ಪಡುಮಾರ್ನಾಡು: ಶ್ಯಾಮರಾಯ ಆಚಾರ್ಯ ನಿಧನ
ಪಡುಮಾರ್ನಾಡು: ಶ್ಯಾಮರಾಯ ಆಚಾರ್ಯ ನಿಧನ

ಪಡುಮಾರ್ನಾಡು ಗ್ರಾಮದ ಅಚ್ಚರಕಟ್ಟೆ ಬೊಲ್ಲೊಟ್ಟು ನಿವಾಸಿ ಶ್ಯಾಮರಾಯ ಆಚಾರ್ಯ (80) ಬುಧವಾರ ಸ್ವಗೃಹದಲ್ಲಿ ನಿಧನರಾದರು.

ಆಲಂಗಾರು : ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಧರ್ಮಸ್ಥಳದಿಂದ ಕೊಡುಗೆ
ಆಲಂಗಾರು :ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಧರ್ಮಸ್ಥಳದಿಂದ ಕೊಡುಗೆ

ಆಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ನಿಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕೊಡುಗೆಯಾಗಿ ರೂ 5 ಲಕ್ಷವನ್ನು ನೀಡಿದ್ದಾರೆ.

ಬಸವನಕಜೆ: ಪರಿಶಿಷ್ಠ ಜಾತಿ ಕಾಲನಿಯ ಕಾಂಕ್ರೀಟಿಕರಣ ರಸ್ತೆ ಉದ್ಘಾಟನೆ
ಬಸವನಕಜೆ: ಪರಿಶಿಷ್ಠ ಜಾತಿ ಕಾಲನಿಯ ಕಾಂಕ್ರೀಟಿಕರಣ ರಸ್ತೆ ಉದ್ಘಾಟನೆ

50-54ನೇ ಎಸ್‍ಸಿಪಿ ಯೋಜನೆಯಡಿ 10 ಲಕ್ಷ ರೂ ವೆಚ್ಚದಲ್ಲಿ ಪಡುಮಾರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವಕಜೆಗೆ ಪರಿಶಿಷ್ಟ ಜಾತಿ ಕಾಲನಿಯ ಕಾಂಕ್ರೀಟಿಕರಣ ರಸ್ತೆಯನ್ನು ಸಚಿವ ಅಭಯಚಂದ್ರ ಜೈನ್ ಗುರುವಾರ ಉದ್ಘಾಟಿಸಿದರು.

ಬೆಳ್ಳೂರು: ಮಾಡ್ಲಾಯ ದೈವದ ನೇಮೋತ್ಸವ
ಬೆಳ್ಳೂರು: ಮಾಡ್ಲಾಯ ದೈವದ ನೇಮೋತ್ಸವ

ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಮಾಡ್ಲಾಯ ದೈವ , ಅರಸು ದ್ಯೆವ ಹಾಗೂ ಕೊಡಮಣಿಂತಾಯಿ ದೈವದ ನೇಮೋತ್ಸವ ಏ. 15ರಂದು ಬುಧವಾರ ನಡೆಯಿತು.

ಮೂಡುಬಿದಿರೆ: ಮುಸ್ಲಿಂ ಮುಖಂಡರ ಸಮಾವೇಶ
ಮೂಡುಬಿದಿರೆ: ಮುಸ್ಲಿಂ ಮುಖಂಡರ ಸಮಾವೇಶ

ಜಮೀಯತುಲ್ ಫಲಾಹ್ ವತಿಯಿಂದ ಮೂಡುಬಿದಿರೆ ವಲಯದ ಮುಸ್ಲಿಂ ಮುಖಂಡರ ಸಮಾವೇಶ ಸಮಾಜ ಮಂದಿರದಲ್ಲಿ ಜರುಗಿತು.

ಸಂಜೀವ ಶೆಟ್ಟಿ ಮಲ್ಟಿ ಪರ್ಪಸ್ ಹಾಲ್ ಶುಭಾರಂಭ
ಸಂಜೀವ ಶೆಟ್ಟಿ ಮಲ್ಟಿ ಪರ್ಪಸ್ ಹಾಲ್ ಶುಭಾರಂಭ

ಕಡಲಕೆರೆ ನಿಸರ್ಗಧಾಮದ ಬಳಿ `ಶೆಟ್ಟೀಸ್ ಗ್ರೂಪ್’ ವತಿಯಿಂದ ನಿರ್ಮಿಸಲಾಗಿರುವ `ಸಂಜೀವ ಶೆಟ್ಟಿ ಮಲ್ಟಿ ಪರ್ಪಸ್ ಹಾಲ್ ಆ್ಯಂಡ್ ಪಾರ್ಟಿ ಹಾಲ್ (ಹವಾ ನಿಯಂತ್ರಿತ)’ ಅನ್ನು ದಿವಂಗತ ಸಂಜೀವ ಶೆಟ್ಟಿ ಅವರ ಪತ್ನಿ ಇಂದಿರಾ ಸಂಜೀವ ಶೆಟ್ಟಿ ಉದ್ಘಾಟಿಸಿದರು.

