ಕಾಂತಾವರದಲ್ಲಿ `ಓಶೋ ಒಂದು ಕಿರಣದ ಪಯಣ’



 

ಮೂಡುಬಿದಿರೆ: ನಮ್ಮ ದೇಶ, ಸಂಸ್ಕøತಿಯ ಸಮೀಪ ದರ್ಶನವಾಗದೆ ಹೋದರೆ ಅಲ್ಲಮನಾಗಲೀ, ಓಶೋ ಆಗಲಿ ನಮಗೆ ಅರ್ಥವಾಗಲಾರರು. ಒಂದರ್ಥದಲ್ಲಿ ಸ್ವಾಮೀ ವಿವೇಕಾನಂದರು ನಿಲ್ಲಿಸಿದ ಪಯಣವನ್ನು ಮತ್ತೆ ತನ್ನದೇ ದಾರಿಯಲ್ಲಿ ಮುಂದುವರೆಸಿದವರೇ ಓಶೋ. ಆ ಪರಂಪರೆಯ ಪ್ರಯಾಣವನ್ನು ಮುಂದುವರಿಸುವ ಅಪರೂಪದ ಸಂತ ಪರಂಪರೆ ಇಂದಿಗೂ ಇದೆ. ಓಶೋ ವಿಶ್ವದ ತತ್ವಶಾಸ್ತ್ರವನ್ನೆಲ್ಲಾ ಅಧ್ಯಯನ ಮಾಡಿ ಈ ಪ್ರಪಂಚ ನೆಮ್ಮದಿಯಾಗಿರಬೇಕೆಂದಾಶಿಸಿ ಅತ್ಯಂತ ಸರಳವಾದ, ನೇರವಾದ ಮತ್ತು ಅಷ್ಟೇ ಸ್ಪಷ್ಟವಾದ ರೀತಿಯಲ್ಲಿ ತನ್ನ ವಿಚಾರಗಳನ್ನು ಮಂಡಿಸಿದ ಬಹುದೊಡ್ಡ ಆಧ್ಯಾತ್ಮಿಕ ಚಿಂತಕರಾಗಿ ಪ್ರಸಿದ್ಧರಾದರು ಎಂದು ಶಿಕ್ಷಣ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಸಮನ್ವಯಾಧಿಕಾರಿ, ಲೇಖಕ ಡಾ.ರಾಜಶೇಖರ ಗಂಗಯ್ಯ ಮಠಪತಿ(ರಾಗಂ) ಹೇಳಿದರು. 

 

 

ಕಾಂತಾವರ ಅಲ್ಲಮಪ್ರಭು ಪೀಠದ `ಅನುಭವದ ನಡೆ ಅನುಭಾವದ ನುಡಿ’ ತಿಂಗಳ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು `ಓಶೋ: ಒಂದು ಕಿರಣದ ಪಯಣ’ ಎಂಬ ವಿಷಯದ ಬಗ್ಗೆ ಮಾತನಾಡಿದರು. ಡಾ.ರಾಜಶೇಖರ ಗಂಗಯ್ಯ ಮಠಪತಿ ಅವರನ್ನು ಕನ್ನಡ ಸಂಘದಲ್ಲಿ ಸನ್ಮಾನಿಸಲಾಯಿತು. ಸಿ.ಕೆ. ಪಡಿವಾಳ್ ಉಪಸ್ಥಿತರಿದ್ದರು. ಕಲ್ಲೂರು ನಾಗೇಶ್ ಕಾರ್ಯಕ್ರಮ ನಿರ್ವಹಿಸಿದರು. ಡಾ. ನಾ. ಮೊಗಸಾಲೆ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಯಶೋಧರ ಪಿ. ಕರ್ಕೇರಾ ವಂದಿಸಿದರು. 





Write your Comments on this Article
Your Name
Place
Your E-mail
Your Comment   You have characters left.
Security Validation
Enter the security validation code as displayed above:
    
Disclaimer: Kindly do not post any abusive, defamatory, infringing, obscene, indecent, discriminatory or unlawful material or SPAM. Editor reserves the right to block/ remove without notice any content received from users.
Suvarna News 24X7 Live online
333 Album