ಕೊಣಾಜೆಕಲ್ಲು ಸಿದ್ಧಾಶ್ರಮ ಟ್ರಸ್ಟ್ ನ ಹೆಸರಿನಲ್ಲಿ ಅವ್ಯವಹಾರ: ಆರೋಪ



ಮೂಡುಬಿದಿರೆ: ಕಾರ್ಮಿಕ ಸಂಘಟನೆಯ ನಾಯಕನೆಂದು ಹೇಳಿಕೊಂಡು ಬರುತ್ತಿರುವ ಸುದತ್ತ ಜೈನ್ ಅವರು ಕೊಣಾಜೆಕಲ್ಲು ಸಿದ್ಧಾಶ್ರಮದ ಹೆಸರಿನಲ್ಲಿ ಹಲವಾರು ಅವ್ಯವಹಾರಗಳನ್ನು ನಡೆಸುತ್ತಿದ್ದಾರೆ ಎಂದು  ಕೊನಾಜೆಕಲ್ಲು ಸಿದ್ಧಾಶ್ರಮ ಟ್ರಸ್ಟ್ ನ ಮೊಕ್ತೇಸರ ಸುಕೇಶ್ ಶೆಟ್ಟಿ ಆರೋಪಿಸಿದ್ದಾರೆ.

 

 

ಈ ಬಗ್ಗೆ ಮೂಡುಬಿದರೆ ಠಾಣೆಗೆ ದೂರು ನೀಡಿದ್ದೇವೆ ಎಂದು ಅವರು  ಮೂಡುಬಿದರೆ ಪ್ರೆಸ್ಕ್ಲಬ್ನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

 

ಕೊಣಾಜೆ ಕಲ್ಲಿನ ಆಡಳಿತಕ್ಕೆ ಸಂಬಂಧಪಟ್ಟಂತೆ  ಶ್ರೀಕ್ಷೇತ್ರ ಕೊಣಾಜೆಕಲ್ಲಿನಲ್ಲಿ ಕೊಣಾಜೆಕಲ್ಲು ಸಿದ್ದಾಶ್ರಮ, ಶಾರದದಾಸ ಸ್ವಾಮೀ ಸಿದ್ದಾಶ್ರಮ ಟ್ರಸ್ಟ್ ಎನ್ನುವ ಎರಡು ಟ್ರಸ್ಟ್ ಗಳಿದ್ದು ಅವುಗಳನ್ನು ವಿಸರ್ಜಿಸಿ ಮೂರು ಸಮಿತಿಯನ್ನು ರಚಿಸಲಾಗಿತ್ತು. ಸುದತ್ತ ಜೈನ್ ಎಂಬವರು ಟ್ರಸ್ಟಿನ ಕೊಣಾಜೆಕಲ್ಲು ಸಿದ್ದಾಶ್ರಮ ಹೆಸರನ್ನು ಬಳಸಿ ರಶೀದಿ ಪ್ರಕಟಿಸುತ್ತಿದ್ದಾರೆ .ಅಷ್ಟೇ ಅಲ್ಲದೆ ನೋಂದಾವಣೆ ಸಂಖ್ಯೆಯನ್ನು ಬಳಸಿಕೊಂಡು ಅಕ್ರಮವಾಗಿ ಹಲವಾರು ಚಟುವಟಿಕೆಗಳನ್ನು ನಡೆಸುತ್ತಿರುವ ಬಗ್ಗೆ ತಿಳಿದುಬಂದಿದೆ. ಹಲವರಿಗೆ ವಂಚನೆಯನ್ನೂ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

 

ಕೊಣಾಜೆಕಲ್ಲು ಸಿದ್ದಾಶ್ರಮದ ಸ್ಥಾಪಕ ಮೊಕ್ತೇಸರ ಕೆ.ಹರಿಯಪ್ಪ, ಶಾರದದಾಸ ಸ್ವಾಮೀ ಸಿದ್ದಾಶ್ರಮ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷ ಸುಂದರ ಹೆಗ್ಡೆ, ಸದಸ್ಯ ವಾಸು ಕೋಟ್ಯಾನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.





Write your Comments on this Article
Your Name
Place
Your E-mail
Your Comment   You have characters left.
Security Validation
Enter the security validation code as displayed above:
    
Disclaimer: Kindly do not post any abusive, defamatory, infringing, obscene, indecent, discriminatory or unlawful material or SPAM. Editor reserves the right to block/ remove without notice any content received from users.
Suvarna News 24X7 Live online
333 Album