ಕೋಟೆಬಾಗಿಲು: ಶಿಕ್ಷಕಿ ಬಿಡುಗುಗೆ ಸನ್ಮಾನ
ಕೋಟೆಬಾಗಿಲು: ಶಿಕ್ಷಕಿ ಬಿಡುಗುಗೆ ಸನ್ಮಾನ

ಕೋಟೆಬಾಗಿಲು (ಜನರಲ್) ಸ.ಹಿ.ಪ್ರಾ.ಶಾಲೆಯಲ್ಲಿ ಸುಮಾರು 26 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕಿ ಬಿಡುಗು ಅವರಿಗೆ ಶಾಲಾಭಿವೃದ್ಧಿ ಸಮಿತಿ ಹಾಗೂ ಹಳೆವಿದ್ಯಾರ್ಥಿ ಸಂಘದ ಸಹಭಾಗಿತ್ವದಲ್ಲಿ ಸನ್ಮಾನಿಸಲಾಯಿತು.

ಬನ್ನಡ್ಕ: ಇನ್ನೋವಾ-ಗೂಡ್ಸ್ ಟೆಂಪೋ ಡಿಕ್ಕಿ : ಓರ್ವ ಮೃತ್ಯು
ಬನ್ನಡ್ಕ: ಇನ್ನೋವಾ-ಗೂಡ್ಸ್ ಟೆಂಪೋ ಡಿಕ್ಕಿ : ಓರ್ವ ಮೃತ್ಯು

ಇನ್ನೋವಾ ಕಾರೊಂದು ಗೂಡ್ಸ್ ಟೆಂಪೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಟೆಂಪೋ ರಿಕ್ಷಾದಲ್ಲಿದ್ದ ಪ್ರಯಾಣಿಕನೋರ್ವ ಮೃತಪಟ್ಟ ಘಟನೆ ಮೂಡುಬಿದಿರೆ ಸಮೀಪದ ಬನ್ನಡ್ಕ ಕ್ರಾಸ್‍ನಲ್ಲಿ ಬುಧವಾರ ಸಂಭವಿಸಿದೆ.

ಶಾಸ್ತವು ಶ್ರೀ ಭೂತನಾಥೇಶ್ವರ ಉತ್ಸವಕ್ಕೆ ಚಾಲನೆ
ಶಾಸ್ತವು ಶ್ರೀ ಭೂತನಾಥೇಶ್ವರ ಉತ್ಸವಕ್ಕೆ ಚಾಲನೆ

ಬಡಗ ಎಡಪದವು ಶಾಸ್ತವು ಶ್ರೀ ಭೂತನಾಥೇಶ್ವರ ದೇವಸ್ಥಾನ ಮತ್ತು ಶಾಸ್ತವು ಶ್ರೀ ದೇವರ ಮೂಲಸ್ಥಾನ ದೇವರಗುಡ್ಡೆಯಲ್ಲಿ ಬ್ರಹ್ಮಕಲಶಾಭಿಷೇಕ ಮಹೋತ್ಸವ ಪ್ರಯುಕ್ತ ಬುಧವಾರ ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸಹಿತ ಧಾರ್ಮಿಕ ಕಾರ್ಯಕ್ರಮ ನಡೆಯಿತು.

ಕೋಟೆಬಾಗಿಲು: ಜಾತಿ ಗಣತಿಗೆ ಅಡ್ಡಿ: ಪ್ರಕರಣ ದಾಖಲು
ಕೋಟೆಬಾಗಿಲು: ಜಾತಿ ಗಣತಿಗೆ ಅಡ್ಡಿ: ಪ್ರಕರಣ ದಾಖಲು

ಕೋಟೆಬಾಗಿಲಿನಲ್ಲಿ ಮಂಗಳವಾರ ಸಂಜೆ ಶಿಕ್ಷಕಿಗೆ ಜಾತಿ ಗಣತಿ ನಡೆಸಲು ಅಡ್ಡಿ ಪಡಿಸಿದ ಪ್ರಕರಣ ಕೋಟೆಬಾಗಿಲು ಎಂಬಲ್ಲಿ ನಡೆದಿದೆ. ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಮೂಡುಬಿದಿರೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ನಿರಂತರ ಅತ್ಯಾಚಾರ: ಆರೋಪಿಗೆ ನ್ಯಾಯಾಂಗ ಬಂಧನ
ನಿರಂತರ ಅತ್ಯಾಚಾರ: ಆರೋಪಿಗೆ ನ್ಯಾಯಾಂಗ ಬಂಧನ

ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ನಿರಂತರ ಅತ್ಯಾಚಾರ ನಡೆಸಿ, ಮದುವೆಗೆ ನಿರಾಕರಿಸಿದ ಆರೋಪಿಯ ವಿರುದ್ಧ ಮೂಡುಬಿದಿರೆ ಪೋಲಿಸರು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ.

