ಆಳ್ವಾಸ್ ಎಚ್. ಆರ್.ವಾಯ್ಸ್

ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದೊಂದಿಗೆ ಅಭಿವ್ಯಕ್ತಿ ಕೌಶಲ, ಸಂಪರ್ಕ, ತಂಡ ಪ್ರಯತ್ನ ಮತ್ತು ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡು ಸಮಾಜದ ಆಸ್ತಿಯಾಗಿ ರೂಪುಗೊಳ್ಳಬೇಕೆಂದು ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯಶಾಸ್ತ್ರ ಸಂಶೋಧನ ವಿಭಾಗದ ಪ್ರಾಧ್ಯಾಪಕರಾದ ದಿನಕರ್ ಕೆಂಜೂರು ಹೇಳಿದರು.

ಎಕ್ಸಲೆಂಟ್ ಕಾಲೇಜಿನಲ್ಲಿ ರಕ್ಷಾಬಂಧನ

ಮೂಡುಬಿದಿರೆ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ರಕ್ಷಾಬಂಧನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶ್ರೀ ಧವಲಾ ಕಾಲೇಜಿನ ಪ್ರಾಧ್ಯಾಪಕ ಪ್ರೊ. ವಾಸುದೇವ ಭಟ್ ರಕ್ಷಾ ಬಂಧನದ ಮಹತ್ವದ ಕುರಿತು ಉಪನ್ಯಾಸ ನೀಡಿದರು.

ಜುಲೈ 14: ಕಾಂತಾವರದಲ್ಲಿ ಯಕ್ಷಗಾನ ತಾಳಮದ್ದಳೆ

ಯಕ್ಷದೇಗುಲ ಕಾಂತಾವರ ಇವರು ಆಯೋಜಿಸುವ 11ನೇ ವರ್ಷದ ’ತಾಳಮದ್ದಳೆ ಕೂಟ’ವು ಜುಲೈ 14 ಮಧ್ಯಾಹ್ನ 2.00 ಗಂಟೆಗೆ ಶರಣಸೇವಾರತ್ನ ಪ್ರಸಂಗದೊಂದಿಗೆ ಶ್ರೀಕ್ಷೇತ್ರ ಕಾಂತಾವರದಲ್ಲಿ ನಡೆಯಲಿದೆ.

ಜೂನ್ 22 ಹೊಸಬೆಟ್ಟು ಗ್ರಾಮಸಭೆ

ಹೊಸಬೆಟ್ಟು ಗಾಮಪಂಚಾಯತಿಯ 2013-14ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯು ಪಂಚಾಯತಿ ಅಧ್ಯಕ್ಷೆ ರೀಟಾ ಕುಟಿನ್ಹಾ ಅವರ ಅಧ್ಯಕ್ಷತೆಯಲ್ಲಿ ಜೂನ್ 22ರಂದು ಹೊಸಬೆಟ್ಟು ಹೋಲಿ ಕ್ರಾಸ್ ಚರ್ಚಿನ ಸಭಾಭವನದಲ್ಲಿ ನಡೆಯಲಿದೆ.

ಜೂನ್ 23 ರಂದು ಸಹಶಿಕ್ಷಕ ಸಂಘದ ಜಿಲ್ಲಾ ಸಭೆ

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾ ಘಟಕದ ಸಭೆ ಜೂನ್ 23 ರಂದು ಪೂರ್ವಾಹ್ನ 10.30ಕ್ಕೆ ಬಂಟ್ವಾಳ ತಾಲೂಕಿನ ಸರ್ಕಾರಿ ಪ್ರೌಢಶಾಲೆ, ಕೊಡಂಗೆ ಬಿ.ಸಿ. ರೋಡ್ ನಲ್ಲಿ ನಡೆಯಲಿದೆ.

ಜೂನ್ 14 ತೆಂಕಮಿಜಾರು ಗ್ರಾಮಸಭೆ

ತೆಂಕಮಿಜಾರು ಗ್ರಾಮ ಪಂಚಾಯತಿಯ ಗ್ರಾಮಸಭೆಯು ಜೂ.14ರಂದು ಪಂಚಾಯತಿ ಅಧ್ಯಕ್ಷೆ ಉಮಾವತಿ ಅಧ್ಯಕ್ಷತೆಯಲ್ಲಿ ಜೂ.14ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಪಂಚಾಯತಿ ಪಿ.ಡಿ.ಒ ಸಾಯೀಶ್ ಚೌಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಡುಬಿದಿರೆ: ಕೆರೆಗೆ ಬಿದ್ದು ಸಾವು

ಮೂರ್ಚೆ ರೋಗದಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ಕೆರೆಗೆ ಬಿದ್ದು ಸಾವನ್ನಪ್ಪಿದ ಘಟನೆ ಮಿಜಾರು ಕನಕಬೆಟ್ಟುವಿನಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.

