ಅದ್ಯಪಾಡಿ ಪದ್ಮನಾಭ ಪೂಜಾರಿ ನಿಧನ

ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಕಳೆದ 18 ವರ್ಷಗಳಿಂದ ಮೆನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಆದ್ಯಪಾಡಿ ಪದ್ಮನಾಭ ಪೂಜಾರಿ(56) ಹೃದಯಾಘಾತದಿಂದ ಅ.26ರಂದು ನಿಧನರಾಗಿದ್ದಾರೆ.

ಸದಾಶಿವ ಆಚಾರ್ಯ ಕಲ್ಲಡ್ಪು ನಿಧನ

ಕೊಂಪದವಿನ ಕಲ್ಲಡ್ಪು ನಿವಾಸಿ ಸದಾಶಿವ ಆಚಾರ್ಯ ಕಲ್ಲಡ್ಪು (75) ಅ.24 ನಿಧನರಾದರು.

ಅ.27 ರಕ್ತದಾನ, ನೇತ್ರದಾನ ಜಾಗೃತಿ ಕುರಿತು ಬೃಹತ್ ಬೈಕ್ ರ್ಯಾಲಿ

ಐ.ಸಿ.ವೈ.ಎಂ ಇವರ ಮುಂದಾಳತ್ವದಲ್ಲಿ ಐ.ಸಿ.ವೈ.ಎಂ ತಾಕೋಡೆ ಘಟಕ, ರೋಟರ್ಯಾಕ್ಟ್ ಕ್ಲಬ್ ಜಂಟಿ ಆಶ್ರಯದಲ್ಲಿ ರಕ್ತದಾನ ಹಾಗೂ ನೇತ್ರದಾನ ಜಾಗೃತಿ ಕುರಿತು ಬೃಹತ್ ಬೈಕ್ ರ್ಯಾಲಿ ತಾಕೋಡೆ ಶಾಲಾ ವಠಾರದಿಂದ ನಡೆಯಲಿದೆ.

ಅ.27: ಸಸ್ಯ ಸಂಜೀವಿನಿ ಪುಸ್ತಕ ಬಿಡುಗಡೆ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಶ್ರಯದಲ್ಲಿ ಅಂಕಣಕಾರ ಡಾ. ಶೈಲೇಶ್ ಎಂ.ಡಿ ಯವರ ದ್ವಿತೀಯ ಅಂಕಣ ಸಂಕಲನ `ಸಸ್ಯ ಸಂಜೀವಿನಿ ಭಾಗ-2’ ಪುಸ್ತಕ ಬಿಡುಗಡೆಯು ಅ.27ರಂದು ಸಂಜೆ ವಿದ್ಯಾಗಿರಿ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಪಿ.ಜಿ.ಬ್ಲಾಕ್ ಸೆಮಿನರ್ ಹಾಲ್ ನಲ್ಲಿ ನಡೆಯಲಿದೆ.

ಅ.27 ಭೂತನಾಥೇಶ್ವರದಲ್ಲಿ ದಂತ ಚಿಕಿತ್ಸಾ ಉಚಿತ ಶಿಬಿರ

ಎಡಪದವಿನ ಶಾಸ್ತವು ಶ್ರೀಭೂತನಾಥೇಶ್ವರ ದೇವಸ್ಥಾನ ಟ್ರಸ್ಟ್, ನಿಟ್ಟೆ ವಿಶ್ವವಿದ್ಯಾಲಯ ದೇರಳಕಟ್ಟೆ, ಎ.ಬಿ ಶೆಟ್ಟಿ ಮೆಮೋರಿಯಲ್ ಇನ್ ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ದೇರಳಕಟ್ಟೆ, ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಅ.27ರಂದು ಶಾಸ್ತವು ದೇವಸ್ಥಾನದಲ್ಲಿ ದಂತ ಚಿಕಿತ್ಸಾ ಉಚಿತ ಶಿಬಿರವು ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕೈಕಂಬ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಗೆ ಆಯ್ಕೆ

ಸುನ್ನಿ ಜಂಇಯ್ಯತುಲ್ ಮಲ್ಲಿಮೀನ್ ಕೈಕಂಬ ರೇಂಜ್ ನ ಅಧ್ಯಕ್ಷರಾಗಿ ಯೂಸುಫ್ ಸಹದಿ ಕಂದಾವರ ಪದವು ಆಯ್ಕೆಯಾಗಿದ್ದಾರೆ.

