ವಿ.ಹಿಂ.ಪ-ಬಜರಂಗದಳದಿಂದ ಪ್ರತಿಭಟನೆ



 

ಮೂಡುಬಿದಿರೆ : ನಮ್ಮ ದೇಶದ ಗಡಿಯ ಮೂಲಕ ಬಾಂಗ್ಲಾ ದೇಶದ ನುಸುಳುಕೋರರು ಅಕ್ರಮವಾಗಿ ಪ್ರವೇಶಿಸಿ ದೇಶದ ಭದ್ರತೆಯ ಮೇಲೆ ಅಪಾಯವನ್ನು ಒಡ್ಡುತ್ತಿದ್ದಾರೆ ಅಲ್ಲದೆ ನಮ್ಮ ದೇಶಕ್ಕೆ ಕಟ್ಟಡ ಕಾರ್ಮಿಕರಾಗಿ ದುಡಿಯಲು ಬರುತ್ತಿರುವ ಕಾರ್ಮಿಕರು ಇಲ್ಲಿಯ ನಾಗರಿಕ ಹಕ್ಕನ್ನು ಪಡೆದಿದ್ದು ಅವರನ್ನು ಸೂಕ್ತವಾದ ತನಿಖೆಗೆ ಒಳಪಡಿಸಿ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ಮೂಡುಬಿದಿರೆಯ ವಿ.ಹಿಂ.ಪ ಮತ್ತು ಬಜರಂಗದಳ ಕಾರ್ಯಕರ್ತರು ಭಾನುವಾರ ಸಂಜೆ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.

 

 

ವಿ.ಹಿಂ.ಪ ಕಾರ್ಯಾಧ್ಯಕ್ಷ ಶ್ಯಾಮ ಹೆಗ್ಡೆ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ಸರ್ಕಾರ ಕುರ್ಚಿಯ ಆಸೆಯಿಂದಾಗಿ ಬಾಂಗ್ಲಾದ ದೇಶದ ನುಸುಳುಕೋರರಿಗೆ ಇಲ್ಲಿಗೆ ಬರಲು ಅವಕಾಶವನ್ನು ನೀಡುತ್ತಿದೆ. ಭಾರತದ ಸಂಸ್ಕೃತಿ ನಾಶ ಮಾಡುವ ಉದ್ದೇಶದಿಂದ ಸೂಕ್ತ ಕ್ರಮ ಕೈಗೊಳ್ಳದೆ ನಮ್ಮ ದೇಶಕ್ಕೆ ದ್ರೋಹ ಮಾಡುತ್ತಿದೆ. ಇದಲ್ಲದೆ ನಮ್ಮ ಜಿಲ್ಲೆಯ ಜೀವನದಿಯಾಗಿರುವ ನೇತ್ರಾವತಿಯನ್ನು ತಿರುಗಿಸಿ ಎತ್ತಿನಹೊಳೆ ಯೋಜನೆಗೆ ಶಂಕು ಸ್ಥಾಪನೆ ಮಾಡಲು ಹೊರಟಿದೆ ಇದಲ್ಲದೆ ನಿಡ್ಡೋಡಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರದ ಯೋಜನೆಯನ್ನು ತರುವ ಯೋಚನೆಯನ್ನು ಮಾಡುತ್ತಿದೆ ಆದರೆ ಇಲ್ಲಿನ ರಾಜಕರಣಿಗಳು ಯಾರೂ ಪ್ರತಿಭಟಿಸುತ್ತಿಲ್ಲ ಎಂದು ಆರೋಪಿಸಿದ ಅವರು ಜಿಲ್ಲೆಯಾದ್ಯಾಂತ ನಾಳೆ (ಮಾ.3) ನಡೆಯುವ ಬಂದ್ ಗೆ ತಮ್ಮ ಸಂಘಟನೆಗಳಿಂದ ಪೂರ್ಣ ಬೆಂಬಲವಿದೆ ಎಂದು ಹೇಳಿದರು.

 

ನುಸುಳುಕೋರರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸೋಮವಾರದಂದು ಮೂಡುಬಿದಿರೆ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಿದ್ದೇವೆ ಎಂದು ಸಂಘಟಕರು ತಿಳಿಸಿದ್ದಾರೆ.

 

ಬಜರಂಗದಳದ ಸಂಯೋಜಕ ಸೊಮನಾಥ ಕೋಟ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೂಡುಬಿದಿರೆ ಬಿಜೆಪಿ ಕ್ಷೇತ್ರಾಧ್ಯಕ್ಷ  ಕೆ.ಪಿ.ಸುಚರಿತ ಶೆಟ್ಟಿ, ಬಜರಂಗದಳ ನಗರ ಸಂಚಾಲಕ ಪ್ರಸಾದ್ ಆಳ್ವ, ಸಹಸಂಚಾಲಕರಾದ ಉದಯ ಮತ್ತು ಸಂತೋಷ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ವಿ.ಹಿಂ.ಪ ಕಾರ್ಯದರ್ಶಿ ಶಾಂತಾರಾಮ ಕುಡ್ವ ಕಾರ್ಯಕ್ರಮ ನಿರೂಪಿಸಿದರು.





Write your Comments on this Article
Your Name
Place
Your E-mail
Your Comment   You have characters left.
Security Validation
Enter the security validation code as displayed above:
    
Disclaimer: Kindly do not post any abusive, defamatory, infringing, obscene, indecent, discriminatory or unlawful material or SPAM. Editor reserves the right to block/ remove without notice any content received from users.
Suvarna News 24X7 Live online
333 Album