ಬೆಳುವಾಯಿ: ರಕ್ತದಾನ ಶಿಬಿರ
ಬೆಳುವಾಯಿ: ರಕ್ತದಾನ ಶಿಬಿರ

ಕೆ.ಎಂ.ಸಿ. ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರವು ಬೆಳುವಾಯಿ ಬ್ಲೋಸಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾನುವಾರ ಜರುಗಿತು.

ಚತುಷ್ಟಕ ಯಮಹಾ ಆಲ್ಫಾ ವಾಹನ ಕೊಡುಗೆ
ಚತುಷ್ಟಕ ಯಮಹಾ ಆಲ್ಫಾ ವಾಹನ ಕೊಡುಗೆ

ಚತುಷ್ಟಕ ಯಮಹಾ ಆಲ್ಫಾ ವಾಹನವನ್ನು ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಮಂಗಳವಾರ ಎಸ್. ಎಸ್.ಬೈಕರ್ಸ್ ಕಚೇರಿ ಆವರಣದಲ್ಲಿ ಹಸ್ತಾಂತರಿಸಿದರು.

ಪುತ್ತಿಗೆ ದೇವರಿಗೆ ಸ್ವರ್ಣ ಕವಚ ಸಮರ್ಪಣೆ
ಪುತ್ತಿಗೆ ದೇವರಿಗೆ ಸ್ವರ್ಣ ಕವಚ ಸಮರ್ಪಣೆ

ಶ್ರೀಕ್ಷೇತ್ರ ಪುತ್ತಿಗೆಯ ಮಹತೋಬಾರ ಸೋಮನಾಥೇಶ್ವರ ದೇವಸ್ಥಾನದ 15 ದಿನಗಳ ವರ್ಷಾವಧಿ ಜಾತ್ರಾ ಮಹೋತ್ಸವದ ಆರಂಭಿಕ ದಿನವಾದ ಮಂಗಳವಾರ ಪುತ್ತಿಗೆ ಬೆಟ್ಟಮನೆಯ ಗುರುನಾರಾಯಣ ಉಡುಪ ತಮ್ಮ ಕುಟುಂಬಸ್ಥರ ವತಿಯಿಂದ ದೇವಳದ ಉತ್ಸವದ ಶ್ರೀ ಸೋಮನಾಥೇಶ್ವರ ಹಾಗೂ ಮಹಿಷಮರ್ಧಿನಿ ದೇವರ ಬಲಿ ಮೂರ್ತಿಗಳಿಗೆ ಚಿನ್ನದ ಕವಚ ಸಮರ್ಪಣೆಯನ್ನು ನಡೆಸಿದರು.

ಮಳಲಿ: ವೀರಾಂಜನೇಯ ಶಾಖೆ ಭಜರಂಗಿ ಉತ್ಸವ
ಮಳಲಿ: ವೀರಾಂಜನೇಯ ಶಾಖೆ ಭಜರಂಗಿ ಉತ್ಸವ

ವಿಶ್ವ ಹಿಂದೂ ಪರಿಷತ್ ಭಜರಂಗದಳ ವೀರಾಂಜನೇಯ ಶಾಖೆ ಮಳಲಿ-ಕಾಜಿಲ ಇದರ ಆಶ್ರಯದಲ್ಲಿ ಎ.19 ರಂದು ಭಾನುವಾರ ಸಂಜೆ ಗಂಟೆ 6.30ರಿಂದ ಉಳಿಪಾಡಿ ಗುತ್ತಿನ ಗದ್ದೆಯಲ್ಲಿ ಭಜರಂಗಿ ಉತ್ಸವ ಕಾರ್ಯಕ್ರಮ ನಡೆಯಲಿದೆ.

