ವಿಶ್ವಹಿಂದೂ ಪರಿಷತ್ ರಾಜ್ಯ ಮಟ್ಟದ ಶಿಕ್ಷಾವರ್ಗ ಆರಂಭ



 

ಮೂಡುಬಿದಿರೆ: ಪುತ್ತಿಗೆ ವಿವೇಕಾನಂದ ನಗರದಲ್ಲಿ ಹತ್ತುದಿನಗಳ ಕಾಲ ನಡೆಯುವ ವಿಶ್ವಹಿಂದೂ ಪರಿಷತ್‍ನ ರಾಜ್ಯಮಟ್ಟದ ಶಿಕ್ಷಾವರ್ಗಕ್ಕೆ ಚಾಲನೆ ನೀಡಲಾಯಿತು. 

 

 

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಶಿಕ್ಷಾವರ್ಗಕ್ಕೆ ಚಾಲನೆ ನೀಡುತ್ತಾ, ಹಿಂದೂಗಳಿಗೆ ಹಿರಿಯರು ಬದುಕಿನ ಸೂತ್ರ, ವಿಶಾಲ ಮನೋಭಾವ ಕೊಡುವುದರ ಜೊತೆಗೆ ಸಾಂಸ್ಕøತಿಕ ಹಾಗೂ ಧಾರ್ಮಿಕ ಚೌಕಟ್ಟನ್ನು ಕಟ್ಟಿದ್ದಾರೆ. ಇಂದಿನ ಸವಾಲುಗಳೊಂದಿಗೆ ಜತನದಿಂದ ಅವುಗಳನ್ನು ಕಾಪಾಡಿ ಮುನ್ನಡೆಯಬೇಕಾಗಿದೆ ಎಂದರು. 

 

ಸಮಾರಂಭದ ಅಧ್ಯಕ್ಷತೆ ವಹಿಸಿದ ವಿಹಿಂಪ ದಕ್ಷಿಣ ಪ್ರಾಂತ್ಯದ ಕಾರ್ಯಾಧ್ಯಕ್ಷ ಪ್ರೊ. ಎಂಬಿ.ಪುರಾಣಿಕ್ ಮಾತನಾಡಿ ಹಿಂದೆ ಅನ್ಯಧರ್ಮೀಯರು ಮಾತ್ರ ಹಿಂದೂಗಳಿಗೆ ವಿರೋಧಿಗಳಾಗಿದ್ದರೆ ಈಗ ಹಿಂದೂ ಪದ್ಧತಿಯನ್ನು ಅನುಸರಿಸುವವರೇ ಹಿಂದೂ ವಿರೋಧಿಗಳಾಗುತ್ತಿರುವುದು ದುರಾದೃಷ್ಟಕರ. ಹಿಂದೂಗಳನ್ನು ತುಚ್ಛವಾಗಿ ನಿಂದಿಸುವವರನ್ನು ಮಾಧ್ಯಮಗಳೂ ವಿಜ್ರಂಭಿಸುತ್ತಿವೆ. ಹಿಂದೂ ಧರ್ಮದಲ್ಲಿರುವ ಕೊರತೆ, ನ್ಯೂನ್ಯತೆಗಳನ್ನು ಬಂಡವಾಳ ಮಾಡಿಕೊಂಡು ವಿದೇಶದಿಂದ ಬರುವ ಕೋಟ್ಯಾಂತರ ರೂಪಾಯಿ ಹಣವನ್ನು ಬಳಸಿ ಹಿಂದೂಗಳನ್ನು ಮತಾಂತರಿಸಲಾಗುತ್ತಿದೆ. ಇದನ್ನು ಸಮರ್ಪಕವಾಗಿ ಎದುರಿಸಬೇಕಾದರೆ ಹಿಂದೂ ಸಮಾಜದಲ್ಲಿರುವ ಅಸಮಾನತೆ, ಜಾತಿಪದ್ಧತಿ,  ಎಲ್ಲರೂ ಸಮಾನತೆಯಿಂದ ಬದುಕುವಂತಾಗಬೇಕು. ವಿಹಿಂಪ ಈ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುತ್ತಾ ಬಂದಿದೆ ಎಂದರು.  ದಕ್ಷಿಣ ಪ್ರಾಂತ್ಯ ಉಪಾಧ್ಯಕ್ಷ ಶಂಕರಪ್ಪ ಉಪಸ್ಥಿತರಿದ್ದರು. ಸಹಕಾರ್ಯದರ್ಶಿ ಕೃಷ್ಣಮೂರ್ತಿ ಸ್ವಾಗತಿಸಿದರು. ಕೇಶವ ಹೆಗ್ಡೆ ಕಾರ್ಯಕ್ರಮಗಳ ವಿವರ ನೀಡಿದರು. ಕೆ.ಪಿ.ಶೆಣೈ ವಂದಿಸಿದರು. ಬಸವರಾಜ ಕಾರ್ಯಕ್ರಮ ನಿರ್ವಹಿಸಿದರು.





Write your Comments on this Article
Your Name
Place
Your E-mail
Your Comment   You have characters left.
Security Validation
Enter the security validation code as displayed above:
    
Disclaimer: Kindly do not post any abusive, defamatory, infringing, obscene, indecent, discriminatory or unlawful material or SPAM. Editor reserves the right to block/ remove without notice any content received from users.
Suvarna News 24X7 Live online
333 Album