ಹೆಚ್1ಎನ್1 ಜಾಗೃತರಾಗುವುದು ಮುಖ್ಯ: ಡಾ.ಶಶಿಕಲಾ
ಹೆಚ್1ಎನ್1 ಜಾಗೃತರಾಗುವುದು ಮುಖ್ಯ: ಡಾ.ಶಶಿಕಲಾ

ಅವಿಭಜಿತ ದ.ಕ ಜಿಲ್ಲೆಯಲ್ಲಿ ಹೆಚ್1ಎನ್1 ರೋಗವು ಒಂದು ಪ್ರಕರಣವನ್ನು ಬಿಟ್ಟರೆ ಬೇರೆ ಪ್ರಕರಣಗಳು ನಡೆದಿಲ್ಲ. ರೋಗದ ಬಗ್ಗೆ ಹೆದರಿಕೆ ಬೇಡ ಮುಂಜಾಗೃತೆಯಿರಲಿ ಎಂದು ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ.ಶಶಿಕಲಾ ಹೇಳಿದರು.

ಮೀನುಗಾರಿಕೆ ಇಲಾಖೆಯಿಂದ ಟೆಂಪೋ ವಿತರಣೆ
ಮೀನುಗಾರಿಕೆ ಇಲಾಖೆಯಿಂದ ಟೆಂಪೋ ವಿತರಣೆ

ಮೀನುಗಾರಿಕೆ ಇಲಾಖೆಯಿಂದ ಎಸ್‍ಸಿಟಿಪಿ ಯೋಜನೆಯಿಂದ ಪರಿಶಿಷ್ಟ ಜಾತಿ ಮತ್ತು ಪ.ಪಂ ದವರಿಗೆ ಮೀನು ವ್ಯಾಪಾರ ಮಾಡಲು ಕೊಡ ಮಾಡುವ ಟೆಂಪೋವನ್ನು ಕಿನ್ನಿಗೋಳಿ ಉಳೆಪಾಡಿಯ ಅರುಣ್ ಎಂಬವರಿಗೆ ಟೆಂಪೋ ಸೌಲಭ್ಯ ಶನಿವಾರ ವಿತರಿಸಲಾಯಿತು.

ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಗೆ ಬೀಳ್ಕೊಡುಗೆ
ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಗೆ ಬೀಳ್ಕೊಡುಗೆ

ಅಗ್ನಿಶಾಮಕ ಇಲಾಖೆಯಲ್ಲಿ 41 ವರ್ಷಗಳಿಂದ ಸೇವೆ ಸಲ್ಲಿಸಿ ಸೇವೆಯಿಂದ ನಿವೃತ್ತರಾಗುತ್ತಿರುವ, ರಾಷ್ಟ್ರಪತಿ ಪದಕ ವಿಜೇತ ಅಂತಪ್ಪ ಅವರನ್ನು ಶನಿವಾರ ಬೀಳ್ಕೊಡಲಾಯಿತು.

ಮಾಂಟ್ರಾಡಿ: ರಬ್ಬರ್ ತೋಟಕ್ಕೆ ಬೆಂಕಿ
ಮಾಂಟ್ರಾಡಿ: ರಬ್ಬರ್ ತೋಟಕ್ಕೆ ಬೆಂಕಿ

ಮಾಂಟ್ರಾಡಿ ಗ್ರಾಮದ ಮಿತ್ತೊಟ್ಟ ಎಂಬಲ್ಲಿ ರಬ್ಬರ್ ತೋಟವೊಂದರಲ್ಲಿ ಭಾನುವಾರ ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದೆ. ಸುಮಾರು ಒಂದೂವರೆ ಎಕರೆಯಲ್ಲಿದ್ದ ರಬ್ಬರ್ ಬೆಳೆಗಳು ನಾಶವಾಗಿದ್ದು, 2 ಲಕ್ಷ ರೂ.ಗಳ ನಷ್ಟ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ.

