ಮುದ್ದಣ ಕಾವ್ಯೋತ್ಸವ: ಪ್ರಶಸ್ತಿ ಪ್ರದಾನ



 

ಮೂಡುಬಿದಿರೆ: ಕಾಂತಾವರ ಕನ್ನಡ ಸಂಘದ ವತಿಯಿಂದ ಮುದ್ದಣ ಕಾವ್ಯೋತ್ಸವ, ಪ್ರಶಸ್ತಿ ಪ್ರದಾನ ಹಾಗೂ ಕೃತಿಗಳ ಲೋಕಾರ್ಪಣೆ ಸಮಾರಂಭ ಭಾನುವಾರ ಕನ್ನಡ ಸಂಘದ ಸಭಾಭವನದಲ್ಲಿ ನಡೆಯಿತು.

 

 

ಪಟೇಲ್ ಪುನರೂರು ವಾಸುದೇವರಾವ್ ಟ್ರಸ್ಟ್‍ನ ಪ್ರಾಯೋಜಕತ್ವದಲ್ಲಿ ಕೊಡ ಮಾಡುವ 2014ನೇ ಸಾಲಿನ ಮುದ್ದಣ ಕಾವ್ಯ ಪ್ರಶಸ್ತಿಯನ್ನು ಕವಿ ಡಾ.ಜಯಪ್ರಕಾಶ್ ಮಾವಿನಕುಳಿ ಅವರ `ಕಾಲಯಾನ’ ಎಂಬ ಕವನ ಸಂಕಲನ ಹಸ್ತಪ್ರತಿಗೆ ನೀಡಲಾಯಿತು. ಪ್ರಶಸ್ತಿ ಸ್ವೀಕರಿಸಿದ ಡಾ.ಮಾವಿನಕುಳಿ, ಕಾವ್ಯ ಕಟ್ಟುವುದಲ್ಲ, ಅದು ಹುಟ್ಟುವುದು ಹಾಗಾಗಿ ಗದ್ಯ ಸಾಹಿತ್ಯದಂತೆ ಅದನ್ನು ಸುಲಭವಾಗಿ ಕಟ್ಟಿಕೊಡಲು ಸಾಧ್ಯವಿಲ್ಲ. ಅದು ಅಂತರಂಗದ ಭಾವನೆಗಳು ಪುಟಿದಾಗ ಆಕಸ್ಮಿಕವಾಗಿ ಸಾಲುಗಳು ಹೊಳೆದಾಗಲೇ ಹಿಡಿದಿಟ್ಟುಕೊಂಡು ಕಾವ್ಯವನ್ನಾಗಿಸಬೇಕು ಎಂದು ಸನ್ಮಾನಕ್ಕೆ ಉತ್ತರಿಸಿದರು. ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಮಾವಿನಕುಳಿಯವರಿಗೆ ಹತ್ತು ಸಾವಿರದ ಗೌರವ ಸಂಭಾವನೆ ಮತ್ತು ತಾಮ್ರಪತ್ರ ಸಮ್ಮಾನದ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ ಅರ್ಹರನ್ನು ಸಮಾಜ ಮತ್ತು ಸರ್ಕಾರ ಗುರುತಿಸಲು ವಿಫಲವಾಗುತ್ತಿರುವ ಕಾರಣದಿಂದಾಗಿಯೇ ಇಂದು ಪ್ರತಿಭಾ ಪಲಾಯನ ಹೆಚ್ಚಾಗುತ್ತಿದೆ. ಆದರೆ ಪ್ರತಿಯೊಬ್ಬರೂ ತಮ್ಮಲ್ಲಿರುವ ಸ್ವಸಾಮಥ್ರ್ಯವನ್ನು ಸಮಾಜಕ್ಕೆ ನೀಡಬೇಕು ಎಂದರು. 

