ಶಿರ್ವ: ಬೈಕ್ - ಟೆಂಪೋ ಢಿಕ್ಕಿ, ಸವಾರ ಸ್ಥಳದಲ್ಲೇ ಮೃತ್ಯು
ಶಿರ್ವ: ಬೈಕ್ - ಟೆಂಪೋ ಢಿಕ್ಕಿ, ಸವಾರ ಸ್ಥಳದಲ್ಲೇ ಮೃತ್ಯು

ಬಂಟಕಲ್ಲಿನಿಂದ ಕಟಪಾಡಿಗೆ ಜಲ್ಲಿ ಹೇರಿಕೊಂಡು ಬರುತ್ತಿದ್ದ ಟೆಂಪೋ ಶಂಕರಪುರದಿಂದ ಬರುತ್ತಿದ್ದ ಬೈಕಿಗೆ ಸಲ್ಮಾರದಲ್ಲಿ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಮೃತಪಟ್ಟವರನ್ನು ಬಂಟಕಲ್ ಅರಸಿನ ಕಟ್ಟೆಯ ಡ್ಯಾನಿ ಕಾರ್ಡೋಜಾ (28) ಎಂದು ಗುರುತಿಸಲಾಗಿದೆ.

ಮೂಡಬಿದಿರೆ : ಜಯಪ್ರಕಾಶ್ ಸ್ಮರಣಾರ್ಥ ರಂಗಮಂದಿರ ಉದ್ಘಾಟನೆ
ಮೂಡಬಿದಿರೆ : ಜಯಪ್ರಕಾಶ್ ಸ್ಮರಣಾರ್ಥ ರಂಗಮಂದಿರ ಉದ್ಘಾಟನೆ

ತಾವು ಬದುಕಿರುವಾಗ ಸಾವಿನ ಬಗ್ಗೆ ಹೆದರದೆ, ಬದುಕಿನಲ್ಲಿ ಸಾಧನೆ ಮಾಡುವ ಬಗ್ಗೆ ಚಿಂತಿಸಬೇಕು ಎಂದು ಕೇಮಾರು ಸಂದೀಪನೀ ಆಶ್ರಮದ ಸ್ವಾಮಿ ಈಶ ವಿಠ್ಠಲದಾಸ್ ಅವರು ಹೇಳಿದರು. ಅವರು ಕಳೆದ ವರ್ಷ ಸಂಭವಿಸಿದ ಬಜ್ಪೆ ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಜಯಪ್ರಕಾಶ್ ದೇವಾಡಿಗ ಸ್ಮರಣಾರ್ಥ ನಿರ್ಮಿಸಿರುವ ರಂಗಮಂದಿರದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.

ಮೇ 27ರಂದು ’ಒರಿಯರ್ದೊರಿ ಅಸಲ್’ ತುಳು ಚಲನ ಚಿತ್ರ ಬಿಡುಗಡೆ
ಮೇ 27ರಂದು ’ಒರಿಯರ್ದೊರಿ ಅಸಲ್’ ತುಳು ಚಲನ ಚಿತ್ರ ಬಿಡುಗಡೆ

’ಒರಿಯರ್ದೊರಿ ಅಸಲ್’ ತುಳು ಚಲನ ಚಿತ್ರ ಇದೇ 27ರಂದು, ಮಂಗಳೂರಿನ ಜ್ಯೋತಿ, ಪುತ್ತೂರಿನ ಅರುಣಾ ಮತ್ತು ಮೂಡಬಿದಿರೆಯ ಅಮರಶ್ರೀ ಟಾಕಿಸ್ ನಲ್ಲಿ ಬಿಡುಗಡೆಯಾಗಲಿದೆ.

