ಫೆ.4: ವಿದ್ಯಾಗಿರಿಯಲ್ಲಿ ತಾಳ ವಾದ್ಯ ಮೇಳ

ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ವಿದ್ಯಾಗಿರಿಯ ರತ್ನಾಕರವರ್ಣಿ ವೇದಿಕೆಯಲ್ಲಿ ಫೆ4ರಂದು ಸಂಜೆ 6.30ರಿಂದ ಪ್ರತಿಭಾನ್ವಿತ ಕಲಾವಿದರ ಕೂಡುವಿಕೆಯಲ್ಲಿ ತಾಳ ವಾದ್ಯ ಮೇಳ ನಡೆಯಲಿದೆ.

ಫೆ.1 : ಶ್ರೀ ಮಹಾವೀರ ಕಾಲೇಜಿನಲ್ಲಿ ನಕ್ಷತ್ರ ವೀಕ್ಷಣೆ

ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನಲ್ಲಿ ಫೆ.1 ರಂದು ಸಂಜೆ 6.ಗಂಟೆಗೆ ನಕ್ಷತ್ರ ವೀಕ್ಷಣೆ ಕಾರ್ಯಕ್ರಮ ನಡೆಯಲಿದೆ.

ಜ.31 ನಾಗದರ್ಶನ, ಯಕ್ಷಾರಾಧನೆ

ಬಜ್ಪೆ ಪೆರ್ಮುದೆ ಕನ್ನಿಕಾ ನಿಲಯದ ಶ್ರೀ ಮೂಲ ನಾಗಬ್ರಹ್ಮಸ್ಥಾನದ ಅಷ್ಟಪವಿತ್ರ ನಾಗಬ್ರಹ್ಮ ಮಂಡಲ ಪ್ರಥಮ ವರ್ಧಂತ್ಯುತ್ಸವ ಹಾಗೂ 9ನೇ ವರ್ಷದ ಯಕ್ಷಾರಾಧನೆ ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ ಬಯಲಾಟ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜ.31ರಿಂದ ಫೆ. 2ರ ವರೆಗೆ ನಡೆಯಲಿದೆ.

ಫೆ.1 ಪಡುಮರ್ನಾಡು ಯುವಕಮಂಡಲ ವಾರ್ಷಿಕೋತ್ಸವ

ಮೂಡುಬಿದಿರೆ ಪಡುಮರ್ನಾಡು ಯುವಕ ಮಂಡಲ, ಪ್ರಜ್ಞಾಯುವತಿ ಮಂಡಲ ಮತ್ತು ಅಮನಬೆಟ್ಟು ಮಹಾವೀರ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಫೆ.1 ಅಮನಬೆಟ್ಟು ದಿ.ಜಯಪ್ರಕಾಶ್ ದೇವಾಡಿಗ ರಂಗಮಂದಿರದಲ್ಲಿ ನಡೆಯಲಿದೆ.

ಜ.31 ತ್ರಿದಶ ಸಂಭ್ರಮೋತ್ಸವ 2014

ನಿಡ್ಡೋಡಿ ಶುಂಠಿಲಪದವಿನ ಶ್ರೀ ಬಾಪೂಜಿ ಕ್ರಿಕೆಟರ್ಸ್ ನ ತ್ರಿದಶ ಸಂಭ್ರಮೋತ್ಸವ 2014 ಕಾರ್ಯಕ್ರಮ ಜ.31 ಶುಕ್ರವಾರದಂದು ನಡೆಯಲಿದೆ.

ಇಂದಿನಿಂದ ಗಾಂದ್ಯೊಟ್ಟು ನೇಮೋತ್ಸವ

ಕೆಂಜಾರು ಗ್ರಾಮದ ಗಾಂದ್ಯೊಟ್ಟು ಕುಕ್ಕಿಯನ್ ಧರ್ಮಚಾವಡಿ ಪರಿವಾರ ದೈವಗಳ ನೇಮೋತ್ಸವ ಜ.23ರಿಂದ 25ರವರೆಗೆ ನಡೆಯಲಿದೆ.

ಜ.24 ಬಾಬುರಾಜೇಂದ್ರ ಶಾಲೆಯಲ್ಲಿ ಅಕ್ಷಯ ವಸಂತ

ಮೂಡುಬಿದಿರೆ ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಯೋಜನೆಯ ಉದ್ಘಾಟನೆ ಮತ್ತು ಅಕ್ಷಯ ವಸಂತ ಜಾಗೃತಿ ಮಾಹಿತಿ ಶಿಬಿರ ಜ.24 ನಡೆಯಲಿದೆ.