ಶ್ರೀಕ್ಷೇತ್ರ ಅಶ್ವತ್ಥಪುರದಲ್ಲಿ ಗುರುವಂದನೆ
ಶ್ರೀಕ್ಷೇತ್ರ ಅಶ್ವತ್ಥಪುರದಲ್ಲಿ ಗುರುವಂದನೆ

ಅಧರ್ಮ ಸೋಕದ ರೀತಿಯಲ್ಲಿ ಧರ್ಮದ ಮಾರ್ಗದಲ್ಲಿ ಜೀವನ ಸಾಗಿಸಬಹುದೆಂಬುವುದನ್ನು ಜಗಕ್ಕೆ ತೋರಿಸಿಕೊಟ್ಟವ ಶ್ರೀರಾಮಚಂದ್ರ. ಅಧರ್ಮದಲ್ಲಿ ನಡೆದರೆ ಅಧಃಪತನ ಖಂಡಿತ ಎನ್ನುವುದಕ್ಕೆ ರಾವಣನೇ ಸಾಕ್ಷಿ ಎಂದು ಶೃಂಗೇರಿ ಶ್ರೀಶಾರದಪೀಠಾಧೀಶ್ವರ ಜಗದ್ಗುರುಶ್ರೀ ಭಾರತೀತೀರ್ಥ ಸ್ವಾಮೀಜಿ ನುಡಿದರು.

ಅಶ್ವತ್ಥಪುರ: ಬ್ರಹ್ಮಕಲಶ ಕುಂಭಾಭಿಷೇಕ
ಅಶ್ವತ್ಥಪುರ: ಬ್ರಹ್ಮಕಲಶ ಕುಂಭಾಭಿಷೇಕ

ಶತಮಾನೋತ್ಸವ ಅಂಗವಾಗಿ ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿ ಸೋಮವಾರ ಬ್ರಹ್ಮಕಲಶ ಕುಂಭಾಭಿಷೇಕ ನೆರವೇರಿಸಿದರು.

ಕಾಂತಾವರದಲ್ಲಿ ನಿಸಾರ್ ಅಹಮದ್ ಕಾವ್ಯದ ಹೊಸ ಓದು
ಕಾಂತಾವರದಲ್ಲಿ ನಿಸಾರ್ ಅಹಮದ್ ಕಾವ್ಯದ ಹೊಸ ಓದು

ಡಾ.ಕೆ.ಎಸ್ ನಿಸಾರ್ ಅಹಮದ್ ಅವರ ಮಾತೃಭಾಷೆ ಉರ್ದುವಾದರೂ ಕನ್ನಡದ ಭಾಷಾ ಬಳಕೆಯಿದ್ದರೂ ಸಂಸ್ಕೃತದ ತಿಳುವಳಿಕೆ ಇದ್ದ ಕಾರಣ ಈ ಎಲ್ಲಾ ಭಾಷಾ ಸಂಸ್ಕೃತಿಗಳನ್ನು ಬಳಕೆ ಮಾಡಿಕೊಂಡು ಒಂದೇ ಸೂತ್ರದಲ್ಲಿ ಪೋಣಿಸಲು ಅವರಿಗೆ ಸಾಧ್ಯವಾಯಿತು. ಡಾ.ನಾ.ದಾಮೋದರ ಶೆಟ್ಟಿ ತಿಳಿಸಿದರು.

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಮಹಾರಥೋತ್ಸವ
ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಮಹಾರಥೋತ್ಸವ

ಇತಿಹಾಸ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಜಾತ್ರಾ ಮಹೋತ್ಸವ ಏ.11ರಂದು ಸಂಜೆ ಘಂಟೆ 7ಕ್ಕೆ ಮಹಾರಥೋತ್ಸವ ನಡೆಯಿತು.

ಆಳ್ವಾಸ್ ಚಕ್ರವ್ಯೂಹಕ್ಕೆ ಮೆರುಗು ನೀಡಿದ ಮೋಟೋರಿಗ್
ಆಳ್ವಾಸ್ ಚಕ್ರವ್ಯೂಹಕ್ಕೆ ಮೆರುಗು ನೀಡಿದ ಮೋಟೋರಿಗ್

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಆಶ್ರಯದಲ್ಲಿ ನಡೆಯುತ್ತಿರುವ `ಆಳ್ವಾಸ್ ಚಕ್ರವ್ಯೂಹ 2015’ರ ಎರಡನೇ ದಿನವಾದ ಭಾನುವಾರ ಹಳೆ ನೆನಪು, ಹೊಸ ದುಬಾರಿ ಹೊಳಪಿನ ಬೈಕ್, ಕಾರುಗಳ ಪ್ರದರ್ಶನ ಹಾಗೂ ಮೈನವಿರೇಳಿಸುವ ಸಾಹಸ ಪ್ರದರ್ಶನಗಳು ನಡೆಯಿತು.

Suvarna News 24X7 Live online
333 Album