ಪಿಲಿಕುಳದ ಕಾಳಿಂಗ ಸರ್ಪಗಳಿಗೆ ಸಂತಾನ ಭಾಗ್ಯ
ಪಿಲಿಕುಳದ ಕಾಳಿಂಗ ಸರ್ಪಗಳಿಗೆ ಸಂತಾನ ಭಾಗ್ಯ

ಪಿಲಿಕುಳ ಡಾ. ಶಿವರಾಮ ಕಾರಂತ ಜೈವಿಕ ಉದ್ಯಾನವನದಲ್ಲಿ ಕಾಳಿಂಗ ಸರ್ಪಗಳು ಒಂದೇ ಬಾರಿಗೆ ಮೊಟ್ಟೆ ಇಟ್ಟು ವಿಶ್ವ ದಾಖಲೆ ಸ್ಥಾಪಿಸಿವೆ.

ದುಬಾಯಿ : ಬೆಳ್ಮಣ್ಣಿನ ಬಾಲೆ ಸೆನೋರಾ ಡಿಮೆಲ್ಲೊ ಸಿಬಿಎಸ್ಸಿ ಪರೀಕ್ಷೆಯಲ್ಲಿ ದ್ವಿತೀಯ
ದುಬಾಯಿ : ಬೆಳ್ಮಣ್ಣಿನ ಬಾಲೆ ಸೆನೋರಾ ಡಿಮೆಲ್ಲೊ ಸಿಬಿಎಸ್ಸಿ ಪರೀಕ್ಷೆಯಲ್ಲಿ ದ್ವಿತೀಯ

ದುಬಾಯಿಯ ಇಂಡಿಯನ್ ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬೆಳ್ಮಣ್ಣು ಮೂಲದ ಸೆನೋರಾ ಡಿಮೆಲ್ಲೋ ಈ ಸಾಲಿನ 12ನೇ ತರಗತಿಯ ವಿಜ್ಞಾನ ಸಿಬಿಎಸ್ಸಿ ಪರೀಕ್ಷೆಯಲ್ಲಿ ಇಡೀ ಅರಬ್ ಎಮಿರೇಟ್ಸ್ ನಲ್ಲೇ ದ್ವಿತೀಯ ಸ್ಥಾನ ಪಡೆದಿದ್ದಾಳೆ. ರೇಮಂಡ್ ಮತ್ತು ಶಾಂತಿ ಡಿಮೆಲ್ಲೋ ದಂಪತಿಯ ಸುಪುತ್ರಿ ಸೆನೋರಾ ಕರಾಟೆ ಬ್ಲ್ಯಾಕ್ ಬೆಲ್ಟ್ ಕೂಡಾ ಆಗಿದ್ದಾರೆ.

Two Youngsters Drown in Payaswini River-ಸ್ನಾನಕ್ಕೆಂದು ಹೋದ ಇಬ್ಬರು ಯುವಕರು ನೀರು ಪಾಲು
ಸ್ನಾನಕ್ಕೆಂದು ಹೋದ ಇಬ್ಬರು ಯುವಕರು ನೀರು ಪಾಲು

ಸುಳ್ಯದ ಪಯಸ್ವಿನಿ ನದಿಗೆ ಸ್ನಾನಕ್ಕೆಂದು ಇಳಿದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.

ಜನಪ್ರೀಯಗೊಳ್ಳುತ್ತಿದೆ 3ಜಿ ಮೊಬೈಲ್ ಸೇವೆ
ಜನಪ್ರೀಯಗೊಳ್ಳುತ್ತಿದೆ 3ಜಿ ಮೊಬೈಲ್ ಸೇವೆ

ನಾಲ್ಕು ತಿಂಗಳ ಹಿಂದೆಯಷ್ಟೆ ಆರಂಭಗೊಂಡ 3 ಜಿ ಮೊಬೈಲ್ ಸೇವೆಯ ಅನುಕೂಲತೆಯನ್ನು ಈಗಾಗಲೇ 90 ಲಕ್ಷ ಮಂದಿ ಬಳಸತೊಡಗಿದ್ದಾರೆ, ಮೂರನೇ ಪೀಳಿಗೆಯ ಮೊಬೈಲ್ ಫೋನ್ ಸೇವೆ ಕಳೆದ ನಾಲ್ಕು ತಿಂಗಳಲ್ಲಿ ಜನಪ್ರಿಯವಾಗಿದೆ. ಗಮನಾರ್ಹವೆಂದರೆ ವೈರ್ ಲೈನ್ ಬ್ರಾಡ್ ಬ್ಯಾಂಡ್ ಬಳಸುತ್ತಿರುವ ಗ್ರಾಹಕರ ಸಂಖ್ಯೆ ಇದುವರೆಗೆ 1.1 ಕೋಟಿ ಮಂದಿ ಮಾತ್ರ ಇದೆ.