ಜೂನ್ 14ರಂದು ಪ್ರತಿಭಟನೆ

ಸಿ.ಐ.ಟಿ.ಯು ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿ.ಐ.ಟಿ.ಯು 43ನೇ ಸಂಸ್ಥಾಪನಾ ದಿನವಾದ ಮೇ.23ರಿಂದ ಹಮ್ಮಿಕೊಂಡಿದ್ದ ರಾಷ್ಟ್ರವ್ಯಾಪ್ತಿ ಪ್ರಚಾರಾಂದೋಲನವು ಜೂನ್ 14 ರಂದು ಕೊನೆಗೊಳ್ಳಲಿದ್ದು, ಅದೇ ದಿನ 11 ಗಂಟೆಗೆ ಮೂಡುಬಿದಿರೆ ತಹಸೀಲ್ದಾರ ಕಚೇರಿಯಲ್ಲಿ ಪ್ರತಿಭಟನೆಯು ನಡೆಯಲಿದೆ.

ಮುದ್ದಣ ಕಾವ್ಯ ಪ್ರಶಸ್ತಿಗೆ ಕವನ ಹಸ್ತಪ್ರತಿ

ಕಾಂತಾವರ ಕನ್ನಡ ಸಂಘವು ಕಳೆದ 34 ವರುಷಗಳಿಂದ ಮುದ್ದಣ ಕಾವ್ಯ ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದು, 2013 ರ ಸಾಲಿನ ಕಾವ್ಯ ಪ್ರಶಸ್ತಿಗಾಗಿ ಮುದ್ರಣಕ್ಕೆ ಸಿದ್ಧವಾಗಿರುವ ಕವನ ಸಂಗ್ರಹಗಳ ಹಸ್ತಪ್ರತಿಯನ್ನು ಸ್ವಾಗತಿಸುತ್ತಿದೆ.

ಹೆಗ್ಗಡೆ ಸಮಾಜದ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ

ದ.ಕ. ಜಿಲ್ಲಾ ಹೆಗ್ಗಡೆ ಸಮಾಜ ಸಂಘ ಕೋಟೆಬಾಗಿಲು ಮೂಡುಬಿದಿರೆ ಇವರು ಹೆಗ್ಗಡೆ ಸಮಾಜದ ವಿದ್ಯಾರ್ಥಿಗಳಿಗಾಗಿ 2013-2014ನೇ ಸಾಲಿಗೆ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಅಹ್ವಾನಿಸಿದ್ದಾರೆ.

ಪ್ರಾಂತ್ಯ ಶಾಲೆಯಲ್ಲಿ ಪ್ರಾರಂಭೋತ್ಸವ

ಪ್ರಾಂತ್ಯದ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಪ್ರಾರಂಭೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಜಿನ ಚೈತ್ಯಾಲಯಕ್ಕೆ ಭೂಮಿ ಪೂಜೆ

ಮೂಡುಕೊಣಾಜೆ ಗ್ರಾಮದ ಹಿದ್ಯಾವು ಮನೆಯವರು ದಾನವಾಗಿ ನೀಡಿರುವ ಭೂಮಿಯಲ್ಲಿ ನೂತನ ಜಿನ ಚೈತ್ಯಾಲಯ ನಿರ್ಮಾಣ ಮಾಡುವ ಸಲುವಾಗಿ ಭೂಮಿ ಪೂಜೆಯು ಇತ್ತೀಚೆಗೆ ನೆರವೇರಿತು.

ಮೂಡುಬಿದಿರೆ: ಮಳೆ ಹಾನಿ

ಕಳೆದ ಸೋಮವಾರ ರಾತ್ರಿ ಮೂಡುಬಿದಿರೆ ಪರಿಸರದಲ್ಲಿ ಗುಡುಗು ಸಹಿತ ಮಳೆಯಾಗಿದ್ದು ಪುತ್ತಿಗೆ ಗ್ರಾಮದಲ್ಲಿ ಒಂದಷ್ಟು ಹಾನಿಯಾದ ಬಗ್ಗೆ ತಿಳಿದುಬಂದಿದೆ.

