ಮೂಡುಬಿದಿರೆ: ಆರ್ ಎಸ್ ಎಸ್ ಪ್ರಾಥಮಿಕ ಶಿಕ್ಷಾ ವರ್ಗ ಸಂಪನ್ನ



 

ಮೂಡುಬಿದಿರೆ: ಭಾರತೀಯರಲ್ಲಿ ಸಂಘಟನೆಯ ಕೊರತೆ ಮತ್ತು ರಾಷ್ಟ್ರೀಯ ಪ್ರಜ್ಞೆಯ ಕೊರತೆಯಿಂದಾಗಿ ವಿದೇಶಿಯರು ನಮ್ಮ  ಜನ ಸಮೂಹವನ್ನು ಸಾವಿರಾರು ವರ್ಷಗಳ ಕಾಲ ತನ್ನ ಕಪಿ ಮುಷ್ಠಿಯಲ್ಲಿರಿಸಿಕೊಂಡು ಇಲ್ಲಿನ ಸಂಪತ್ತನ್ನು ಲೂಟಿಗೈದಿದ್ದಾರೆ. ಭಾರತೀಯರಲ್ಲಿ ದೇಶಪ್ರೇಮ ಸಂಘಟನಾ ಪ್ರಜ್ಞೆಯನ್ನು ಬೆಳೆಸಲು ಆರ್ ಎಸ್ ಎಸ್ ಸ್ಥಾಪನೆಗೊಂಡಿದೆ.  ಯುವಜನತೆಯಲ್ಲಿ ಸಾಮಾಜಿಕ ಬದ್ಧತೆ ರಾಷ್ಟ್ರೀಯ ಶಿಕ್ಷಣವನ್ನು ನೀಡುವುದರೊಂದಿಗೆ ವ್ಯಕ್ತಿಗತವಾಗಿ ಸಮಾಜಕ್ಕೆ ಕೊಡುಗೆಯನ್ನು ನೀಡುವುದನ್ನು ಕಲಿಸುತ್ತಿದೆ ಎಂದು ಆರ್ ಎಸ್ ಎಸ್ ಮಂಗಳೂರು ವಿಭಾಗ ಪ್ರಮುಖ ರವೀಂದ್ರ ಪುತ್ತೂರು ಹೇಳಿದರು. 

 

 

 

ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ಗ್ರಾಮಾಂತರ ಜಿಲ್ಲೆಯ ವತಿಯಿಂದ ಇಲ್ಲಿನ ಜೈನ ಪದವಿ ಪೂರ್ವ ಕಾಲೇಜಿನಲ್ಲಿ 8 ದಿನಗಳ ಕಾಲ ನಡೆದ ಪ್ರಾಥಮಿಕ ಶಿಕ್ಷಾವರ್ಗದಲ್ಲಿ ಬುಧವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. 

 

 

ಭಾರತೀಯ ಶ್ರೇಷ್ಠ ಮೌಲ್ಯಗಳನ್ನು ಆರ್ಎಸ್ಎಸ್ ಪ್ರತಿಪಾದಿಸುತ್ತಿದೆ. ಶಾರೀರಿಕ ಸ್ವಾಸ್ಥ್ಯವನ್ನು ಕಾಪಾಡುವ ಬೌದ್ಧಿಕ ಶಕ್ತಿಯನ್ನು ಚುರುಕುಗೊಳಿಸುವ, ಸಮೂಹ ಜೀವನದ ಕೌಶಲ್ಯವನ್ನೂ ಇಲ್ಲಿ ಕಲಿಸಲಾಗುತ್ತಿದೆ. ಆದರೆ ಮತೀಯವಾದ, ಮತ್ತಿತರ ಕಾರಣಗಳಿಂದ ಆರ್ಎಸ್ಎಸ್ ಹೆಸರಿಗೆ ಮಸಿ ಬಳಿಯುವ ಕೆಲಸವಾಗುತ್ತಿದೆ. ಸೈದ್ಧಾಂತಿಕ, ರಾಜಕೀಯ ಕಾರಣಗಳಿಂದ ಆರ್ ಎಸ್ ಎಸ್ ಗೆ ನಿರ್ಬಂಧ ಹೇರಲಾಗುತ್ತಿದೆ. ಈ ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ಆರ್ಎಸ್ಎಸ್ ಕಾರ್ಯಕರ್ತರು ದೇಶ ಸೇವೆಗಾಗಿ ಸಮರ್ಪಣಾ ಮನೋಭಾವದಿಂದ ದುಡಿಯುತ್ತಿದ್ದಾರೆ ಎಂದವರು ಹೇಳಿದರು. 

 

 

 

ಡಿಜೆ.ವಿವಿ ಸಂಘದ ಸಂಚಾಲಕ ಪ್ರತಾಪ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶಿಬಿರಾಧಿಕಾರಿ ಅಶೋಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀನಿವಾಸ ಮುಲ್ಕಿ ಸ್ವಾಗತಿಸಿದರು. ಪುಪ್ಷರಾಜ್ ಉಳ್ಳಾಲ ಕಾರ್ಯಕ್ರಮ ನಿರ್ವಹಿಸಿದರು. ಶಾರೀರಿಕ ನಿರ್ದೆಶಕ ನಾಗೇಶ್ ಇವರ ನಿರ್ದೆಶನದಲ್ಲಿ ಶಿಬಿರಾರ್ಥಿಗಳಿಂದ ವಿವಿಧ ಶಾರೀರಿಕ ಸಾಹಸ ಪ್ರದರ್ಶನ ಮತ್ತು ಕವಾಯತ್ತು ನಡೆಯಿತು. ಇದಕ್ಕೂ ಮುನ್ನ ನಗರದ ಪ್ರಮುಖ ಬೀದಿಯಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು.





Write your Comments on this Article
Your Name
Place
Your E-mail
Your Comment   You have characters left.
Security Validation
Enter the security validation code as displayed above:
    
Disclaimer: Kindly do not post any abusive, defamatory, infringing, obscene, indecent, discriminatory or unlawful material or SPAM. Editor reserves the right to block/ remove without notice any content received from users.
Suvarna News 24X7 Live online
333 Album