ಬೆಂಗಳೂರಿನಲ್ಲಿ ಇ -ವೇಶ್ಯಾವಾಟಿಕೆ ಜಾಲ: ಯುವತಿಯರ ಬಂಧನ
ಬೆಂಗಳೂರಿನಲ್ಲಿ ಇ -ವೇಶ್ಯಾವಾಟಿಕೆ ಜಾಲ: ಯುವತಿಯರ ಬಂಧನ

ಇ-ಬುಕಿಂಗ್‌ ಮೂಲಕ ಗ್ರಾಹಕರನ್ನು ಸೆಳೆದು ತಾರಾ ಹೋಟೆಲ್‌ಗ‌ಳಲ್ಲಿ ಕೊಠಡಿ ವ್ಯವಸ್ಥೆ ಮಾಡಿ ವೇಶ್ಯಾವಾಟಿಕೆ ಪ್ಯಾಕೇಜ್‌ ನಡೆಸುತ್ತಿದ್ದ ಅಂತಾರಾಜ್ಯ ವೇಶ್ಯಾವಾಟಿಕೆ ಜಾಲ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದೆ.

ಮಂಗಳೂರಿನಲ್ಲಿ ಬಿಜೆಪಿ ವಿಜಯೋತ್ಸವ
ಮಂಗಳೂರಿನಲ್ಲಿ ಬಿಜೆಪಿ ವಿಜಯೋತ್ಸವ

ರಾಜ್ಯ ವಿಧಾನಸಭೆಯನ್ನು ಅಮಾನತಿನಲ್ಲಿಟ್ಟು, ರಾಷ್ಟ್ರಪತಿ ಆಳ್ವಿಕೆ ಜಾರಿಗೊಲಿಸಬೇಕೆಂಬ ರಾಜ್ಯಪಾಲರು ಕಳುಹಿಸಿದ ವರದಿಯನ್ನು ಕೇಂದ್ರ ಸರಕಾರ ತಿರಸ್ಕರಿಸಿದ ಹಿನ್ನೆಲೆಯಲ್ಲಿ ದ.ಕ ಜಿಲ್ಲಾ ಬಿಜೆಪಿ ಬಿಜೆಪಿ ಮುಖಂಡರು ವಿಜಯೋತ್ತವ ಆಚರಿಸಿದರು.

ಲಿಮ್ಕಾ-ಗಿನ್ನಿಸ್ ದಾಖಲೆಯತ್ತ ಕನ್ನಡದ ’ಪೊಲೀಸ್ ಸ್ಟೋರಿ-3’ ಚಿತ್ರ
ಲಿಮ್ಕಾ-ಗಿನ್ನಿಸ್ ದಾಖಲೆಯತ್ತ ಕನ್ನಡದ ’ಪೊಲೀಸ್ ಸ್ಟೋರಿ-3’ ಚಿತ್ರ

ಕನ್ನಡದ ಶ್ರೇಷ್ಠ ನಟ ಕಿಚ್ಚ ಸುದೀಪ್‌ ಅವರು ಕೇವಲ ಹನ್ನೆರಡು ಗಂಟೆಯಲ್ಲಿ ಚಿತ್ರೀಕರಿಸಲು ಸಿದ್ಧವಾಗಿರುವ ’ಪೊಲೀಸ್ ಸ್ಟೋರಿ-3’ ಚಿತ್ರಕ್ಕೆ ಸೈ ಎಂದಿದ್ದಾರೆ. ಥ್ರಿಲ್ಲರ್ ಮಂಜು ಸೇರಿದಂತೆ ಆರುಜನ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಗಿನ್ನಿಸ್ ಮತ್ತು ಲಿಮ್ಕಾ ದಾಖಲೆಗೆ ಅನುಮತಿ ಸಿಕ್ಕಿದೆ.