ಅ.27: ಗೂಡುದೀಪ ಹಾಗೂ ರಂಗೋಲಿ ಸ್ಪರ್ಧೆ

ಗಾಣಿಗರ ಯುವ ಸಂಘ ವೇದಿಕೆ ಮತ್ತು ಗಾಣಿಗರ ಮಹಿಳಾ ವೇದಿಕೆ ವತಿಯಿಂದ ದೀಪಾವಳಿಯ ಪ್ರಯುಕ್ತ 6ನೇ ವರ್ಷದ ಸಾಂಪ್ರದಾಯಕ, ಆಧುನಿಕ ಮತ್ತು ಪ್ರತಿಕೃತಿ ಶೈಲಿಯ ಸಾರ್ವಜನಿಕ ಗೂಡುದೀಪ ಹಾಗೂ ರಂಗೋಲಿ ಸ್ಪರ್ಧೆಯು ಅ.27ರಂದು ಸಮಾಜ ಮಂದಿರದಲ್ಲಿ ನಡೆಯಲಿದೆ.

ಅ.27 ಕಾಂತಾವರದಲ್ಲಿ ತಿಂಗಳ ಸಾಹಿತ್ಯ ಕಾರ್ಯಕ್ರಮ

ಮೂಡುಬಿದಿರೆ: ಕಾಂತಾವರದ ಅಲ್ಲಮ ಪ್ರಭು ಪೀಠ ಆಶ್ರಯದಲ್ಲಿ 1ಸಾಹಿತ್ಯ ಸಂಸ್ಕ್ರತಿ ಸಂವರ್ಧನ’ ಕಾರ್ಯಕ್ರಮ ಅಕ್ಟೋಬರ್ 27 ರಂದು ಕಾಂತಾವರ ರಥಬೀದಿಯಲ್ಲಿರುವ ಕೆ.ಬಿ.ಜಿನರಾಜ ಹೆಗ್ಡೆ ಸ್ಮಾರಕ’ಕನ್ನಡಭವನ’ ದ ಪಂಪ ಮಹಾಕವಿ ಸಭಾಭವನದಲ್ಲಿ ನಡೆಯಲಿದೆ.

ಆ.5 ಸ್ವಯಂಪ್ರೇರಿತ ರಕ್ತದಾನ ಶಿಬಿರ

ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಕ್ಟೋಬರ್ 5ರಂದು ಸ್ವಯಂಪ್ರೇರಿತ ರಕ್ತದಾನ ಶಿಬಿರವು ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶೂಟೌಟ್ ಪ್ರಕರಣ: ವಕೀಲರ ಸಂಘದ ಸಭೆ

ವಕೀಲ ಶಾಂತಿ ಪ್ರಸಾದ್ ಪರ ನಿನ್ನೆ ಮೂಡಬಿದರೆ ವಕೀಲರ ಸಂಘದ ವಿಶೇಷ ಸಭೆ ನಡೆಯಿತು.ಸಭೆಯಲ್ಲಿ ಶಾಂತಿಗೆ ಸಂಪೂರ್ಣ ಬೆಂಬಲ ನೀಡಲು ವಕೀಲರು ನಿರ್ದರಿಸಿದ್ದು,ಯಾವುದೇ ಪ್ರತಿಬಟನೆಗೆ ನಿರ್ದರಿಸಿಲ್ಲ.

ಸೆ.28 ಸಾಮೂಹಿಕ ವಿವಾಹ ಸಿದ್ಧತಾ ಸಮಾವೇಶ

ಎಸ್.ವೈ.ಎಸ್. ಸುನ್ನೀ ಯುವಜನ ಸಂಘ ಮೂಡುಬಿದಿರೆ ವಲಯ ಆಶ್ರಯದಲ್ಲಿ ಸಾಮೂಹಿಕ ವಿವಾಹ ಸಿದ್ಧತಾ ಸಮಾವೇಶವು ಸೆ.28ರಂದು ಮೂಡುಬಿದಿರೆ ಸಮಾಜಮಂದಿರದಲ್ಲಿ ನಡೆಯಲಿದೆ.

