ಜ.26 ರಂದು ಸಚಿವರ ಮನೆ ಎದುರು ಧರಣಿ



 

ಮೂಡುಬಿದಿರೆ : ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು ಇದನ್ನು ಖಂಡಿಸಿ ರಾಜ್ಯ ಯುವಜನ ಸೇವೆ ಮತ್ತು ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್ ಅವರ ಮೂಡುಬಿದಿರೆ ಜೈನಪೇಟೆಯಲ್ಲಿರುವ ಮನೆಯ ಎದುರು ಜ.26ರಂದು ಧರಣಿ ಮಾಡಲಾಗುವುದು ಎಂದು ಅಖಿಲ ಭಾರತ ಕಾರ್ಮಿಕ ಸಂಘದ ಸ್ಥಾಪಕಾಧ್ಯಕ್ಷ ಸುದತ್ತ ಜೈನ್ ತಿಳಿಸಿದ್ದಾರೆ.

 

ಅವರು ಮೂಡುಬಿದಿರೆ ಪ್ರೆಸ್‍ಕ್ಲಬ್‍ನಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಧರಣಿಯ ರೂಪುರೇಷೆಗಳ ಬಗ್ಗೆ ತಿಳಿಸಿದ್ದಾರೆ. ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜನಸಾಮಾನ್ಯರ ಪ್ರಸ್ತುತ ಸಮಸ್ಯೆಗಳಾದ ಬೀಡಿ ಕಾರ್ಮಿಕರ ಆಸ್ಪತ್ರೆ ಇಲ್ಲದೇ ಇರುವುದು, ಇ.ಎಸ್.ಐ ಆಸ್ಪತ್ರೆ ಸವಲತ್ತು ಇಲ್ಲದೇ ಇರುವುದು, ಸರಕಾರಿ ಆಸ್ಪತ್ರೆಗಳಲ್ಲಿ ಸವಲತ್ತು ಇಲ್ಲದಿರುವುದು, ಪುರಸಭೆ ಆಡಳಿತದಲ್ಲಿ ಅವ್ಯವಸ್ಥೆಯಲ್ಲಿರುವುದು, ಪಂಚಾಯತ್‍ಗಳಲ್ಲಿ ಭ್ರಷ್ಠಾಚಾರ, ದಬ್ಬಾಳಿಕೆಗಳು ನಡೆಸುತ್ತಿರುವುದು ತಮ್ಮ ಗಮನಕ್ಕೆ ಬಂದಿರುತ್ತದೆ ಅಲ್ಲದೆ ಸಚಿವರ ಮನೆಯ ಮುಂದಿನ ರಸ್ತೆಯು ಅಗಲೀಕರಣವಾಗಬೇಕಾಗಿದೆ ಆದರೆ ಸಚಿವರ ಮನೆಯೇ ಫುಟ್‍ಪಾತ್‍ನಲ್ಲಿ ಇರುವುದರಿಂದ ಅಲ್ಲಿ ರಸ್ತೆ ಅಗಲೀಕರಣ ಮಾಡಲು ಅಸಾಧ್ಯವಾಗುತ್ತಿದ್ದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದ ಅವರು ಸಚಿವರ ಮನೆ ಮುಂದೆ ಧರಣಿ ಅನಿವಾರ್ಯವಾಗಿದೆ ಎಂದು ಹೇಳಿದ ಅವರು ಈ ಸಂದರ್ಭದಲ್ಲಿ ವಿವಿಧ ಬೇಡಿಕೆಗಳನ್ನು ಆಗ್ರಹಿಸಲಾಗುವುದು ಎಂದು ತಿಳಿಸಿದರು.

 

ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ದಿನೇಶ್ ಜೆ.ಪಿ ಪಡುಕೊಣಾಜೆ, ವಲಯಾಧ್ಯಕ್ಷ ವಿಜೇಂದ್ರ ಎಸ್.ಕೋಟ್ಯಾನ್, ಸದಸ್ಯರಾದ ಅಶೋಕ್ ಪೂಜಾರಿ ಮತ್ತು ದಿನೇಶ್ ಅಂಚನ್ ಪಡುಕೊಣಾಜೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.





Write your Comments on this Article
Your Name
Place
Your E-mail
Your Comment   You have characters left.
Security Validation
Enter the security validation code as displayed above:
    
Disclaimer: Kindly do not post any abusive, defamatory, infringing, obscene, indecent, discriminatory or unlawful material or SPAM. Editor reserves the right to block/ remove without notice any content received from users.
Suvarna News 24X7 Live online
333 Album