ಮೂಡಬಿದಿರೆ: ಅಕ್ರಮ ಜಾನುವಾರು ಸಾಗಾಟ ಆರೋಪಿಗಳು ಪರಾರಿ
ಮೂಡಬಿದಿರೆ: ಅಕ್ರಮ ಜಾನುವಾರು ಸಾಗಾಟ ಆರೋಪಿಗಳು ಪರಾರಿ

ಮೂಡಬಿದಿರೆಗೆ ಸಮೀಪದ ಪುತ್ತಿಗೆ ಗ್ರಾಮದ ಹಂಡೇಲಿನಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಟಾಟಾ ಇಂಡಿಕಾ ಕಾರನ್ನು ಪೊಲೀಸರು ನಿನ್ನೆ ವಶಪಡಿಸಿಕೊಂಡು ಅದರೊಳಗೆ ಇದ್ದ 3 ಹಸು ಹಾಗೂ 4 ಹೋರಿಗಳನ್ನು ಅಪಾಯದಿಂದ ಪಾರು ಮಾಡಿದ್ದಾರೆ.

ಕಾರ್ಕಳ: ಮಾರ್ಣೆ ಗ್ರಾಮದಲ್ಲಿ ಯುವಕ ನೇಣಿಗೆ ಶರಣು
ಕಾರ್ಕಳ: ಮಾರ್ಣೆ ಗ್ರಾಮದಲ್ಲಿ ಯುವಕ ನೇಣಿಗೆ ಶರಣು

ಕೆಲಸ ಬಿಟ್ಟು ಆಂದ್ರಪ್ರದೇಶದಿಂದ ಮನೆಗೆ ಬಂದ ಎರಡೇ ದಿನದಲ್ಲಿ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳದ ಬಳಿಯ ಮಾರ್ಣೆ ಗ್ರಾಮದ ಬಳಿ ನಡೆದಿದೆ. 28 ವರ್ಷ ಪ್ರಾಯದ ಮಾರ್ಣೆ ಗ್ರಾಮದ ದೊಂಬರಪಲ್ಕೆ ವಾಸಿ ಬಾಲಕೃಷ್ಣ ಪೂಜಾರಿ ಎಂಬವರೇ ಆತ್ಮ ಹತ್ಯೆ ಮಾಡಿಕೊಂಡವರು.

ನಾಳೆ ವಿಮಾನ ದುರಂತದಲ್ಲಿ ಮೃತರಾದ ಜಯಪ್ರಕಾಶ್ ಸ್ಮರಣಾರ್ಥ ರಂಗಮಂದಿರ ಉದ್ಘಾಟನೆ
ಇಂದು ವಿಮಾನ ದುರಂತದಲ್ಲಿ ಮೃತರಾದ ಜಯಪ್ರಕಾಶ್ ಸ್ಮರಣಾರ್ಥ ರಂಗಮಂದಿರ ಉದ್ಘಾಟನೆ

ಕಳೆದ ವರ್ಷ ಮಂಗಳೂರಿನಲ್ಲಿ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ ಮೃತರಾದ ಪಡುಮಾರ್ನಾಡು-ಮೂಡಬಿದಿರೆ ಯುವಕ ಮಂಡಲ ಮತ್ತು ಯುವತಿ ಮಂಡಲದ ಸದಸ್ಯರಾದ ಜಯಪ್ರಕಾಶ್ ದೇವಾಡಿಗ (JP) ಅವರ ಸ್ಮರಣಾರ್ಥ ನಿರ್ಮಿಸಿದ ರಂಗಮಂದಿರದ ಉದ್ಘಾಟನಾ ಸಮಾರಂಭ ಮೇ 22ರಂದು ನಡೆಯಲಿದೆ.

ಮೇ 30ಕ್ಕೆ ಸಿಇಟಿ ಫಲಿತಾಂಶ
ಮೇ 30ಕ್ಕೆ ಸಿಇಟಿ ಫಲಿತಾಂಶ

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಫಲಿತಾಂಶ ಮೇ.30ರಂದು ಪ್ರಕಟವಾಗಲಿದೆ.