ವಿಜಯ ಸೌಂಡ್ಸ್ ನ ವಿಜಯ್ ಅಂಚನ್ ನಿಧನ

ಮೂಡುಬಿದಿರೆ: ರಂಗಭೂಮಿಯ ಪರದೆ,ಅಲಂಕಾರ ಪರಿಕರಗಳು, ಸೌಂಡ್ಸ್ ಉದ್ಯಮದಲ್ಲಿ ಕಳೆದ ಮೂರು ದಶಕಗಳಿಗೂ ಮಿಕ್ಕಿ ಸಕ್ರಿಯರಾಗಿ ಜನಾನುರಾಗಿಯಾಗಿದ್ದ ನಾಗರಕಟ್ಟೆ ವಿಜಯ್ ಸೌಂಡ್ಸ್ ಎಂಡ್ ಕೋರೇಟರ್ಸ್ ನ ವಿಜಯ್ ಅಂಚನ್(53) ಶನಿವಾರ ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಜೂಗಾರಿ ಅಡ್ಡೆಗೆ ದಾಳಿ: ಐವರು ಬಂಧನ

ಮೂಡುಬಿದಿರೆ ಪುತ್ತಿಗೆಪದವಿನಲ್ಲಿ ಗುರುವಾರ ಮಧ್ಯಾಹ್ನ ಜೂಗಾರಿ ಆಡುತ್ತಿದ್ದ ಐವರನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.

ಕಡಲಕಿನಾರೆಯ ಕೃತಿ ಐ.ಆರ್ ಶೆಟ್ಟಿ ಕಮಾಂಡರ್

ಕಡಲತಡಿಯ ಕೃತಿ ಐ.ಅರ್ ಶೆಟ್ಟಿ ಮಹಿಳಾ ಕಮಾಂಡರ್ ಆಗಿ ಆಯ್ಕೆಯಾಗಿದ್ದಾರೆ. ಇವರು ಮಂಗಳೂರಿನ ಇನ್ನಾಗುತ್ತು ರವೀಂದ್ರ ಶೆಟ್ಟಿ ಮತ್ತು ಕೊಡಿಯಲ್ ಗುತ್ತು ಕವಿತಾ ಶೆಟ್ಟಿ ದಂಪತಿಯ ಪುತ್ರಿ.

ಫೇಸ್ ಬುಕ್ ಕಾಮೆಂಟ್ ನ ಅವಾಂತರ: ಜೈಲುವಾಸ

ಪ್ರಸಿದ್ಧ ಸಾಮಾಜಿಕ ತಾಣವಾದ ಫೇಸ್ ಬುಕ್ ನಲ್ಲಿ ಕಾಮೆಂಟ್ ಹೊಡೆಯುವುದು ಸರ್ವೇಸಾಮಾನ್ಯವಾಗಿದೆ.

ಕೇಂದ್ರ ಆಯೋಗದ ಅವಾಂತರ:ವಿದ್ಯಾರ್ಥಿ ಆತ್ಮಹತ್ಯೆ

ಐ ಎ ಎಸ್ ಪರೀಕ್ಷೆಯಲ್ಲಿ ತನ್ನ ಹೆಸರು ಪ್ರಕಟಗೊಂಡಿಲ್ಲವೆಂಬ ಕಾರಣಕ್ಕೆ ಮಡಿಕೇರಿಯ ನಾಪೋಕ್ಲು ಬಳಿಯ ತಡಿಯಂಡಮೋಳ್ ಬೆಟ್ಟದಲ್ಲಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ನಡೆದಿದೆ.

ಮೇ.18 ಇರುವೈಲ್ ನಲ್ಲಿ ಕ್ರಿಕೆಟ್ ಪಂದ್ಯಾಟ

ಫ್ರೆಂಡ್ಸ್ ಕ್ಲಬ್ ಇರುವೈಲ್ ಇದರ ವತಿಯಿಂದ 2ನೇ ವರ್ಷದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟವು ಮೇ.18ರಂದು ಇರುವೈಲ್ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ .30 ಗಜಗಳ 7 ಜನರ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ನಡೆಯಲಿದೆ ಎಂದು ಕ್ಲಬ್ ನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Suvarna News 24X7 Live online
333 Album