ಜ.28 ರಿಂದ ಸುದರ್ಶನ ಕ್ರಿಯಾ ಯೋಗ

ಶ್ರೀ ರವಿಶಂಕರ್ ಗುರೂಜಿಯವರ ಸುದರ್ಶನ ಕ್ರಿಯಾ ಯೋಗ ಜ.28 ರಿಂದ ಫೆ.2ರವರೆಗೆ ಸಂಜೆ 5.30 ರಿಂದ 8.30 ರವರೆಗೆ ಮೂಡುಬಿದಿರೆ ಸಹಕಾರಿ ಸೇವಾ ಬ್ಯಾಂಕ್ (ಎಂ.ಸಿ.ಎಸ್.ಬ್ಯಾಂಕ್) ಸಭಾಂಗಣದಲ್ಲಿ ಜರಗಲಿದೆ.

ಇಂದು ಪೆರ್ಮುದೆ ಗ್ರಾ.ಪಂ ಅಧ್ಯಕ್ಷರ ಆಯ್ಕೆಗೆ ಚುನಾವಣೆ

ಮಂಗಳೂರು ತಾಲೂಕು ಪೆರ್ಮುದೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ಹುದ್ದೆ ಕಳೆದ 53 ದಿನಗಳಿಂದ ಖಾಲಿಯಾಗಿದ್ದು ಜ.22 ಬುಧವಾರ ಬೆಳಿಗ್ಗೆ ಗ್ರಾ.ಪಂ ಸಭಾಭವನದಲ್ಲಿ ನೂತನ ಅಧ್ಯಕ್ಷ ಆಯ್ಕೆಯ ಸಲುವಾಗಿ ಚುನಾವಣೆ ನಡೆಯಲಿದೆ.

ಜ.23 ತೆಂಕಮಿಜಾರು ಗ್ರಾಮಸಭೆ

ತೆಂಕಮಿಜಾರು ಗ್ರಾಮ ಪಂಚಾಯಿತಿ ನೀರ್ಕೆರೆಯ ಪ್ರಸಕ್ತ ಸಾಲಿನ ದ್ವಿತೀಯ ಹಂತದ ಗ್ರಾಮಸಭೆ ಜ.23ರಂದು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಜ.30 ಸಹಶಿಕ್ಷಕರ ಕಾರ್ಯಗಾರ

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ಆಶ್ರಯದಲ್ಲಿ ಜನವರಿ 30 ರಂದು ಬೆಂಗಳೂರಿನ ಶಿಕ್ಷಕರ ಸದನದಲ್ಲಿ ಒಂದು ದಿನದ ಶೈಕ್ಷಣಿಕ ಕಾರ್ಯಗಾರ ಮತ್ತು ರಾಜ್ಯ ಸಂಘದ ಸರ್ವಸದಸ್ಯರ ವಾರ್ಷಿಕ ಮಹಾಸಭೆ ನಡೆಯಲಿದೆ.

ಆರ್.ಟಿ.ಇ: ಮೂಡುಬಿದಿರೆಯಲ್ಲಿ 97 ಮಕ್ಕಳಿಗೆ ಅವಕಾಶ

ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ನಿಯಮದಡಿ 2014-15ನೇ ಸಾಲಿನಡಿ ಮೂಡುಬಿದಿರೆ ವಲಯದ 9 ಖಾಸಗಿ ಪ್ರಾಥಮಿಕ ಶಾಲೆಗಳಲ್ಲಿ 97 ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ಅವಕಾಶವಿರುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ಡಿ.27 ರಂದು ಬೆಂಗಳೂರಿನಲ್ಲಿ ಸಿಂಥೆಟಿಕ್ ಟ್ರ್ಯಾಕ್ ಉದ್ಘಾಟನೆ

ರಾಜ್ಯದ ಪ್ರಮುಖ ಕ್ರೀಡಾ ಶಾಲೆಗಳಲ್ಲೊಂದಾದ ಬೆಂಗಳೂರಿನ ಜಯಪ್ರಕಾಶ್ ನಾರಾಯಣ್ ರಾಷ್ಟ್ರೀಯ ಯುವ ಕೇಂದ್ರದ ನೂತನ ಸಿಂಥೆಟಿಕ್ ಟ್ರ್ಯಾಕ್ ಲೋಕಾರ್ಪಣೆಗೆ ಸಿದ್ಧವಾಗಿದೆ. ಮೂರುವರೆ ಕೋಟಿ ರೂ. ಯೋಜನೆಯ ಈ ಸಿಂಥೆಟಿಕ್ ಟ್ರ್ಯಾಕ್ ಡಿ.27 ರಂದು ಉದ್ಘಾಟನೆಗೊಳ್ಳಲಿದೆ.