ಮುಖ್ಯಮಂತ್ರಿ ನಾಳೆ ಮಂಗಳೂರಿಗೆ
ಮುಖ್ಯಮಂತ್ರಿ ಯಡಿಯೂರಪ್ಪ ನಾಳೆ ಮಂಗಳೂರಿಗೆ

ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರ ಪ್ರಜಾತಂತ್ರ ವಿರೋಧಿ ಧೋರಣೆ ಖಂಡಿಸಿ ಬಿಜೆಪಿ ರಾಜ್ಯಾದ್ಯಂತ ಮೇ 21ರಿಂದ 25ರವರೆಗೆ ಜನಾಂದೋಲನ ಹಮ್ಮಿಕೊಂಡಿದ್ದು, ನಾಳೆ ಮಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾಗವಹಿಸಲಿದ್ದಾರೆ.

Moodbidri : LPG Bike by SNMP polytechnic students ಮೂಡಬಿದಿರೆ : ಗ್ಯಾಸ್ ಚಾಲಿತ ಬೈಕ್ ನಿರ್ಮಿಸಿದ ಎಸ್.ಎನ್.ಎಮ್.ಪಿ. ವಿದ್ಯಾರ್ಥಿಗಳು
ಮೂಡಬಿದಿರೆ: ಗ್ಯಾಸ್ ಚಾಲಿತ ಬೈಕ್ ನಿರ್ಮಿಸಿದ ಎಸ್.ಎನ್.ಎಮ್. ಪಾಲಿಟೆಕ್ನಿಕ್ ವಿದ್ಯಾರ್ಥಿಗಳು

2.5 ಕೆಜಿ ಸಾಮರ್ಥ್ಯದ ಎಲ್.ಪಿ.ಜಿ ಗ್ಯಾಸ್ ಟ್ಯಾಂಕ್ ಹೊಂದಿರುವ ಈ ಬೈಕಿಗೆ ಯಾವುದೇ ಗ್ಯಾಸ್ ಬಂಕ್ ನಲ್ಲೂ ಗ್ಯಾಸ್ ತುಂಬಿಸಬಹುದು. ಅಲ್ಲದೆ ಕಿಲೋಮೀಟರ್ ಒಂದಕ್ಕೆ ಕೇವಲ 30 ರಿಂದ 40 ಪೈಸೆ ವೆಚ್ಚದಲ್ಲಿ ಓಡಿಸಬಹುದು. ಒಂದು ಬಾರಿ ಫುಲ್ ಟ್ಯಾಂಕ್ ಮಾಡಿದರೆ ಆರಾಮವಾಗಿ 350 ರಿಂದ 360 ಕಿಲೋಮೀಟರ್ ಓಡಿಸಬಹುದು.

ಮೊಬೈಲ್ ಬಿದ್ದ ಪರಿಣಾಮ ವಿಮಾನಯಾನ ವಿಳಂಬ
ಮೊಬೈಲ್ ಬಿದ್ದ ಪರಿಣಾಮ ವಿಮಾನಯಾನ ವಿಳಂಬ

ಕಿಂಗ್‌ಫಿಶರ್ ಏರ್ ಲೈನ್ಸ್ ವಿಮಾನದಲ್ಲಿ ಪ್ರಯಾಣಿಕರ ಮೊಬೈಲ್‌ ಫೋನ್ ಬಿದ್ದು ಹೋದ ಪರಿಣಾಮ ನಿನ್ನೆ ಸಂಜೆ 6.30ಕ್ಕೆ ಮಂಗಳೂರಿನಿಂದ ಬೆಂಗಳೂರಿಗೆ ತೆರಳಬೇಕಿದ್ದ ವಿಮಾನದ ಯಾನ ವಿಳಂಬಗೊಂಡಿದೆ.

