ಎಕ್ಸಲೆಂಟ್ ಕಾಲೇಜಿನಲ್ಲಿ ರೋಟೆಕ್ಸ್ ರಾಜ್ಯಮಟ್ಟದ ಚರ್ಚಾಸ್ಪರ್ಧೆ 

ಮೂಡುಬಿದಿರೆ: ತಾಂತ್ರಿಕ ಹಾಗೂ ವೃತ್ತಿಪರ ವಿದ್ಯಾಬ್ಯಾಸಗಳು ನಗರಕ್ಕೆ ಸೀಮಿತ ಎಂಬ ಭಾವನೆ ಇಂದು ದೂರವಾಗುತ್ತಿದೆ. ಎಕ್ಸಲೆಂಟ್‍ನಂತಹ ದೂರದೃಷ್ಠಿಯ ಸಂಸ್ಥೆಗಳಿಂದ ವಿಜ್ಞಾನಿಗಳನ್ನು ಸಮಾಜಕ್ಕೆ ನೀಡುವ ಕೆಲಸವಾಗುತ್ತಿದೆ. ಇದೊಂದು ಶ್ರೇಷ್ಠ ಚಿಂತನೆ ಎಂದು 3180ರೋಟರಿ ಜಿಲ್ಲೆ, ವಲಯ 5ರ ಸಹಾಯಕ ಗವರ್ನರ್  ಆಶ್ವನಿ  ಕುಮಾರ್ ರೈ ಹೇಳಿದರು. 

 

 

ಕಲ್ಲಬೆಟ್ಟು ಎಕ್ಸಲೆಂಟ್ ವಿಜ್ಞಾನ ಹಾಗೂ ವಾಣಿಜ್ಯ ಪದವಿಪೂರ್ವ ಕಾಲೇಜಿನಲ್ಲಿ ರೋಟೆಕ್ಸ್ ರಾಜ್ಯಮಟ್ಟದ ಚರ್ಚಾಸ್ಪರ್ಧೆಯ ಗ್ರಾಂಡ್ ಫಿನಲೆ ಉದ್ಘಾಟಿಸಿ ಮಾತನಾಡಿದರು. ಅಭಿವೃದ್ಧಿಯೊಂದಿಗೆ ತಂತ್ರಜ್ಞಾನವನ್ನು ನಾವು ಖರೀದಿಸಬಹುದು ಆದರೆ ಮಾನವೀಯತೆಯು ನಮ್ಮ ಮನೋಭಾವನೆಯಿಂದಲೇ ಬರಬೇಕು. ಅವಕಾಶವನ್ನು ತಿರಸ್ಕರಿಸದೆ, ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿದರೆ ಉತ್ತಮ ಬದುಕನ್ನು ನಮ್ಮದಾಗಿಸಬಹುದೆಂದರು. ಎಕ್ಸಲೆಂಟ್ ಕಾಲೇಜಿನವರು ದತ್ತು ಸ್ವೀಕರಿಸಿರುವ ಕಲ್ಲಬೆಟ್ಟು ಸರ್ಕಾರಿ ಪ್ರೌಢಶಾಲೆಗೆ ಎಲ್‍ಸಿಡಿಯನ್ನು ಸಮಾರಂಭದಲ್ಲಿ ಕೊಡುಗೆಯಾಗಿ ನೀಡಲಾಯಿತು. 

 

ಆಳ್ವಾಸ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಹರೀಶ್ ನಾಯಕ್ ಮುಖ್ಯ ಅತಿಥಿಯಾಗಿ ಮಾತನಾಡಿ, ಮೂಡುಬಿದರೆಯಲ್ಲಿ ಗುಣಮಟ್ಟ ಶಿಕ್ಷಣ ನೀಡುವಲ್ಲಿ ಪ್ರಯತ್ನಿಸುತ್ತಿರುವ ಸಂಸ್ಥೆಯಾಗಿ ಬೆಳೆಯುತ್ತಿದೆ. ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗೆ ಮಾತ್ರ ಒತ್ತು ನೀಡುವುದಲ್ಲ ಸಂವಹನವನ್ನು ಬೆಳೆಸಿಕೊಳ್ಳಬೇಕು ಎಂದರು.  ಎಕ್ಸಲೆಂಟ್ ಕಾಲೇಜಿನ ಅಧ್ಯಕ್ಷ ಯುವರಾಜ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಶ್ರೀಪತಿ ಭಟ್, ರೋಟರಿ ಟೆಂಪಲ್ ಟೌನ್ ಆಫ್ ಮೂಡುಬಿದಿರೆ ಕಾರ್ಯದರ್ಶಿ ಚಂದ್ರಹಾಸ್ ದೇವಾಡಿಗ ಮುಖ್ಯ ಅತಿಥಿಗಳಾಗಿದ್ದರು.  ಕಾಲೇಜಿನ ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್, ಆಡಳಿತಾಧಿಕಾರಿ ಶ್ರುತಕೀರ್ತಿರಾಜ್, ಪ್ರಾಂಶುಪಾಲ ಕೆ.ಎಸ್.ನಾಗೇಶ್ ಉಪಸ್ಥಿತರಿದ್ದರು. ಸುಮುಖ್.ಆರ್. ಸ್ವಾಗತಿಸಿದರು. ದೀಕ್ಷಾ ಜೈನ್ ಕಾರ್ಯಕ್ರಮ ನಿರೂಪಿಸಿದರು. ಗೌರಮ್ಮ ವಂದಿಸಿದರು. ರೋಟರಿ ಕ್ಲಬ್ ಆಫ್ ಟೆಂಪಲ್ ಟೌನ್ ಸಹಯೋಗದಲ್ಲಿ ಸ್ಪರ್ಧೆ ಹಮ್ಮಿಕೊಳ್ಳಲಾಯಿತು. 

Write your Comments on this Article
Your Name
Place
Your E-mail
Your Comment   You have characters left.
Security Validation
Enter the security validation code as displayed above:
    
Disclaimer: Kindly do not post any abusive, defamatory, infringing, obscene, indecent, discriminatory or unlawful material or SPAM. Editor reserves the right to block/ remove without notice any content received from users.
Suvarna News 24X7 Live online
333 Album