ಸೆ.30: ರಾಷ್ಟ್ರೀಯ ಬಹು ಭಾಷಾ ವಿಚಾರ ಗೋಷ್ಠಿ

ಶ್ರೀ ಧವಲಾ ಕಾಲೇಜು ವತಿಯಿಂದ ಯುಜಿಸಿ ಪ್ರಾಯೋಜಿತ `ಏಕರೂಪಿ ಪಠ್ಯ- ಒಂದು ಸಾಂಸ್ಕ್ರತಿಕ ಮತ್ತು ಶೈಕ್ಷಣಿಕ ಚಿಂತನೆ’ ಎಂಬ ರಾಷ್ಟ್ರೀಯ ಬಹು ಭಾಷಾ ವಿಚಾರ ಗೋಷ್ಠಿಯು ಸೆ.30ರಂದು ಶ್ರೀ ಧವಲಾ ಕಾಲೇಜಿನಲ್ಲಿ ನಡೆಯಲಿದೆ.

ಇ-ತ್ಯಾಜ್ಯ ಸಂಗ್ರಹಣೆ

ಗಣಕಯಂತ್ರದ ಯು.ಪಿ.ಎಸ್ ,ಪ್ರಿಂಟರ್ ನ ಹಾಳಾದ ಬಿಡಿಭಾಗಗಳು ಹಾಗೂ ಇತರ ಇ-ತ್ಯಾಜ್ಯಗಳನ್ನು ಸಿಕ್ಕಿದ ಕಡೆಯಲ್ಲಿ ಬಿಸಾಡುವುದರಿಂದ ಮಾನವನ ಪ್ರಾಣಕ್ಕೆ ಅಪಾಯಕಾರಿಯಾಗಿರುತ್ತದೆ. ಆದುದರಿಂದ ಇ-ಸಾಮಾಗ್ರಿಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿ ವಿಲೇವಾರಿ ಮಾಡಿ ಪರಿಸರದ ಸಂರಕ್ಷಣೆ ಮಾಡಬೇಕಾಗಿರುವುದರಿಂದ , ಮೂಡುಬಿದಿರೆ ಪುರಸಭಾ ಕಛೇರಿಯ ತಳ ಅಂತಸ್ಧಿನಲ್ಲಿ ಇ-ತ್ಯಾಜ್ಯ ಸಂಗ್ರಹಣಾ ಬುಟ್ಟಿಯನ್ನು ಇಡಲಾಗಿದೆ.

ಸಂಸ್ಕಾರವಹಿ ಪುಸ್ತಕಗಳ ವಿತರಣೆ

ಸನಾತನ ಸಂಸ್ಥೆ ಮಂಗಳೂರು ಇದರ ವತಿಯಿಂದ ಮೂಡುಬಿದಿರೆಯ ಪಡುಮಾರ್ನಾಡಿನ ಮಹಾವೀರ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಲ್ಲಿ ರಾಷ್ಟ್ರಾಭಿಮಾನ,ನೈತಿಕ ಮೌಲ್ಯಗಳನ್ನು ಹಾಗೂ ಸುಸಂಸ್ಕಾರಗಳನ್ನು ವೃದ್ಧಿಸುವ ದೃಷ್ಠಿಯಿಂದ ಮಹಾನ್ ಪುರುಷರ ಹಾಗೂ ದೇಶಕ್ಕಾಗಿ ಹೋರಾಡಿದ ವೀರವನಿತೆಯರ ಸಾಹಸ, ಸ್ವಾಭಿಮಾನ,ರಾಷ್ಟ್ರಭಕ್ತಿ, ಮತ್ತು ಆದರ್ಶ ದಿನಚರಿಗಳನ್ನು ಬಿಂಬಿಸುವ ಚಿತ್ರಗಳನ್ನು ಒಳಗೊಂಡ ಸಂಸ್ಕಾರವಹಿಗಳನ್ನು( ನೋಟ್ ಪುಸ್ತಕ) ಸೋಮವಾರ ವಿತರಿಸಲಾಯಿತು.