ಮೂಡುಬಿದಿರೆ ಮೂಡಾ ಅಧ್ಯಕ್ಷರಾಗಿ ಸುರೇಶ್ ಕೋಟ್ಯಾನ್
ಮೂಡುಬಿದಿರೆ ಮೂಡಾ ಅಧ್ಯಕ್ಷರಾಗಿ ಸುರೇಶ್ ಕೋಟ್ಯಾನ್

ಕರ್ನಾಟಕ ಸರ್ಕಾರದ ಅಧೀನ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆ ಬೆಂಗಳೂರು ಇವರ ಆದೇಶದಂತೆ ಮೂಡುಬಿದಿರೆ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಪುರಸಭೆ ಸದಸ್ಯ ಸುರೇಶ್ ಕೋಟ್ಯಾನ್ ಅವರನ್ನು ನೇಮಕ ಮಾಡಲಾಗಿದೆ.

ತೋಡಾರು ಮಖಾಂ ಉರೂಸ್ ಸಂಪನ್ನ
ತೋಡಾರು ಮಖಾಂ ಉರೂಸ್ ಸಂಪನ್ನ

ಅನೇಕ ಧರ್ಮಗಳ ನೆಲವೀಡು ಭಾರತ. ನಾವೆಲ್ಲರು ಒಂದೆ ಎನ್ನುವುದನ್ನು ಪ್ರತಿಯೊಂದ ಧರ್ಮವು ಸಾರುತ್ತದೆ. ಮಾನವೀಯ ನೆಲೆಯಲ್ಲಿ ಸಹೋದರತೆಯ ನೆರಳಲ್ಲಿ ನಾವು ಬಾಳಬೇಕು. ಇಸ್ಮಾಂ ಧರ್ಮವು ಸಾಮರಸ್ಯ, ಸಹಬಾಳ್ವೆಯನ್ನು ಪ್ರತಿಪಾಧಿಸುತ್ತದೆ ಎಂದು ಕಾಸರಗೋಡಿನ ಖಾಝಿ ಶೈಖುನಾ ಆಲಿಕುಟ್ಟಿ ಮುಸ್ಲಿಯಾರ್ ಹೇಳಿದರು.

ಅಂತಾರಾಷ್ಟ್ರೀಯ ಕರಾಟೆ: ಶೊರಿನ್ ರಿಯೂ ತಂಡ ಸಾಧನೆ
ಅಂತಾರಾಷ್ಟ್ರೀಯ ಕರಾಟೆ: ಶೊರಿನ್ ರಿಯೂ ತಂಡ ಸಾಧನೆ

ಮಹಾರಾಷ್ಟ್ರದ ಪುಣೆಯಲ್ಲಿ ಫೆ. 18ರಿಂದ 20 ರವರೆಗೆ ನಡೆದ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‍ಪ್‍ನಲ್ಲಿ ಮೂಡುಬಿದರೆ ಶೋರಿನ್ - ರಿಯೂ ಕರಾಟೆ ತಂಡವು 6 ಚಿನ್ನ, 3 ಬೆಳ್ಳಿ, 1 ಕಂಚಿನ ಪದಕ ಪಡೆದು ಉತ್ತಮ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಘನತ್ಯಾಜ್ಯ ನಿರ್ವಹಣೆ ಟೆಂಡರ್: ಮೂಡುಬಿದಿರೆ ಪುರಸಭೆ ನಿರ್ಣಯ
ಘನತ್ಯಾಜ್ಯ ನಿರ್ವಹಣೆ ಟೆಂಡರ್: ಮೂಡುಬಿದಿರೆ ಪುರಸಭೆ ನಿರ್ಣಯ