ಸಹಕಾರಿ ಪದ್ದತಿ ಸಫಲವಾಗಿದ್ದರೆ ಗ್ರಾಮೀಣ ಭಾರತದ ಅಭಿವೃದ್ಧಿ ಸಾಧ್ಯ : ಡಾ. ವಿರೇಂದ್ರ ಹೆಗ್ಡೆ
ಸಹಕಾರಿ ಪದ್ದತಿ ಸಫಲವಾಗಿದ್ದರೆ ಗ್ರಾಮೀಣ ಭಾರತದ ಅಭಿವೃದ್ಧಿ ಸಾಧ್ಯ : ಡಾ. ವಿರೇಂದ್ರ ಹೆಗ್ಡೆ

ಸಹಕಾರಿ ರಂಗ ಅತ್ಯಮೂಲ್ಯವಾಗಿದ್ದು, ಸಹಕಾರಿ ಪದ್ದತಿ ಸಫಲವಾಗಿದ್ದರೆ ಗ್ರಾಮೀಣ ಭಾರತದ ಅಭಿವೃದ್ಧಿ ಸಾಧ್ಯ ಎಂದು ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗ್ಡೆ ಹೇಳಿದರು. ಅವರು ಇಂದು ಮೂಡಬಿದಿರೆ ಕೋ-ಅಪರೇಟಿವ್ ಸರ್ವಿಸ್ ಬ್ಯಾಂಕಿನ ಸುಸ್ಸಜ್ಜಿತ ನೂತನ ಕಟ್ಟಡ ಕಲ್ಪವೃಕ್ಷದ ಉದ್ಘಾಟನೆ ನೆರವೇರಿಸಿ ನಂತರ ಮಹಾವೀರ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮೇ 27ರಂದು ಆಳ್ವಾಸ್ ಬ್ಯಾಂಕಿಂಗ್ ಉದ್ಯೋಗ ಮೇಳ
ಮೇ 27ರಂದು ಆಳ್ವಾಸ್ ಬ್ಯಾಂಕಿಂಗ್ ಉದ್ಯೋಗ ಮೇಳ

ಮಿಜಾರಿನ ಶೋಭವನದಲ್ಲಿ ನಡೆಯಲಿರುವ ಈ ಉದ್ಯೋಗ ಮೇಳದಲ್ಲಿ ಸೌತ್ ಇಂಡಿಯನ್ ಬ್ಯಾಂಕ್, ಇಂಡಿಯನ್ ಓವರ್ಸೀಸ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಯೆಸ್ ಬ್ಯಾಂಕ್, ಎಚ್.ಡಿ.ಎಫ್.ಸಿ., ಮಹೀಂದ್ರಾ ಫೈನಾನ್ಶಿಯಲ್ ಸರ್ವಿಸಸ್, ಫೆಡರಲ್ ಬ್ಯಾಂಕ್ ಮತ್ತಿತರ ವಾಣಿಜ್ಯ ಸಂಸ್ಥೆಗಳು ಭಾಗವಹಿಸಲಿವೆ.

ಜೈಲಿಗೇ ದಾಳಿಯಿಟ್ಟ ಪೊಲೀಸರು: ಗಾಂಜಾ, ಮೊಬೈಲ್‌ ಪತ್ತೆ
ಜೈಲಿಗೇ ದಾಳಿಯಿಟ್ಟ ಪೊಲೀಸರು: ಗಾಂಜಾ, ಮೊಬೈಲ್‌ ಪತ್ತೆ

ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಬುಧವಾರ ದಿಢೀರ್ ದಾಳಿ ನಡೆಸಿದ ಅಸಿಸ್ಟೆಂಟ್‌ ಪೊಲೀಸ್‌ ಕಮೀಶನರ್‌ಗಳಾದ ರವೀಂದ್ರ ಗಡದಿ ಮತ್ತು ಪುಟ್ಟ ಮಾದಯ್ಯ ಅವರ ನೇತೃತ್ವದ ತಂಡ ಖೈದಿಗಳ ಕೊಠಡಿಯಲ್ಲಿ ಇರಿಸಲಾದ ಮೂರು ಪ್ಯಾಕೆ‌ಟ್‌ ಗಾಂಜಾ ಮತ್ತು ಸಿಮ್‌ ರಹಿತ ಒಂದು ಮೊಬೈಲ್‌ ವಶಪಡಿಸಿಕೊಂಡಿದ್ದಾರೆ.

Suvarna News 24X7 Live online
333 Album