ಜ.1 ಹನ್ನೆರಡು ಕವಲಿನಲ್ಲಿ ಎಳ್ಳಮವಾಸ್ಯೆ ಸ್ನಾನ

ಮೂಡುಬಿದಿರೆ ಹನ್ನೆರಡು ಕವಲು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜ.1 ರಂದು ಬೆಳಿಗ್ಗೆ 5.ಗಂಟೆಯಿಂದ ಸಂಜೆ 5.ಗಂಟೆವರೆಗೆ ಎಳ್ಳಮವಾಸ್ಯೆ ಸ್ನಾನ ನಡೆಯಲಿದೆ ಎಂದು ದೇವಸ್ಥಾನ ಪ್ರಕಟಣೆ ತಿಳಿಸಿದೆ.

ಡಿ.31 ಅಡಿಕೆ ಬೆಳೆಗಾರರಿಂದ ಪ್ರತಿಭಟನೆಗೆ ತೀರ್ಮಾನ

ಅಡಿಕೆ ಬೆಳೆಗೆ ನಿಷೇಧ ಹೇರುವ ಪ್ರಸ್ತಾಪವನ್ನು ವಿರೋಧಿಸಿ ಡಿಸೆಂಬರ್ 31ರಂದು ಮೂಡುಬಿದಿರೆಯಲ್ಲಿ ಅಡಿಕೆ ಬೆಳೆಗಾರರಿಂದ ಬೃಹತ್ ಮೆರವಣಿಗೆ ಮತ್ತು ಪ್ರತಿಭಟನಾ ಸಭೆ ನಡೆಸುವುದೆಂದು ಅಡಿಕೆ ಬೆಳೆಗಾರರ ಸಭೆಯಲ್ಲಿ ನಿರ್ಧರಿಸಲಾಗಿದೆ.

ಶ್ರೀ ಸದಾಶಿವಾಶ್ರಮ ಸ್ವಾಮೀಜಿ ಆಲಂಗಾರು ಕ್ಷೇತ್ರಕ್ಕೆ ಭೇಟಿ

ಹೆಬ್ಬೂರು ಮಠದಲ್ಲಿ ದೀಕ್ಷಾಬದ್ಧರಾಗಿ ಪ್ರಸ್ತುತ ಉತ್ತರಪ್ರದೇಶದ ಹೃಷೀಕೇಶದಲ್ಲಿರುವ ಶೃಂಗೇರಿ ಮಠದ ಶ್ರೀ ಸದಾಶಿವಾಶ್ರಮ ಸ್ವಾಮೀಜಿ ಮೂಡುಬಿದಿರೆಯ ಆಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು.

ಬಜ್ಪೆ:ಹೊನ್ನಮ್ಮ ಪೂಜಾರ್ತಿ ನಿಧನ

ಬಜ್ಪೆ ಕೊಳಂಬೆ ತಲ್ಲದಬೈಲು ನಿವಾಸಿ ಹೊನ್ನಮ್ಮ ಪೂಜಾರ್ತಿ (85) ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ನಿಧನರಾದರು.

ನ.10 ಜಿಲ್ಲಾ ಸಹಶಿಕ್ಷಕರ ಸ್ಪಂದನ ಕಾರ್ಯಕ್ರಮ

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಆಶ್ರಯದಲ್ಲಿ ದ.ಕ ಜಿಲ್ಲಾ ಸಹಶಿಕ್ಷಕ ಸ್ಪಂದನ ಕಾರ್ಯಕ್ರಮವು ನ.10 ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ(ಲೇಬರ್) ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ರಾಮಕೃಷ್ಣ ಶಿರೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಳ್ವಾಸ್ ಪ.ಪೂ ಕಾಲೇಜು ಎನ್.ಎಸ್.ಎಸ್. ಶಿಬಿರದ ಸಮಾರೋಪ

ಅಳ್ವಾಸ್ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರವು ವಾಲ್ಪಾಡಿಯ ಆನೆಗುಡ್ಡೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಸಮಾರೋಪಗೊಂಡಿತು.

ನ.10: ಜಿ.ಎಸ್.ಬಿ.ಸಮಾಜದವರಿಗೆ ವಿವಿಧ ಸ್ಪರ್ಧೆಗಳು

ಮೂಡುಬಿದಿರೆ ಶ್ರೀ ವೆಂಕಟರಮಣ ದೇವಸ್ಥಾನದ ವರ್ಷಾವಧಿ ಕಾರ್ತಿಕ ದೀಪೋತ್ಸವದ ಅಂಗವಾಗಿ ನವಶಕ್ತಿ ಮಿತ್ರ ವೃಂದದ ವತಿಯಿಂದ ಜಿ.ಎಸ್.ಬಿ.ಸಮಾಜದವರಿಗೆ ವಿವಿಧ ಸ್ಪರ್ಧೆಗಳು ನ.10ರಂದು ಬೆಳಿಗ್ಗೆ 9ರಿಂದ ದೇವಳದ ವಠಾರದಲ್ಲಿ ನಡೆಯಲಿವೆ.

Suvarna News 24X7 Live online
333 Album