ಕಳೆದ ನಾಲ್ಕು ವರ್ಷಗಳಿಂದ ಮೂಡುಬಿದಿರೆಯಲ್ಲಿ ಘನ ತ್ಯಾಜ್ಯ ವಿಲೇವಾರಿ ನಿರ್ವಹಣೆಯ ಜವಾಬ್ದಾರಿಯನ್ನು ನಿರ್ವಹಿಸಿದ್ದ ಸ್ವ-ಸಹಾಯ ಗುಂಪುಗಳನ್ನು ರದ್ದುಗೊಳಿಸಿ ಟೆಂಡರ್ ಮೂಲಕ ಗುತ್ತಿಗೆದಾದರ ಪಾಲಿಗೆ ನೀಡುವುದೆಂದು ಮೂಡುಬಿದರೆ ಪುರಸಭೆಯು ನಿರ್ಣಯ ಮಾಡಿದೆ.

ಆಳ್ವಾಸ್ ಪತ್ರಿಕೋದ್ಯಮ ಹಳೆ ವಿದ್ಯಾರ್ಥಿ ಸಂಘ ಉದ್ಘಾಟನೆ
ಆಳ್ವಾಸ್ ಪತ್ರಿಕೋದ್ಯಮ ಹಳೆ ವಿದ್ಯಾರ್ಥಿ ಸಂಘ ಉದ್ಘಾಟನೆ

ಹಳೆ ವಿದ್ಯಾರ್ಥಿಗಳು ಸಂಸ್ಥೆಗೆ, ವಿಭಾಗಕ್ಕೆ ಹಳಬರಲ್ಲ. ಹೊಸತನ, ಹೊಸಚೈತನ್ಯವನ್ನು ತಮ್ಮ ಕಿರಿಯರಿಗೆ ಮಾರ್ಗದರ್ಶನ ಮಾಡುವ ಮೂಲಕ ಪ್ರೇರಣೆಯನ್ನು ನೀಡಬಹುದು ಎಂದು ಬೆಂಗಳೂರಿನ ಇಂಡಿಯನ್ ಅಕಾಡೆಮಿ ಎಜ್ಯುಕೇಶನ್ ಟ್ರಸ್ಟ್ ನ ಪಿಆರ್‍ಒ, ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ಹಳೆವಿದ್ಯಾರ್ಥಿ ವಿವೇಕ್ ನಂಬಿಯಾರ್ ಹೇಳಿದರು.

ಪ್ರಾಂತ್ಯ ಶಾಲೆಯಲ್ಲಿ ಅಗ್ನಿಶಾಮಕದಳದಿಂದ ಪ್ರಾತ್ಯಕ್ಷಿಕೆ
ಪ್ರಾಂತ್ಯ ಶಾಲೆಯಲ್ಲಿ ಅಗ್ನಿಶಾಮಕದಳದಿಂದ ಪ್ರಾತ್ಯಕ್ಷಿಕೆ

ಪ್ರಾಂತ್ಯ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ವಿಜ್ಞಾನದ ದಿನಾಚರಣೆ ಪ್ರಯುಕ್ತ ಮೂಡುಬಿದಿರೆ ಅಗ್ನಿಶಾಮಕದಳವರಿಂದ ಪ್ರಾತ್ಯಕ್ಷಿಕೆ ನಡೆಯಿತು.

ಜೇಸಿಐ ಪೋಸ್ಟಲ್ ಫೆಬ್ರವರಿ: ರಾಘವೇಂದ್ರ ಭಟ್‍ಗೆ ಸನ್ಮಾನ
ಜೇಸಿಐ ಪೋಸ್ಟಲ್ ಫೆಬ್ರವರಿ: ರಾಘವೇಂದ್ರ ಭಟ್‍ಗೆ ಸನ್ಮಾನ

ಹೊಸಬೆಟ್ಟು ಗ್ರಾಮದಲ್ಲಿ ನಡೆದುಕೊಂಡು ಹೋಗಿ ಟಪಾಲನ್ನು ಮುಟ್ಟಿಸುವ ಕಾಯಕದಲ್ಲಿ ತೊಡಗಿರುವ ಇಲಾಖೇತರ ಅಂಚೆ ಪೇದೆ ರಾಘವೇಂದ್ರ ಭಟ್ ಅವರನ್ನು ದಂಪತಿ ಸಹಿತ ಗುರುವಾರ ಪೋಸ್ಟಲ್ ಫೆಬ್ರವರಿ ಪ್ರಯುಕ್ತ ಸನ್ಮಾನಿಸಲಾಯಿತು.

