ತೆಂಕಮಿಜಾರಿನಲ್ಲಿ ಮಕ್ಕಳ ಗ್ರಾಮಸಭೆ 

ಮೂಡುಬಿದಿರೆ: ಶಾಲೆಗಳಲ್ಲಿ ನೀಡುತ್ತಿರುವ ಪ್ರಾಜೆಕ್ಟ್ ವರ್ಕ್‍ಗಳಿಂದಾಗಿ ತಮಗೆ ಹೆಚ್ಚಿನ ಸಮಯವನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಹಾಗೂ ತಮಗೆ ಪುಸ್ತಕದ ಹೊರೆ ಹೆಚ್ಚಾಗುತ್ತಿದೆ ಇವೆರಡನ್ನು ಕಡಿಮೆಗೊಳಿಸಿ ಹೀಗೆಂದು ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳಿಬ್ಬರು ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಶುಕ್ರವಾರ ಅಶ್ವತ್ಥಪುರದಲ್ಲಿ ತಂದಿದ್ದಾರೆ.

 

ತೆಂಕಮಿಜಾರು ಗ್ರಾ.ಪಂನ ನೇತೃತ್ವದಲ್ಲಿ ತೆಂಕಮಿಜಾರು ಮತ್ತು ಬಡಗಮಿಜಾರು ಗ್ರಾಮಗಳ 2014-15ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ಅಶ್ವತ್ಥಪುರ ಗೋಳಿಮರದಡಿಯಲ್ಲಿ ನಡೆದ ಮಕ್ಕಳ ಗ್ರಾಮಸಭೆಯನ್ನು ಅತಿಥಿಗಳ ಉಪಸ್ಥಿತಿಯಲ್ಲಿ ವಿದ್ಯಾರ್ಥಿಗಳೇ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಮಕ್ಕಳು ತಮ್ಮ ಶಾಲೆ ಮತ್ತು ತಮಗಾಗಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರು.

 

ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಿದ ವಲಯದ ಶಿಕ್ಷಣ ಸಂಯೋಜಕಿ ರಾಜಶ್ರೀ ವಿದ್ಯಾರ್ಥಿಗಳು ಪ್ರಾಜೆಕ್ಟ್ ವರ್ಕ್ ಮಾಡಬೇಕು ಅದರಿಂದ ಹೆಚ್ಚಿನ ಮಾಹಿತಿಗಳು ವಿದ್ಯಾಥಿಗಳಿಗೆ ಸಿಗಬೇಕೆಂದು ಶಿಕ್ಷಣ ಇಲಾಖೆಯಿಂದಲೇ ಸುತ್ತೋಲೆ ಬಂದಿರುವುದು ಪ್ರಾಜೆಕ್ಟ್ ವರ್ಕ್‍ಗಳನ್ನು ಮಾಡುವುದರಿಂದ ವ್ಯಕ್ತಿ, ವಿಷಯಗಳ ಬಗ್ಗೆ ಕೂಲಂಕುಷವಾಗಿ ಅರಿಯಲು ಸಾಧ್ಯವಾಗುತ್ತದೆ ಅಲ್ಲದೆ ಮನಸಿನಲ್ಲಿಟ್ಟುಕೊಳ್ಳಲು ಸುಲಭವಾಗುತ್ತದೆ. ಪುಸ್ತಕಗಳನ್ನೆಲ್ಲವನ್ನೂ ಮನೆಗೆ ತೆಗೆದುಕೊಂಡು ಹೋಗಬೇಡಿ ನಿಮಗೆ ಅವಶ್ಯವಾಗಿರುವ ಪುಸ್ತಕಗಳನ್ನು ಮಾತ್ರ ಮನೆಗೆ ತೆಗೆದುಕೊಂಡು ಹೋಗಿ ಎಂದು ಸಲಹೆ ನೀಡಿದರು.

 

