ದವಳಾ ಕಾಲೇಜಿನಲ್ಲಿ ಮಾನವ ಹಕ್ಕು ಕಾರ್ಯಾಗಾರ



 

ಮೂಡುಬಿದಿರೆ:  ಇಲ್ಲಿನ ಶ್ರೀ ಧವಳಾ ಕಾಲೇಜಿನಲ್ಲಿ  ಶುಕ್ರವಾರ  ಕಾಲೇಜಿನ ಮಾನವ ಹಕ್ಕುಗಳ ಸಂಘ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಜಂಟಿ ಆಶ್ರಯದಲ್ಲಿ  ಒಂದು ದಿನದ ಅಂತರ್ ಕಾಲೇಜು ಕಾರ್ಯಗಾರ 1ಮಾನವ ಹಕ್ಕುಗಳು’ ಎಂಬ ಶಿರ್ಷೀಕೆಯಡಿ ನಡೆಯಿತು.

 

 

ಮೂಡುಬಿದಿರೆಯ ವಕೀಲರ ಸಂಘದ ಅಧ್ಯಕ್ಷ  ಎಂ.ಎಸ್. ಕೊಟ್ಯಾನ್  ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಾ , ವಿದ್ಯಾಥರ್ಿಗಳು ಮಾನವ ಹಕ್ಕುಗಳ ಬಗ್ಗೆ ತಿಳಿದುಕೊಳ್ಳುವುದು ಪ್ರಸ್ತುತವಾಗಿ ತುಂಬಾ ಅನಿವಾರ್ಯವಾಗಿದೆ . ಇಂತಹ ವಿಷಯಗಳನ್ನು ತಿಳಿದುಕೊಂಡು ಇತರರಿಗೂ  ಕಾನೂನು ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕು ಎಂದು ಸಲಹೆ ನೀಡಿದರು

 

ಕಾಲೇಜಿನ ಪ್ರಾಂಶುಪಾಲ ಪ್ರೊ. ರವೀಶ್ ಕುಮಾರ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರಸ್ತುತ ಸಮಾಜಕ್ಕೆ ಅನುಗುಣವಾಗಿ ಇಂತಹ ವಿಷಯಗಳು ಬಹಳ ಪ್ರಮುಖ. ಅಲ್ಲದೆ ಸರಕಾರ ಸಾಮ್ಯದ ಸಂಘಗಳಾದ ಮಾನವ ಹಕ್ಕುಗಳ ಆಯೋಗವು ಕೂಡ ವಿದ್ಯಾಥರ್ಿಗಳಲ್ಲಿ ಮಾನವ ಹಕ್ಕುಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.

 

ಕಾರ್ಯಕ್ರಮದ ಸಂಯೋಜಕರಾದ ಪ್ರೋ. ವಾಸುದೇವ ಭಟ್ಟ್ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತಾಡಿದರು. ಕಾಲೇಜಿನ ಪ್ರಾದ್ಯಾಪಕ ಸಂತೋಷ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಜಯಕುಮಾರಿ ಕಾರ್ಯಕ್ರಮ ನಿರೂಪಿಸಿದರು. ದೀರಜ್ ಕುಮಾರ್ ವಂದಿಸಿದರು.

 

ಶಿಕ್ಷಣ ಹಕ್ಕು, ಮಾನವಹಕ್ಕುಗಳ ಸಾರ್ವತ್ರಿಕ ಘೋಷಣೆ, ಮಾಹಿತಿ ಪಡೆಯುವ ಹಕ್ಕು ಹಾಗೂ ಗ್ರಾಹಕರ ಹಕ್ಕುಗಳ ಬಗ್ಗೆ ಕಾರ್ಯಾಗಾರವು ನಡೆಯಿತು. ಮಂಗಳೂರು ಶಿಕ್ಷಣ ತಜ್ಞ ರೆನ್ನಿ ಡಿಸೋಜ ಮಂಡಿಸಿದರು. ನ್ಯಾಯವಾದಿ ಅನಿತಾ ಕಿಣಿ ವಕೀಲರು, ಉಡುಪಿ  ಗ್ರಾಹಕರ ವೇದಿಕೆ ಅಧ್ಯಕ್ಷ ಎ.ಪಿ. ಕೊಡಂಚ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕಾನೂನಿನ ಬಗ್ಗೆ ಮಾಹಿತಿ ನೀಡಿದರು. ಸಿದ್ದಕಟ್ಟೆ ಪ್ರಥಮದರ್ಜೆ ಕಾಲೇಜು, ಮಹಾವೀರ ಕಾಲೇಜು, ಮೂಡುಬಿದಿರೆ ಆಳ್ವಾಸ್ ಕಾಲೇಜು, ಕಾರ್ಕಳ ಭುವನೇಂದ್ರ ಕಾಲೇಜ್ಗಳಿಂದ 80 ವಿದ್ಯಾರ್ತಿಗಳು ಭಾಗವಹಿಸಿದರು.





Write your Comments on this Article
Your Name
Place
Your E-mail
Your Comment   You have characters left.
Security Validation
Enter the security validation code as displayed above:
    
Disclaimer: Kindly do not post any abusive, defamatory, infringing, obscene, indecent, discriminatory or unlawful material or SPAM. Editor reserves the right to block/ remove without notice any content received from users.
Suvarna News 24X7 Live online
333 Album