ಮಾರ್ನಾಡು ಬಸದಿಯಲ್ಲಿ ಪದ್ಮಾವತಿ ಅಮ್ಮನವರ ಪ್ರತಿಷ್ಠೆ



 

ಮೂಡುಬಿದಿರೆ: ಪುರಾತನ ಜಿನ ಮಂದಿರಗಳನ್ನು ಅಭಿವೃದ್ಧಿ ಪಡಿಸುವುದರಿಂದ ಊರಿನಲ್ಲಿ ಶಾಂತಿ ನೆಲೆಸುವ ಜೊತೆಗೆ ಲೋಕದ ಕಲ್ಯಾಣವಾಗುತ್ತದೆ ಎಂದು ಅಳದಂಗಡಿ ಅರಮನೆಯ ತಿಮ್ಮಣ್ಣರಸ ಡಾ.ಪದ್ಮಪ್ರಸಾದ್ ಅಜಿಲ ನುಡಿದರು.

 

 

ಮಾರ್ನಾಡಿನ ಶ್ರೀ ವರ್ಧಮಾನ ಸ್ವಾಮಿ ಜಿನ ಚೈತ್ಯಾಲಯದಲ್ಲಿ ನಡೆಯುತ್ತಿರುವ ಧಾಮ ಸಂಪ್ರೋಕ್ಷಣಾ ಪೂರ್ವಕ ಪುನರ್‍ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಶನಿವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪದ್ಮಾವತಿ ಅಮ್ಮನವರ ಪ್ರತಿಷ್ಠಾಪನೆಯ ಬಳಿಕ ಮುನಿಶ್ರೀ 108 ಏಲಾಚಾರ್ಯ ನಿಜಾನಂದ ಸಾಗರ ಮುನಿ ಮಹಾರಾಜ್ ಮತ್ತು ಮೂಡುಬಿದಿರೆ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯ ಆಶೀರ್ವಚನ ನೀಡಿದರು.

 

ಎಪಿಎಂಸಿ ಮಾಜಿ ಅಧ್ಯಕ್ಷ ಕರಿಂಜೆಗುತ್ತು ಕೃಷ್ಣರಾಜ ಹೆಗ್ಡೆ, ಭಾರತೀಯ ಜೈನ್‍ಮಿಲನ್ ವಲಯ ಕಾರ್ಯದರ್ಶಿ ಪುಷ್ಪರಾಜ್ ಜೈನ್, ಕಾರ್ಕಳದ ವಕೀಲ ಎಂ.ಕೆ.ಸುವ್ರತ್‍ಕುಮಾರ್, ವೀರಸೇನ ಹೆಗ್ಡೆ ಬೆಳುವಾಯಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಕೋರಿದರು. ಪೂಜಾಕರ್ತೃಗಳಾದ ಸಚ್ಚಿದಾನಂದ ಹೆಗ್ಡೆ ದಂಪತಿಗಳು, ಮಾರ್ನಾಡು ಪೂವಣಿಬೆಟ್ಟು ಜಗತ್ಪಾಲ ಎಸ್ ಹೆಗ್ಡೆ-ಶ್ರೀಯಾಳ ಹೆಗ್ಡೆ ದಂಪತಿಗಳು ಮತ್ತು ನೇಮಿರಾಜ ಹೆಗ್ಡೆ- ಸುಜಾತಾ ಎನ್. ರಾಜ್ ದಂಪತಿಗಳನ್ನು ಅಭಿನಂದಿಸಲಾಯಿತು. ಬಸದಿಯ ಆಡಳಿತ ಮಂಡಳಿ ಕಾರ್ಯದರ್ಶಿ ಎಂ. ಪಣಿರಾಜ್, ಗೌರವಾಧ್ಯಕ್ಷ ಎಂ.ಆರ್. ಬಲ್ಲಾಳ್, ಅಧ್ಯಕ್ಷ ಎಂ. ಪುಷ್ಪರಾಜ ಹೆಗ್ಡೆ, ಕೋಶಾಧಿಕಾರಿ ಭುಜಬಲಿ ಹೆಗ್ಡೆ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಕೆ.ವರ್ಧಮಾನ ಜೈನ್ ಉಪಸ್ಥಿತರಿದ್ದರು. ರಂಗಪ್ರಪಂಚ ರಾಜ್ಯ ಪ್ರಶಸ್ತಿ ಪುರಸ್ಕøತ ಭರತನಾಟ್ಯ ಬಾಲ ಕಲಾವಿದೆ ರೋಶ್ನಿ ಆರ್. ಜೈನ್ ಮಾರ್ನಾಡು ಹಾಗೂ ಧಿಗಿಣ ಕಲಾಕೇಂದ್ರ ಬೆಂಗಳೂರು ಇದರ ಸಂಯೋಜಕಿ ಮಾರ್ನಾಡುಗುತ್ತು ಸೌಮ್ಯಶ್ರೀ ಅವರನ್ನು ವೇದಿಕೆಯಲ್ಲಿ ಪುರಸ್ಕರಿಸಿ ಅಭಿನಂದಿಸಲಾಯಿತು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಕುಮಾರ್ ಅಜ್ರಿ ಸ್ವಾಗತಿಸಿದರು. ಯೋಗರಾಜ ಶಾಸ್ತ್ರಿ ಕಾರ್ಕಳ ನಿರೂಪಿಸಿದರು. 





Write your Comments on this Article
Your Name
Place
Your E-mail
Your Comment   You have characters left.
Security Validation
Enter the security validation code as displayed above:
    
Disclaimer: Kindly do not post any abusive, defamatory, infringing, obscene, indecent, discriminatory or unlawful material or SPAM. Editor reserves the right to block/ remove without notice any content received from users.
Suvarna News 24X7 Live online
333 Album