ಥಾನಕ್ಕೆ ಕುಸಿದಿದೆ.ಜಿಲ್ಲೆ ಶೇ.78.30 ಫಲಿತಾಂಶ ಪಡೆಯುವ ಮೂಲಕ ಫಲಿತಾಂಶದಲ್ಲಿ ಕಳೆದ ಬಾರಿಗಿಂತ ಶೇ. 6 ಪ್ರಗತಿ ಸಾಧಿಸಿದರೂ ಜಿಲ್ಲಾವಾರು ಸ್ಥಾನದಲ್ಲಿ ಭಾರಿ ಹಿನ್ನೆಡೆ ಸಾಧಿಸಿದೆ.

ಕಾರ್ಕಳ ನಕ್ಸಲರ ವಿರುದ್ಧ ಕೂಬಿಂಗ್

ಕಾರ್ಕಳದ ಗ್ರಾಮಾಂತರ ಪೋಲಿಸ್ ಮತ್ತು ಅಜೆಕಾರು ಠಾಣಾ ಪೋಲಿಸರು ಕಳೆದ ಮೂರು ದಿನಗಳಿಂದ ನಕ್ಸಲರ ವಿರುದ್ಧ ಕೂಬಿಂಗ್ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.

ಮೂಡಬಿದಿರೆ : ಭಾರತ ಸೌಹಾರ್ದ ಸಹಕಾರಿ ನಿಯಮಿತ ಶುಭಾರಂಭ

ಭಾರತ ಸೌಹಾರ್ದ ಸಹಕಾರಿ ನಿಯಮಿತದ ನೂತನ ಕಚೇರಿಯು ಮೂಡಬಿದಿರೆಯ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬಳಿ ಇರುವ ಮಗ್ರಂತ್ ಕಾಂಪ್ಲೆಕ್ಸಿನಲ್ಲಿ ಮೇ 6 ರಂದು ಶುಬಾರಂಭಗೊಂಡಿತು.

ಮೂಡಬಿದಿರೆ : ನೀರಿನ ಸಮಸ್ಯೆ ನಿಭಾಯಿಸಲು ಅಧಿಕಾರಿಯ ನೇಮಕ

ಮೂಡಬಿದಿರೆ ಪುರಸಭಾ ವ್ಯಾಪ್ತಿಯಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸುವ ಸಲುವಾಗಿ ಪುರಸಭಾ ಕಿರಿಯ ಅಭಿಯಂತರರಾದ ಪದ್ಮನಾಭ ಇವರನ್ನು ನಿಯೋಜಿಸಲಾಗಿದೆ.

Suvarna News 24X7 Live online
333 Album