ಕಾಂತಾವರದಲ್ಲಿ `ಅನುಭವದ ನಡೆ ಅನುಭಾವದ ನುಡಿ’



 

ಮೂಡುಬಿದಿರೆ: ಮನುಷ್ಯನ ವ್ಯಕ್ತಿತ್ವವನ್ನು ಸಂಸ್ಕಾರದಿಂದ ಪರಿಷ್ಕಾರಗೊಳಿಸಿ ಆತನನ್ನು ಸಮಗ್ರವಾಗಿ ವಿಕಾಸಗೊಳಿಸುವುದೇ ಸಾಂಸ್ಕೃತಿ.

 

 

ಧರ್ಮ, ಸಮಾನತೆಯ ಒಂದು ಮಹತ್ವದ ಸತ್ವವೇ ಸಮಾನತೆಯಾಗಿದೆ ಎಂದು ಕನ್ನಡ ಮತ್ತು ಸಾಂಸ್ಕೃತಿ. ಇಲಾಖೆಯ ನಿವೃತ್ತ ಆಯುಕ್ತ, ಸಾಹಿತಿ ಡಾ. ಮನು ಬಳಿಗಾರ್ ಹೇಳಿದರು. ಕಾಂತಾವರ  ಅಲ್ಲಮಪ್ರಭು ಪೀಠದ `ಅನುಭವದ ನಡೆ ಅನುಭಾವದ ನುಡಿ’ ತಿಂಗಳ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು `ಸಾಂಸ್ಕೃತಿಕ ಧರ್ಮದಲ್ಲಿ ಸಮಾನತೆ’ ಎಂಬ ವಿಷಯದ ಬಗ್ಗೆ ಮಾತನಾಡಿದರು.

 

ಸಮಾನಚಿಂತನೆ, ಭಾವನೆ, ತುಡಿತಗಳಿದ್ದಲ್ಲಿ  ಅವುಗಳ ಏಕೀಕರಣದಿಂದಾಗಿ ಸಮಾಜ ಕೂಡಾ ಆರೋಗ್ಯಕರವಾದ ದಿಕ್ಕಿನಲ್ಲಿ ಸಾಗಲು ಅನುಕೂಲವಾಗುತ್ತದೆ. ಆದರೆ ಇಂದಿನ ಶಿಕ್ಷಣ ಪದ್ಧತಿಯಿಂದಾಗಿ  ಎಲ್ಲ  ಪ್ರಾದೇಶಿಕ ಭಾಷೆ, ಸಾಂಸ್ಕೃತಿಗಳು, ಮೂಲೆಗುಂಪಾಗುತ್ತಿದ್ದು, ಅಸಮಾನತೆ ವಿಜ್ರಂಭಿಸಲು ಪ್ರಾರಂಭವಾಗತೊಡಗಿದೆ ಎಂದರು.

 

 ಪೀಠದ ಗೌರವ ಉಪಾಧ್ಯಕ್ಷ ಸಿ.ಕೆ ಪಡಿವಾಳ್ ಅವರು ಡಾ. ಮನು ಬಳಿಗಾರ್ ಅವರನ್ನು ಸನ್ಮಾನಿಸಿದರು. ಕಲ್ಲೂರು ನಾಗೇಶ್   ಸಭಾಧ್ಯಕ್ಷತೆಯನ್ನು  ವಹಿಸಿದ್ದರು. ಮಂಜುನಾಥ ಶೆಟ್ಟಿ ನಿಟ್ಟೆ ಕಾರ್ಯಕ್ರಮ ನಿರ್ವಹಿಸಿದರು. ಡಾ.ನಾ. ಮೊಗಸಾಲೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಯಶೋಧರ್ ಪಿ.ಕರ್ಕೇರಾ ವಂದಿಸಿದರು.  





Write your Comments on this Article
Your Name
Place
Your E-mail
Your Comment   You have characters left.
Security Validation
Enter the security validation code as displayed above:
    
Disclaimer: Kindly do not post any abusive, defamatory, infringing, obscene, indecent, discriminatory or unlawful material or SPAM. Editor reserves the right to block/ remove without notice any content received from users.
Suvarna News 24X7 Live online
333 Album