 

 

ಕೃತಿ ಅನಾವರಣ: 

ಕರ್ಣಾಟಕ ಬ್ಯಾಂಕ್‍ನ ಚೀಫ್ ಜನರಲ್ ಮೆನೇಜರ್ ಎಂ.ಎಸ್ ಮಹಾಬಲೇಶ್ವರ ಭಟ್ ಸರ್ವಾಧ್ಯಕ್ಷತೆ ವಹಿಸಿ, ಡಾ.ನಾ.ಮೊಗಸಾಲೆಯವರ ನೂತನ ಮಹಾಕಾದಂಬರಿ ’ಮುಖಾಂತರ’ವನ್ನು ಬಿಡುಗಡೆಗೊಳಿಸಿದರು. ಮುದ್ದಣ ಕಾವ್ಯ ಪ್ರಶಸ್ತಿ ಪಡೆದ 40 ಕವಿಗಳ ಆಯ್ದ ಕವನ ಸಂಗ್ರಹ ಡಾ.ವಸಂತ ಕುಮಾರ ಪೆರ್ಲ ಸಂಪಾದಿಸಿದ `ಕಾವ್ಯ ನಮಸ್ಕಾರ’ ಸಂಪುಟವನ್ನು ಧಾರವಾಡದ ಬೇಂದ್ರೆ ರಾಷ್ಟ್ರೀಯ ಸ್ಮಾರಕ  ಟ್ರಸ್ಟ್  ಅಧ್ಯಕ್ಷ ಡಾ. ಶ್ಯಾಮಸುಂದರ ಬಿದರಕುಂದಿ ಅನಾವರಣಗೊಳಿಸಿದರು. ನಾಡಿಗೆ ನಮಸ್ಕಾರದ ಹತ್ತನೇ ಕಂತಿನ ಒಂಭತ್ತು ಹೊತ್ತಗೆಗಳ ಅನಾವರಣವನ್ನು ಮಂಗಳೂರು  ಐ.ಜಿ.ಪಿ ಕಛೇರಿಯ  ಪೋಲೀಸ್ ಉಪಾಧೀಕ್ಷಕ ಡಾ. ವೆಂಕಟೇಶ ಪ್ರಸನ್ನ ನೆರವೇರಿಸಿದರು. 

 

ನಾಡಿಗೆ ನಮಸ್ಕಾರ ಗ್ರಂಥ ಮಾಲೆಯ ಸಂಪಾದಕ ಬಿ.ಜನಾರ್ಧನ ಭಟ್ ಉಪಸ್ಥಿತರಿದ್ದರು. ಕನ್ನಡ ಸಂಘದ ಕಾರ್ಯಾಧ್ಯಕ್ಷ ಡಾ. ನಾ, ಮೊಗಸಾಲೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ಹಾಗೂ ಸರೋಜಿನಿ ಕಾಂತಾವರ ಕಾರ್ಯಕ್ರಮ ನಿರ್ವಹಿಸಿದರು. ಬಿ. ಮಂಜುನಾಥ ಶೆಟ್ಟಿ ವಂದಿಸಿದರು. ಅಪರಾಹ್ನ ಪ್ರಸಿದ್ಧ ಗಾಯಕ ಉಡುಪಿಯ ಶಂಕರದಾಸ್ ಚೆಂಡ್ಕಳರಿಂದ ಬೇಂದ್ರೆ ಕಾವ್ಯಗಾಯನ, ತಿಂಗಳ ಉಪನ್ಯಾಸ `ನುಡಿನಮನ’ 86ರಲ್ಲಿ ಡಾ. ಶ್ಯಾಮಸುಂದರ ಬಿದರಕುಂದಿ ಬೇಂದ್ರೆ ಕಾವ್ಯದ ಹೊಸ ಓದು ಕುರಿತ ಉಪನ್ಯಾಸ ನಡೆಯಿತು. 





Write your Comments on this Article
Your Name
Place
Your E-mail
Your Comment   You have characters left.
Security Validation
Enter the security validation code as displayed above:
    
Disclaimer: Kindly do not post any abusive, defamatory, infringing, obscene, indecent, discriminatory or unlawful material or SPAM. Editor reserves the right to block/ remove without notice any content received from users.
Suvarna News 24X7 Live online
333 Album