ಸೆ. 27 ರಂದು ಅಂತರ್ ಕಾಲೇಜು ಭಾಷಣ ಸ್ಪರ್ಧೆ

ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನ ಮಾನವಿಕ ಸಂಘ ಮತ್ತು ಅರ್ಥಶಾಸ್ತ್ರ ವಿಭಾಗದ ಸಂಯೋಜನೆಯಲ್ಲಿ ’ಗಾಂಧೀಜಿಯ ಆರ್ಥಿಕ ವಿಚಾರಗಳು ಇಂದಿನ ಭಾರತದ ಆರ್ಥಿಕ ದುಸ್ಥಿತಿಗೆ ಪರಿಹಾರವಾಗಬಲ್ಲುದೆ?’ ಎಂಬ ವಿಷಯದಲ್ಲಿ ಎಸ್.ಡಿ. ಸಾಮ್ರಾಜ್ಯ ಸಂಸ್ಮರಣ ಮಂಗಳೂರು ವಿವಿ ಯ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಕನ್ನಡ/ಆಂಗ್ಲ ಭಾಷಣ ಸ್ಪರ್ಧೆಯನ್ನು ಸೆ. 27 ರಂದು ಪೂರ್ವಾಹ್ನ 9.30ಕ್ಕೆ ಕಾಲೇಜಿನಲ್ಲಿ ಏರ್ಪಡಿಸಲಾಗಿದೆ.

ಜೈನಮಠದಲ್ಲಿ 14ನೇ ವರ್ಷದ ದಶಲಕ್ಷಣ ಮಹಾಪರ್ವ

14ನೇ ವರ್ಷದ ದಶಲಕ್ಷಣ ಮಹಾಪರ್ವವನ್ನು ಸೆ 10ರಿಂದ 20ರವರೆಗೆ ಬೆಳಿಗ್ಗೆ 7. 00ರಿಂದ 8. 30ರ ವರೆಗೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮಿಗಳವರ ಮಾರ್ಗದರ್ಶನ ಹಾಗೂ ಪಾವನಸಾನ್ನಿಧ್ಯದಲ್ಲಿ ಶ್ರೀಮಠದಲ್ಲಿ ಸ್ಥಳೀಯ ಜೈನ ವಿದ್ವಾಂಸರ ಪ್ರತಿನಿತ್ಯ ಉಪನ್ಯಾಸದೊಂದಿಗೆ ಜರುಗಲಿರುವುದು.

ಸೆ.4ರಂದು ತೆಂಕಮಿಜಾರು ಪಂಚಾಯತ್ ನಲ್ಲಿ ಜಮಾಬಂದಿ

ತೆಂಕಮಿಜಾರು ಗ್ರಾಮ ಪಂಚಾಯಿತಿನ ಜಮಾಬಂದಿಯು ಪಂಚಾಯತ್ ನ ಸಭಾಭವನದಲ್ಲಿ ಸೆ.4ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆ.4: ಕಲ್ಲಮುಂಡ್ಕೂರು ಪಂಚಾಯಿತಿ ಜಮಾಬಂದಿ

ಕಲ್ಲಮುಂಡ್ಕೂರು ಗ್ರಾಮ ಪಂಚಾಯಿತಿ ಇದರ 2012-13ನೇ ಸಾಲಿನ ಜಮಾಬಂದಿ ಕಾರ್ಯಕ್ರಮವು ಯೋಜನಾ ಸಮನ್ವಯಾಧಿಕಾರಿ ಐಟಿಡಿಪಿ ಮಂಗಳೂರು ಇದರ ನೇತೃತ್ವದಲ್ಲಿ ಸೆಪ್ಟೆಂಬರ್ 4ರಂದು ಪಂಚಾಯಿತಿ ಸಭಾ ಭವನದಲ್ಲಿ ನಡೆಯಲಿದೆ ಎಂದು ಪಂಚಾಯಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರಕ್ಕೆ ವಿರೋಧ

ನಿಡ್ಡೋಡಿಯಲ್ಲಿ ಪ್ರಸ್ತಾವಿತ ಸ್ಥಾವರಕ್ಕೆ ನಿಡ್ಡೋಡಿ ಡಿವೈನ್ ಏಂಜೆಲ್ಸ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ವಾಲ್ಟರ್ ಡಿ’ಸೋಜ ವಿರೋಧ ವ್ಯಕ್ತಪಡಿಸಿದ್ದಾರೆ.

Suvarna News 24X7 Live online
333 Album