ಭೂಸಮಿಕ್ಷೆ ಮತ್ತು ನಕ್ಷೆಯಲ್ಲಿ ಮುಂದುವರಿಕ ತಂತ್ರಗಾರಿಕೆ ಕಾರ್ಯಾಗಾರ
ಭೂಸಮಿಕ್ಷೆ ಮತ್ತು ನಕ್ಷೆಯಲ್ಲಿ ಮುಂದುವರಿಕ ತಂತ್ರಗಾರಿಕೆ ಕಾರ್ಯಾಗಾರ

ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ವತಿಯಿಂದ ಎರಡು ದಿನಗಳ ಕಾಲ ನಡೆಯುವ ಭೂಸಮಿಕ್ಷೆ ಮತ್ತು ನಕ್ಷೆಯಲ್ಲಿ ಮುಂದುವರಿಕ ತಂತ್ರಗಾರಿಕೆ ಕಾರ್ಯಾಗಾರಕ್ಕೆ ಗುರುವಾರ ಚಾಲನೆ ನೀಡಲಾಯಿತು.

ಆಟೋ ಚಾಲಕರ ಕ್ಷೇಮನಿಧಿಯಿಂದ ಸಹಾಯಧನ
ಆಟೋ ಚಾಲಕರ ಕ್ಷೇಮನಿಧಿಯಿಂದ ಸಹಾಯಧನ

ಫೆ.8ರಂದು ಹೃದಯಾಘಾತದಲ್ಲಿ ಮೃತರಾದ ಮಾವಿನಕಟ್ಟೆ ನಿವಾಸಿ ಬಾಲಕೃಷ್ಣ ಅವರ ಕುಟುಂಬಕ್ಕೆ ಮೂಡುಬಿದಿರೆ ಆಟೋ ಚಾಲಕ ಮಾಲಕ ಸಂಘದ ಕ್ಷೇಮನಿಧಿಯಿಂದ ಬುಧವಾರ ಸಹಾಯಧನ ವಿತರಿಸಲಾಯಿತು.

ಆಳ್ವಾಸ್ ಕಾಲೇಜಿನ ಅನುಶ್ರೀಗೆ ವೀರರಾಣಿ ಚೆನ್ನಮ್ಮ ಕೇಸರಿ ಪ್ರಶಸ್ತಿ
ಆಳ್ವಾಸ್ ಕಾಲೇಜಿನ ಅನುಶ್ರೀಗೆ ವೀರರಾಣಿ ಚೆನ್ನಮ್ಮ ಕೇಸರಿ ಪ್ರಶಸ್ತಿ

ಫೆ 21ರಿಂದ 23ರವರೆಗೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಶ್ರೀ ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಹಾಗೂ ಕರ್ನಾಟಕ ರಾಜ್ಯ ಕುಸ್ತಿ ಅಸೋಸಿಯೇಶನ್‍ರವರ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿಯರು ಸಾಧನೆ ಮಾಡಿದ್ದಾರೆ.

ಉಪನೋಂದಣಿ ಕಚೇರಿಗೆ ಡಿ.ಸಿ ದಿಢೀರ್ ಭೇಟಿ: ಅವ್ಯವಸ್ಥೆಗೆ ಅಸಮಾಧನ
ಉಪನೋಂದಣಿ ಕಚೇರಿಗೆ ಡಿ.ಸಿ ದಿಢೀರ್ ಭೇಟಿ: ಅವ್ಯವಸ್ಥೆಗೆ ಅಸಮಾಧನ

ಮೂಡುಬಿದಿರೆ ಇಲ್ಲಿನ ಉಪನೋಂದಣಿ ಕಚೇರಿಗೆ ಸೋಮವಾರ ದಿಢೀರ್ ಭೇಟಿ ನೀಡಿ ಅವ್ಯವಸ್ಥೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ತಹಸೀಲ್ದಾರ್ ಕಚೇರಿಗೂ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದರು.