ಇನ್ನೊಬ್ಬ ವಿದ್ಯಾರ್ಥಿ ಮಕ್ಕಳ ಜ್ಞಾನ ವೃದ್ಧಿಯಾಗಲು ಪುಸ್ತಕಗಳನ್ನು ಓದಬೇಕೆಂದು ಹೇಳುತ್ತೀರಿ ಆದರೆ ನಮ್ಮ ಶಾಲೆಯಲ್ಲಿ ಗ್ರಂಥಾಲಯವೇ ಇಲ್ಲವೆಂದು, ನಮ್ಮ ಶಾಲೆಗೆ ಹೆಚ್ಚಿನ ಕೊಠಡಿಯ ಅವಶ್ಯಕತೆ ಇದೆ ಇದನ್ನು ಒದಗಿಸಿಕೊಡಿ, ಸೈನ್ಸ್ ಲ್ಯಾಬ್ ನೀಡಿ, ಕಂಪ್ಯೂಟರ್ ವ್ಯವಸ್ಥೆ ಇದೆ ಆದರೆ ಕಂಪ್ಯೂಟರ್ ಕೆಟ್ಟಿದೆ ಇದನ್ನು  ಸರಿ ಪಡಿಸಿ, ಆರೋಗ್ಯ ಸಹಾಯಕಿಯರು ಅಶ್ವತ್ಥಪುರದಲ್ಲಿಯೇ ಇರುವಂತೆ ಅವರಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸಿಕೊಡಿ ಎಂದು ನೀರ್ಕೆರೆ ಪ್ರೌಢಶಾಲೆಯ ವಿದ್ಯಾರ್ಥಿಗಳು ಅಧಿಕಾರಿಗಳ ಗಮನಕ್ಕೆ ತಂದರು. 

 

ಆದರ್ಶ ಶಾಲೆಯಲ್ಲಿ ದೈಹಿಕ ಶಿಕ್ಷಕರಿಲ್ಲ, ಬಂಗಬೆಟ್ಟು ಶಾಲೆಯಲ್ಲಿ ಕಂಪ್ಯೂಟರ್ ತರಬೇತಿ ನಡೆಯುತ್ತಿಲ್ಲ ಎಂದು ವಿದ್ಯಾರ್ಥಿಗಳು ಮಕ್ಕಳ ಸಭೆಯಲ್ಲಿ ಆಗ್ರಹಿಸಿದರು. ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು ಅಲ್ಲದೆ ಕೆಲವೊಂದು ಕೆಲಸಗಳನ್ನು ಶಾಲಾ ಅಭಿವೃದ್ಧಿ ಮಂಡಳಿ ಮತ್ತು ಊರಿನವರ ಸಹಕಾರದಿಂದ ಕೈಗೊಳ್ಳಬೇಕೆಂದು ಶಿಕ್ಷಣ ಸಂಯೋಜಕಿ ಸಲಹೆ ನೀಡಿದರು.

 

ತೆಂಕಮಿಜಾರು ಗ್ರಾ.ಪಂ ಅಧ್ಯಕ್ಷೆ ಉಮಾವತಿ ಅಧ್ಯಕ್ಷತೆಯನ್ನು ವಹಿಸಿ ಬಾಲಕಾರ್ಮಿಕ ಪ್ರಕ್ರಿಯೆಗಳ ಕರಪತ್ರವನ್ನು ಬಿಡುಗಡೆಗೊಳಿಸಿ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು. ಪತ್ರಕರ್ತ ಗಣೇಶ್ ಕಾಮತ್ ಸಂಪನ್ಮೂಉ ವ್ಯಕ್ತಿಯಾಗಿ ಭಾಗವಹಿಸಿ ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು. ಆಳ್ವಾಸ್ ನರ್ಸಿಂಗ್ ಕಾಲೇಜಿನ ಉಪನ್ಯಾಸಕ ಧೀರೆಂದ್ರ ಜೈನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾನಸಿಕ ಆರೋಗ್ಯ ಬಗ್ಗೆ ಮಾಹಿತಿ ನೀಡಿದರು. ತೆಂಕಮಿಜಾರು ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ನವೀನ್ ಅಂಬೂರಿ ಮಾರ್ಗದರ್ಶಿ ಅಧಿಕಾರಿಯಾಗಿ ಭಾಗವಹಿಸಿದ್ದರು. ಗ್ರಾ.ಪಂ ಉಪಾಧ್ಯಕ್ಷೆ ಮುತ್ತು ಉಪಸ್ಥಿತರಿದ್ದರು.  ಪಿಡಿಒ ಸಾಯೀಶ ಚೌಟ ಸ್ವಾಗತಿಸಿದರು. ಸಿಬಂದಿ ರಾಕೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಸಭೆಯ ನಂತರ ಮಕ್ಕಳಿಗಾಗಿ ಶ್ರೀಧರ್ ಅವರಿಂದ ಮ್ಯಾಜಿಕ್ ಕಾರ್ಯಕ್ರಮ ನಡೆಯಿತು.

Write your Comments on this Article
Your Name
Place
Your E-mail
Your Comment   You have characters left.
Security Validation
Enter the security validation code as displayed above:
    
Disclaimer: Kindly do not post any abusive, defamatory, infringing, obscene, indecent, discriminatory or unlawful material or SPAM. Editor reserves the right to block/ remove without notice any content received from users.
Suvarna News 24X7 Live online
333 Album