ಮಾಹಿತಿ ಹಕ್ಕು-2005 ವಿಶೇಷ ಉಪನ್ಯಾಸ



 

 

ಮೂಡುಬಿದಿರೆ: ಮಾನವ ಹಕ್ಕುಗಳ ಸಂಘ ಶ್ರೀ ಧವಲಾ ಕಾಲೇಜು ಮೂಡಬಿದಿರೆ ಇದರ ಆಶ್ರಯದಲ್ಲಿ ಗುರುವಾರ ಕಾಲೇಜಿನ ಕಾನ್ಪರೆನ್ಸ್ ಹಾಲ್ ನಲ್ಲಿ ಮಾಹಿತಿ ಹಕ್ಕು-2005 ಇದರ ಬಗ್ಗೆ ವಿಶೇಷ  ಉಪನ್ಯಾಸ ಕಾರ್ಯಕ್ರಮ ಜರಗಿತು.

 

 

ಉಡುಪಿ ಗ್ರಾಹಕರ ವೇದಿಕೆ ಶಾಂತರಾಜ್ ಐತಾಳ್ ಸಂಪನ್ಮೂಲ ವ್ಯಕ್ತಿಯಾಗಿ  ಭಾಗವಹಿಸಿ ಮಾತನಾಡುತ್ತಾ,  ಭಾರತ ದೇಶ ಇಂದು ಭ್ರಷ್ಟಾಚಾರದಲ್ಲಿ ಮುಳುಗಿದೆ. ಇದರ ವಿರುದ್ದ ಯುವಜನರು ಸುಲಭವಾಗಿ ಹೋರಾಡಲು ಅಸ್ತ್ರವಾಗಿ ಮೂಡಿಬಂದ ಕಾಯಿದೆ ಮಾಹಿತಿಹಕ್ಕು-2005 . ಇದರ ಉಪಯೋಗ, ಸಾಧಕ-ಭಾದಕಗಳು, ಇದರಿಂದಾಗುವ ದುಷ್ಪರಿಣಾಮಗಳು ಬಗ್ಗೆ ಅರಿವು ಅಗತ್ಯ.  ವಿದ್ಯಾರ್ಥಿಗಳು ಇಂತಹ ಜ್ಞಾನಗಳನ್ನು ಬೆಳೆಸಿಕೊಂಡು ಬೆಳೆದಾಗ ನಿಜವಾದ ಪ್ರಜಾಪ್ರಭುತ್ವ ಭಾರತದಲ್ಲಿ ಕಾಣಲು ಸಾಧ್ಯ ಎಂದರು.

 

ಕಾಲೇಜಿನ ಪ್ರಾಂಶುಪಾಲ ಪ್ರೋ. ರವೀಶ್ ಕುಮಾರ್   ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ,  ಯುವ ಮನಸ್ಸುಗಳು ಇಂತಹ ಜ್ಞಾನವನ್ನು ಬೆಳೆಸಿಕೊಂಡು ವಿದ್ಯಾಭ್ಯಾಸಗಳನ್ನು ಮುಂದುವರಿಸಿದಾಗ ದೇಶದ ನೈಜ ಪ್ರಜೆಯಾಗಿ ಹೊರಹೊಮ್ಮಲು ಸಾಧ್ಯ. ಹಾಗೆಯೆ ಪಠ್ಯದ ಜೊತೆಗೆ ಇತರ ವಿಷಯ ಗಳ ಬಗ್ಗೆ ಅರಿವು ವೃದ್ಧಿಸಿಕೊಳ್ಳುವುದು ಅಗತ್ಯ.

 

ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ. ವಾಸುದೇವ ಭಟ್, ಪ್ರೊ. ಸುದರ್ಶನ ಕುಮಾರ್, ಪ್ರೊ. ಗೋಪಾಲ್, ಸಂಘಟನೆಯ ಉಪಾಧ್ಯಕ್ಷ ಅಭಿಷೇಕ್ ಉಪಸ್ಥಿತರಿದ್ದರು. ಪ್ರಾಧ್ಯಾಪಕ ಸಂತೋಷ್ ಶೆಟ್ಟಿ ಸ್ವಾಗತಿಸಿದರು.  ಅಧ್ಯಕ್ಷೆ ಚರಿತ ವಂದಿಸಿದರು. ಸುಚೇತ ನಿರೂಪಿಸಿದರು.





Write your Comments on this Article
Your Name
Place
Your E-mail
Your Comment   You have characters left.
Security Validation
Enter the security validation code as displayed above:
    
Disclaimer: Kindly do not post any abusive, defamatory, infringing, obscene, indecent, discriminatory or unlawful material or SPAM. Editor reserves the right to block/ remove without notice any content received from users.
Suvarna News 24X7 Live online
333 Album