ಕಲ್ಲಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘ
ಕಲ್ಲಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘ

ಕಲ್ಲಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಗುರುವಾರ ಚುನಾವಣಾಧಿಕಾರಿ ಸುಕನ್ಯಾ ಅವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಕೆ.ವರದರಾಯ ಕಾಮತ್ ಅಧ್ಯಕ್ಷರಾಗಿ ಮತ್ತು ಸತೀಶ್ ಅಮೀನ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಅಡುಗೆ ಅನಿಲ ಮತ್ತು ಹೊಲಿಗೆ ಯಂತ್ರ ವಿತರಣೆ
ಅಡುಗೆ ಅನಿಲ ಮತ್ತು ಹೊಲಿಗೆ ಯಂತ್ರ ವಿತರಣೆ

ಮೂಡುಬಿದಿರೆ ಇಲ್ಲಿನ ಪುರಸಭಾ ವ್ಯಾಪ್ತಿಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಬಿಪಿಎಲ್ ಪಡಿತರ ಕುಟುಂಬಗಳ ಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲ ಮತ್ತು ಹೊಲಿಗೆ ಯಂತ್ರವನ್ನು ಸಮಾಜ ಮಂದಿರದಲ್ಲಿ ಶನಿವಾರ ವಿತರಿಸಲಾಯಿತು.

ಮೂಡುಬಿದಿರೆ ಸ್ವಸಹಾಯ ಸಂಘಗಳ ಜಾಗೃತಿ ಸಮಾವೇಶ
ಮೂಡುಬಿದಿರೆ ಸ್ವಸಹಾಯ ಸಂಘಗಳ ಜಾಗೃತಿ ಸಮಾವೇಶ

ಮಹಿಳೆಯರು ಈ ಸಮಾಜದಲ್ಲಿ ಅಧಿಕಾರದೆಡೆಗೆ ಸಾಗಲು ಸಶಕ್ತೀಕರಣ ಅಗತ್ಯವಾಗಿದೆ. ಇದನ್ನು ಸ್ವ ಸಹಾಯ ಸಂಘದ ಮೂಲಕ ಅಳವಡಿಸಿಕೊಳ್ಳಬೇಕೆಂದು ಮೂಡುಬಿದರೆ ಪುರಸಭಾಧ್ಯಕ್ಷೆ ಸುಪ್ರಿಯಾ ಡಿ.ಶೆಟ್ಟಿ ತಿಳಿಸಿದರು.

ರೋಟರಿ ಶಾಲೆಯಲ್ಲಿ ವಾರ್ಷಿಕ ಶಿಬಿರ
ರೋಟರಿ ಶಾಲೆಯಲ್ಲಿ ವಾರ್ಷಿಕ ಶಿಬಿರ

ಮೂಡುಬಿದಿರೆ ಇಲ್ಲಿನ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಕೌಟ್, ಗೈಡ್ಸ್, ಕಬ್, ಬುಲ್‍ಬುಲ್‍ನ ವಾರ್ಷಿಕ ಶಿಬಿರವನ್ನು ಶನಿವಾರ ಉದ್ಘಾಟಿಸಲಾಯಿತು.

ಕಾಳಿಕಾಂಬಾ ದೇವಸ್ಥಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ
ಕಾಳಿಕಾಂಬಾ ದೇವಸ್ಥಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದಲ್ಲಿ ಐದು ದಿನಗಳ ಕಾಲ ನಡೆಯುವ ವರ್ಷಾವಧಿ ಮಹೋತ್ಸವದಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಲಾಯಿತು.

Suvarna News 24X7 Live online
333 Album