ಕಾಂತಾವರದಲ್ಲಿ ನಿಸಾರ್ ಅಹಮದ್ ಕಾವ್ಯದ ಹೊಸ ಓದು





ಮೂಡುಬಿದಿರೆ: ಡಾ.ಕೆ.ಎಸ್ ನಿಸಾರ್ ಅಹಮದ್ ಅವರ ಮಾತೃಭಾಷೆ ಉರ್ದುವಾದರೂ ಕನ್ನಡದ ಭಾಷಾ ಬಳಕೆಯಿದ್ದರೂ ಸಂಸ್ಕೃತದ ತಿಳುವಳಿಕೆ ಇದ್ದ ಕಾರಣ ಈ ಎಲ್ಲಾ ಭಾಷಾ ಸಂಸ್ಕೃತಿಗಳನ್ನು ಬಳಕೆ ಮಾಡಿಕೊಂಡು ಒಂದೇ ಸೂತ್ರದಲ್ಲಿ ಪೋಣಿಸಲು ಅವರಿಗೆ ಸಾಧ್ಯವಾಯಿತು. ಈ ತಿಳುವಳಿಕೆ ಮೈಗೂಡಿದ್ದರಿಂದಾಗಿಯೇ ಭಾಷೆಯ ಅದ್ಭುತವಾಗಿ ಗಾಂಭೀರ್ಯವನ್ನು ಮೆರೆಯುವಂತೆ  ಬರೆಯಲು ಮತ್ತು ವಸ್ತುವಿನ ಸಂಕೀರ್ಣತೆಗೆ ಹೊಂದಿಕೊಂಡಂತೆ ಕಾವ್ಯ ರಚನೆ ಮಾಡುವ ಸಾಮಥ್ರ್ಯವನ್ನು ನಿಸಾರ್ ಅಹಮದ್ ಗಳಿಸಿಕೊಂಡರು ಎಂದು ನಿವೃತ್ತ ಪ್ರಾಧ್ಯಾಪಕ ಡಾ.ನಾ.ದಾಮೋದರ ಶೆಟ್ಟಿ ತಿಳಿಸಿದರು.




ಕಾಂತಾವರ ಕನ್ನಡ ಸಂಘದ ತಿಂಗಳ ನುಡಿನಮನ ಕಾರ್ಯಕ್ರಮದಲ್ಲಿ ಭಾನುವಾರ ಅವರು ಡಾ.ಕೆ.ಎಸ್.ನಿಸಾರ್ ಅಹಮದ್ ಕಾವ್ಯದ ಹೊಸ ಓದು ಕುರಿತು ಉಪನ್ಯಾಸ ನೀಡಿದರು. ಕನ್ನಡ ಸಂಘದ ಹಿರಿಯ ಸದಸ್ಯ, ಬೇಲಾಡಿ ಶಾಲಾ ನಿವೃತ್ತ ಶಿಕ್ಷಕ ದಿವಾಕರ್ ರಾವ್ ಅವರು 80ಕ್ಕೆ ಕಾಲಿಟ್ಟ ನೆನಪಿಗಾಗಿ 8 ಮಂದಿ ಸಾಧಕರಿಗೆ ಸನ್ಮಾನಿಸುವ ಕಾರ್ಯಕ್ರಮದ ಐದನೇ ಸನ್ಮಾನವಾಗಿ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷಎಂ.ಕೆ ಸೀತಾರಾಮ್ ಕುಲಾಲ್ ಹಾಗೂ ಡಾ.ನಾ.ದಾಮೋದರ ಶೆಟ್ಟಿ ಅವರನ್ನು ಗೌರವಿಸಲಾಯಿತು. ಬಾಬು ಶೆಟ್ಟಿ ನಾರಾವಿ ಕಾರ್ಯಕ್ರಮ ನಿರ್ವಹಿಸಿದರು. ಡಾ.ನಾ.ಮೊಗಸಾಲೆ ಸ್ವಾಗತಿಸಿ ಸದಾನಂದ ನಾರಾವಿ ವಂದಿಸಿದರು. 




Write your Comments on this Article
Your Name
Place
Your E-mail
Your Comment   You have characters left.
Security Validation
Enter the security validation code as displayed above:
    
Disclaimer: Kindly do not post any abusive, defamatory, infringing, obscene, indecent, discriminatory or unlawful material or SPAM. Editor reserves the right to block/ remove without notice any content received from users.
Suvarna News 24X7 Live online
333 Album