ಮೂಡುಬಿದಿರೆಯಲ್ಲಿ ವಿಶ್ವ ಮಾನವ ಹಕ್ಕು ದಿನಾಚರಣೆ



 

ಮೂಡುಬಿದಿರೆ : ಮಾನವ ಹಕ್ಕು ಮತ್ತು ಭ್ರಷ್ಠಾಚಾರ ನಿರ್ಮೂಲನಾ ಸಂಸ್ಥೆ ಮೂಲ್ಕಿ-ಮೂಡುಬಿದಿರೆ ವಲಯ ಇದರ ವತಿಯಿಂದ ವಿಶ್ವ ಮಾನವ ಹಕ್ಕು ದಿನಾಚರಣೆಯನ್ನು ಮಂಗಳವಾರ ಸಮಾಜ ಮಂದಿರ ಸಭಾ ಭವನದಲ್ಲಿ ಆಚರಿಸಲಾಯಿತು.

 

 

ವಕೀಲರ ಸಂಘದ ಸ್ಥಾಪಕಾಧ್ಯಕ್ಷ ಬಾಹುಬಲಿ ಪ್ರಸಾದ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಎಲ್ಲರಿಗೂ ಸ್ವತಂತ್ರವಾಗಿ ಬದುಕುವ ಹಕ್ಕಿದೆ. ಸರ್ಕಾರದ ಸಹಿತ ಯಾವುದಕ್ಕೂ ಅದನ್ನು ಕಸಿಯುವ ಅಧಿಕಾರವಿಲ್ಲ. ತುರ್ತು ಪರಿಸ್ಥಿತಿ ಬಳಿಕ ಮಾನವ ಹಕ್ಕುಗಳ ಬಗ್ಗೆ ವಿಶೇಷ ಮುತುವರ್ಜಿ ವಹಿಸಲಾಯಿತು. ಮಾನವ ಹಕ್ಕು ರಕ್ಷಣ ಕಾಯಿದೆ ಮೂಲಕ ಹಕ್ಕುಗಳ ರಕ್ಷಣೆಗೆ ಕೆಲವೊಂದು ನಿಯಮಗಳನ್ನು ರೂಪಿಸಿ ಜಾರಿಗೆ ತರಲು ಸರ್ಕಾರಕ್ಕೆ ಸೂಚನೆ ನೀಡಿತು. ತದನಂತರ ಪ್ರತಿ ರಾಜ್ಯದಲ್ಲಿ ಮಾನವ ಹಕ್ಕು ಆಯೋಗ ರಚನೆಗೊಂಡು, ಮಾನವ ಹಕ್ಕುಗಳ ಉಲ್ಲಂಘನೆಯಾದ ಸೂಕ್ತ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದರು. 

 

ಮೂಡುಬಿದಿರೆ ಪುರಸಭಾ ಮಾಜಿ ಅಧ್ಯಕ್ಷ ರತ್ನಾಕರ ದೇವಾಡಿಗ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ ಸರ್ಕಾರಿ ಕಚೇರಿಗಳು ಜನರಿಗಾಗಿ ಇರುವಂತಹದ್ದು. ಸರ್ಕಾರಿ ಅಧಿಕಾರಿಗಳೂ ಕೂಡಾ ನಮ್ಮ ಸಮಸ್ಯೆಗಳಿಗೆ ಸ್ಪಂದಿಸಬೇಕಾದವರು. ಅಲ್ಲಿಗೆ ಹೋಗುವಾಗ ಯಾರೂ ಹೆದರಬೇಕಾಗಿಲ್ಲ ಹೋಗಿ ತಮ್ಮ ಸವಲತ್ತುಗಳನ್ನು ಕೇಳಿ ಪಡೆಯುವುದು ನಮ್ಮ ಹಕ್ಕು ಎಂದು ಹೇಳಿದರು.

 

ಮಾನವ ಹಕ್ಕು ಮತ್ತು ಭ್ರಷ್ಠಾಚಾರ ನಿರ್ಮೂಲನ ಸಂಸ್ಥೆಯ ವಲಯದ ಅಧ್ಯಕ್ಷ ಯುವರಾಜ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಪುರಸಭಾ ಮುಖ್ಯಾಧಿಕಾರಿ ರಾಯಪ್ಪ, ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ.ಶಶಿಕಲಾ ಎಸ್. ಸಂಸ್ಥೆಯ ಪ್ರ. ಕಾರ್ಯದರ್ಶಿ ಸುಭಾಷ್ ಚಂದ್ರ ಕಿನ್ನಿಗೋಳಿ ಉಪಸ್ಥಿತರಿದ್ದರು. ಸಂಸ್ಥೆಯ ಮುಖ್ಯ ಸಲಹೆಗಾರ ಹಸ್ದುಲ್ಲಾ ಇಸ್ಮಾಯಿಲ್ ಸ್ವಾಗತಿಸಿದರು. ಅಭಿನಂದನ್ ಬಲ್ಲಾಳ್ ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ್ ಜೈನ್ ವಂದಿಸಿದರು.





Write your Comments on this Article
Your Name
Place
Your E-mail
Your Comment   You have characters left.
Security Validation
Enter the security validation code as displayed above:
    
Disclaimer: Kindly do not post any abusive, defamatory, infringing, obscene, indecent, discriminatory or unlawful material or SPAM. Editor reserves the right to block/ remove without notice any content received from users.
Suvarna News 24X7 Live online
333 Album